Ad Widget .

ಹೊಸ ಫೀಚರ್ ಪರಿಚಯಿಸಿದ ವಾಟ್ಸ್’ಆಪ್ | ಮಾಹಿತಿ ತಿಳಿದು ಇಂದೇ ಅಪ್‌ಡೇಟ್ ಮಾಡಿಕೊಳ್ಳಿ

ವಾಟ್ಸಪ್ ತನ್ನ ಬಳಕೆದಾರರಿಗೆ ಅನುಕೂಲವಾಗುವಂತಹ ಹೊಸ ಫೀಚರ್ಸ್ ಅನ್ನು ಶೀಘ್ರದಲ್ಲೇ ಪರಿಚಯಿಸಲಿದೆ. ಕಳೆದ ಎರಡು ವರ್ಷಗಳಿಂದ ಒಂದಷ್ಟು ಹೊಸ ಅಪ್‌ಡೇಟ್ ನೀಡುವ ಮೂಲಕ ಬಳಕೆದಾರರನ್ನು ಹೆಚ್ಚಿಸಿಕೊಂಡ ವಾಟ್ಸಪ್ಪ್ಈ ಬಾರಿ ತುಸು ನೆಮ್ಮದಿ ನೀಡುವ ಆಯ್ಕೆಯನ್ನು ನೀಡಲಿದೆ.

Ad Widget . Ad Widget .

ಹೌದು, ವಾಟ್ಸಪ್ ತನ್ನ ನೂತನ ಅಪ್‌ಡೇಟ್‌ನಲ್ಲಿ ಪ್ಲೇಬ್ಯಾಕ್ ಫೀಚರ್ ನೀಡಲಿದ್ದು, ಇದು ವೇವ್ ಆಡಿಯೋ ರೆಕಾರ್ಡ್ಸ ನ್ನು ಪೋರ್ಟ್ ಮಾಡಲಿದೆ. ಅಂದರೆ ಇದುವರೆಗೆ ನೀವು ವಾಟ್ಸಪ್ಪ್ ವಾಯ್ಸ್ ಮೆಸೇಜ್‌ನಲ್ಲಿ ನೇರವಾದ ರೇಖೆಯನ್ನು ನೋಡಿರುತ್ತೀರಿ. ಆದರೆ ಇನ್ಮುಂದೆ ಆಡಿಯೋ ವೇವ್ ಇರಲಿದ್ದು, ಇದರಿಂದ ವಾಯ್ಸ್ ಮತ್ತಷ್ಟು ಸ್ಪಷ್ಟವಾಗಿ ಕೇಳಿಬರಲಿದೆ.

Ad Widget . Ad Widget .

ಇನ್ನು ಪ್ಲೇಬ್ಯಾಕ್ ಫೀಚರ್‌ನಿಂದ ಇನ್ಮುಂದೆ ವಾಯ್ಸ್ ಮೆಸೇಜ್ ಆಡಿಯೊ ವೇಗವನ್ನು ಹೆಚ್ಚಿಸಿಕೊಳ್ಳಬಹುದು. ಅಂದರೆ ವಾಯ್ಸ್ ಮೆಸೇಜ್‌ನ್ನು 1x, 1.5x ಮತ್ತು 2x ಮೂರು ವೇಗದಲ್ಲಿ ಕೇಳಬಹುದು. ಇದರಿಂದ ದೀರ್ಘ ವಾಯ್ಸ್ ಮೆಸೇಜ್‌ನ್ನು ನಿಮಿಷದಲ್ಲೇ ಕೇಳಿ ಮುಗಿಸಬಹುದು. ಸದ್ಯ ಐಫೋನ್ ಐಒಎಸ್ ಹಾಗೂ ಆಂಡ್ರಾಯ್ಡ್ ಬೀಟಾ 2.21.9.4 ವರ್ಷನ್‌ನಲ್ಲಿ ಪ್ಲೇ ಬ್ಯಾಕ್ ಸ್ಪೀಡ್ ಹಾಗೂ ಆಡಿಯೋ ವೇವ್ ಫೀಚರ್‌ನ್ನು ಪರೀಕ್ಷಾರ್ಥವಾಗಿ ಪರಿಚಯಿಸಲಾಗಿದ್ದು ಶೀಘ್ರದಲ್ಲೇ ಎಲ್ಲಾ ವಾಟ್ಸ್’ಆಪ್ ಅಪ್‌ಡೇಟ್‌ನಲ್ಲೂ ಲಭ್ಯವಿರಲಿದೆ ಎಂದು ತಿಳಿಸಲಾಗಿದೆ.

ಇನ್ನು ಪ್ಲೇಬ್ಯಾಕ್ ಜೊತೆ ವೇವ್ ಆಡಿಯೋ ಫೀಚರ್ ನೀಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ವಾಟ್ಸ್’ಆಪ್ ಮೆಸೇಜ್‌ಗಳು ನೇರವಾಗಿ ಪ್ಲೇ ಆಗುವ ಸಾಧ್ಯತೆಯಿದೆ. ಅಂದರೆ ನಿಮಗೆ ವಾಯ್ಸ್ ಮೆಸೇಜ್ ಬಂದಿದೆ ಎಂದು ಸ್ಕ್ರೀನ್‌ನಲ್ಲಿ ತೋರಿಸಿದರೆ, ಆಡಿಯೋ ರೂಪದಲ್ಲಿ ನೀವು ಪ್ಲೇ ಮಾಡಬಹುದು. ಈ ಮೆಸೇಜ್ ನೋಡಲು ವಾಟ್ಸಪ್ ಗೆ ಹೋಗಬೇಕೆಂದಿಲ್ಲ.

ಒಟ್ಟಿನಲ್ಲಿ ವಾಟ್ಸ್ಪ್ ತನ್ನ ಬಳಕೆದಾರರಿಗೆ ಹೆಚ್ಚಿನ ಅನುಕೂಲವಾಗುವಂತಹ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದ್ದು, ಇಂತಹ ಹೊಸ ಫೀಚರ್‌ಗಳನ್ನು ಪಡೆಯಲು ನೀವು ಈಗ ಡೌನ್‌ಲೋಡ್ ಮಾಡಿರುವ ವಾಟ್ಸಾಪ್ ನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ.

Leave a Comment

Your email address will not be published. Required fields are marked *