June 2021

ಸರ್ಕಾರಿ ನೌಕರರಿಗೆ ಕಾದಿದೆ ಬಿಗ್ ಶಾಕ್: ಹಲವು ಭತ್ಯೆಗಳಿಗೆ ಬೀಳಲಿದೆ ಕತ್ತರಿ..!

ನವದೆಹಲಿ: ಕೊರೊನಾ ವೈರಸ್ ನ ಎರಡನೆಯ ಅಲೆಯ ನಡುವೆ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರದ ವತಿಯಿಂದ ಸಿಗುವ ಸವಲತ್ತುಗಳಲ್ಲಿ ಕಡಿತ ಉಂಟಾಗುವ ಸಾಧ್ಯತೆ ಇದೆ. ಕೊರೊನಾದಿಂದಾಗಿ ಸರ್ಕಾರದ ಬೊಕ್ಕಸ ಭಾರಿ ಒತ್ತಡಕ್ಕೆ ಒಳಗಾಗಿದೆ. ಕೊರೊನಾ ಕಾರಣ ಒಂದೆಡೆ ಸರ್ಕಾರದ ವೆಚ್ಚದಲ್ಲಿ ನಿರಂತರ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಸರ್ಕಾರದ ಆದಾಯದಲ್ಲಿ ಕೊರತೆ ಎದುರಾಗಿದೆ. ಈ ಹಿನ್ನಲೆಯಲ್ಲಿ ವೆಚ್ಚದ ಕಡಿತ ಸರ್ಕಾರದ ಕಛೇರಿಗಳು ಹಾಗೂ ನೌಕರರವರೆಗೆ ತಲುಪಿದೆ. […]

ಸರ್ಕಾರಿ ನೌಕರರಿಗೆ ಕಾದಿದೆ ಬಿಗ್ ಶಾಕ್: ಹಲವು ಭತ್ಯೆಗಳಿಗೆ ಬೀಳಲಿದೆ ಕತ್ತರಿ..! Read More »

ಪತಿಯ ಮರ್ಮಾಂಗವನ್ನೇ ಕತ್ತರಿಸಿ ಫ್ರೈ ಮಾಡಿದಳೆಂದರೆ ಆಕೆಗೆ ಕೊಬ್ಬು ಎಷ್ಟಿದ್ದಿರಬೇಡ ಹೇಳಿ….!

ಬ್ರೆಸಿಲಿಯಾ: ಹಿಂದೆ ಮನೆಗಳಲ್ಲಾಗುತ್ತಿದ್ದ ಘಟನೆಗಳನ್ನಾಧರಿಸಿ ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಮಾತು ಹುಟ್ಟಿಕೊಂಡಿತ್ತು. ಆಧುನಿಕ ಯುಗದಲ್ಲಿ ಎಲ್ಲದಕ್ಕೂ ಬದಲಾವಣೆಯ ಗಾಳಿ ಬೀಸುತ್ತಿರುವಾಗ, ಆ ಮಾತು ಬದಲಾಗಿದೆ. ಗಂಡ ಹೆಂಡತಿ ನಡುವಿನ ಭಾಂದವ್ಯ ಮಧುವೆ ಸಂಭ್ರಮ ಮುಗಿಯುವ ತನಕ ಎಂಬಂಥಾಗಿದೆ. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ದಂಪತಿಗಳ ನಡುವೆ ವಿಚಿತ್ರ ದುರಂತಗಳು ಸಂಭವಿಸುತ್ತಿದೆ. ವಿಚ್ಚೇದನ ಪ್ರಕರಣಗಳಂತು ವಿವಾಹ ನೋಂದಣಿ ಗಿಂತ ಹೆಚ್ಚು ದಾಖಲಾಗುತ್ತಿವೆ. ಇಲ್ಲೊಬ್ಬಳು ಪತ್ನಿ ಜಗಳವಾಡುತ್ತಾನೆ ಎಂಬ ಕಾರಣಕ್ಕೆ ತನ್ನ ಗಂಡನನ್ನೇ ಕೊಲೆ

ಪತಿಯ ಮರ್ಮಾಂಗವನ್ನೇ ಕತ್ತರಿಸಿ ಫ್ರೈ ಮಾಡಿದಳೆಂದರೆ ಆಕೆಗೆ ಕೊಬ್ಬು ಎಷ್ಟಿದ್ದಿರಬೇಡ ಹೇಳಿ….! Read More »

ಉಗ್ರರ ಅಟ್ಟಹಾಸಕ್ಕೆ ಇಬ್ಬರು ನಾಗರಿಕರು ಬಲಿ | ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್’ನಲ್ಲಿ ಇಂದು ಉಗ್ರರ ದಾಳಿಗೆ ಇಬ್ಬರು ನಾಗರಿಕರು ಬಲಿಯಾಗಿದ್ದು, ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. ಸೊಪೋರ್’ನ ಅರಂಪೋರಾ ಪ್ರದೇಶದಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಉಗ್ರರು ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಪರಿಣಾಮ ಸ್ಥಳದಲ್ಲಿದ್ದ ಇಬ್ಬರು ಪೊಲೀಸರು ಹಾಗೂ ಇಬ್ಬರು ನಾಗರೀಕರು ಸಾವನ್ನಪ್ಪಿ, ಮತ್ತಿಬ್ಬರು ಪೊಲೀಸರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ

ಉಗ್ರರ ಅಟ್ಟಹಾಸಕ್ಕೆ ಇಬ್ಬರು ನಾಗರಿಕರು ಬಲಿ | ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ Read More »

ಮತ್ತೆ ಮುಂದುವರೆಯಲಿದೆಯಂತೆ ಅರ್ಧಕ್ಕೆ ನಿಂತ ಕನ್ನಡ ಬಿಗ್ ಬಾಸ್​ ಸೀಸನ್​ 8..!

ಕೊರೋನಾ ಲಾಕ್​ಡೌನ್​ನಿಂದಾಗಿ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿದೆ. ಇದೇ ಕಾರಣದಿಂದಾಗಿ ಬಿಗ್​ ಬಾಸ್​ ಸೀಸನ್​ 8ನ್ನೂ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಈಗ ಬಿಗ್​ ಬಾಸ್​ ಪ್ರೇಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬಿಗ್ ಬಾಸ್​ ಕಾರ್ಯಕ್ರಮ ಮತ್ತೆ ಆರಂಭವಾಗಲಿದೆಯಂತೆ. ಕನ್ನಡದ ಕಿರುತೆಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​​ 8 ಕೊನೆಗೊಳ್ಳಲು 29 ದಿನಗಳು ಬಾಕಿ ಇತ್ತು. ಆಗಲೇ ಕಾರ್ಯಕ್ರಮ ಅರ್ಧಕ್ಕೆ ಕೊನೆಗೊಳ್ಳಲಿದೆ ಅನ್ನೋ ಸುದ್ದಿ ಹೊರ ಬಿದ್ದಿತ್ತು. ಕಿಚ್ಚ ಸುದೀಪ್​ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಕಾರ್ಯಕ್ರಮ ಕೊರೋನಾ ಕಾರಣದಿಂದ

ಮತ್ತೆ ಮುಂದುವರೆಯಲಿದೆಯಂತೆ ಅರ್ಧಕ್ಕೆ ನಿಂತ ಕನ್ನಡ ಬಿಗ್ ಬಾಸ್​ ಸೀಸನ್​ 8..! Read More »

ಹರೀಶ್ ಪೂಂಜಾರನ್ನು ಹೊಗಳಿದ ಕಾಂಗ್ರೆಸ್ ನಾಯಕರಿಗೆ ಸ್ವಪಕ್ಷದಿಂದ ತೆಗಳಿಕೆ

ಬೆಳ್ತಂಗಡಿ: ಬೆಳ್ತಂಗಡಿ ಯ ಶಾಸಕ ಹರೀಶ್ ಪೂಂಜಾ ಅವರನ್ನು ಹೊಗಳಿದ ಕಾರಣಕ್ಕೆ, ತನ್ನ 8 ಜನ ನಾಯಕರುಗಳಿಗೆ ಕಾಂಗ್ರೆಸ್ ಪಕ್ಷ ಬಿಸಿ ಮುಟ್ಟಿಸಿದೆ. ಪಕ್ಷದಲ್ಲಿ ಶಿಸ್ತು ಉಲ್ಲಂಘಿಸಿದ ವಿಚಾರ ಸ್ಪಷ್ಟನೆ ಕೋರಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನೋಟೀಸು ಜಾರಿ ಮಾಡಲಾಗಿದೆ. ಜೂನ್ 3 ರಂದು ಬಿಡುಗಡೆಯಾದ ಸ್ಥಳೀಯ ವಾರ ಪತ್ರಿಕೆಯೊಂದರಲ್ಲಿ ಬಿಜೆಪಿ ಯ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ರವರ ಶಾಸಕತ್ವಕ್ಕೆ ಮೂರು ವರ್ಷ ಪೂರೈಸಿರುವ ಪ್ರಯುಕ್ತ ಕಾಂಗ್ರೆಸ್ ನಾಯಕರು ಶುಭಕೋರಿದ್ದರು. ನಿವೃತ್ತ ಪೊಲೀಸ್

ಹರೀಶ್ ಪೂಂಜಾರನ್ನು ಹೊಗಳಿದ ಕಾಂಗ್ರೆಸ್ ನಾಯಕರಿಗೆ ಸ್ವಪಕ್ಷದಿಂದ ತೆಗಳಿಕೆ Read More »

ಪೆಟ್ರೋಲ್ ಬೆನ್ನಲ್ಲೇ ಶತಕ ಬಾರಿಸಿದ ಪಾರ್ಟ್ನರ್ | ದೇಶದಲ್ಲಿ ₹ 100.05 ಕ್ಕೆ ಮಾರಾಟವಾಯಿತು ಡೀಸೆಲ್

ನವದೆಹಲಿ: ದೇಶದಲ್ಲಿ ಇಂಧನ ಬೆಲೆ ದಿನೇದಿನೇ ಹೆಚ್ಚಳವಾಗುತ್ತಿದ್ದು ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದ ಬೆನ್ನಲ್ಲಿ ಇಂದು ಡೀಸೆಲ್ ಬೆಲೆ 100 ರೂ. ಗೆ ಮಾರಾಟವಾಗಿದೆ. ರಾಜಸ್ಥಾನದ ಗಂಗಾನಗರ ಎಂಬಲ್ಲಿ ಇಂದು 100.05 ರೂ. ಗೆ ಮಾರಾಟವಾಗುವ ಮೂಲಕ ಡೀಸೆಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಮೂರಂಕಿ ಬೆಲೆಗೆ ಮಾರಾಟವಾದ ದಾಖಲೆ ಬರೆದಿದೆ. ಕರ್ನಾಟಕದಲ್ಲಿ ನೂರು ರೂ. ಆಸುಪಾಸಿನಲ್ಲಿ ಪೆಟ್ರೋಲ್ ಮಾರಾಟವಾಗುತ್ತಿದ್ದು, 95ರ ಆಸುಪಾಸಿನ ದರಕ್ಕೆ ಡೀಸೆಲ್ ಬಿಕರಿಯಾಗುತ್ತಿದೆ. ಪ್ರಸ್ತುತ ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ

ಪೆಟ್ರೋಲ್ ಬೆನ್ನಲ್ಲೇ ಶತಕ ಬಾರಿಸಿದ ಪಾರ್ಟ್ನರ್ | ದೇಶದಲ್ಲಿ ₹ 100.05 ಕ್ಕೆ ಮಾರಾಟವಾಯಿತು ಡೀಸೆಲ್ Read More »

ಜಿಲ್ಲೆಯಲ್ಲಿ ಈ ವಾರದ ವೀಕೆಂಡ್ ಕರ್ಫ್ಯೂ ಇಲ್ಲ : ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ವಾರದ ವಾರಾಂತ್ಯ ಕರ್ಫ್ಯೂ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಕೆವಿ ಹೇಳಿದ್ದಾರೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಹಿಂದೆ ಇದ್ದ ಲಾಕ್ಡೌನ್ ನಿಯಮಗಳನ್ನು ಜೂನ್ 21 ರವರೆಗೆ ಮುಂದುವರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಿಂದಿನಂತೆಯೇ ವಾರದ ಎಲ್ಲಾ ದಿನ ನಿರ್ಬಂಧಗಳು ಮುಂದುವರೆಯಲಿದೆ. ಪ್ರತ್ಯೇಕವಾಗಿ ಈ ವಾರದ ಶನಿವಾರ ಮತ್ತು ಆದಿತ್ಯವಾರ (ಜೂ. 13 ಮತ್ತು 14) ದಂದು ವಾರಂತ್ಯ

ಜಿಲ್ಲೆಯಲ್ಲಿ ಈ ವಾರದ ವೀಕೆಂಡ್ ಕರ್ಫ್ಯೂ ಇಲ್ಲ : ಜಿಲ್ಲಾಧಿಕಾರಿ ಡಾ. ರಾಜೇಂದ್ರ Read More »

ಯಾವೊಬ್ಬ ವಿದ್ಯಾರ್ಥಿಯೂ ಫೇಲ್ ಆಗಲ್ಲ…! | ಸರಳ ರೀತಿಯಲ್ಲಿ ನಡೆಯಲಿದೆ SSLC ಪರೀಕ್ಷೆ

ಬೆಂಗಳೂರು: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ಸರಳವಾಗಿ ನಡೆಸಲು ನಿರ್ಧರಿಸಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ತೇರ್ಗಡೆ ಗೊಳಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಅಪ್ಲೋಡ್ ಮಾಡಲು ಎಲ್ಲಾ ಶಾಲೆಯ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಪ್ರಥಮ ಭಾಷೆಗೆ 25 ಅಂಕ ಹಾಗೂ ಉಳಿದಂತೆ 5 ವಿಷಯಗಳಿಗೆ ತಲಾ 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ನಡೆಸಲಾಗಿದೆ. ಅದರಲ್ಲಿ ಒಟ್ಟು 125 ಅಂಕಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕವನ್ನು

ಯಾವೊಬ್ಬ ವಿದ್ಯಾರ್ಥಿಯೂ ಫೇಲ್ ಆಗಲ್ಲ…! | ಸರಳ ರೀತಿಯಲ್ಲಿ ನಡೆಯಲಿದೆ SSLC ಪರೀಕ್ಷೆ Read More »

ನಟ ಪರ್ಲ್ ವಿ ಪುರಿ ಬೆಂಬಲಕ್ಕೆ ನಿಂತ ಸಂತ್ರಸ್ಥೆ ತಾಯಿ…! | ಅಪ್ರಾಪ್ತೆಯ ಅತ್ಯಾಚಾರ ಪ್ರಕರಣಕ್ಕೆ ರೋಚಕ ತಿರುವು

ಮುಂಬೈ: ಕಿರುತೆರೆ ನಟ ಪರ್ಲ್ ವಿ ಪುರಿ ಅಪ್ರಾಪ್ತ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾದ ಯುವತಿಯ ತಾಯಿಯೇ ನಟ ನಿರಪರಾಧಿ ಎಂದಿದ್ದಾರೆ. ಕಳೆದೊಂದು ವಾರಗಳ ಹಿಂದೆ ಯುವತಿ ಹಾಗೂ ಯುವತಿಯ ತಂದೆ, ಹಿಂದಿ ಕಿರುತೆರೆ ನಟ ಪರ್ಲ್ ವಿ ಪುರಿ ಮೇಲೆ ಅತ್ಯಾಚಾರ ಪ್ರಕರಣ ಧಾಖಲಿಸಿದ್ದರು. ಧಾರಾವಾಹಿ ಒಂದರಲ್ಲಿ ನಟಿಸುವ ಅವಕಾಶ ಕೊಡಿಸುವುದಾಗಿ ಹೇಳಿ, ನಟ ನೊಂದಿಗೆ ಸೇರಿ ಕೆಲವು ಯುವಕರು ಕಾರೊಂದರಲ್ಲಿ ನನ್ನ ಮೇಲೆ

ನಟ ಪರ್ಲ್ ವಿ ಪುರಿ ಬೆಂಬಲಕ್ಕೆ ನಿಂತ ಸಂತ್ರಸ್ಥೆ ತಾಯಿ…! | ಅಪ್ರಾಪ್ತೆಯ ಅತ್ಯಾಚಾರ ಪ್ರಕರಣಕ್ಕೆ ರೋಚಕ ತಿರುವು Read More »

ಕೊರೋನ ಇಳಿಕೆ ಬೆನ್ನಲ್ಲೇ ಏರುತ್ತಿದೆ ಬ್ಲಾಕ್ ಫಂಗಸ್ | ಕಪ್ಪು ಶಿಲೀಂದ್ರ ಸೋಂಕಿಗೆ 2100 ಕ್ಕೂ ಹೆಚ್ಚು ಬಲಿ

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಗಣನೀಯ ಇಳಿಕೆ ಕಾಣುತ್ತಿರುವ ಬೆನ್ನಲ್ಲೇ ಕಪ್ಪು ಶಿಲೀಂದ್ರ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ದೇಶದಲ್ಲಿ ಇದುವರೆಗೆ 2,100 ಕ್ಕೂ ಅಧಿಕ ಜನ ಬ್ಲಾಕ್ ಫಂಗಸ್ ಗೆ ಬಲಿಯಾಗಿದ್ದಾರೆ. ದೇಶವ್ಯಾಪಿ ಈವರೆಗೆ 31,220 ಕ್ಕೂ ಹೆಚ್ಚು ಪ್ರಕರಣಗಳು ಮತ್ತು 2,110ಕ್ಕೂ ಹೆಚ್ಚು ಸಾವು ಸಂಭವಿಸಿದ ಬಗ್ಗೆ ವರದಿಯಾಗಿದೆ. ಬ್ಲಾಕ್​ ಫಂಗಸ್​ ಸೋಂಕು ಏರಿಕೆಗೆ ಮತ್ತು ಸಾವಿನ ಪ್ರಮಾಣದಲ್ಲಿ ಏರಿಕೆಗೆ ಆಂಫೊಟೆರಿಸಿನ್-ಬಿ ಔಷಧದ ತೀವ್ರ ಕೊರತೆಯೇ ಕಾರಣ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ

ಕೊರೋನ ಇಳಿಕೆ ಬೆನ್ನಲ್ಲೇ ಏರುತ್ತಿದೆ ಬ್ಲಾಕ್ ಫಂಗಸ್ | ಕಪ್ಪು ಶಿಲೀಂದ್ರ ಸೋಂಕಿಗೆ 2100 ಕ್ಕೂ ಹೆಚ್ಚು ಬಲಿ Read More »