Ad Widget .

ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಜುಲೈ 6 ಕ್ಕೆ ಅನಾವರಣ | ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ಯಾಮ್ಸಂಗ್‌ನ ಹೊಸ ಗ್ಯಾಲಕ್ಸಿ ಎಫ್-ಸರಣಿಯ ಸ್ಮಾರ್ಟ್ಫೋನ್‌ಗಳು ಸಾಲಾಗಿ ಬಿಡುಗಡೆ ಆಗುತ್ತಿವೆ. ಭಾರತದಲ್ಲಿ ಗ್ಯಾಲಕ್ಸಿ ಎಫ್ 22 ಬಿಡುಗಡೆ ಬಗ್ಗೆ ಕಂಪೆನಿಯು ಖಾತ್ರಿಪಡಿಸಿದೆ. ಈ ವರ್ಷ ಎಫ್ ಸರಣಿ ಅಡಿಯಲ್ಲಿ ಸ್ಯಾಮ್ಸಂಗ್ ಬಿಡುಗಡೆ ಮಾಡುತ್ತಿರುವ ನಾಲ್ಕನೇ ಫೋನ್ ಇದಾಗಿದೆ. ಇನ್ನೂ ಈ ಮುನ್ನ ಗ್ಯಾಲಕ್ಸಿ ಎಫ್ 62, ಎಫ್ 12 ಮತ್ತಿ ಎಫ್‌ 02 ಎಸ್ ಬಿಡುಗಡೆ ಮಾಡಲಾಗಿತ್ತು.

Ad Widget . Ad Widget .

ಅಂದಹಾಗೆ ಎಫ್22 ಫೋನ್ ಬಿಡುಗಡೆ ಆದ ಮೇಲೆ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಆಗುತ್ತದೆ. ಹೊಸ ಸ್ಮಾರ್ಟ್ಫೋನ್ ಜುಲೈ 6 ಕ್ಕೆ ಭಾರತಕ್ಕೆ ಬಿಡುಗಡೆ ಆಗಲಿದೆ ಎಂದು ಸ್ಯಾಮ್ಸಂಗ್ ಖಾತ್ರಿಪಡಿಸಿದೆ. ಈ ಫೋನ್‌ನ ಪ್ರಮುಖ ವೈಶಿಷ್ಟ್ಯಗಳನ್ನು ಅನಾವರಣಗೊಳಿಸಲಿದೆ. ಈ ಫೋನ್ ಅನ್ನು 15,000 ರೂಪಾಯಿಯೊಳಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

Ad Widget . Ad Widget .

ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್ 22 ಭಾರತದಲ್ಲಿ ಬಿಡುಗಡೆ ಆಗುವ ದಿನಾಂಕವನ್ನು ಖಾತ್ರಿಪಡಿಸಲಾಗಿದೆ. ಈ ಫೋನ್ ಜುಲೈ 6 ನೇ ತಾರೀಕಿನಂದು ಬಿಡುಗಡೆ ಆಗಲಿದೆ ಎಂದು ಮಾಹಿತಿ ನೀಡಲಾಗಿದೆ. ಇದರ ಜತೆಗೆ ಫೋನ್‌ನ ವೈಶಿಷ್ಟ್ಯದ ಬಗ್ಗೆ ತಿಳಿಸಲಾಗಿದೆ. ಫ್ಲಿಪ್‌ಕಾರ್ಟ್ನಲ್ಲಿ ಇರುವಂತೆ, ಈ ಫೋನ್‌ನಲ್ಲಿ 6000 ಎಂಹೆಚ್ ಬ್ಯಾಟರಿ ಬರುತ್ತದೆ. ಸದ್ಯಕ್ಕೆ ಫಾಸ್ಟ್ ಚಾರ್ಜಿಂಗ್ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಆದರೆ ಕನಿಷ್ಠ 15 ಡಬ್ಲೂ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನಿರೀಕ್ಷಿಸಬಹುದು. ಫ್ಲಿಪ್‌ಕಾರ್ಟ್ನಲ್ಲೇ ತಿಳಿಸಿರುವಂತೆ, ಎಫ್ 22 ಜತೆಗೆ 6.4 ಇಂಚಿನ AMOLED ಡಿಸ್‌ಪ್ಲೇ ಬರುತ್ತದೆ. 90Hz ರಿಫ್ರೆಷ್ ದರ ಸಪೋರ್ಟ್ ಮಾಡುತ್ತದೆ.

ಸಣ್ಣದಾದ ವಾಟರ್- ಡ್ರಾಪ್ ನಾಚ್ ಮತ್ತು ಸ್ವಲ್ಪ ದಪ್ಪವಾದ ಬೆಜೆಲ್ ಇದೆ. ಅದರ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳಿವೆ. 48 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ ಸೆನ್ಸರ್‌ನೊಂದಿಗೆ ಬರುತ್ತದೆ. ಉಳಿದ ಮೂರು ಲೆನ್ಸ್ಗಳ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಇತರ ಮೂರು ಕ್ಯಾಮೆರಾಗಳಲ್ಲಿ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್ ಮತ್ತು ಎರಡು ೨ ಮೆಗಾಪಿಕ್ಸೆಲ್ ಸೆನ್ಸರ್ ಡೆಪ್ತ್ ಮತ್ತು ಮ್ಯಾಕ್ರೋಗೆ ಇರಲಿದೆ. ಗೂಗಲ್ ಪ್ಲೇ ಕನ್ಸೋಲ್ ಲಿಸ್ಟಿಂಗ್‌ನಂತೆ, ಫೋನ್‌ನಲ್ಲಿ ಮೀಡಿಯಾ ಟೆಕ್ ಹೀಲಿಯೋG80 SoCಜತೆಗೆ 4GB RAM ನೊAದಿಗೆ ಬರುತ್ತದೆ. ಆಂಡ್ರಾಯಿಡ್ 11 ನೊಂದಿಗೆ ನಡೆಯಲಿದ್ದು ಮತ್ತುOneUI 3.0 ಜತೆ ಬರುತ್ತದೆ. ಈ ಫೋನ್?ನಲ್ಲಿ ಎಚ್?ಡಿ+ ಡಿಸ್?ಪ್ಲೇನೊಂದಿಗೆ ಬರಲಿದ್ದು, ಈ ಫೋನ್ 15,000 ರೂಪಾಯಿ ಒಳಗೆ ಭಾರತದಲ್ಲಿ ಬಿಡುಗಡೆ ಆಗಲಿದೆ.

Leave a Comment

Your email address will not be published. Required fields are marked *