June 2021

‘ಯೋಗ’ ಮನಸ್ಸು ದೇಹಗಳ ಸಂಯೋಗ

ಯೋಗ’ ಎಂಬ ಪದವನ್ನು ಕೇಳಿದಾಕ್ಷಣ ಹಲವರ ಮನಸ್ಸಿಗೆ ಮೊದಲು ತೋಚುವುದೇ ಋಷಿ-ಮುನಿಗಳು, ಸಾಧಕರ ಕಲ್ಪನೆ. ಯೋಗ ಎಂದರೆ ಒಂದು ಧರ್ಮಕ್ಕೆ ಸೀಮಿತವಾದದ್ದು ಎನ್ನುವುದರಿಂದ, ಯೋಗ ಎಂದರೆ ಒಂದು ನಿರ್ದಿಷ್ಟ ರಾಷ್ಟ್ರದ ಸ್ವತ್ತು ಎಂಬಲ್ಲಿಂದ, ಇತ್ತೀಚಿಗಷ್ಟೇ ಯೋಗ ಎಂದರೆ ಧರ್ಮಾತೀತ, ಸೀಮಾತೀತ, ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಸಂಬಂಧಿಸಿದ್ದು ಎನ್ನುವ ಅರಿವಾಗಿ ಪ್ರಪಂಚದಾದ್ಯಂತ ಸ್ವೀಕರಿಸಿ, ಅಭ್ಯಸಿಸಲ್ಪಡುತ್ತಿದೆ. ಯೋಗ’ವೆಂದರೆ ಸಂಯೋಗ, ಅದು ದೇಹ ಮತ್ತು ಮನಸ್ಸಿನ ಸಂಯೋಗ. ಮತ್ತೊಬ್ಬರ ಸಮಸ್ಯೆಯನ್ನು ಅರಿತು ಸ್ಪಂದಿಸುವುದು. ನಮ್ಮ ಬಳಿ ಇರುವ ಅತ್ಯಮೂಲ್ಯ ವಸ್ತುವಿನ ಬಗ್ಗೆ […]

‘ಯೋಗ’ ಮನಸ್ಸು ದೇಹಗಳ ಸಂಯೋಗ Read More »

ಜಾಲತಾಣಗಳಲ್ಲಿ ಕ್ಲಬ್ ಹೌಸ್ ದೇ ಮಾತು | ಹಾಗಿದ್ರೆ ಏನಿದು ಕ್ಲಬ್ ಹೌಸ್? | ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಮಾಜಿಕ ಜಾಲತಾಣಗಳಲ್ಲಿ ಈಗ ಕ್ಲಬ್ ಹೌಸ್ ಬಗ್ಗೆಯೇ ಮಾತು ಹೆಚ್ಚುತ್ತಿದೆ. ಈ ಕ್ಲಬ್‌ನಲ್ಲಿ ಇವತ್ತು ಈ ನಟಿ, ನಿರ್ದೇಶಕ ಬಂದಿದ್ದರು. ಬಹಳ ಚೆನ್ನಾಗಿ ಮಾತನಾಡಿದರು ಎಂಬ ಮಾತುಗಳನ್ನು ನೀವು ಕೇಳಿರಬಹುದು. ಹೀಗಾಗಿ ನಾನು ಕ್ಲಬ್ ಹೌಸ್ ಸೇರಬೇಕು, ಮಾತನಾಡಬೇಕು ಎಂದು ಅನಿಸಿದ್ದರೂ ಜಾಯಿನ್ ಆಗುವುದು ಹೇಗೆ? ಜಾಯಿನ್ ಆದ ನಂತರ ಮಾತನಾಡುವುದು ಹೇಗೆ? ಕ್ಲಬ್ ಸೃಷ್ಟಿ ಮಾಡುವುದು ಹೇಗೆ? ಹೀಗೆ ಹಲವು ಪ್ರಶ್ನೆಗಳು ನಿಮ್ಮಲ್ಲಿ ಮೂಡುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ಇಲ್ಲಿ ಸರಳವಾಗಿ

ಜಾಲತಾಣಗಳಲ್ಲಿ ಕ್ಲಬ್ ಹೌಸ್ ದೇ ಮಾತು | ಹಾಗಿದ್ರೆ ಏನಿದು ಕ್ಲಬ್ ಹೌಸ್? | ಇಲ್ಲಿದೆ ಸಂಪೂರ್ಣ ಮಾಹಿತಿ Read More »

ದ್ವಾದಶ ರಾಶಿಗಳ ವಾರ ಭವಿಷ್ಯ

ದ್ವಾದಶ ರಾಶಿಗಳ ಜೂ.27 ರಿಂದ ಜುಲೈ.3ರವರೆಗಿನ ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ. ಮೇಷರಾಶಿ:-ಖಾಸಗಿ ಕಂಪನಿ ಕೆಲಸದಲ್ಲಿದ್ದರೆ,ಸ್ವಲ್ಪ ಕೆಲಸದ ಒತ್ತಡ ಇರುತ್ತದೆ ಹಾಗೂ ಸರ್ಕಾರಿ ಕೆಲಸದವರಿಗೆ ಈ ವಾರ ಉತ್ತಮವಾಗಿದೆ. ವ್ಯಾಪಾರಸ್ಥರಿಗೆ ಉತ್ತಮವಾದ ದಿನವಾಗಿದೆ ಹಾಗೂ ಉತ್ತಮ ಲಾಭ ಸಿಗುತ್ತದೆ ಸ್ವಲ್ಪ ಹಣದ ವಿಚಾರದಲ್ಲಿ ನೋಡಿಕೊಂಡು ಖರ್ಚು ಮಾಡಬೇಕು ಹಾಗೂ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು

ದ್ವಾದಶ ರಾಶಿಗಳ ವಾರ ಭವಿಷ್ಯ Read More »

ಒಲಿಂಪಿಕ್ ನಲ್ಲಿ ಇತಿಹಾಸ ಸೃಷ್ಟಿಸಿದ ‘ಸಾಜನ್’, ಬಟರ್ ಫ್ಲೈನಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ

ಹೊಸದಿಲ್ಲಿ: ಇಟಲಿಯ ರೋಮ್‌ನ ಸೆಟ್ಟೆ ಕೊಲ್ಲಿ ಟ್ರೋಫಿಯಲ್ಲಿ ಶನಿವಾರ ನಡೆದ ಪುರುಷರ 200 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸಾಜನ್ ಪ್ರಕಾಶ್ 1:56:38 ಸೆಕೆಂಡುಗಳಲ್ಲಿ ಗುರಿ ತಲುಪಿ ಒಲಿಂಪಿಕ್ಸ್ ಅರ್ಹತಾ ಸಮಯವನ್ನು ಮೀರಿದ ಮೊದಲ ಭಾರತೀಯ ಈಜುಗಾರ ಎನಿಸಿಕೊಳ್ಳುವುದರೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ. 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 27 ವರ್ಷದ ಪ್ರಕಾಶ್ ಟೋಕಿಯೋ ಕ್ರೀಡಾಕೂಟದಲ್ಲಿ ನಿಗದಿಪಡಿಸಿರುವ ‘ಎ’ ಮಾನದಂಡವನ್ನು (1: 56.48 ಸೆಕೆಂಡು) ಮೀರಿ ನಿಂತರು. ಕೇರಳದ ಈಜುಗಾರ 200 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ

ಒಲಿಂಪಿಕ್ ನಲ್ಲಿ ಇತಿಹಾಸ ಸೃಷ್ಟಿಸಿದ ‘ಸಾಜನ್’, ಬಟರ್ ಫ್ಲೈನಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ Read More »

30 ವರ್ಷದ ಹಿಂದೆ ಮುಳುಗಡೆಯಾಗಿದ್ದ ಹಡಗಿನ ಅವಶೇಷ ಪತ್ತೆ

ಕಾರವಾರ: ಅಂದಾಜು ಮೂವತ್ತು ವರ್ಷಗಳ ಹಿಂದೆ ಕಾರವಾರದ ಸಮುದ್ರ ಭಾಗದಲ್ಲಿ ಮುಳುಗಡೆಯಾಗಿದ್ದ ಸಿಂಗಾಪುರ ದೇಶದ ಚೆರಿಮಾಜು ಎಂಬ ಹೆಸರಿನ ಸರಕು ಸಾಗಾಣಿಕೆ ಹಡಗಿನ ಅವಶೇಷಗಳು ಇಂದು ಕಾರವಾರ ಕಡಲತೀರದಲ್ಲಿ ಪತ್ತೆಯಾಗಿದೆ. 1981 ರಲ್ಲಿ ಸಿಂಗಾಪುರದಿಂದ ಕಾರವಾರದ ಬಂದರಿಗೆ ಬಂದಿದ್ದ ಈ ಹಡಗು 14.418 ಟನ್ ಡಾಂಬರ್ ಅನ್ನು ಹೊತ್ತು ತಂದಿತ್ತು. ಈ ವೇಳೆ ಕಡಲಬ್ಬರಕ್ಕೆ ಸಿಲುಕಿದ್ದ ಈ ಹಡಗು ಇಲ್ಲಿಯೇ ಸಂಪೂರ್ಣ ಸಮುದ್ರದಾಳಕ್ಕೆ ಸೇರಿ ಹೋಗಿತ್ತು. ಈ ವೇಳೆ ಹಡಗಿನಲ್ಲಿದ್ದ 30 ನಾವಿಕರನ್ನು ರಕ್ಷಣೆ ಮಾಡಲಾಗಿತ್ತು. ಹುದುಗಿ

30 ವರ್ಷದ ಹಿಂದೆ ಮುಳುಗಡೆಯಾಗಿದ್ದ ಹಡಗಿನ ಅವಶೇಷ ಪತ್ತೆ Read More »

ಸುಳ್ಳು ತಂದ ಯಡವಟ್ಟು, ಅಪ್ರಾಪ್ತನನ್ನು ಮದ್ವೆಯಾದ 20ರ ಯುವತಿ!

ಚಿಕ್ಕಮಗಳೂರು: ಅಪ್ರಾಪ್ತ ಯುವಕನನ್ನು ಯುವತಿಯೊಬ್ಬಳು ಮದುವೆಯಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಬಿಸಿಲೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ಮೂಲದ 20 ವರ್ಷದ ಯುವತಿ ಮಡಿಕೇರಿಯ ವಿರಾಜಪೇಟೆಯಲ್ಲಿ ನರ್ಸಿಂಗ್ ಮಾಡುತ್ತಿದ್ದ ವೇಳೆ ಕಡೂರು ತಾಲೂಕಿನ ಬ್ರಹ್ಮಸಮುದ್ರ ಗ್ರಾಮದ 17 ವರ್ಷದ ಹುಡುಗನೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹವಾಗಿತ್ತು. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಹುಡುಗ ಕೂಡ ನನಗೆ 21 ವರ್ಷ ಎಂದು ಹೇಳಿಕೊಂಡಿದ್ದ. ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಹುಡುಗಿ ಮನೆಯವರಿಗೆ ವಿಷಯ ತಿಳಿಸಿದಾಗ ಆಕೆಯ ಪೋಷಕರು

ಸುಳ್ಳು ತಂದ ಯಡವಟ್ಟು, ಅಪ್ರಾಪ್ತನನ್ನು ಮದ್ವೆಯಾದ 20ರ ಯುವತಿ! Read More »

ಕರಾವಳಿಗರೇ ಎಚ್ಚರ… ‘ದುಶ್ಮನ್ ಬಗಲ್ ಮೆ’,ಹೆಚ್ಚುತ್ತಿವೆ ‘ಡೆಲ್ಟಾ’ ಪ್ಲಸ್ ಕೇಸ್‌

ಮಂಗಳೂರು: ಕೇರಳದ ಕರಾವಳಿ ಭಾಗಗಳಲ್ಲಿ ಕೊರೊನಾ ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನೆರೆಯ ದಕ್ಷಿಣಕನ್ನಡ ಜಿಲ್ಲೆಗೂ ಭೀತಿ ಹೆಚ್ಚಾಗಿದೆ. ಕೇರಳದಿಂದ ಪ್ರತಿನಿತ್ಯ ಸಾವಿರಾರು ಮಂದಿ ದಕ್ಷಿಣ ಕನ್ನಡ ಜಿಲ್ಲೆಗೆ ವ್ಯಾಪಾರ, ಉದ್ಯೋಗಕ್ಕಾಗಿ ಬಂದು ಹೋಗುತ್ತಾರೆ. ಹೀಗಾಗಿ ಜಿಲ್ಲೆಯ ಜನತೆಗೆ ಭೀತಿ ಹೆಚ್ಚಾಗಿದ್ದು, ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ವಾರದ ವೀಕೆಂಡ್ ಕರ್ಪ್ಯೂ ಜಾರಿ ಇದ್ದ ಕಾರಣ ಗಡಿ ಭಾಗದಲ್ಲಿ ಹೆಚ್ಚಿನ ವಾಹನ ಓಡಾಟ ಇರಲಿಲ್ಲ. ಆದರೂ ಯಾವೊಂದು ತಪಾಸಣೆಯೂ

ಕರಾವಳಿಗರೇ ಎಚ್ಚರ… ‘ದುಶ್ಮನ್ ಬಗಲ್ ಮೆ’,ಹೆಚ್ಚುತ್ತಿವೆ ‘ಡೆಲ್ಟಾ’ ಪ್ಲಸ್ ಕೇಸ್‌ Read More »

ಲಸಿಕೆ ಹಾಕಿಸಿಕೊಳ್ಳದವರಲ್ಲಿ ‘ಡೆಲ್ಟಾ’ದ ಹಾವಳಿ ವೇಗ ಪಡೆದುಕೊಳ್ತಿದೆ – ವಿಶ್ವ ಆರೋಗ್ಯ ಸಂಸ್ಥೆ ಕಳವಳ

ನವದೆಹಲಿ: ಕೋವಿಡ್-19ರ ಡೆಲ್ಟಾ ರೂಪಾಂತರವು ಇಲ್ಲಿಯವರೆಗೆ ಗುರುತಿಸಲಾದ ರೂಪಾಂತರಗಳಲ್ಲಿ ‘ಅತ್ಯಂತ ಟ್ರಾನ್ಸ್ ಮಿಸಿಬಲ್’ ಆಗಿದೆ ಮತ್ತು ಲಸಿಕೆ ಹಾಕದ ಜನರಲ್ಲಿ ವೇಗವಾಗಿ ಹರಡುತ್ತಿದೆ ಎಂದು ಡಬ್ಲ್ಯೂಹೆಚ್‌ಒ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಘೆಬ್ರೆಯೆಸಸ್ ಎಚ್ಚರಿಸಿದ್ದಾರೆ. ಜಿನೀವಾದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಬ್ಲ್ಯೂಹೆಚ್‌ಒ ಮಹಾ ನಿರ್ದೇಶಕ ಘೆಬ್ರೆಯೆಸಸ್ , ‘ಪ್ರಸ್ತುತ ಜಾಗತಿಕವಾಗಿ ಡೆಲ್ಟಾ ರೂಪಾಂತರದ ಬಗ್ಗೆ ಸಾಕಷ್ಟು ಕಾಳಜಿ ಇದೆ ಅನ್ನೋದು ನನಗೆ ತಿಳಿದಿದೆ. ಆದ್ರೆ, ಡಬ್ಲ್ಯೂಹೆಚ್‌ಒ ಕೂಡ ಅದರ ಬಗ್ಗೆ ಕಾಳಜಿ ವಹಿಸಿದೆ’ ಎಂದರು. ‘ಡೆಲ್ಟಾ ಇಲ್ಲಿಯವರೆಗೆ ಗುರುತಿಸಲಾದ

ಲಸಿಕೆ ಹಾಕಿಸಿಕೊಳ್ಳದವರಲ್ಲಿ ‘ಡೆಲ್ಟಾ’ದ ಹಾವಳಿ ವೇಗ ಪಡೆದುಕೊಳ್ತಿದೆ – ವಿಶ್ವ ಆರೋಗ್ಯ ಸಂಸ್ಥೆ ಕಳವಳ Read More »

ರೀಲ್ ನಲ್ಲಿ ಮಾತ್ರ ಅಲ್ಲ‌ ರಿಯಲ್ ಲೈಫಲ್ಲೂ ಪವರ್ ಸ್ಟಾರ್ ‘ಯುವರತ್ನ’

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ‘ಯುವರತ್ನ’ ಸಿನಿಮಾದಲ್ಲಿ ಡ್ರಗ್ ಮಟ್ಟ ಹಾಕಬೇಕು ಎನ್ನುವ ಸಂದೇಶವಿದೆ. ಶಿಕ್ಷಕ ವೃತ್ತಿ ಮಾಡುತ್ತಲೇ ಪುನೀತ್ ಡ್ರಗ್ಸ್ ಜಾಲವನ್ನು ನಾಶ ಮಾಡುವ ಕೆಲಸ ಮಾಡುತ್ತಾರೆ. ಈಗ ಅವರು ನಿಜ ಜೀವನದಲ್ಲೂ ಈ ಕಾರ್ಯ ಮಾಡುತ್ತಿದ್ದಾರೆ. ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಜಾಲ ಪತ್ತೆ ಆಗಿತ್ತು. ಸಾಕಷ್ಟು ಸೆಲೆಬ್ರಿಟಿಗಳ ಹೆಸರು ಇದರಲ್ಲಿ ಕೇಳಿ ಬಂದಿತ್ತು. ಈ ಬೆಳವಣಿಗೆ ನಂತರದಲ್ಲಿ ಬೆಂಗಳೂರು ಪೊಲೀಸರು ಮಾದಕ ದ್ರವ್ಯ ವಸ್ತುಗಳನ್ನು ಮಟ್ಟಹಾಕಬೇಕು ಎಂದು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಈಗ

ರೀಲ್ ನಲ್ಲಿ ಮಾತ್ರ ಅಲ್ಲ‌ ರಿಯಲ್ ಲೈಫಲ್ಲೂ ಪವರ್ ಸ್ಟಾರ್ ‘ಯುವರತ್ನ’ Read More »

ಟಿಪ್ಪರ್ ಚಾಲಕನ ನಿರ್ಲಕ್ಷ್ಯ: ಚಕ್ರಕ್ಕೆ ಸಿಲುಕಿ ಯುವಕ ದಾರುಣ ಸಾವು!

ವಿಜಯಪುರ: ಟಿಪ್ಪರ್ ಚಾಲಕನೊಬ್ಬನ ನಿರ್ಲಕ್ಷ್ಯದಿಂದಾಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ವಿಜಯಪುರ ಜಿಲ್ಲೆ ಇಂಡಿ ರಸ್ತೆಯ ಹೊರವಲಯದಲ್ಲಿ ನಡೆದಿದೆ. ನಗರದ ನಿವಾಸಿ ರೆಹಮಾನ್ ಮೃತಪಟ್ಟ ವ್ಯಕ್ತಿ. ಟಿಪ್ಪರ್ ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದಿದ್ದರಿಂದಾಗಿ ಯುವಕ ರೆಹಮಾನ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮುಂದಿನ ಚಕ್ರದಡಿ ಆತನ ದೇಹ ಸಿಲುಕಿಕೊಂಡಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತವಾದ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಕೊಂಡಿದ್ದಾರೆ.

ಟಿಪ್ಪರ್ ಚಾಲಕನ ನಿರ್ಲಕ್ಷ್ಯ: ಚಕ್ರಕ್ಕೆ ಸಿಲುಕಿ ಯುವಕ ದಾರುಣ ಸಾವು! Read More »