June 2021

ಅನ್ ಲಾಕ್ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ, ಏನಿರುತ್ತೆ? ಏನಿರಲ್ಲ?

ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳ ಮೇರೆಗೆ ಈಗಿರುವ ನಿರ್ಭಂಧಗಳಲ್ಲಿ ಕೆಲವು ಮಾರ್ಪಾಡುಗಳನ್ನು/ಸಡಿಲಿಕೆಗಳನ್ನು ಮಾಡಲು ಸಿಎಂ ಯಡಿಯೂರಪ್ಪ ನೇತೃತ್ವದ ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ.ರಾಜ್ಯದಲ್ಲಿ Positivity Rate ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಿಗೆ ಅನ್ವಯವಾಗುವಂತೆ ಈಗಿರುವ ಮಾರ್ಗಸೂಚಿಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ, ಅಂದರೆ ಈ ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರೆಯುತ್ತದೆ. ಹಾಗೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಉಸ್ತುವಾರಿ ಸಚಿವರುಗಳೊಂದಿಗೆ […]

ಅನ್ ಲಾಕ್ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ, ಏನಿರುತ್ತೆ? ಏನಿರಲ್ಲ? Read More »

ದ.ಕ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮತ್ತೊಂದು ವಾರ ಲಾಕ್ ಡೌನ್ ಕಂಟಿನ್ಯೂ, ಉಳಿದೆಡೆ ಸಡಿಲಿಕೆ ಸಾಧ್ಯತೆ.

ಮಂಗಳೂರು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದೇ ಇರುವುದರಿಂದ ಮತ್ತೆ ಒಂದು ವಾರಗಳ ಕಾಲ ಲಾಕ್ ಡೌನ್ ಮುಂದುವರಿಯಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಹಾಗೂ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮೈಸೂರು, ಮಂಡ್ಯ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ನಡೆಸಿದ ವಿಡಿಯೊ ಕಾನ್ಫರೆನ್ಸ್ ಬಳಿಕ ಅವರು ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಈ ವಿಷಯ ತಿಳಿಸಿದ್ದಾರೆ. ದ.ಕನ್ನಡ ಸೇರಿದಂತೆ ಕೊರೊನಾ ಪ್ರಕರಣ ಹೆಚ್ಚಾಗಿರುವ 8

ದ.ಕ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮತ್ತೊಂದು ವಾರ ಲಾಕ್ ಡೌನ್ ಕಂಟಿನ್ಯೂ, ಉಳಿದೆಡೆ ಸಡಿಲಿಕೆ ಸಾಧ್ಯತೆ. Read More »

ಕರಾವಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದಳು ಪಾಕಿಸ್ತಾನಿ ಮಹಿಳೆ…! | ಪೊಲೀಸರಿಂದ ತನಿಖೆ ಚುರುಕು

ಭಟ್ಕಳ: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನ ಮೂಲದ ಖತೀಜಾ ಮೆಹರಿನ್ ಎಂಬಾಕೆ ಇಲ್ಲಿ ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭಟ್ಕಳ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.‌ ಕಳೆದ ಎಂಟು ವರ್ಷಗಳ ಹಿಂದೆ ಈಕೆಯನ್ನು ಸ್ಥಳೀಯ ನಿವಾಸಿ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್‌ ಎಂಬಾತ ದುಬೈನಲ್ಲಿ ವಿವಾಹವಾಗಿದ್ದ. ಈಕೆ ಮದುವೆ ನಂತರ 2014ರಲ್ಲಿ ಪ್ರವಾಸಿ ವೀಸಾ ಪಡೆದು 3 ತಿಂಗಳು ಭಾರತಕ್ಕೆ ಬಂದು ವಾಪಸ್ಸಾಗಿದ್ದಳು. ಆ ಬಳಿಕ 2015ರಲ್ಲಿ ಅಕ್ರಮವಾಗಿ ಭಾರತ ಪ್ರವೇಶ

ಕರಾವಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದಳು ಪಾಕಿಸ್ತಾನಿ ಮಹಿಳೆ…! | ಪೊಲೀಸರಿಂದ ತನಿಖೆ ಚುರುಕು Read More »

ನನ್ನ ವರ್ಗಾವಣೆ ಹಿಂದೆ ಭೂ ಮಾಫಿಯಾ ಕೈಯಾಡಿಸಿದೆ | ದಾಖಲೆ ಬಿಡುಗಡೆ ಮಾಡಿದ ಸಿಂಧೂರಿ

ಬೆಂಗಳೂರು: ಒತ್ತಡಕ್ಕೆ ಮಣಿಯದೆ ಮೈಸೂರಿನಲ್ಲಿ ನಡೆಯುತ್ತಿರುವ ಭೂ ಮಾಫಿಯಾ ನಿಗ್ರಹದ ಬೆನ್ನು ಹತ್ತಿರುವುದೇ ನನ್ನ ವರ್ಗಾವಣೆಗೆ ಕಾರಣ ಎಂದು ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ಮೈಸೂರಿಗೆ ಬಂದ ಆರಂಭದಲ್ಲಿ ನಗರದ ಲಿಂಗಾಂಬುದಿ ಕೆರೆಯ ಪ್ರದೇಶದಲ್ಲಿ ನಡೆದ ಭೂ ಮಾಫಿಯಾ ವಿರುದ್ಧ ತನಿಖೆ ಕೈಗೊಂಡಿದ್ದೆ. ಮೈಸೂರಿನ ರಾಜಕಾಲುವೆ ಮೇಲೆ ಸಾರಾ ಮಹೇಶ್ ಮಾಲಕತ್ವದ ಸಾರಾ ಕಲ್ಯಾಣ ಮಂಟಪ ನಿರ್ಮಾಣವಾಗಿದೆ. ಅದರ ಬಗ್ಗೆ ಸ್ಥಳ ಸರ್ವೆ ನಡೆಸಿ, ಭೂ ಹಗರಣದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದೆ. ಅದರ

ನನ್ನ ವರ್ಗಾವಣೆ ಹಿಂದೆ ಭೂ ಮಾಫಿಯಾ ಕೈಯಾಡಿಸಿದೆ | ದಾಖಲೆ ಬಿಡುಗಡೆ ಮಾಡಿದ ಸಿಂಧೂರಿ Read More »

ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಉಡುಪಿ ಮೂಲದ ಪದ್ದು ಬಂಗೇರ ವಿಧಿವಶ

ಉಡುಪಿ: 80ರ ದಶಕದಲ್ಲಿ ಭಾರತ ಫುಟ್ಬಾಲ್ ತಂಡವನ್ನೂ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದ ಶೇಖರ್ ಪದ್ದು ಬಂಗೇರ (75ವ.) ಇಂದು ಮೃತಪಟ್ಟಿದ್ದಾರೆ. ಜಿಲ್ಲೆಯ ಬಡಾನಿಡಿಯೂರು ಮೂಲದವರಾದ ಅವರಿಗೆ ಕೆಲ ದಿನಗಳ ಹಿಂದೆ ಅವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಭಾರತ ತಂಡದಲ್ಲಿ ಗೋಲ್ಕೀಪರ್ ಹಾಗೂ ನಾಯಕನಾಗಿದ್ದ ಇವರು ದೇಶಕ್ಕೆ ಹಲವಾರು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಹಾಗೂ ಹಲವಾರು ಪ್ರತಿಷ್ಠಿತ

ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಉಡುಪಿ ಮೂಲದ ಪದ್ದು ಬಂಗೇರ ವಿಧಿವಶ Read More »

ಕರಾವಳಿಯಲ್ಲಿ ಇಂದಿನಿಂದ ಭಾರಿ ಮಳೆ: ರೆಡ್ ಅಲರ್ಟ್ ಘೋಷಣೆ

ಬೆಂಗಳೂರು: ಇಂದಿನಿಂದ ಒಂದು ವಾರಗಳ ಕಾಲ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ಸಾರ್ವಜನಿಕರು ಎಚ್ಚರದಿಂದಿರುವಂತೆ ಸೂಚಿಸಲಾಗಿದೆ. ಇಂದಿನಿಂದ ಅಂದರೆ ಜೂನ್ 10 ರಿಂದ ಮೂರು ದಿನ ಎಲ್ಲೊ ಅಲರ್ಟ್ ಹಾಗೂ ನಂತರದ ಮೂರು ದಿನಗಳಲ್ಲಿ (13 ರಿಂದ 15) ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ,

ಕರಾವಳಿಯಲ್ಲಿ ಇಂದಿನಿಂದ ಭಾರಿ ಮಳೆ: ರೆಡ್ ಅಲರ್ಟ್ ಘೋಷಣೆ Read More »

ಕಂದಮ್ಮನಿಗೆ ಕೇಬಲ್ ನಿಂದ ಹೊಡೆದು ಕೊಂದ ಕ್ರೂರಿ ತಂದೆ-ತಾಯಿ

ಆಂಧ್ರಪ್ರದೇಶ: ಊಟ ಮಾಡಲಿಲ್ಲ ಎಂಬ ಕಾರಣಕ್ಕೆ ತಮ್ಮ ಕರುಳ ಕುಡಿಗೆ ಕೇಬಲ್ ನಿಂದ ಹೊಡೆದ ಪರಿಣಾಮ ಮಗು ಮೃತಪಟ್ಟ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಮೂರು ವರ್ಷದ ಮಗು ಉಮೇಶ ಮೃತಪಟ್ಟ ದುರ್ದೈವಿ. ಊಟ ಮಾಡಲಿಲ್ಲ ಎಂಬ ಕಾರಣಕ್ಕೆ ತಂದೆ-ತಾಯಿ ಇಬ್ಬರೂ ಸೇರಿಕೊಂಡು ವಯರ್ ಕೇಬಲ್ ನಿಂದ ಒಂದೇ ಸಮನೆ ಮಗುವಿಗೆ ಥಳಿಸಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಮಗುವನ್ನು ಅವರೇ ಆಸ್ಪತ್ರೆಗೆ ಕೊಂಡೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಹಾಗೂ ಮೃತಪಟ್ಟಿದೆ ಎಂದಿದ್ದಾರೆ. ಈ ಮಗು ದಂಪತಿಗೆ ಇಷ್ಟವಿರಲಿಲ್ಲ. ಆದ್ದರಿಂದ

ಕಂದಮ್ಮನಿಗೆ ಕೇಬಲ್ ನಿಂದ ಹೊಡೆದು ಕೊಂದ ಕ್ರೂರಿ ತಂದೆ-ತಾಯಿ Read More »

ಜೂ.14ರಿಂದ ಅನ್ ಲಾಕ್ ಫಿಕ್ಸ್! ಇಂದು ಸಿಎಂ ಮಹತ್ವದ ಸಭೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಮಹತ್ವದ ಸಭೆ ನಡೆಯಲಿದ್ದು, ಸೋಮವಾರದಿಂದ ಹಂತ ಹಂತವಾಗಿ ನಿರ್ಬಂಧ ತೆರವು ಮಾಡುವುದು ಬಹುತೇಕ ಫಿಕ್ಸ್ ಆಗಿದೆ ಎನ್ನಲಾಗಿದೆ.ಕೊರೊನಾ ಎರಡನೇ ಅಲೆ ಪ್ರಭಾವ ತಗ್ಗುತ್ತಿದ್ದರೂ ಕೆಲವು ಜಿಲ್ಲೆಗಳಲ್ಲಿ ಗಂಭೀರ

ಜೂ.14ರಿಂದ ಅನ್ ಲಾಕ್ ಫಿಕ್ಸ್! ಇಂದು ಸಿಎಂ ಮಹತ್ವದ ಸಭೆ Read More »

ಮಂಗಳೂರು: ಮಧ್ಯರಾತ್ರಿ ಬಾಲ್ಕನಿ ಮೂಲಕ ಒಳನ್ನುಗ್ಗಿ ಲವ್ವಿ ಡವ್ವಿ | ಬಾಲಕಿ ಪ್ರೆಗ್ನೆಂಟ್

ಮಂಗಳೂರು: ವ್ಯಕ್ತಿಯೋರ್ವ ಅಪ್ರಾಪ್ತ ಯುವತಿಗೆ ಮೊಬೈಲ್ ಗಿಫ್ಟ ನೀಡಿ ಸಲುಗೆ ಬೆಳೆಸಿ ಮಧ್ಯರಾತ್ರಿ ಆಕೆ ಮನೆಗೆ ಬಂದು ನಿರಂತರ ಅತ್ಯಾಚಾರ ಎಸಗಿದ್ದಾರೆ ಎನ್ನಲಾದ ಘಟನೆ ನಗರದ ಜೋಕಟ್ಟೆ ಎಂಬಲ್ಲಿ ನಡೆದಿದೆ. ಕಳೆದ ಅಕ್ಟೋಬರ್ನಲ್ಲಿ ಸ್ಥಳೀಯ ಯುವಕ ಅಬ್ದುಲ್ ರಸೂಲ್ ಪರಿಚಯವಾಗಿದ್ದ. ಬಾಲಕಿಯನ್ನು ಆಗಾಗ ಬೇಟಿಯಾಗಿ ಸಲುಗೆ ಬೆಳೆಸಿದ್ದ. ದಿನಗಳೆದಂತೆ ಪ್ರೀತಿಸುವ ನಾಟಕವಾಡಿ ಮೊಬೈಲ್ ಗಿಫ್ಟ್ ನೀಡಿದ್ದ. ಇದರಿಂದ ಖುಷಿಯಾಗಿದ್ದ ಯುವತಿ ತಾನು ಯುವಕರೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾಳೆ. ಇದನ್ನೇ ಕಾಯುತ್ತಿದ್ದ ಆರೋಪಿ ಯುವತಿಯ ಮನೆಗೆ ಮಧ್ಯರಾತ್ರಿಯೇ ಬರಲಾರಂಭಿಸಿದ್ದಾನೆ.

ಮಂಗಳೂರು: ಮಧ್ಯರಾತ್ರಿ ಬಾಲ್ಕನಿ ಮೂಲಕ ಒಳನ್ನುಗ್ಗಿ ಲವ್ವಿ ಡವ್ವಿ | ಬಾಲಕಿ ಪ್ರೆಗ್ನೆಂಟ್ Read More »

ಜೂ.14ರ ನಂತರವೂ ದಕ್ಷಿಣ ಕನ್ನಡಕ್ಕಿಲ್ಲ ಅನ್ ಲಾಕ್ ಭಾಗ್ಯ…!?

ಮಂಗಳೂರು: ಕೋವಿಡ್ ಎರಡನೆಯ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಂತಹಂತದ ಅನ್ಲಾಕ್ ಗೆ ಸಿದ್ಧತೆ ನಡೆಸುತ್ತಿದ್ದು ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಮುಂದುವರಿಸುವ ಸಾಧ್ಯತೆ ಎದ್ದು ಕಾಣುತ್ತಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಕೋವಿಡ್ ಪಾಸಿಟಿವ್ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿದೆ. ಸದ್ಯ ಅಂತಹ ಜಿಲ್ಲೆಗಳಲ್ಲಿ ಹಂತಹಂತವಾಗಿ ನಿರ್ಬಂಧ ತೆರವು ಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇನ್ನು ದಕ್ಷಿಣ ಕನ್ನಡ ಸೇರಿದಂತೆ ಮೈಸೂರು ಶಿವಮೊಗ್ಗ ಹಾಸನ ತುಮಕೂರು ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ

ಜೂ.14ರ ನಂತರವೂ ದಕ್ಷಿಣ ಕನ್ನಡಕ್ಕಿಲ್ಲ ಅನ್ ಲಾಕ್ ಭಾಗ್ಯ…!? Read More »