July 2021

ಕೊರೊನದಿಂದ ಮೃತಪಟ್ಟ ರೈತರ ಸಾಲಮನ್ನಾಕ್ಕೆ ನಿರ್ಧಾರ – ಸಚಿವ ಸೋಮಶೇಖರ್

ಬೆಂಗಳೂರು ; ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿರುವ ರೈತರ 1 ಲಕ್ಷವರೆಗಿನ ಸಾಲಮನ್ನಾ ಮಾಡಲು ಸರ್ಕಾರ ಮುಂದಾಗಿದ್ದು, ಈ ಕುರಿತು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟ ರೈತರ 1 ಲಕ್ಷ ರೂ. ವರೆಗೆ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ರಾಜ್ಯದಲ್ಲಿ ಎಷ್ಟು ರೈತರು ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ ಸಾಲಮನ್ನಾ ಮಾಡಲಾಗುವುದು ಈ ಬಗ್ಗೆ […]

ಕೊರೊನದಿಂದ ಮೃತಪಟ್ಟ ರೈತರ ಸಾಲಮನ್ನಾಕ್ಕೆ ನಿರ್ಧಾರ – ಸಚಿವ ಸೋಮಶೇಖರ್ Read More »

ಶಾರ್ಟ್ ಸರ್ಕ್ಯೂಟ್ ಗೆ ಚಾಲಕ ಸಮೇತ ಹೊತ್ತಿ‌ ಉರಿದ ಕಾರು

ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಅಲ್ಟೋ ಕಾರೊಂದು ಹೊತ್ತಿ ಉರಿದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ವಸ್ತಾರೆ ಗ್ರಾಮದ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಆರೆನೂರು ಗ್ರಾಮದ ನಿವಾಸಿ ರಘು ಎಂದು ತಿಳಿದು ಬಂದಿದ್ದು ಕಾರಿನಲ್ಲಿ ಒಬ್ಬರೆ ಇದ್ದು ಚಿಕ್ಕಮಗಳೂರಿಗೆ ಹೋಗಿ ಆಲ್ದೂರಿಗೆ ಬರುವ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಕಾರಿಗೆ ಬೆಂಕಿ ಹಬ್ಬಿದ ಕೂಡಲೆ ಸ್ಥಳೀಯರು ಬೆಂಕಿ ನಂದಿಸಲು

ಶಾರ್ಟ್ ಸರ್ಕ್ಯೂಟ್ ಗೆ ಚಾಲಕ ಸಮೇತ ಹೊತ್ತಿ‌ ಉರಿದ ಕಾರು Read More »

ಡಿ.ವಿ ಕರ್ನಾಟಕದ ಮುಂದಿನ ಸಿಎಂ!? ಮೌನ ಮುರಿದ ಡಿವಿಎಸ್ ಏನು ಹೇಳಿದ್ರು ಗೊತ್ತಾ?

ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದ ಡಿ.ವಿ ಸದಾನಂದಗೌಡ ಬೆಂಗಳೂರಿಗೆ ವಾಪಸ್​​ ಆಗಿದ್ದು, ಗೌಡರ ಆಗಮನ ಹಿನ್ನೆಲೆಯಲ್ಲಿ ಅವರನ್ನು ನೋಡಿ ಮಾತನಾಡಿಸಲು ಬಿಜೆಪಿ ಕಾರ್ಯಕರ್ತರ ದಂಡು ಡಾಲರ್ಸ್ ಕಾಲೋನಿಯ ಸದಾನಂದಗೌಡರ ನಿವಾಸಕ್ಕೆ ಆಗಮಿಸಿತ್ತು. ನೂರಾರು ಸಂಖ್ಯೆಯ ಕಾರ್ಯಕರ್ತರು ಗೌಡರಿಗೆ ಜೈಕಾರ ಹಾಕಿ, ಮಾಜಿ ಸಚಿವರನ್ನು ಸ್ವಾಗತಿಸಿದ್ದು, ಕಾರ್ಯಕರ್ತರನ್ನು ಉದ್ದೇಶಿಸಿ ಸದಾನಂದಗೌಡರು ಮಾತನಾಡಿದರು. ‘ ನನ್ನ ಮತ್ತು ಪಕ್ಷದ ಕಾರ್ಯಕರ್ತರ ಸಂಬಂಧ ಎಲ್ಲೆ ಇದ್ರು ನಾವೆಲ್ಲರೂ ಒಟ್ಟಾಗಿ ಇದ್ದೇವೆ ಎಂಬ ಸಂದೇಶ ಇದು. ನಾನು ಪಕ್ಷದ

ಡಿ.ವಿ ಕರ್ನಾಟಕದ ಮುಂದಿನ ಸಿಎಂ!? ಮೌನ ಮುರಿದ ಡಿವಿಎಸ್ ಏನು ಹೇಳಿದ್ರು ಗೊತ್ತಾ? Read More »

ಕೆ.ಆರ್.ಎಸ್ ಅಕ್ರಮ ಗಣಿಗಾರಿಕೆ ದಂಧೆ, ಶೀಘ್ರ ದಾಖಲೆ ಬಿಡುಗಡೆ – ಅಶ್ವಥ ನಾರಾಯಣ

ಬೆಂಗಳೂರು: ಮಂಡ್ಯ ಜಿಲ್ಲೆ ಕೆ.ಆರ್‌.ಎಸ್‌ ಸುತ್ತಮುತ್ತ ಸುಮಾರು 40ಕ್ಕೂ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇವುಗಳ ಸಂಪೂರ್ಣ ದಾಖಲೆಗಳನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ ನಾರಾಯಣ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಯಿಂದ ಅಣೆಕಟ್ಟು ಮಾತ್ರವಲ್ಲದೆ, ರೈತರ ಜನ ಜೀವನಕ್ಕೂ ತೊಂದರೆ ಆಗಿದೆ. ಈ ಅಕ್ರಮ ದಂಧೆಯ ಸಂಪೂರ್ಣ ದಾಖಲೆಗಳನ್ನು ಮುಂದಿನ ವಾರ ಬಹಿರಂಗಪಡಿಸುವುದಾಗಿ ಅವರು ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಬ್ಬ ವ್ಯಕ್ತಿ ಒಂದು ಗಣಿಗೆ ಪರವಾನಗಿ ಪಡೆದು 8-10 ಅಕ್ರಮ

ಕೆ.ಆರ್.ಎಸ್ ಅಕ್ರಮ ಗಣಿಗಾರಿಕೆ ದಂಧೆ, ಶೀಘ್ರ ದಾಖಲೆ ಬಿಡುಗಡೆ – ಅಶ್ವಥ ನಾರಾಯಣ Read More »

ರೋಗ ಬಾಧೆ, ಕಡಿಮೆ ಬೆಲೆಗೆ ಬೇಸತ್ತ ರೈತನಿಂದ 2ಎಕ್ರೆ ದಾಳಿಂಬೆಗೆ ಕೊಡಲಿ ಪೆಟ್ಟು

ಬೆಳಗಾವಿ: ‘ಸರಿಯಾದ ಬೆಲೆ ಮತ್ತು ಮಾರುಕಟ್ಟೆ ಸಿಗದಿರುವುದು ಹಾಗೂ ರೋಗ ಬಾಧೆಯಿಂದ ಕಂಗೆಟ್ಟು ರೈತನೋರ್ವ‌ಎರಡು‌ ಎಕರೆ ದಾಳಿಂಬೆ ಬೆಳೆಯನ್ನು ಕೊಡಲಿಯಿಂದ ಕತ್ತರಿಸಿದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಅಜೂರ ಗ್ರಾಮದಲ್ಲಿ ನಡೆದಿದೆ. ರೈತ ನವನಾಥ ಮಾನೆ ಎಂಬವರು ತಮ್ಮ ಎರಡು ಎಕರೆ ಹೊಲದಲ್ಲಿ ದಾಳಿಂಬೆ ಬೆಳೆದಿದ್ದರು. ಹವಾಮಾನ ವೈಪರೀತ್ಯ, ರೋಗ ಬಾಧೆ ಮತ್ತು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗದೆ ಕಂಗಾಲಾಗಿ ಶುಕ್ರವಾರ ದಾಳಿಂಬೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಬೆಳೆಗೆ ವರ್ಷಕ್ಕೆ 2-3 ಲಕ್ಷ ಖರ್ಚಾಗುತ್ತದೆ. ಆದರೆ

ರೋಗ ಬಾಧೆ, ಕಡಿಮೆ ಬೆಲೆಗೆ ಬೇಸತ್ತ ರೈತನಿಂದ 2ಎಕ್ರೆ ದಾಳಿಂಬೆಗೆ ಕೊಡಲಿ ಪೆಟ್ಟು Read More »

ಕಿಚ್ಚ ನಟನೆಯ ‘ ವಿಕ್ರಾಂತ್ ರೋಣ’ ಪೋಸ್ಟರ್ ನಕಲಿ ಮಾಡಿದ ಬಾಲಿವುಡ್!

ಕಿಚ್ಚ ಸುದೀಪ್​ ನಟನೆಯ ಬಹುನಿರೀಕ್ಷಿತ ‘ವಿಕ್ರಾಂತ್​ ರೋಣ’ ಸಿನಿಮಾದ ಪೋಸ್ಟರ್ ಅನ್ನು ಬಾಲಿವುಡ್ ಮಂದಿ ಕಾಪಿ ಮಾಡಿದ್ದಾರೆ. ಸ್ಯಾಂಡಲ್​ವುಡ್​ಗೆ ಸೀಮಿತವಾಗದೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್​ ಆಗುತ್ತಿದ್ದು, ಈ​ ಸಿನಿಮಾದ ಪೋಸ್ಟರ್​ ಕಾಪಿ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ‘ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಸುದೀಪ್​ ಭಿನ್ನ ಅವತಾರ ತಾಳಿದ್ದಾರೆ. ‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್​ ಭಂಡಾರಿ ಅವರು ಈ ಚಿತ್ರಕ್ಕೆ ಆಕ್ಷನ್ ‌ಕಟ್ ಹೇಳಿದ್ದಾರೆ. ಈ ಕಾರಣಕ್ಕೆ ಚಿತ್ರದ ಬಗ್ಗೆ

ಕಿಚ್ಚ ನಟನೆಯ ‘ ವಿಕ್ರಾಂತ್ ರೋಣ’ ಪೋಸ್ಟರ್ ನಕಲಿ ಮಾಡಿದ ಬಾಲಿವುಡ್! Read More »

ಕಾರ್ಕಳ: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ದೌರ್ಜನ್ಯ ಆರೋಪ, ಮಾಜಿ ಸಿಎಂ ಸಿದ್ದು ಖಂಡ‌ನೆ

ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸ್ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಇದೀಗ ಕಾರ್ಯಕರ್ತನ ಸ್ಥಿತಿ ಗಂಭೀರವಾಗಿದೆ. ಹಿರ್ಗಾನ ನಿವಾಸಿ ರಾಧಾಕೃಷ್ಣ ಹಲ್ಲೆಗೆ ಒಳಗಾದವರು. ಇವರು ಸೈನಿಕರ ಬಗ್ಗೆ ಫೇಸ್‌ಬುಕ್‌ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದರು ಎಂಬ ಆರೋಪದ ಮೇಲೆ ಠಾಣಾಧಿಕಾರಿ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ರಾಧಾಕೃಷ್ಣ ಎಂಬವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ತನ್ನ ಫೇಸ್ ಬುಕ್ ನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟ್ ಗಳನ್ನು ಹಾಕುತ್ತಿದ್ದರು. ಆದರೆ 2020

ಕಾರ್ಕಳ: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ದೌರ್ಜನ್ಯ ಆರೋಪ, ಮಾಜಿ ಸಿಎಂ ಸಿದ್ದು ಖಂಡ‌ನೆ Read More »

ಮಂಗಳೂರು ವಿ.ವಿ ಗ್ರೂಪ್ ನಲ್ಲಿ ಹರಿದಾಡಿತು ಹಸಿಬಿಸಿ ವಿಡಿಯೋ, ಪ್ರೊಫೆಸರ್ ನ ಎಡವಟ್ಟಿಗೆ ಎಲ್ಲೆಡೆ ಆಕ್ರೋಶ

ಮಂಗಳೂರು: ಇಲ್ಲಿನ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಿವಿಧ ಕಾಲೇಜುಗಳ ಪ್ರೊಫೆಸರ್ ಮತ್ತು ಉಪನ್ಯಾಸಕರನ್ನು ಒಳಗೊಂಡ ಟೆಲಿಗ್ರಾಮ್ ಗ್ರೂಪಿನಲ್ಲಿ ಕೊಡಗು ಮೂಲದ ಪ್ರೊಫೆಸರ್ ಒಬ್ಬರು ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿರುವ ಘಟನೆ ನಡೆದಿದ್ದು, ವಿವಿಯಿಂದ ತನಿಖೆಗೆ ಆದೇಶ ಮಾಡಲಾಗಿದೆ. ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ವಿಚಾರದಲ್ಲಿ ಮಂಗಳೂರು ವಿವಿಯಿಂದ ಗ್ರೂಪ್ ರಚಿಸಲಾಗಿತ್ತು. ವಾಟ್ಸಪ್ ಮಾದರಿಯದ್ದೇ ಟೆಲಿಗ್ರಾಮ್ ನಲ್ಲಿ ಗ್ರೂಪ್ ರಚಿಸಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ವ್ಯಾಪ್ತಿಯ ವಿವಿಧ ಕಾಲೇಜುಗಳ ಸಾವಿರಕ್ಕಿಂತಲೂ ಹೆಚ್ಚು ಸದಸ್ಯರನ್ನು ಸೇರಿಸಲಾಗಿತ್ತು.

ಮಂಗಳೂರು ವಿ.ವಿ ಗ್ರೂಪ್ ನಲ್ಲಿ ಹರಿದಾಡಿತು ಹಸಿಬಿಸಿ ವಿಡಿಯೋ, ಪ್ರೊಫೆಸರ್ ನ ಎಡವಟ್ಟಿಗೆ ಎಲ್ಲೆಡೆ ಆಕ್ರೋಶ Read More »

ಮತ್ತೆ ದೇಶದಲ್ಲಿ ಏರಿಕೆಕಾಣುತ್ತಿರುವ ಕೊರೊನ ಸೋಂಕಿನ ಪ್ರಮಾಣ, ಮೈಮರೆತೀರಾ ಜೋಕೆ….

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕ್ 43,393 ಜನರಲ್ಲಿ ಪತ್ತೆಯಾಗಿದ್ದು ಇದರಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ 3,07,52,950ಕ್ಕೆ ಏರಿದೆ. ಇದಿರಿಂದ ಮತ್ತೆ ಲಾಕ್ ಡೌನ್ ಆಗುವ ಮುನ್ಸೂಚನೆ ಇದೆ. ಕಳೆದ 24 ಗಂಟೆಯಲ್ಲಿ 911 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೂ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 4,05,939ಕ್ಕೆ ಏರಿಕೆಯಾಗಿದೆ.ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದಲ್ಲದೆ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನಲೆ ಲಾಕ್ ಡೌನ್ ಮಾಡುವ ಸ್ಥಿತಿ

ಮತ್ತೆ ದೇಶದಲ್ಲಿ ಏರಿಕೆಕಾಣುತ್ತಿರುವ ಕೊರೊನ ಸೋಂಕಿನ ಪ್ರಮಾಣ, ಮೈಮರೆತೀರಾ ಜೋಕೆ…. Read More »

ಬೆಳ್ತಂಗಡಿ: ಹೆಂಡತಿಯ ಕೈಗೆ ಚೊಂಬು ಕೊಟ್ಟು ನಾದಿನಿಯನ್ನು ಹಾರಿಸಿಕೊಂಡು ಹೋದ ಗಂಡ

ಬೆಳ್ತಂಗಡಿ: ನವ ವಿವಾಹಿತ ಓರ್ವ ತನ್ನ ಹೆಂಡತಿಯನ್ನು ಬಿಟ್ಟು ನಾದಿನಿಯ ಜೊತೆ ಪರಾರಿಯಾದ ಘಟನೆ ಘಟನೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಕೈಕಂಬ ಎಂಬಲ್ಲಿ ನಡೆದಿದೆ. ಪರಾರಿಯಾದವರನ್ನು ಮುಸ್ತಾಫ್ ಮತ್ತು ರೈಹಾನಳ ಎಂದು ಹೇಳಲಾಗಿದೆ. ಮುಸ್ತಫಾ 9 ತಿಂಗಳ ಹಿಂದೆ ಮುಹಮ್ಮದ್ ಅವರ ಪುತ್ರಿ ಸೌಧಾ ಎಂಬಾಕೆಯನ್ನು ವಿವಾಹ ವಾಗಿದ್ದನು. ಅನಂತರ ಆತ ಮತ್ತು ಪತ್ನಿ ಸೌದ ಮಾವನ ಮನೆಗೆ ಬಂದು ಹೋಗುತ್ತಿದ್ದರು. ಈ ಸಂದರ್ಭ ನಾದಿನಿ ರೈಹಾನಳ ಜೊತೆಗೆ ಅಳಿಯ ಮುಸ್ತಫಾ ಸಲುಗೆಯಿಂದ ಇದ್ದುದ್ದಲ್ಲದೇ ಪೋನ್

ಬೆಳ್ತಂಗಡಿ: ಹೆಂಡತಿಯ ಕೈಗೆ ಚೊಂಬು ಕೊಟ್ಟು ನಾದಿನಿಯನ್ನು ಹಾರಿಸಿಕೊಂಡು ಹೋದ ಗಂಡ Read More »