Ad Widget .

ಬಿಗ್ ಬಾಸ್ ಸೀಸನ್ 8| ಮಂಜು ಪಾವಗಡ ವಿನ್ನರ್

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ವಿನ್ನರ್​ ಆಗಿ ಮಂಜು ಪಾವಗಡ ಹೊರ ಹೊಮ್ಮಿದ್ದಾರೆ. ಈ ಬಗ್ಗೆ ಸುದೀಪ್​ ಅವರು ಅದ್ದೂರಿ ವೇದಿಕೆ ಮೇಲೆ ಘೋಷಣೆ ಮಾಡಿದರು. ಈ ಮೂಲಕ ಬಿಗ್​ಬಾಸ್​ ಟ್ರೋಫಿ​ ಹಾಗೂ 53 ಲಕ್ಷ ನಗದು ಬಹುಮಾನ ಮಂಜು ಪಾವಗಡ ಅವರಿಗೆ ಸಿಕ್ಕಿದೆ. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಳೆ ಹರಿದು ಬಂದಿದೆ.

Ad Widget . Ad Widget .

ಬಿಗ್ ಬಾಸ್ ಕನ್ನಡ ಸೀಸನ್ 8 ಈ ಬಾರಿ ಹಲವು ವಿಷಯಗಳಲ್ಲಿ ದಾಖಲೆ ಬರೆದಿದೆ. ಪ್ರತಿ ಸೀಸನ್​ನಲ್ಲಿ ಸ್ಪರ್ಧಿಗಳು ಎಲಿಮಿನೇಟ್ ಆದಾಗಲೂ ಅವರಿಗೆ ಬಂದಿರುವ ಮತಗಳ ಸಂಖ್ಯೆಯನ್ನು ಬಹಿರಂಗಗೊಳಿಸಿಲ್ಲ ಎಂಬ ಕಾರಣಕ್ಕೆ ಈ ಹಿಂದಿನ ಸೀಸನ್​ಗಳಲ್ಲಿ ಅಸಮಾಧಾನ ಕೇಳಿಬಂದಿದ್ದವು.
ಹೀಗಾಗಿ, ಇದೇ ಮೊದಲ ಬಾರಿಗೆ ಬಿಗ್ ಬಾಸ್ ವೇದಿಕೆಯಲ್ಲಿ ಟಾಪ್ 5 ಸ್ಪರ್ಧಿಗಳು ಪಡೆದ ಮತಗಳ ಸಂಖ್ಯೆಯನ್ನು ಬಹಿರಂಗಗೊಳಿಸಲಾಗಿತು.

Ad Widget . Ad Widget .

ಈ ಸೀಸನ್​ನಲ್ಲಿ ವಿನ್ನರ್ ಆಗಿರುವ ಮಂಜು ಪಾವಗಡ ಬರೋಬ್ಬರಿ 45,03,495 ಮತಗಳನ್ನು ಪಡೆಯುವ ಮೂಲಕ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಅತಿ ಹೆಚ್ಚು ವೋಟಿಂಗ್ ಪಡೆದಿದ್ದಾರೆ. ಮೊದಲ ರನ್ನರ್ ಅಪ್ ಆಗಿರುವ ಅರವಿಂದ್​ ಕೆ.ಪಿ. 43,35,957 ಮತಗಳನ್ನು ಪಡೆದಿದ್ದಾರೆ. ಎರಡನೇ ರನ್ನರ್ ಅಪ್ ಆಗಿರುವ ದಿವ್ಯಾ ಉರುಡುಗ 11,61,205, ಮೂರನೇ ರನ್ನರ್ ಅಪ್ ಆಗಿರುವ ವೈಷ್ಣವಿ ಗೌಡ 10,21,831 ಹಾಗೂ ನಾಲ್ಕನೇ ರನ್ನರ್ ಅಪ್ ಆಗಿರುವ ಪ್ರಶಾಂತ್ ಸಂಬರಗಿ 6,69,020 ಮತಗಳನ್ನು ಪಡೆದಿದ್ದಾರೆ.

ಫೆಬ್ರವರಿ 28ರಂದು ಬಿಗ್​ ಬಾಸ್​ ಸೀಸನ್​ 8 ಆರಂಭವಾಗಿತ್ತು. ಅದ್ದೂರಿ ವೇದಿಕೆ ಏರಿದ 17 ಸ್ಪರ್ಧಿಗಳು ಬಿಗ್​ ಬಾಸ್ ಪ್ರವೇಶಿಸಿದ್ದರು. ಈ ಮಧ್ಯೆ ಮೂರು ಸ್ಪರ್ಧಿಗಳು ವೈಲ್ಡ್​ ಕಾರ್ಡ್​ ಮೂಲಕ ಮನೆಗೆ ಎಂಟ್ರಿ ಪಡೆದುಕೊಂಡಿದ್ದರು. ಆದರೆ, ಕೊರೊನಾ ವಕ್ರದೃಷ್ಟಿ ಬಿಗ್​ ಬಾಸ್​ ಮೇಲೆ ಬಿದ್ದಿತ್ತು. ಕೊವಿಡ್​ ನಿಯಂತ್ರಣಕ್ಕೆ ಹೇರಿದ್ದ ಲಾಕ್​ಡೌನ್​ನಿಂದಾಗಿ ಬಿಗ್​ ಬಾಸ್ ಅರ್ಧಕ್ಕೆ ನಿಂತ ಕಾರ್ಯಕ್ರಮ 43 ದಿನಗಳ ನಂತರದಲ್ಲಿ ಮತ್ತೆ ಶೋ ಆರಂಭಗೊಂಡಿತ್ತು.

ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಅರವಿಂದ್ ಕೆ.ಪಿ, ಮಂಜು ಪಾವಗಡ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ರಘು ಗೌಡ, ಚಕ್ರವರ್ತಿ ಚಂದ್ರಚೂಡ್​, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್​, ದಿವ್ಯಾ ಉರುಡುಗ, ಶುಭಾ ಪೂಂಜಾ, ವೈಷ್ಣವಿ ಗೌಡ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಇದ್ದರು. ಫಿನಾಲೆ ವೀಕ್​ನಲ್ಲಿ ಅರವಿಂದ್ ಕೆ.ಪಿ, ಮಂಜು ಪಾವಗಡ, ದಿವ್ಯಾ ಉರುಡುಗ, ಶುಭಾ ಪೂಂಜಾ, ವೈಷ್ಣವಿ ಗೌಡ ಹಾಗೂ ಪ್ರಶಾಂತ್​ ಸಂಬರಗಿ ಉಳಿದುಕೊಂಡಿದ್ದರು. ಈ ಪೈಕಿ ಮಂಜು ಪಾವಗಡ ವಿನ್​ ಆಗಿದ್ದಾರೆ.

Leave a Comment

Your email address will not be published. Required fields are marked *