ಕಮರಿದ ಭರವಸೆಗಳ ನಡುವೆ ಮೂಡಿದ ಆಶಾಕಿರಣ | ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸೆಡ್ಡು ಹೊಡೆದ ಮೊಗ್ರ ಗ್ರಾಮಸ್ಥರು | ತಲೆ ಎತ್ತಿ ನಿಂತಿದೆ ‘ಗ್ರಾಮಸೇತು’
ಸುಳ್ಯ: ಮೊಗ್ರ, ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಪುಟ್ಟ ಹಳ್ಳಿ. ಸುಮಾರು 2 ರಿಂದ 3 ಸಾವಿರ ಜನ ಈ ಹಳ್ಳಿಯಲ್ಲಿ ವಾಸವಿರುವ ಜನ. ಏರಣಗುಡ್ಡೆ, ಮಲ್ಕಜೆ, ಮೊಗ್ರ, ಕಮಿಲ ಈ ಹಳ್ಳಿಯ ವ್ಯಾಪ್ತಿಗೆ ಬರುವ ಪ್ರದೇಶಗಳು. ಶಾಲೆ, ಮತದಾನ ಕೇಂದ್ರ, ಅಂಗನವಾಡಿ, ಆರೋಗ್ಯ ಉಪಕೇಂದ್ರ, ದೈವಸ್ಥಾನ ಮೊದಲಾದವುಗಳ ಒಂದು ಕಂಪ್ಲೀಟ್ ಪ್ಯಾಕೇಜ್ ಈ ಹಳ್ಳಿಯದ್ದು. ಆದರೆ ಇವುಗಳೆಲ್ಲದರ ಸಂಪರ್ಕಕ್ಕೆ ಅಡ್ಡಿಯಾಗಿತ್ತು ಆ ಸೇತುವೆ ಇಲ್ಲದ ಹೊಳೆ.ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆಗೆ ಅಡಿಕೆ ಮರದ […]