Ad Widget .

ಆನ್’ಲಾಕ್ ಆಗುತ್ತಿದ್ದಂತೆ ನಂದಿಬೆಟ್ಟದಲ್ಲಿ ಪ್ರೇಮಿಗಳ ಲಿಪ್’ಲಾಕ್

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪ್ರವಾಸಿ ತಾಣಗಳು ಅನ್‌ಲಾಕ್ ಆಗುತ್ತಿದ್ದಂತೆ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಬೆಟ್ಟದಲ್ಲಿ ಪ್ರೇಮಿಗಳು ಪರಸ್ಪರ ಚುಂಬಿಸಿದ ಫೋಟೋ ಬಾರೀ ವೈರಲ್ ಆಗುತ್ತಿದೆ.

Ad Widget . Ad Widget .

ನಂದಿಬೆಟ್ಟ ಆನ್ ಲಾಕ್ ಆದ ಬಳಿಕ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಜೋಡಿಯೊಂದು ಕೊರೊನಾ ರೂಲ್ಸ್ ಬ್ರೇಕ್ ಮಾಡಿ ಸಾರ್ವಜನಿಕವಾಗಿ ಪರಸ್ಪರ ಚುಂಬಿಸಿದ್ದಾರೆ. ನಂದಿಬೆಟ್ಟದಲ್ಲಿ ಜೋಡಿ ಲಿಪ್ ಲಾಕ್ ಮಾಡಿದ ಕ್ಷಣವನ್ನು ಯಾರೋ ಸೀರೆಹಿಡಿದಿದ್ದಾರೆ. ಕ್ಷಣಮಾತ್ರದಲ್ಲಿ ಬಿಸಿ ಬಿಸಿ ಫೋಟೋ ವೈರಲ್ ಆಗಿದೆ.

Ad Widget . Ad Widget .

ಮುಂಜಾನೆ ಮೋಡಗಳ ಮಂಜಿನಾಟದ ಜೊತೆ ಪ್ರವಾಸಿಗರು ನಂದಿ ಗಿರಿಧಾಮದ ಸೌಂದರ್ಯ ಕಣ್ಣುತುಂಬಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ಬಳಿಕ ಇಂದು ಮೊದಲ ಬಾರಿಯ ವೀಕೆಂಡ್ ಶನಿವಾರವಾದ್ದರಿಂದ ಸಾವಿರಾರು ಮಂದಿ ನಂದಿಬೆಟ್ಟಕ್ಕೆ ಆಗಮಿಸಿದ್ದರು. ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಪ್ರವಾಸಿಗರು ನಂದಿಬೆಟ್ಟದಲ್ಲಿ ಮನಸ್ಸೋ ಇಚ್ಛೆ ಒಡಾಡಿದ್ದಾರೆ. ಹೇಳೋರು ಇಲ್ಲ, ಕೇಳೋರು ಇಲ್ಲ ಅಂತ ನಂದಿ ಬೆಟ್ಟದಲ್ಲೆಲ್ಲಾ ಅಲೆದಾಡಿ ಎಂಜಾಯ್ ಮಾಡಿದ್ದಾರೆ.

ಇದೇ ವೇಳೆ ಮುಂಜಾನೆಯ ಚುಮುಚುಮು ಚಳಿಗೆ ಜೋಡಿ ಪರಸ್ಪರ ಬಿಸಿ ಮಾಡಿಕೊಂಡಿದ್ದಾರೆ. ಮಾಸ್ಕ್ ಧರಿಸದೇ ನಂದಿಬೆಟ್ಟದಲ್ಲಿ ಅಲೆದಾಡಿ ಚುಂಬನ ಮಾಡಿದ ಜೋಡಿ ಕೊರೊನಾ ಬಗ್ಗೆ ತಾತ್ಸಾರ ತೋರಿದ್ದಾರೆ. ಪ್ರವಾಸಿ ತಾಣಗಳು ಕೊರೊನಾ ಹರಡುವ ತಾಣಗಳಾಗಿ ಮಾರ್ಪಾಡಾಗುವ ಆತಂಕ ಕಾಡುತ್ತಿದ್ದು, ಪ್ರವಾಸಿಗರು ಮೈ ಮೆರಯಬೇಡಿ, ಮಾಸ್ಕ್ ಧರಿಸಿ ಎಚ್ಚರಿಕೆ ವಹಿಸಿ ಎಂದು ಸರ್ಕಾರ ಎಚ್ಚರಿಸಿದ್ದರೂ ಪ್ರವಾಸಿಗರು ಮಾತ್ರ ಜಿದ್ದಿಗೆ ಬಿದ್ದವರಂತೆ ತಾವಾಯ್ತು, ತಮ್ಮ ಖುಷಿ ಆಯ್ತು ಅಂತ ಕೊರೊನಾದ ಪರಿವೇ ಇಲ್ಲದಂತೆ ಒಡಾಡುತ್ತಿದ್ದಾರೆ. ನಿತ್ಯ ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಕಾರು ಹಾಗೂ ಬೈಕ್ ಗಳಲ್ಲಿ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.

Leave a Comment

Your email address will not be published. Required fields are marked *