ಪ್ರಧಾನಿಯ ಚಾರಿತ್ರ್ಯವಧೆ ಮಾಡುವ ಮುನ್ನ ಎಚ್ಚರ | ಆಧಾರರಹಿತ ಸುದ್ದಿ ಬಿತ್ತರಿಸದಂತೆ TV 5 ಮಾಧ್ಯಮಕ್ಕೆ ಕೋರ್ಟ್ ಆದೇಶ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಥವಾ ಅವರು ಪ್ರತಿನಿಧಿಸುತ್ತಿರುವ ಪಕ್ಷದ ವಿರುದ್ಧ ಆಧಾರರಹಿತವಾಗಿ ಯಾವುದೇ ಸುದ್ದಿ ಪ್ರಸಾರ ಮಾಡಬಾರದು ಎಂದು tv5 ಮಾದ್ಯಮಕ್ಕೆ ನ್ಯಾಯಾಲಯ ಆದೇಶ ನೀಡಿದೆ.

Ad Widget ... ..

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಧ್ಯಮವು ‘ಆರ್ ವಿ ಸ್ಟುಪ್ಪಿಡ್’ ಎಂಬ ಕಾರ್ಯಕ್ರಮದ ಮೂಲಕ ಸುಳ್ಳು ಸುದ್ದಿ ಬಿತ್ತರಿಸುತ್ತಿದೆ. ಈ ಆರೋಪಗಳಿಗೆ ಮಾಧ್ಯಮದ ಬಳಿ ಯಾವುದೇ ಸಾಕ್ಷ್ಯಧಾರವಿಲ್ಲ. ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯರಾದ ಆರ್ ಹರೀಶ್ ಕುಮಾರ್ ಎಂಬವರು ಮೊಕದ್ದಮೆ ಹೂಡಿದ್ದರು. ಟಿವಿ 5 ಕನ್ನಡ ಸುದ್ದಿ ವಾಹಿನಿಯ ಕಾರ್ಯನಿರ್ವಾಹಕ ಸಂಪಾದಕ ಆರ್‌ ಚೇತನ್‌, ನಿರೂಪಕ ರಮಾಕಾಂತ್ ಆರ್ಯನ್‌ ಅವರ ವಿರುದ್ಧ ದೂರುದಾರರು ಆರೋಪ ಹೊರಿಸಿದ್ದರು.

Ad Widget

ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಆನೇಕಲ್ ಪ್ರಧಾನ ಸಿವಿಲ್ ನ್ಯಾಯಾಲಯ ಮಾದ್ಯಮಕ್ಕೆ ಎಚ್ಚರಿಕೆ ನೀಡಿದೆ. ಹರೀಶ್ ಈ ಬಗ್ಗೆ ಸಾಕ್ಷ್ಯಧಾರ ಸಲ್ಲಿಸಿದ್ದಾರೆ. ನ್ಯಾಯಾಲಯ ಇದನ್ನು ಪರಿಶೀಲಿಸಿದ್ದು, ಮಾಧ್ಯಮ ಕಾರ್ಯಕ್ರಮದಲ್ಲಿ ಪ್ರಧಾನಿಗೆ ಕಳಂಕ ತರುವ ಸುದ್ದಿಯನ್ನು ಆಧಾರರಹಿತವಾಗಿ ಪ್ರಕಟಿಸಿದೆ. ಮಾದ್ಯಮ ನಿರೂಪಕರು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯೊಳಗೆ ಇಲ್ಲದ ಪದಗಳನ್ನು ಬಳಸಿದ್ದಾರೆ. ಇನ್ನು ಮುಂದೆ ಈ ರೀತಿಯ ಕಾರ್ಯಕ್ರಮ ನಡೆಸಬಾರದು ಇಂದು ನ್ಯಾಯಾಲಯ ಅದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 10 ಕ್ಕೆ ಮುಂದೂಡಲಾಗಿದೆ.

Leave a Comment

Your email address will not be published. Required fields are marked *