July 2021

ಯೂಟ್ಯೂಬ್’ನಿಂದ ವಂಚನೆ, ವಿದೇಶಿಗರಿಂದ ರಿಂದ ಬಹುಭಾಷೆ ಕಲಿತ ಖರ್ತನಾಕ್‌ | ಯುವತಿಯರಿಗೆ ವಂಚಿಸುತ್ತಿದ್ದ ನಕಲಿ ರಾಜವಂಶಸ್ಥ ಬಂಧನ

ಬೆಂಗಳೂರು: ಇಂಗ್ಲೀಷ್, ಸ್ಪಾನಿಷ್ ಸೇರಿದಂತೆ ಹಲವು ಭಾಷೆಗಳನ್ನು ಕಲಿತು ಮೈಸೂರು ರಾಜವಂಶಸ್ಥರ ಹೆಸರಿನಲ್ಲಿ ವ್ಯಕ್ತಿಯೋರ್ವ ಹಲವು ಯುವತಿಯರಿಗೆ ವಂಚನೆ ಎಸಗಿದ ಪ್ರಕರಣ ಪಿರಿಯಾಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಮುತ್ತು ಎಂದು ಗುರುತಿಸಲಾಗಿದೆ. ಅದರೆ ಈತ ವಂಚೆನೆ ಕೃತ್ಯ ಎಸಗಲು ಸಿದ್ದಾರ್ಥ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಸಿದ್ದಾರ್ಥ ಎಂಬ ಹೆಸರಿನ ಮುತ್ತು ಯುವತಿಯರನ್ನು ಪ್ರೀತಿಯ ಬಲೆಗೆ ತಳ್ಳಿ ಮದುವೆಯಾಗುವುದಾಗಿ ನಂಬಿಸುತ್ತಿದ್ದ ಅಲ್ಲದೆ ಸಮಯ ಕಳೆದಂತೆ ಹಣ ಪಡೆದು ವಂಚನೆ ಎಸಗಿರುವುದಾಗಿ ಈತನ ವಿರುದ್ಧ ವೈಟ್‌ಫೀಲ್ಡ್ ಸಿಇಎನ್ ಠಾಣೆಯಲ್ಲಿ ಯುವತಿಯೋರ್ವಳು […]

ಯೂಟ್ಯೂಬ್’ನಿಂದ ವಂಚನೆ, ವಿದೇಶಿಗರಿಂದ ರಿಂದ ಬಹುಭಾಷೆ ಕಲಿತ ಖರ್ತನಾಕ್‌ | ಯುವತಿಯರಿಗೆ ವಂಚಿಸುತ್ತಿದ್ದ ನಕಲಿ ರಾಜವಂಶಸ್ಥ ಬಂಧನ Read More »

ಭಾರತದ ಮಾಜಿ ಕ್ರಿಕೆಟಿಗ ಯಶ್’ಪಾಲ್ ಶರ್ಮ ವಿಧಿವಶ

ಚೊಚ್ಚಲ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಆಟಗಾರ ಯಶ್ ಪಾಲ್ ಶರ್ಮಾ(66) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಮೃತಾಪಟ್ಟಿದ್ದಾರೆ. ಕಪಿಲ್ ದೇವ್ ನಾಯಕತ್ವದಲ್ಲಿ, 1983ರಲ್ಲಿ ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆ ಮುತ್ತಿಕ್ಕಿತ್ತು. ಆ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಯಶ್ ಪಾಲ್ ಶರ್ಮಾ ಆಡಿದ್ದರು. ಭಾರತ ತಂಡದ ಮಾಧ್ಯಮ ಕ್ರಮಾಂಕದ ದಾಂಡಿಗರಾಗಿದ್ದ ಯಶ್ ಪಾಲ್ ಶರ್ಮಾ ಇಂದು ಬೆಳಿಗ್ಗೆ 7.30ರ ಸುಮಾರಿಗೆ ಹೃದಯಾಘಾತದಿಂದ ನಿಧರಾಗಿದ್ದಾರೆ. ಅವರ ನಿಧನಕ್ಕೆ ಕ್ರಿಕೆಟ್ ವಲಯ ಕಂಬನಿ ಮಿಡಿದಿದೆ.

ಭಾರತದ ಮಾಜಿ ಕ್ರಿಕೆಟಿಗ ಯಶ್’ಪಾಲ್ ಶರ್ಮ ವಿಧಿವಶ Read More »

ವಿಷಯುಕ್ತ ಆಹಾರ ಸೇವಿಸಿ ತಂದೆ, ತಾಯಿ, ಅಜ್ಜಿ ಸಾವು | ಮಕ್ಕಳಿಬ್ಬರು ಗಂಭೀರ

ಚಿತ್ರದುರ್ಗ: ಆಕಸ್ಮಿಕವಾಗಿ ವಿಷಯುಕ್ತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ, ಇಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ನಡೆದಿದೆ. ಭಾನುವಾರ ರಾತ್ರಿ ಕುಟುಂಸ್ಥರು ಮನೆಯಲ್ಲಿ ರಾಗಿಮುದ್ದೆ ಮತ್ತು ಕಾಳು ಸಾರು ಸೇವಿಸಿದ್ದರು. ಕೆಲ ಸಮಯದ ಬಳಿಕ ಮನೆಯವರಿಗೆಲ್ಲರಿಗೂ ಅನಾರೋಗ್ಯ ಕಾಣಿಸಿಕೊಂಡಿದೆ. ಅಶ್ವಸ್ಥಗೊಂಡವರನ್ನು ನೆರೆಮನೆಯವರು ಆಸ್ಪತ್ರೆಗೆ ದಾಖಸಿದ್ದಾರೆ. ಆದರೆ ಅದಾಗಲೇ ಮನೆ ಯಜಮಾನ ತಿಪ್ಪಾನಾಯ್ಕ್(46), ಪತ್ನಿ ಸುಧಾಬಾಯಿ(43), ವೃದ್ಧೆ ಗುಂಡಿಬಾಯಿ(75) ಮೃತಪಟ್ಟಿದ್ದಾರೆ. ತೀವ್ರ ಅಸ್ವಸ್ಥಗೊಂಡ ಮಕ್ಕಳಾದ ರಾಹುಲ್ (18) ಮತ್ತು ರಮ್ಯ(16) ದಾವಣಗೆರೆ ಜಿಲ್ಲಾಸ್ಪತ್ರೆಗೆ

ವಿಷಯುಕ್ತ ಆಹಾರ ಸೇವಿಸಿ ತಂದೆ, ತಾಯಿ, ಅಜ್ಜಿ ಸಾವು | ಮಕ್ಕಳಿಬ್ಬರು ಗಂಭೀರ Read More »

ಅಗ್ನಿಕುಂಡದಲ್ಲಿ ಶವ ಹೋಮ ಪ್ರಕರಣ: ರಾಜೇಶ್ವರಿ ಗ್ಯಾಂಗ್’ನಿಂದ ಹೈಕೋರ್ಟ್’ಗೆ ಮೇಲ್ಮನವಿ

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಮಾಡಿ ಹೋಮಕುಂಡದಲ್ಲಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವ ದಿ.ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಪುತ್ರ ನವನೀತ್ ಶೆಟ್ಟಿ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ಕೋರಿ ಹೈ ಕೋರ್ಟ್ ನಲ್ಲಿ ಮೇಲ್ಮನವಿ ಮತ್ತು ಜಾಮೀನು ಅರ್ಜಿ ಸಲ್ಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಐದು ವರ್ಷಗಳ ಹಿಂದೆ ಉಡುಪಿಯ ಇಂದ್ರಾಳಿಯ ಎನ್‌ಆರ್‌ಐ ಉದ್ಯಮಿ ಭಾಸ್ಕರ್ ಶೆಟ್ಟಿ (52)ಯನ್ನು ಅಗ್ನಿಕುಂಡದಲ್ಲಿ ಸುಟ್ಟು ಭಸ್ಮ ಮಾಡಿದ ಅಮಾನುಷ

ಅಗ್ನಿಕುಂಡದಲ್ಲಿ ಶವ ಹೋಮ ಪ್ರಕರಣ: ರಾಜೇಶ್ವರಿ ಗ್ಯಾಂಗ್’ನಿಂದ ಹೈಕೋರ್ಟ್’ಗೆ ಮೇಲ್ಮನವಿ Read More »

ಬ್ರಹ್ಮಾವರ: ಫ್ಲಾಟ್’ನಲ್ಲಿ ವಿದೇಶದಿಂದ ಬಂದ ಮಹಿಳೆಯ ಉಸಿರುಗಟ್ಟಿಸಿ ಕೊಲೆ

ಉಡುಪಿ: ಜಿಲ್ಲೆಯ ಬ್ರಹ್ಮಾವರದ ಫ್ಲಾಟ್ ಒಂದರಲ್ಲಿ ಕೆಲ ದಿನಗಳ ಹಿಂದೆ ವಿದೇಶದಿಂದ ವಾಪಾಸಾಗಿದ್ದ ಮಹಿಳೆಯನ್ನು ಕತ್ತುಹಿಸುಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಂಗೊಳ್ಳಿ ಮೂಲದ ವಿಶಾಲ (35 ವ.) ಕೊಲೆಯಾದ ಮಹಿಳೆ. ಕೆಲವು ದಿನಗಳ ಹಿಂದೆಯಷ್ಟೇ ವಿದೇಶದಿಂದ ಆಗಮಿಸಿದ್ದ ವಿಶಾಲ, ನಗರದಲ್ಲಿ ಕೆಲವು ಅಗತ್ಯ ಕೆಲಸಗಳಿರುವ ಕಾರಣ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದರು. ಕೊಲೆಯಾದ ದಿನ ಸಂಜೆ ವೇಳೆಗೆ ಮನೆಗೆ ಬರುವುದಾಗಿ ಹೇಳಿದ್ದರು. ಆದರೆ, ವಿಶಾಲ ಸಂಜೆಯಾದರೂ ಮನೆಗೆ ಬಾರದ ಕಾರಣ ಅವರ ತಂದೆ ಹುಡುಕಿಕೊಂಡು ನಗರಕ್ಕೆ ಬಂದಾಗ

ಬ್ರಹ್ಮಾವರ: ಫ್ಲಾಟ್’ನಲ್ಲಿ ವಿದೇಶದಿಂದ ಬಂದ ಮಹಿಳೆಯ ಉಸಿರುಗಟ್ಟಿಸಿ ಕೊಲೆ Read More »

ಬರ್ತಾ ಇದೆ ಮೂರನೇ ಅಲೆ, ದೇಶವಾಸಿಗಳೇ ಎಚ್ಚರದಿಂದಿರಿ- ಐಎಂಎ ಕಳವಳ

ನವದೆಹಲಿ: ಕೊರೋನಾ 2ನೇ ಅಲೆ ಇಳಿಕೆಯ ನಂತರ ಜನರು ಮಾರ್ಗಸೂಚಿಗಳನ್ನು ಎಗ್ಗಿಲ್ಲದೇ ಮುರಿಯುತ್ತಿದ್ದು, ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆತಂಕ ವ್ಯಕ್ತಪಡಿಸಿದೆ. ಜನರ ವಿನಾಕಾರಣ ಓಡಾಟ ಹಾಗೂ‌ ಯಾತ್ರೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದೆ. ‘ ಜಗತ್ತಿನಲ್ಲಿ ಲಭ್ಯವಿರುವ ಸಾಕ್ಷ್ಯಗಳನ್ನು ನೋಡಿದರೆ ಹಾಗೂ ಯಾವುದೇ ಸಾಂಕ್ರಾಮಿಕ ರೋಗದ ಇತಿಹಾಸವನ್ನು ಗಮನಿಸಿದರೆ ಕೊರೋನಾದ 3ನೇ ಅಲೆ ಕೂಡ ಬಂದೇ ಬರುತ್ತದೆ ಎಂದು ಅನುಮಾನವಿಲ್ಲದೆ ಹೇಳಬಹುದು. ದೇಶದ ವೈದ್ಯಕೀಯ

ಬರ್ತಾ ಇದೆ ಮೂರನೇ ಅಲೆ, ದೇಶವಾಸಿಗಳೇ ಎಚ್ಚರದಿಂದಿರಿ- ಐಎಂಎ ಕಳವಳ Read More »

ಭೀಕರ ಅಗ್ನಿ ದುರಂತ, 39 ಕ್ಕೂ ಹೆಚ್ಚು ಮಂದಿ ಸಾವು

ಕೈರೋ: ದಕ್ಷಿಣ ಇರಾಕ್ ನ ನಾಸಿರಿಯಾದ ಕೊರೊನಾ ವೈರಸ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 39 ಜನರು ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು ತಿಳಿಸಿದ್ದಾರೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ ಅಲ್-ಹುಸೇನ್ ಕೊರೊನಾವೈರಸ್ ಆಸ್ಪತ್ರೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳನ್ನು ಉಲ್ಲೇಖಿಸಿ ಸರ್ಕಾರಿ ಇರಾಕ್ ಸುದ್ದಿ ಸಂಸ್ಥೆ ಹೇಳಿದೆ. ದಕ್ಷಿಣ ಇರಾಕಿನ ನಗರ ನಾಸಿರಿಯಾದ ಅಲ್ ಹುಸೇನ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ

ಭೀಕರ ಅಗ್ನಿ ದುರಂತ, 39 ಕ್ಕೂ ಹೆಚ್ಚು ಮಂದಿ ಸಾವು Read More »

ಪೆಟ್ರೋಲ್ ಸುರಿದು ಬಾಲಕಿಯ ಹತ್ಯೆ ಯತ್ನ, ಯೋಗಿ ರಾಜ್ಯದಲ್ಲಿ ಯಾಕಿಂಗೆ?

ಲಕ್ನೊ: ಉತ್ತರ ಪ್ರದೇಶದಲ್ಲಿ ದಿನೇದಿನೇ ಅಪರಾದ ಚಟುವಟಿಕೆಗಳು ಹೆಚ್ಚಾಗ್ತಿದೆ. ಕೆಲ ದಿನಗಳ ಹಿಂದಷ್ಟೇ ದಲಿತ ಯುವಕನ ಮೇಲೆ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳ ಕುರಿತು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ದ ಪ್ರತಿಪಕ್ಷಗಳು ವಾಕ್ಸಮರ ನಡೆಸಿದ್ದವು. ಅದರ ಬೆನ್ನಲ್ಲೇ ಮತ್ತೊಂದು ಅಮಾನವೀಯ ಘಟನೆ ರಾಜ್ಯದ ಬುಲಂದ್ ಶಹರ್ ಜಿಲ್ಲೆಯ ಮುಂಡಖೇಡದಲ್ಲಿ ನಡೆದಿದೆ. ವ್ಯಕ್ಯಿಯೋರ್ವ ಮನೆ ಮುಂದೆ ಬಿದ್ದಿದ್ದ ಸೆಗಣಿಯನ್ನು ಬಾಲಕಿಯೋರ್ವಳ ಬಳಿ ಎತ್ತಾಕಲು ಹೇಳಿದ್ದು, ಆಕೆ ವಿರೋದಿಸಿದಾಗ ಅವಳ ಜೊತೆಗೆ ಜಗಳ ಕಾಯ್ದಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆಕೆಯ

ಪೆಟ್ರೋಲ್ ಸುರಿದು ಬಾಲಕಿಯ ಹತ್ಯೆ ಯತ್ನ, ಯೋಗಿ ರಾಜ್ಯದಲ್ಲಿ ಯಾಕಿಂಗೆ? Read More »

ಬೆಳಗೆರೆ ಆಪ್ತ, ಹೆಸರಾಂತ ಕ್ರೈಂ ರಿಪೋರ್ಟರ್ ಸುನೀಲ್ ಹೆಗ್ಗರವಳ್ಳಿ ನಿಧನ

ಮೂಡಿಗೆರೆ: ರಾಜ್ಯದ ಹೆಸರಾಂತ ಕ್ರೈಂ ವರದಿಗಾರ ರವಿಬೆಳಗೆರೆ ಆಪ್ತ ಸುನಿಲ್ ಹೆಗ್ಗರವಳ್ಳಿ (43 ವ.) ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ರವಿಬೆಳಗೆರೆಯವರ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಆರಂಭಿಸಿದ ಸುನಿಲ್ ಹಲವಾರು ಕ್ರೈಮ್ ವರದಿಗಳ ಮೂಲಕ ರಾಜ್ಯಾದ್ಯಂತ ಹೆಸರುಗಳಿಸಿದ್ದರು. ರವಿ ಬೆಳಗೆರೆ ಅನಾರೋಗ್ಯದ ಸಮಯದಲ್ಲಿ ಅವರ ಅತ್ಯಾಪ್ತ ನಾಗಿ ಹಾಯ್ ಬೆಂಗಳೂರು ಪತ್ರಿಕೆ ಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಕ್ರೈಂ ವರದಿಗಾರಿಕೆಯಲ್ಲಿ ಚತುರ ನಾಗಿದ್ದ ಅವರು ಹಾಯ್ ಬೆಂಗಳೂರು ಪತ್ರಿಕೆ ಹಲವಾರು ಓದುಗರನ್ನು ಗಳಿಸಿಕೊಟ್ಟಿದ್ದರು. ನಂತರ ದಿನಗಳಲ್ಲಿ

ಬೆಳಗೆರೆ ಆಪ್ತ, ಹೆಸರಾಂತ ಕ್ರೈಂ ರಿಪೋರ್ಟರ್ ಸುನೀಲ್ ಹೆಗ್ಗರವಳ್ಳಿ ನಿಧನ Read More »

ಶೀಘ್ರದಲ್ಲೇ ಗ್ರಾ. ಪಂ. ಗ್ರಂಥಾಲಯದಲ್ಲಿ ಆನ್ಲೈನ್ ಶಿಕ್ಷಣಕ್ಕೆ ವ್ಯವಸ್ಥೆ | ಗ್ರಾಮೀಣ ಭಾಗದ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವುದಿಲ್ಲ : ಸುರೇಶ್ ಕುಮಾರ್

ಬೆಂಗಳೂರು: ಕಷ್ಟ ಅನುಭವಿಸುತ್ತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣಕ್ಕಾಗಿ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಸುಸಜ್ಜಿತ ವ್ಯವಸ್ಥೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಮೊಬೈಲ್, ವಿದ್ಯುತ್, ನೆಟ್ವರ್ಕ್ ಸಮಸ್ಯೆ ಹೀಗೆ ಹಲವಾರು ಕಾರಣಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳು ಆನ್ಲೈನ್ ಶಿಕ್ಷಣ ವಂಚಿತರಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣಕ್ಕಾಗಿ ಭಾರೀ ಕಷ್ಟಪಡುವಂತಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಆನ್ಲೈನ್ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಲು ಚಿಂತಿಸಲಾಗಿದೆ. ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಯವರಲ್ಲಿ

ಶೀಘ್ರದಲ್ಲೇ ಗ್ರಾ. ಪಂ. ಗ್ರಂಥಾಲಯದಲ್ಲಿ ಆನ್ಲೈನ್ ಶಿಕ್ಷಣಕ್ಕೆ ವ್ಯವಸ್ಥೆ | ಗ್ರಾಮೀಣ ಭಾಗದ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವುದಿಲ್ಲ : ಸುರೇಶ್ ಕುಮಾರ್ Read More »