July 2021

ಆಗಸ್ಟ್ 2 ರಿಂದ ಶಾಲಾ ಕಾಲೇಜುಗಳು ರೀ ಓಪನ್!ಅನುಮತಿ‌ ನೀಡಲಿದೆಯೇ ಶಿಕ್ಷಣ ಇಲಾಖೆ?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳನ್ನು ಹಂತ ಹಂತವಾಗಿ ಆರಂಭಿಸಲು ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರಿಗೆ ವಿಸ್ತೃತ ವರದಿಯನ್ನು ಸಲ್ಲಿಸಲಾಗಿದ್ದು, ಇನ್ನೂ ಎರಡು ದಿನಗಳ ಒಳಗೆ ರಾಜ್ಯ ಸರ್ಕಾರದ ಅಧಿಕೃತ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ 9,10,11, 12 ನೇ ತರಗತಿಗಳಿಗೆ ಭೌತಿಕ ತರಗತಿಗಳನ್ನು ಆರಂಭಿಸುವ ಯೋಚನೆ ಶಿಕ್ಷಣ ಇಲಾಖೆ ಮುಂದಿದ್ದು, […]

ಆಗಸ್ಟ್ 2 ರಿಂದ ಶಾಲಾ ಕಾಲೇಜುಗಳು ರೀ ಓಪನ್!ಅನುಮತಿ‌ ನೀಡಲಿದೆಯೇ ಶಿಕ್ಷಣ ಇಲಾಖೆ? Read More »

ರೌಡಿಶೀಟರ್‌ಗಳ ಮನೆ ಮೇಲೆ ಸಿಸಿಬಿ ದಾಳಿ| ದೊಡ್ಡ ಮಟ್ಟದ ಡೀಲ್ ಪತ್ರಗಳು ಪತ್ತೆ|

ಬೆಂಗಳೂರು: ಬೆಳ್ಳಂಬೆಳಗ್ಗೆ ನಟೋರಿಯಸ್ ರೌಡಿಶೀಟರ್‌ಗಳ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲಿವೆ. ಮಚ್ಚು ಹಿಡಿದು, ಹಾಡುಹಗಲೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡುತ್ತೀರುವ ಪ್ರಕರಣಗಳು ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ, ನಗರದ್ಯಾಂತ ಏಕಕಾಲಕ್ಕೆ ಎರಡು ಸಾವಿರಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇದೇ ವೇಳೆ ಮಾರಕಾಸ್ತ್ರಗಳು, ನಗದು, ಆಸ್ತಿ ಪತ್ರಗಳು ಎಲ್ಲವು ಸಿಕ್ಕಿದ್ದವು. ಆದರೆ ಈ ದಾಳಿಯಲ್ಲಿ ನಗರದ ಫಸ್ಟ್ ಗ್ರೇಡ್

ರೌಡಿಶೀಟರ್‌ಗಳ ಮನೆ ಮೇಲೆ ಸಿಸಿಬಿ ದಾಳಿ| ದೊಡ್ಡ ಮಟ್ಟದ ಡೀಲ್ ಪತ್ರಗಳು ಪತ್ತೆ| Read More »

ತಾಕತ್ತಿದ್ದರೆ ದಲಿತರನ್ನು ಸಿಎಂ ಮಾಡಲಿ – ಬಿಜೆಪಿಗೆ ಸಿದ್ದು ಸವಾಲ್

ಮಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೀಘ್ರ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಬಿಜೆಪಿಯಲ್ಲಿ ಖಾಲಿಯಾಗುವ ಸಿಎಂ ಹುದ್ದೆಗೆ ದಲಿತ ನಾಯಕನನ್ನು ಆಯ್ಕೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಸವಾಲು ಹಾಕಿದ್ದಾರೆ. ನಗರದಲ್ಲಿ‌ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲು ಇತ್ತೀಚೆಗೆ ಕಾಂಗ್ರೆಸ್ ದಲಿತ ಸಿಎಂ ಅಭ್ಯರ್ಥಿಯನ್ನು ಘೋಷಿಸಲಿ ಎಂದು ಹೇಳಿದ್ದರು. ಇದೀಗ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಬೀಳಲಿದೆ. ನಳಿನ್ ನಮಗೆ ಹೇಳುವ ಬದಲು ಅವರೇ

ತಾಕತ್ತಿದ್ದರೆ ದಲಿತರನ್ನು ಸಿಎಂ ಮಾಡಲಿ – ಬಿಜೆಪಿಗೆ ಸಿದ್ದು ಸವಾಲ್ Read More »

ಚಾರ್ಮಾಡಿ ಘಾಟ್ ನಲ್ಲಿ ಭೂಕುಸಿತ: ರಸ್ತೆ ಸಂಪರ್ಕ ಕಡಿತದ ಆತಂಕ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಮಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 73 ಮಾರ್ಗದ ಘಾಟಿಯ ಆರನೇ ತಿರುವಿನಲ್ಲಿ ಕುಸಿತ ಉಂಟಾಗಿದೆ. ಇನ್ನು ಶಿರಾಢಿ ಘಾಟ್ ಬಂದ್ ಆಗಿರುವುದರಿಂದ ಸದ್ಯ ಚಾರ್ಮಾಡಿ ಘಾಟ್​ನಲ್ಲಿ ವಾಹನ ಸಂಚಾರ ಮುಂದುವರಿದಿದ್ದು, ಈಗಾಗಲೇ ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಡ್ಡ ಕುಸಿತ ಇನ್ನು ಹೆಚ್ಚಾಗುವ ಭೀತಿ ಎದುರಾಗಿದ್ದು, ಚಾರ್ಮಾಡಿ ಘಾಟ್ ಕೂಡ​ ಬಂದ್ ಆಗುವ ಸಾಧ್ಯತೆಯಿದೆ.

ಚಾರ್ಮಾಡಿ ಘಾಟ್ ನಲ್ಲಿ ಭೂಕುಸಿತ: ರಸ್ತೆ ಸಂಪರ್ಕ ಕಡಿತದ ಆತಂಕ Read More »

ಲವರ್ ಜೊತೆ ಹೆಂಡತಿ ಪರಾರಿ : ಹುಡುಕಿ ಮದುವೆ ಮಾಡಿಸಿದ ಗಂಡ | ಪ್ರೀತಿ ಮಧುರ, ತ್ಯಾಗ ಅಮರ…!

ಜಾರ್ಖಂಡ್‍: ಮದುವೆಯಾದ 17 ದಿನದಲ್ಲಿ ಹೆಂಡತಿ ಆಕೆಯ ಹಳೆ ಪ್ರಿಯಕರನ ಜೊತೆ ಪರಾರಿಯಾಗಿದ್ದು, ಬಳಿಕ ಗಂಡ ಅವರಿಬ್ಬರನ್ನು ಹುಡುಕಿ ಮದುವೆ ಮಾಡಿಸಿದ ಘಟನೆ ಜಾರ್ಖಂಡಿನ ರಾಂಚಿಯಲ್ಲಿ ನಡೆದಿದೆ. ಯಾವ ಹುಡುಗನಿಗೆ ಯಾವ ಹುಡುಗಿ ಎಂದು ಮೊದಲೇ ದೇವರು ನಿರ್ಧರಿಸಿರುತ್ತಾನೆ. ಏನೇ ಆದರೂ ಅದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳುವ ಹಿರಿಯರ ವಾಕ್ಯಕ್ಕೂ ಈ ಘಟನೆ ಕನ್ನಡಿಯಂತಿದೆ. ಇಬ್ಬರು ಕುಟುಂಬದವರ ಸಮ್ಮುಖದಲ್ಲಿ ಹುಡುಗ, ಹುಡುಗಿಗೆ ಮದುವೆ ಮಾಡಲಾಗಿತ್ತು. ಆದರೆ ವಧು ಮದುವೆಯಾದ 17 ದಿನಗಳ ಬಳಿಕ ಗಂಡನ

ಲವರ್ ಜೊತೆ ಹೆಂಡತಿ ಪರಾರಿ : ಹುಡುಕಿ ಮದುವೆ ಮಾಡಿಸಿದ ಗಂಡ | ಪ್ರೀತಿ ಮಧುರ, ತ್ಯಾಗ ಅಮರ…! Read More »

ವಾಯುಭಾರ ಕುಸಿತ| ಕರಾವಳಿ, ದಕ್ಷಿಣ ಒಳನಾಡಲ್ಲಿ ಭಾರೀ‌ ಮಳೆ, ಅಲರ್ಟ್ ಘೋಷಣೆ

ಮಂಗಳೂರು : ಜುಲೈ 23ರೊಳಗೆಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶಉಂಟಾಗುವ ಸಾಧ್ಯತೆ ಇರುವುದರಿಂದ ಮುಂಗಾರು ಮಳೆ ಪ್ರಮಾಣ ಹೆಚ್ಚಾಗಲಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದ ಮೇಲೆ ಮತ್ತಷ್ಟು ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ತೀರ ಮತ್ತು ದಕ್ಷಿಣ ಭಾಗಗಳಲ್ಲಿಮುಂದಿನ 5 ದಿನಗಳವರೆಗೂ ಮಳೆಮುಂದುವರಿಯಲಿದ್ದು, ಉತ್ತರ ಕರ್ನಾಟಕದ ಭಾಗಗಳಲ್ಲಿ 24ರಿಂದ ಮಳೆರಾಯನ ಆರ್ಭಟ

ವಾಯುಭಾರ ಕುಸಿತ| ಕರಾವಳಿ, ದಕ್ಷಿಣ ಒಳನಾಡಲ್ಲಿ ಭಾರೀ‌ ಮಳೆ, ಅಲರ್ಟ್ ಘೋಷಣೆ Read More »

ಪ್ರಧಾನಿಯ ಚಾರಿತ್ರ್ಯವಧೆ ಮಾಡುವ ಮುನ್ನ ಎಚ್ಚರ | ಆಧಾರರಹಿತ ಸುದ್ದಿ ಬಿತ್ತರಿಸದಂತೆ TV 5 ಮಾಧ್ಯಮಕ್ಕೆ ಕೋರ್ಟ್ ಆದೇಶ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಥವಾ ಅವರು ಪ್ರತಿನಿಧಿಸುತ್ತಿರುವ ಪಕ್ಷದ ವಿರುದ್ಧ ಆಧಾರರಹಿತವಾಗಿ ಯಾವುದೇ ಸುದ್ದಿ ಪ್ರಸಾರ ಮಾಡಬಾರದು ಎಂದು tv5 ಮಾದ್ಯಮಕ್ಕೆ ನ್ಯಾಯಾಲಯ ಆದೇಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಧ್ಯಮವು ‘ಆರ್ ವಿ ಸ್ಟುಪ್ಪಿಡ್’ ಎಂಬ ಕಾರ್ಯಕ್ರಮದ ಮೂಲಕ ಸುಳ್ಳು ಸುದ್ದಿ ಬಿತ್ತರಿಸುತ್ತಿದೆ. ಈ ಆರೋಪಗಳಿಗೆ ಮಾಧ್ಯಮದ ಬಳಿ ಯಾವುದೇ ಸಾಕ್ಷ್ಯಧಾರವಿಲ್ಲ. ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯರಾದ ಆರ್ ಹರೀಶ್ ಕುಮಾರ್ ಎಂಬವರು ಮೊಕದ್ದಮೆ ಹೂಡಿದ್ದರು. ಟಿವಿ 5 ಕನ್ನಡ ಸುದ್ದಿ

ಪ್ರಧಾನಿಯ ಚಾರಿತ್ರ್ಯವಧೆ ಮಾಡುವ ಮುನ್ನ ಎಚ್ಚರ | ಆಧಾರರಹಿತ ಸುದ್ದಿ ಬಿತ್ತರಿಸದಂತೆ TV 5 ಮಾಧ್ಯಮಕ್ಕೆ ಕೋರ್ಟ್ ಆದೇಶ Read More »

ಆಗಸ್ಟ್ 10ರ ಒಳಗೆ ಎಸ್ಸೆಸ್ಸೆಲ್ಸಿ ಫಲಿತಾಂಶ- ಸಚಿವ ಸುರೇಶ್ ಕುಮಾರ್

ಬೆಂಗಳೂರು: ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಗಳು ಪೂರ್ಣಗೊಂಡಿದ್ದು, ಆಗಸ್ಟ್ 10ರ ಒಳಗೆ ಫಲಿತಾಂಶ ಪ್ರಕಟಿಸುವುದಾಗಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆದ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದ್ದು, ಪರೀಕ್ಷೆ ಬರೆದ ಮಕ್ಕಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇವತ್ತು ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಸಲಾಯಿತು. ಇಂದು ನಡೆದ ಪರೀಕ್ಷೆಗೆ ಶೇಕಡಾ 99.65ರಷ್ಟು ಹಾಜರಾತಿಯಿತ್ತು. ಪ್ರಥಮ ಭಾಷೆಗೆ ಒಟ್ಟು 8,19,694 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದರು. ಪ್ರಥಮ ಭಾಷೆ ಪರೀಕ್ಷೆಗೆ 7,83,881ವಿದ್ಯಾರ್ಥಿಗಳು ಹಾಜರಾಗಿದ್ದರು.ಪ್ರಥಮ

ಆಗಸ್ಟ್ 10ರ ಒಳಗೆ ಎಸ್ಸೆಸ್ಸೆಲ್ಸಿ ಫಲಿತಾಂಶ- ಸಚಿವ ಸುರೇಶ್ ಕುಮಾರ್ Read More »

ಬ್ಲೂ ಪಿಲಂ ನೇರಪ್ರಸಾರಕ್ಕೆ ಪ್ಲಾನ್ ಮಾಡಿದ್ರಾ ಕುಂದ್ರಾ…!? | ರಾಜ್’ನ ದಿನದ ಆದಾಯ ಬರೋಬ್ಬರಿ 7 ಲಕ್ಷ | ಬಗೆದಷ್ಟೂ ಹೊರಬರ್ತಿದೆ ಭಯಾನಕ ಸತ್ಯ

ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್‌ ಕುಂದ್ರಾ ಕುರಿತಂತೆ ಬಗೆದಷ್ಟೂ ಭಯಾನಕ ಮಾಹಿತಿಗಳು ಹೊರಬರುತ್ತಿವೆ. ಹಲವಾರು ಸಂಸ್ಥೆ ಹೆಸರಿನಲ್ಲಿ ಬ್ಲೂ ಫಿಲ್ಮ್‌ ತಯಾರಿಸಿ ಹೊರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ರಾಜ್‌ ಕುಂದ್ರಾ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಅದರ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲು ತಯಾರಿ ನಡೆಸಿರುವ ಮಾಹಿತಿ ಮತ್ತು ಆತ ಬರೀ ಅಶ್ಲೀಲ ವಿಡಿಯೋ ಮಾರಾಟ ಮಾಡಿ ದಿನಕ್ಕೆ ಬರೋಬ್ಬರಿ 7 ಲಕ್ಷಕ್ಕೂ

ಬ್ಲೂ ಪಿಲಂ ನೇರಪ್ರಸಾರಕ್ಕೆ ಪ್ಲಾನ್ ಮಾಡಿದ್ರಾ ಕುಂದ್ರಾ…!? | ರಾಜ್’ನ ದಿನದ ಆದಾಯ ಬರೋಬ್ಬರಿ 7 ಲಕ್ಷ | ಬಗೆದಷ್ಟೂ ಹೊರಬರ್ತಿದೆ ಭಯಾನಕ ಸತ್ಯ Read More »

ನಿವೃತ್ತಿ ಬಳಿಕವೂ ಸೇವೆ ಸಲ್ಲಿಸುವ ತುಡಿತ ಹೊತ್ತಿದ್ದ ಬೆಳ್ತಂಗಡಿಯ ಏಕನಾಥ್ ಶೆಟ್ಟಿ | 29 ಯೋಧರ ಸಹಿತ ವಾಯುಪಡೆ ವಿಮಾನ ಕಣ್ಮರೆಯಾಗಿ ಇಂದಿಗೆ 5 ವರ್ಷ | ಇನ್ನೂ ಪತ್ತೆಯಾಗಿಲ್ಲ ಎನ್-32 ಅವಶೇಷ….!

ಮಂಗಳೂರು: ಭಾರತೀಯ ವಾಯುಪಡೆಯ ಎನ್-32 ವಿಮಾನ 29 ಯೋಧರ ಸಹಿತ ಕಣ್ಮರೆಯಾಗಿ ಇಂದಿಗೆ 5 ವರ್ಷ ಕಳೆದಿದೆ. ಅದಾದ ಬಳಿಕ, ವಿಮಾನದ ಒಂದೇ ಒಂದು ಅಥವಾ ಯಾವೊಬ್ಬ ಯೋಧರ ಮೃತದೇಹವೂ ಸಿಗದೇ ಪ್ರಕರಣ ಇಂದಿಗೂ ನಿಗೂಢವಾಗಿ ಉಳಿದಿದೆ. ಭಾರತೀಯ ವಾಯುಸೇನೆಯ ಎನ್-32 ವಿಮಾನ, 2016 ಜುಲೈ 22ರಂದು ಚೆನೈನ ತಂಬಾರಮ್ ಏರ್‌ಬೇಸ್‌ನಿಂದ ಅಂಡಮಾನಿನ ಫೋರ್ಟ್‌ಬ್ಲೇರ್ ನೆಲೆಗೆ ತೆರಳುತ್ತಿತ್ತು. ವಾಯುಸೇನೆಯ 29 ಯೋಧರಿದ್ದ ವಿಮಾನ ಹೊರಟು ಕೆಲವೇ ಸಮಯದಲ್ಲಿ ಸಂಪರ್ಕ ಕಡಿತವಾಗಿತ್ತು. ಬಳಿಕ ನಾಪತ್ತೆ ಯಾಗಿತ್ತು. ಕಣ್ಮರೆಯಾದ ಬಳಿಕ

ನಿವೃತ್ತಿ ಬಳಿಕವೂ ಸೇವೆ ಸಲ್ಲಿಸುವ ತುಡಿತ ಹೊತ್ತಿದ್ದ ಬೆಳ್ತಂಗಡಿಯ ಏಕನಾಥ್ ಶೆಟ್ಟಿ | 29 ಯೋಧರ ಸಹಿತ ವಾಯುಪಡೆ ವಿಮಾನ ಕಣ್ಮರೆಯಾಗಿ ಇಂದಿಗೆ 5 ವರ್ಷ | ಇನ್ನೂ ಪತ್ತೆಯಾಗಿಲ್ಲ ಎನ್-32 ಅವಶೇಷ….! Read More »