Oneplus nord 2ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ರೆಡ್ಮಿ, ಎಂಐ, ಸ್ಯಾಮ್ಸಂಗ್ ಮೊಬೈಲ್ಗಳ ನಡುವೆ ತನ್ನದೆ ಆದ ವಿಶೇಷ ಸ್ಥಾನ ಕಾಪಾಡಿಕೊಂಡಿರುವ ಒನ್‌ಪ್ಲಸ್ (OnePlus) ಕಂಪೆನಿ ಸದ್ಯ ಹೊಸ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ಜುಲೈ 22 ರಂದು ಸಾಕಷ್ಟು ರೋಚಕತೆ ಸೃಷ್ಟಿಸಿರುವ ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಈಗಾಗಲೇ ಇ ಕಾಮರ್ಸ್ ತಾಣ ಅಮೆಜಾನ್ (Amazon) ಇಂಡಿಯಾ ಒನ್‌ಪ್ಲಸ್ ನಾರ್ಡ್ 2ಗಾಗಿಯೇ ಪ್ರತ್ಯೇಕವಾದ ಮೈಕ್ರೋಸೈಟ್‌ಗಳನ್ನು ಸೃಷ್ಟಿಸಿವೆ.
ವಿಶೇಷ ಏನೆಂದರೆ, ನಾರ್ಡ್ 2 ಮೀಡಿಯಾ ಟೆಕ್ ಚಿಪ್‌ಸೆಟ್ ಹೊಂದಿರುವ ಚೊಚ್ಚಲ ಒನ್‌ಪ್ಲಸ್ ಸಾಧನವಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1200 ಎಐ ಚಿಪ್ ಅನ್ನು ಒಳಗೊಂಡಿದೆ. ಒನ್‌ಪ್ಲಸ್ 9 ರೀತಿಯ ವಿನ್ಯಾಸವನ್ನು ಈ ಫೋನ್ ಹೊಂದಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ 50 ಮೆಗಾಪಿಕ್ಸಲ್ ಕ್ಯಾಮೆರಾ, 4500mAh ಬ್ಯಾಟರಿ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಒಳಗೊಂಡಿದೆ.
91ಮೊಬೈಲ್ಸ್ ಬಿಡುಗಡೆ ಮಾಡಿದಂತಹ ವರದಿಯ ಪ್ರಕಾರ, ಒನ್‌ಪ್ಲಸ್ ಕಂಪೆನಿಯ ನಾರ್ಡ್ 2 ಸ್ಮಾರ್ಟ್‌ಫೋನ್ ಭಾರತದಲ್ಲಿ ಕೇವಲ ಒಂದು ಮಾದಿರಿಯಲ್ಲಿ ಮಾತ್ರ ಲಭ್ಯವಿದೆಯಂತೆ. ಇದು 12GB RAM ಮತ್ತು 256GB ಸ್ಟೋರೆಜ್ ಆಯ್ಕೆಯನ್ನು ಹೊಂಡಿರಲಿದೆ. ಇದರ ಬೆಲೆ 31,999 ರೂಪಾಯಿಗಳು ಎಂಬ ಮಾತಿದೆ.ಈ ಸ್ಮಾರ್ಟ್ಫೋನ್ನಲ್ಲಿ 6.43 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಮತ್ತು ಅಮೋಎಲ್ಇಡಿ ಡಿಸ್‌ಪ್ಲೇ ಇದ್ದು, ಮೀಡಿಯಾ ಟೆಕ್ ಡಿಮೆನ್ಸಿಟಿ 1200 ಎಐ ಚಿಪ್ ಅಳವಡಿಸಲಾಗಿದೆ. ವ್ಯಾಲ್ಯೂಮ್ ರಾಕರ್ ಫೋನ್‌ನ ಎಡ ಬದಿಯಲ್ಲಿ ಇರಲಿದೆ. ಫೋನ್ ಬದಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇರುವಂತೆ ಕಾಣುತ್ತಿಲ್ಲ. ಆ ಫೀಚರ್ ಅನ್ನು ನೀವು ಡಿಸ್‌ಪ್ಲೇಯಲ್ಲಿ ಕಾಣಬಹುದಾಗಿದೆ.