Ad Widget .

ಗುರಿ ತಲುಪಲಿಲ್ಲ ಇಮೇಜಿಂಗ್: ಭಾರೀ ನಿರಾಸೆ

Ad Widget . Ad Widget .

ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ ಉಡಾವಣೆ ಮಾಡಲಾಗಿದ್ದ ಅತ್ಯಾಧುನಿಕ ಜಿಯೋ – ಇಮೇಜಿಂಗ್ ಉಪಗ್ರಹ ಇಒಎಸ್ -03 ಉಪಗ್ರಹ ಗುರಿ ತಲುಪುವಲ್ಲಿ ವಿಫಲವಾಗಿದೆ.

Ad Widget . Ad Widget .

ಬೆಳಗ್ಗೆ 5.43 ಕ್ಕೆ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್ವಿ -ಎಫ್ 10 ರಾಕೆಟ್ ನಭಕ್ಕೆ ಜಿಗಿದಿದ್ದು, ಮೊದಲ ಮತ್ತು ಎರಡನೇ ಹಂತಗಳ ಕಾರ್ಯಕ್ಷಮತೆ ಸಾಮಾನ್ಯವಾಗಿತ್ತು. ಆದರೆ, ನಂತರದಲ್ಲಿ ಗುರಿ ತಲುಪುವಲ್ಲಿ ಉಪಗ್ರಹ ವಿಫಲವಾಗಿದೆ. 2020 ರ ಮಾರ್ಚ್ ನಲ್ಲಿ ಈ ಉಪಗ್ರಹ ಉಡಾವಣೆ ಆಗಬೇಕಿತ್ತು. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಕೊನೆಕ್ಷಣದಲ್ಲಿ ರದ್ದಾಗಿತ್ತು. ಇಂದು ಉಡಾವಣೆ ನಂತರ ಕ್ರಯೋಜನಿಕ್ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರಿ ತಲುಪಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

Leave a Comment

Your email address will not be published. Required fields are marked *