July 2021

ಕೇಂದ್ರ ಸಂಪುಟಕ್ಕೆ ಇಂದು ಮೇಜರ್ ಸರ್ಜರಿ, ಹೊಸಬರಿಗೆ ಅವಕಾಶ, ಹಳೆಮುಖಗಳಿಗೆ ಕೊಕ್?

ನವದೆಹಲಿ(ಜು.07): ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ವಿಸ್ತರಣೆ/ ಪುನಾರಚನೆ ಕಾರ್ಯಕ್ರಮ ಇಂದು ಸಂಜೆ 6 ಗಂಟೆಗೆ ನಿಗದಿಯಾಗಿದೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬಿಜೆಪಿ ಮತ್ತು ಎನ್‌ಡಿಎ ಮಿತ್ರಪಕ್ಷಗಳ ಸಂಸದರಿಗೆ ಕೇಂದ್ರದ ಬಿಜೆಪಿ ನಾಯಕರಿಂದ ಕರೆ ಬಂದಿದ್ದು, ಅವರೆಲ್ಲಾ ಮಂಗಳವಾರವೇ ದೆಹಲಿಗೆ ದೌಡಾಯಿಸಿದ್ದಾರೆ. ಇದು 2019ರಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ಮೊದಲ ಸಂಪುಟ ಬದಲಾವಣೆ ಪ್ರಕ್ರಿಯೆಯಾಗಲಿದೆ. ಕೇಂದ್ರ ಸಂಪುಟದಲ್ಲಿ 81 ಜನರಿಗೆ ಅವಕಾಶವಿದ್ದು, […]

ಕೇಂದ್ರ ಸಂಪುಟಕ್ಕೆ ಇಂದು ಮೇಜರ್ ಸರ್ಜರಿ, ಹೊಸಬರಿಗೆ ಅವಕಾಶ, ಹಳೆಮುಖಗಳಿಗೆ ಕೊಕ್? Read More »

ಬಾಲಿವುಡ್ ಲೆಜೆಂಡ್ ಕಿಂಗ್ ದಿಲೀಪ್ ಕುಮಾರ್ ವಿಧಿವಶ, ಕಣ್ಣೀರಲ್ಲಿ ಮುಳುಗಿದ ಚಿತ್ರರಂಗ

ಮುಂಬೈ: ಬಾಲಿವುಡ್‌ ಹಿರಿಯ ನಟ ದಿಲೀಪ್‌ ಕುಮಾರ್‌ ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 98 ವರ್ಷದ ದಿಲೀಪ್‌ ಕುಮಾರ್‌ ಅವರನ್ನು ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಾಕಿಸ್ತಾನದ ಪೇಶಾವರದಲ್ಲಿ ಡಿಸೆಂಬರ್‌ 11, 1922 ರಲ್ಲಿ ಜನಿಸಿದ್ದ ಮಹಮ್ಮದ್‌ ಯೂಸೂಫ್‌ ಖಾನ್‌ ವಿಭಜನೆ ವೇಳೆ ಭಾರತಕ್ಕೆ ಬಂದಿದ್ದು ಬಾಲಿವುಡ್‌ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡ ಬಳಿಕ ದಿಲೀಪ್‌ ಕುಮಾರ್‌ ಎಂಬ ಹೆಸರಿನಿಂದಲೇ ಖ್ಯಾತರಾಗಿದ್ದರು. ಪತ್ನಿ ಸಾಯಿರಾಬಾನು ಜೊತೆ ಮುಂಬೈನಲ್ಲಿ ನೆಲೆಸಿದ್ದ ದಿಲೀಪ್‌ ಕುಮಾರ್‌ ಇಂದು ಬಾರದ ಲೋಕಕ್ಕೆ

ಬಾಲಿವುಡ್ ಲೆಜೆಂಡ್ ಕಿಂಗ್ ದಿಲೀಪ್ ಕುಮಾರ್ ವಿಧಿವಶ, ಕಣ್ಣೀರಲ್ಲಿ ಮುಳುಗಿದ ಚಿತ್ರರಂಗ Read More »

ಲಸಿಕೆ ಹಾಕಿಸಿದ ಬಳಿಕ ಹೋಗಿದ್ದ ದೃಷ್ಟಿ ಮರಳಿ ಬಂತು! ಹೀಗೊಂದು ಪವಾಡವೇ?

ಮುಂಬೈ: ಕರೊನಾ ಲಸಿಕೆ ಪಡೆದ ನಂತರ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಕಾಣಿಸಿಕೊಂಡಿದೆ ಎಂದಿರುವ ಅನೇಕರನ್ನು ನೀವು ನೋಡಿರುತ್ತೀರಿ. ಆದರೆ ವರ್ಷಗಳ ಹಿಂದೆ ಹೋಗಿದ್ದ ದೃಷ್ಟಿಯೇ ವಾಪಸು ಬಂದಿದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಅಂತದ್ದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ನಿವಾಸಿ ಮಥುರಾಬಾಯಿ ಬಿಡ್ವೆ(70)ಗೆ ಒಂಬತ್ತು ವರ್ಷಗಳ ಹಿಂದೆ ಎರಡೂ ಕಣ್ಣುಗಳ ದೃಷ್ಟಿ ಹೋಗಿತ್ತಂತೆ. ಆಕೆ ಜೂನ್ 26ರಂದು ಹತ್ತಿರದ ಕರೊನಾ ಲಸಿಕಾ ಕೇಂದ್ರಕ್ಕೆ ತೆರಳಿ ಕೋವಿಶೀಲ್ಡ್ ಲಸಿಕೆಯ ಮೊದಲನೇ ಡೋಸೇಜ್ ಪಡೆದುಕೊಂಡು

ಲಸಿಕೆ ಹಾಕಿಸಿದ ಬಳಿಕ ಹೋಗಿದ್ದ ದೃಷ್ಟಿ ಮರಳಿ ಬಂತು! ಹೀಗೊಂದು ಪವಾಡವೇ? Read More »

‘ನಾ ನಿನ್ನ ಬಿಡಲಾರೆ’ ಅಂತ ಸುತ್ತಿಕೊಳ್ತಿದೆ ಅಕ್ರಮ ಭೂ ಡಿನೋಟಿಫಿಕೇಶನ್ ಪ್ರಕರಣ, ಮತ್ತೆ ತನಿಖೆಗೆ ಆದೇಶಿಸಿದ ಕೋರ್ಟ್, ಸಿಎಂಗೆ ಹಿನ್ನಡೆ

ಬೆಂಗಳೂರು. ಅಕ್ರಮ ಭೂ ಡಿನೋಟಿಫಿಕೇ‍ಷನ್‌ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಹಿನ್ನಡೆಯಾಗಿದ್ದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಿಎಸ್‌ವೈ ವಿರುದ್ಧ ಮರು ತನಿಖೆಗೆ ಆದೇಶಿಸಿದೆ. ಅಕ್ರಮ ಭೂ ಡಿನೋಟಿಫಿಕೇ‍ಷನ್‌ಗೆ ಸಂಬಂಧಿಸಿದಂತೆ ತನಿಖಾ ಅಧಿಕಾರಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲಿನ ಆರೋಪ ಗಂಭೀರ ಸ್ವರೂಪದ್ದಾಗಿದ್ದು ಸಮರ್ಪಕ ತನಿಖೆಯನ್ನು ನಡೆಸದೇ ಕ್ಲೀನ್‌ ಚೀಟ್‌ ನೀಡಿರುವುದು ಸರಿಯಲ್ಲ ಎಂದಿರುವ ನ್ಯಾಯಾಲಯ ಹೆಚ್ಚಿನ ತನಿಖೆಗೆ ಇಂದು ಆದೇಶ ನೀಡಿತು. ನ್ಯಾಯಮೂರ್ತಿ ಶ್ರೀಧರ್ ಗೋಪಾಲಕೃಷ್ಣ ಭಟ್ ಪ್ರಕರಣದ ತನಿಖೆ ಕುರಿತು

‘ನಾ ನಿನ್ನ ಬಿಡಲಾರೆ’ ಅಂತ ಸುತ್ತಿಕೊಳ್ತಿದೆ ಅಕ್ರಮ ಭೂ ಡಿನೋಟಿಫಿಕೇಶನ್ ಪ್ರಕರಣ, ಮತ್ತೆ ತನಿಖೆಗೆ ಆದೇಶಿಸಿದ ಕೋರ್ಟ್, ಸಿಎಂಗೆ ಹಿನ್ನಡೆ Read More »

ಬಹಿರ್ದೆಸೆಗೆ ಕುಳಿತವನ ಮರ್ಮಾಂಗಕ್ಕೆ ಕಚ್ಚಿದ ಹಾವು…!

ಕ್ಯಾನ್ಬೆರಾ: ಮುಂಜಾನೆ ನಿದ್ದೆಯಿಂದೆದ್ದು ಟಾಯ್ಲೆಟ್ ನಲ್ಲಿ ಬಹಿರ್ದೆಸೆಗೆ ಕುಳಿತವನ ಮರ್ಮಾಂಗಕ್ಕೆ ಹಾವು ಕಚ್ಚಿದ ಘಟನೆ ಆಸ್ಟ್ರೇಲಿಯಾ ದಲ್ಲಿ ನಡೆದಿದೆ. 65 ವರ್ಷದ ವೃದ್ಧರೊಬ್ಬರು ಬೆಳಿಗ್ಗೆ ನಿದ್ದೆಯಿಂದ ಎದ್ದು ಹಾಗೆ ಟಾಯ್ಲೆಟ್ ನಲ್ಲಿ ಹೋಗಿ ಕುಳಿತಿದ್ದಾರೆ. ಸ್ವಲ್ಪ ಸಮಯದಲ್ಲೇ ಅವರ ಮರ್ಮಾಂಗಕ್ಕೆ ಏನೋ ಕಚ್ಚಿದಂತಾಗಿದೆ. ಎದ್ದು ನೋಡಿದಾಗ ಶೌಚಾಲಯದ ಬೇಸಿನ್ ಒಳಗಡೆ ಹಾವು ಕಾಣಿಸಿಕೊಂಡಿದೆ. ಗಾಬರಿಗೊಂಡ ವೃದ್ಧ ಚೀರಿಕೊಂಡು ಹೊರಗೆ ಓಡಿದ್ದಾರೆ. ಬೊಬ್ಬೆ ಕೇಳಿ ಮನೆಯವರು ಮತ್ತು ಅಕ್ಕಪಕ್ಕದವರು ಓಡೋಡಿ ಬಂದಿದ್ದಾರೆ. ಹಾವನ್ನು ಹಿಡಿದಾಗ ಅದು ಪಕ್ಕದ ಮನೆ

ಬಹಿರ್ದೆಸೆಗೆ ಕುಳಿತವನ ಮರ್ಮಾಂಗಕ್ಕೆ ಕಚ್ಚಿದ ಹಾವು…! Read More »

ಪ್ರೇಮಪಾಶದಲ್ಲಿ ಕುರುಡಾದ ಮಗ ತಂದೆಗೆ ತ್ರಿಶೂಲದಿಂದ ತಿವಿದ…!

ಲಕ್ನೋ: ಪ್ರೇಮಪಾಶದಲ್ಲಿ ಬಿದ್ದು ಕೊಲೆಗಾರರಾಗುವ ಅನೇಕ ಪ್ರೇಮಿಗಳಿದ್ದಾರೆ. ಯಾಕೆಂದರೆ ಅವರಿಗೆ ತಮ್ಮ ಪ್ರೀತಿಯನ್ನು ಹೊರತುಪಡಿಸಿ ಮತ್ತೇನೂ ಕಾಣುವುದಿಲ್ಲ. ಇಂತಹುದೇ ಶಾಕಿಂಗ್ ಘಟನೆ ಉತ್ತರ ಪ್ರದೆಶದ ಔರೆಯಾದಲ್ಲಿ ನಡೆದಿದೆ. ಇಲ್ಲೊಬ್ಬ ಮಗ ಇಲ್ಲೊಬ್ಬ ಮಗ ತನ್ನ ಗರ್ಲ್‌ಫ್ರೆಂಡ್‌ ಜೊತೆ ಮಾತನಾಡಲು ಸಾಧ್ಯವಾಗಲಿಲ್ಲವೆಂದು ತಂದೆಯನ್ನು ನಿದ್ದೆ ಮಾಡುವಾಗಲೇ ಕೊಲೆಗೈದಿದ್ದಾನೆ. ಶಿವಂ ಹೆಸರಿನ ಯುವಕ ಗಾಢ ನಿದ್ರೆಯಲ್ಲಿದ್ದ ತಂದೆಯ ಅರವಿಂದ್ ಹೊಟ್ಟೆಗೆ ತ್ರಿಶೂಲ ಚುಚ್ಚಿ ಕೊಲೆಗೈದಿದ್ದಾನೆ. ಯುವಕನಿಗೆ ಗರ್ಲ್‌ಫ್ರೆಂಡ್‌ ಜೊತೆ ಮಾತನಾಡಲು ತಂದೆ ಅಡ್ಡಿಪಡಿಸುತ್ತಿದ್ದರೆಂಬುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಘಟನೆ ದಿನವೂ

ಪ್ರೇಮಪಾಶದಲ್ಲಿ ಕುರುಡಾದ ಮಗ ತಂದೆಗೆ ತ್ರಿಶೂಲದಿಂದ ತಿವಿದ…! Read More »

ನಾಪತ್ತೆಯಾದ ರಷ್ಯಾ ವಿಮಾನ ಸಮುದ್ರದಲ್ಲಿ ಪತನ

ರಷ್ಯಾ : ರಷ್ಯಾದ ದೂರದ ಪೂರ್ವದಲ್ಲಿ ಇಳಿಯಲು ಸಿದ್ಧತೆ ನಡೆಸುತ್ತಿದ್ದಾಗ 28 ಜನರಿದ್ದ ವಿಮಾನ ಕಾಣೆಯಾದ ನಂತರ ಕಾಣೆಯಾದ ಎಎನ್-26 ವಿಮಾನ ಸಮುದ್ರಕ್ಕೆ ಅಪ್ಪಳಿಸಿದ ಸ್ಥಳವನ್ನು ರಷ್ಯಾದ ತುರ್ತು ಸೇವೆಗಳು ಪತ್ತೆ ಮಾಡಿವೆ ಎಂದು ಆರ್ ಐಎ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ. ಹಲವಾರು ಹಡಗುಗಳು ಅಪಘಾತದ ಸ್ಥಳಕ್ಕೆ ಹೋಗುತ್ತಿದ್ದವು, ತುರ್ತು ಸೇವೆಗಳನ್ನು ಉಲ್ಲೇಖಿಸಿದೆ. ವಿಮಾನವು ಒಖೋಟ್ಸ್ಕ್ ಸಮುದ್ರ ಕರಾವಳಿಯ ಬಳಿಯ ಪಾಲನಾ ಹಳ್ಳಿಗೆ ಹೋಗುವ ಮಾರ್ಗದಲ್ಲಿತ್ತು ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ನಾಪತ್ತೆಯಾಗಿದ್ದಂತ

ನಾಪತ್ತೆಯಾದ ರಷ್ಯಾ ವಿಮಾನ ಸಮುದ್ರದಲ್ಲಿ ಪತನ Read More »

ಕೈದಿಗಳೊಂದಿಗೆ ಕಾಮಕೇಳಿ‌ ನಡೆಸಿದ ಮಹಿಳಾ ಪೊಲೀಸ್…!

ಕ್ಯಾಲಿಫೋರ್ನಿಯಾ(ಅಮೆರಿಕ): ಕರ್ತವ್ಯನಿರತ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬಳು ಜೈಲಿನಲ್ಲಿ ಕೈದಿ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಆ ವೇಳೆ ಇತರ 11 ಕೈದಿಗಳಿದ್ದರೂ ಅವರ ಎದುರೇ ಕಾಮದಾಟ ನಡೆಸಿ ಜೈಲುಶಿಕ್ಷೆಗೆ ಗುರಿಯಾಗಿದ್ದಾಳೆ. ಕೈದಿ ಜತೆ ಸೆಕ್ಸ್​ ಮಾಡಿ ಜೈಲು ಸೇರಿದವಳ ಹೆಸರು ಟೀನಾ ಗೊನ್ಜಾಲೆಜ್​. 26 ವರ್ಷದ ಈಕೆ ಪ್ರೆಸ್ನೊ ಕೌಂಟಿ ಠಾಣೆಯ ಕರೆಕ್ಷನ್​ ಅಧಿಕಾರಿ. 2016ರಿಂದ ಕೌಂಟಿ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ ಟೀನಾ, ತನಗೆ ಮೂಡ್ ಬಂದಾಗಲೆಲ್ಲ ಕೈದಿಗಳ ಜತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಂತೆ. ಕೆಲವರೊಂದಿಗೆ ಲೈಂಗಿಕ ಕ್ರಿಯನ್ನೂ

ಕೈದಿಗಳೊಂದಿಗೆ ಕಾಮಕೇಳಿ‌ ನಡೆಸಿದ ಮಹಿಳಾ ಪೊಲೀಸ್…! Read More »

ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರಚಂದ್ ಗೆಹ್ಲೋಟ್

ನವದೆಹಲಿ: ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ತಾವರ್‌ಚಂದ್‌ ಗೆಹ್ಲೋಟ್‌ ಅವರು ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರು ಮಂಗಳವಾರ ನೇಮಕಾತಿ ಆದೇಶ ಮಾಡಿದ್ದಾರೆ. ಹಾಲಿ ರಾಜ್ಯಪಾಲ ವಜುಭಾಯಿವಾಲಾ ಅವರ ಅವಧಿ ಪೂರ್ಣಗೊಂಡಿದೆ. ಅವರ ಸ್ಥಾನಕ್ಕೆ ತಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸಚಿವ ಸಂಪುಟದ ಪುನರ್‌ರಚನೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಈ ನೇಮಕಾತಿ ಆದೇಶ ಹೊರಬಂದಿದೆ. ಮೂರು ಬಾರಿ ಮಧ್ಯಪ್ರದೇಶ ಶಾಸಕರಾಗಿ, ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ

ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರಚಂದ್ ಗೆಹ್ಲೋಟ್ Read More »

ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ತಗ್ಗಿದ ಸೋಂಕು, _ ತಿಂಗಳಲ್ಲೇ ಅತೀ ಕನಿಷ್ಠ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 34,703 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 111 ದಿನಗಳಲ್ಲೇ ಮೊದಲ ಬಾರಿ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ.ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,06,19,932ಕ್ಕೆ ಏರಿಕೆಯಾಗಿದೆ. ಕೋವಿಡ್ ಸಾವಿನ ಸಂಖ್ಯೆಯೂ ಕಡಿಮೆಯಾಗಿದ್ದು, ಕಳೆದ 24 ಗಂಟೆಯಲ್ಲಿ 553 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದುವರೆಗೂ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 4,03,281ಕ್ಕೆ ಏರಿಕೆಯಾಗಿದೆ.ಇನ್ನು ದೇಶದಲ್ಲಿ 4,64,357ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 2,97,52,294ಜನರು

ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ತಗ್ಗಿದ ಸೋಂಕು, _ ತಿಂಗಳಲ್ಲೇ ಅತೀ ಕನಿಷ್ಠ ಸೋಂಕು ಪತ್ತೆ Read More »