June 2021

ಮಂಗಳೂರಿನಲ್ಲಿ ಒಮಾನ್ ರಾಷ್ಟದ ಪ್ರಜೆ ಪೊಲೀಸ್ ವಶಕ್ಕೆ | ಲಾಡ್ಜ್ ಗಳಿಗೆ ಇನ್ನುಮಂದೆ ಅನಿಯಮಿತ ದಾಳಿ : ಕಮಿಷನರ್

ಮಂಗಳೂರು: ಲಾಡ್ಜ್ ಒಂದರಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದ ಒಮಾನ್ ರಾಷ್ಟ್ರದ ಪ್ರಜೆ ಮತ್ತು ಹಿಮಾಚಲ ಪ್ರದೇಶದ ವ್ಯಕ್ತಿಯನ್ನು ಮಂಗಳೂರು ನಗರದ ಪೊಲೀಸರು ಇಂದು ಬಂಧಿಸಿದ್ದಾರ ನಗರದ ಲಾಡ್ಜ್ ಒಂದರಲ್ಲಿ ಒಮಾನ್ ರಾಷ್ಟ್ರದ ಪ್ರಜೆ ಅಹ್ಮದ್ ಮತ್ತು ಹಿಮಾಚಲ ಪ್ರದೇಶದ ನಿವಾಸಿ ರಾಮ್ ಎಂಬಾತ ಸೆರೆಸಿಕ್ಕಿರುವ ಆರೋಪಿಗಳು. ಒಮಾನ್ ಪ್ರಜೆ ಅಹ್ಮದ್ ಆರು ತಿಂಗಳ ಹಿಂದೆ ಗೋವಾಕ್ಕೆ ಟೂರಿಸ್ಟ್ ವೀಸಾದಲ್ಲಿ ಬಂದಿದ್ದ. ಆದರೆ, ಅನಾರೋಗ್ಯಕ್ಕೀಡಾಗಿದ್ದ ಅಹ್ಮದ್ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ಆನಂತರ ಚಿಕಿತ್ಸೆ ಪಡೆದು ಹೊರಬಂದಿದ್ದ. ಈ ನಡುವೆ […]

ಮಂಗಳೂರಿನಲ್ಲಿ ಒಮಾನ್ ರಾಷ್ಟದ ಪ್ರಜೆ ಪೊಲೀಸ್ ವಶಕ್ಕೆ | ಲಾಡ್ಜ್ ಗಳಿಗೆ ಇನ್ನುಮಂದೆ ಅನಿಯಮಿತ ದಾಳಿ : ಕಮಿಷನರ್ Read More »

ಸುಳ್ಯ : ಕಾರು-ರಿಕ್ಷಾ ಡಿಕ್ಕಿ | ರಿಕ್ಷಾ ಚಾಲಕ ಗಂಭೀರ

ಸುಳ್ಯ: ಕಾರು ಹಾಗೂ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ಅಡ್ಕಾರು ಸಮೀಪದ ವಿನೋಬನಗರ ಎಂಬಲ್ಲಿ ನಡೆದಿದೆ. ಇಂದು ಸಂಜೆ ಸುಳ್ಯದಿಂದ ಪುತ್ತೂರು ಕಡೆ ತೆರಳುತ್ತಿದ್ದ ರಿಕ್ಷಾ ಮತ್ತು ಪುತ್ತೂರು ಕಡೆಯಿಂದ ಸುಳ್ಯ ಕಡೆ ಬರುತ್ತಿದ್ದ ಟೂರಿಸ್ಟ್ ಕಾರು ನಡುವೆ ಅಪಘಾತ ಸಂಭವಿಸಿದೆ. ಈ ಪರಿಣಾಮ ಆಟೋ ರಿಕ್ಷಾ ನಜ್ಜುಗುಜ್ಜಾಗಿದ್ದು ಚಾಲಕ ಗಂಭೀರ ಗಾಯಕೊಂಡಿದ್ದಾನೆ. ತಕ್ಷಣ ಗಾಯಾಳು ಆಟೋ ಚಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುಳ್ಯ : ಕಾರು-ರಿಕ್ಷಾ ಡಿಕ್ಕಿ | ರಿಕ್ಷಾ ಚಾಲಕ ಗಂಭೀರ Read More »

ಕಡೂರಿನ ವಿಜಯ ಕುಮಾರ್ `ಸಂಚಾರಿ’ ಯಾಗಿದ್ದು ಹೇಗೆ? ರಾಷ್ಟ್ರಪ್ರಶಸ್ತಿ ವಿಜೇತ ‘ಸಂಚಾರಿ ವಿಜಯ್’ ರ ಲೈಪ್ ಕಹಾನಿ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಅದ್ಭುತ ನಟನೆಯ ಮೂಲಕ ಎಲ್ಲಾರ ಗಮನ ಸೆಳೆದ ನಟ ಸಂಚಾರಿ ವಿಜಯ್‌ರವರು ಇಂದು ನಿಧನರಾಗಿದ್ದಾರೆ. ಇವರು ಇಷ್ಟೊಂದು ಹೆಸರುವಾಸಿಯಾಗಲು ನಡೆದು ಬಂದ ಹಾದಿಯನ್ನು ಗಮನಸಿದರೆ ಅವರು ಪಟ್ಟ ಶ್ರಮ ಎಷ್ಟಿದೆ ಎನ್ನುವ ವಿಚಾರ ಇಲ್ಲಿದೆ. ನಟನೆ ಹಾಗೂ ಸಮಾಜಮುಖಿ ಕೆಲಸ ಎರಡರಲ್ಲೂ ಸೈ ಎನ್ನಿಸಿಕೊಂಡಿದ್ದ ವಿಜಯ್ 37ನೇ ವಯಸ್ಸಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಅವರ ಅಕಾಲಿಕ ವಿದಾಯ ಎಲ್ಲರಲ್ಲೂ ಶೋಕ ಮಡುಗಟ್ಟುವಂತೆ ಮಾಡಿದೆ. ಇವರ ನಿಧನಕ್ಕೆ ಚಿತ್ರರಂಗ, ಅಭಿಮಾನಿಗಳು, ಗಣ್ಯರು ಕಂಬನಿಯನ್ನು ಮಿಡಿದಿದ್ದಾರೆ. ಇವರು ಜುಲೈ

ಕಡೂರಿನ ವಿಜಯ ಕುಮಾರ್ `ಸಂಚಾರಿ’ ಯಾಗಿದ್ದು ಹೇಗೆ? ರಾಷ್ಟ್ರಪ್ರಶಸ್ತಿ ವಿಜೇತ ‘ಸಂಚಾರಿ ವಿಜಯ್’ ರ ಲೈಪ್ ಕಹಾನಿ Read More »

ಜೂನ್‌ 21ರಿಂದ ನಡೆಯಬೇಕಿದ್ದ SSLC ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ರಾಜ್ಯದಲ್ಲಿ ಜೂನ್‌ 21 ರಿಂದ ಜುಲೈ 5ರವೆಗೆ ನಿಗದಿಯಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನ ಮುಂದೂಡಿಕೆ ಮಾಡಲಾಗದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.‌ ಈ ಕುರಿತು ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದ್ದು, “ರಾಜ್ಯದಲ್ಲಿ ಜೂನ್‌ 21 ರಿಂದ ಜುಲೈ 5ರವೆಗೆ ನಿಗದಿಯಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನ ಮುಂದೂಡಿಕೆ ಮಾಡಲಾಗದೆ. ಇನ್ನು ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಪರೀಕ್ಷೆಗೂ ಮೊದಲು ಪರೀಕ್ಷಾ ಸಿಬ್ಬಂದಿಗೆ ಲಸಿಕೆ ಹಾಕಲಾಗುವುದು” ಎಂದಿದೆ.

ಜೂನ್‌ 21ರಿಂದ ನಡೆಯಬೇಕಿದ್ದ SSLC ಪರೀಕ್ಷೆ ಮುಂದೂಡಿಕೆ Read More »

ನೀವ್ ಬೆಂಗಳೂರಿಗೆ ಹೋಗ್ತಿದೀರಾ? ಹಾಗಿದ್ರೆ ಈ ನಿಯಮ ಪಾಲನೆ ಕಡ್ಡಾಯ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಗಣನೀಯವಾಗಿ ಇಳಿಮುಖವಾಗುತ್ತಿದೆ. ಈಗ ಕೇವಲ 2 ರಿಂದ 3 ಸಾವಿರ ಕೋವಿಡ್ ಪ್ರಕರಣಗಳಷ್ಟೇ ಪತ್ತೆಯಾಗುತ್ತಿದೆ. ನಗರದಲ್ಲಿ ಸರ್ಕಾರ ಲಾಕ್‌ಡೌನ್ ಸಡಿಲಿಸಿ ಅನ್‌ಲಾಕ್ ಮಾಡಿದ ಪರಿಣಾಮದಿಂದ ಕೊರೊನಾ ಸೋಂಕಿನಲ್ಲಿ ಹೆಚ್ಚಳವಾಗುವ ಸಾಧ್ಯತೆಯಿರು ಕಾರಣ ಕಠಿಣ ನಿಯಮಗಳನ್ನು ಹೊರಡಿಸಲಾಗಿದೆ. ಬೇರೆ ಬೇರೆ ರಾಜ್ಯಗಳು ಮತ್ತು ಇತರ ಜಿಲ್ಲೆಗಳಿಂದ ಕಾರ್ಮಿಕರು, ಉದ್ಯೋಗಿಗಳು ಬೆಂಗಳೂರಿನತ್ತ ದೌಡಾಯಿಸುತ್ತಿದ್ದಾರೆ. ಜೂನ್ 14 ರಿಂದ ಬೆಂಗಳೂರು ಅನ್‌ಲಾಕ್ ಆಗಿರುವ ಕಾರಣ ಬಹುತೇಕರು ತಮ್ಮ ತಮ್ಮ ಕೆಲಸ ಮತ್ತು ಉದ್ಯೋಗಗಳಿಗೆ ಮತ್ತೆ ಮರಳುತ್ತಿದ್ದಾರೆ.

ನೀವ್ ಬೆಂಗಳೂರಿಗೆ ಹೋಗ್ತಿದೀರಾ? ಹಾಗಿದ್ರೆ ಈ ನಿಯಮ ಪಾಲನೆ ಕಡ್ಡಾಯ Read More »

ಬಂಟ್ವಾಳ: ಚಿಕ್ಕಪ್ಪನಿಂದಲೇ ಬೆದರಿಸಿ ನಿರಂತರ ಅತ್ಯಾಚಾರ | ಠಾಣೆ ಮೆಟ್ಟಿಲೇರಿದ ಯುವತಿ

ಬಂಟ್ವಾಳ: ಚಿಕ್ಕಪ್ಪನಿಂದಲೇ ಬೆದರಿಕೆ ಹಾಕಿ ನಿರಂತರವಾಗಿ ದೈಹಿಕ ಅತ್ಯಾಚಾರಗೊಳಗಾದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾದೆ. ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾ.ಪ. ವ್ಯಾಪ್ತಿಯ ಆಲಾಡಿ ನಿವಾಸಿ ಪುರುಷೋತ್ತಮ ಎಂಬಾತ ಪ್ರಕರಣ ಆರೋಪಿ. ಈತ ಪತ್ನಿಯ ಅಕ್ಕನ ಮಗಳ ಮೇಲೆಯೇ ನಿರಂತರವಾಗಿ ಬೆದರಿಕೆ ಹಾಕಿ ಬಲಾತ್ಕಾರ ಮಾಡಿ ಅತ್ಯಾಚಾರ ಮಾಡಿದ್ದಾನೆ. ಈ ಬಗ್ಗೆ ಕಾಲೇಜು ವಿದ್ಯಾರ್ಥಿನಿ ದೂರು ನೀಡಿದ್ದಾಳೆ.ಒಂದು ವೇಳೆ ಈ ವಿಚಾರವನ್ನು ಮನೆಯವರಿಗೆ ತಿಳಿಸಿದರೆ ಕೊಲೆ

ಬಂಟ್ವಾಳ: ಚಿಕ್ಕಪ್ಪನಿಂದಲೇ ಬೆದರಿಸಿ ನಿರಂತರ ಅತ್ಯಾಚಾರ | ಠಾಣೆ ಮೆಟ್ಟಿಲೇರಿದ ಯುವತಿ Read More »

ಬಿಪಿಎಲ್ ಕಾರ್ಡ್ ದಾರರ ವಿದ್ಯುತ್ ಬಿಲ್ ಮನ್ನಾ: ಸ್ಪಷ್ಟನೆ ನೀಡಿದ ಮೆಸ್ಕಾಂ

ಮಂಗಳೂರು: 3 ತಿಂಗಳ ವಿದ್ಯುತ್ ಬಿಲ್ ಮನ್ನಾ ಎಂಬ ಮಾಹಿತಿ ಭಾರೀ ವೈರಲ್ ಆಗಿದ್ದು, ಈ ಬಗ್ಗೆ ಮಂಗಳೂರು ವಿದ್ಯುತ್ ಸರಬರಾಜು ನಿಗಮ ಅಧಿಕಾರಿಗಳು ನಮ್ಮಿಂದ ಇಂತಹ ಯಾವುದೆ ಆದೇಶ ನೀಡಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. “ಕೋವಿಡ್ -19 ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಡ ಮತ್ತು ಮಾಧ್ಯಮ ವರ್ಗದ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು ಲಾಕ್‌ಡೌನ್‌ನಿಂದಾಗಿ ದಿನನಿತ್ಯ ದುಡಿದು/ ಮಾಸಿಕ ವೇತನವನ್ನು ಅವಲಂಬಿಸಿ ಜೀವನ ನಡೆಸುವ ಬಡ ಮತ್ತು ಮಾಧ್ಯಮ ವರ್ಗದವರ ಆರ್ಥಿಕ ಹೊರೆಯಾಗಿದೆ. ಆರ್ಥಿಕ ಪ್ಯಾಕೇಜ್ ಎಲ್ಲಾರಿಗೂ

ಬಿಪಿಎಲ್ ಕಾರ್ಡ್ ದಾರರ ವಿದ್ಯುತ್ ಬಿಲ್ ಮನ್ನಾ: ಸ್ಪಷ್ಟನೆ ನೀಡಿದ ಮೆಸ್ಕಾಂ Read More »

ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿ | ನಾಳೆಯಿಂದಲೇ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭ

ಬೆಂಗಳೂರು: ನಾಳೆಯಿಂದಲೇ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದ್ದು ಜುಲೈ 1ರಿಂದ ಶಾಲೆಗಳು ಆರಂಭವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ. ಶೈಕ್ಷಣಿಕ ವರ್ಷದ ಆರಂಭದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾಳೆಯಿಂದಲೇ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಜೊತೆಗೆ ಜುಲೈ 1ರಿಂದ ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾಗಲಿದೆ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ. ನಾಳೆಯಿಂದ ಮಕ್ಕಳ ಶಾಲಾ ದಾಖಲಾತಿಯನ್ನು ಪ್ರಾರಂಭಿಸಿ, ಆಗಸ್ಟ್ 31ರ ಒಳಗೆ ದಾಖಲಾತಿ ಮುಕ್ತಾಯಗೊಳಿಸಬೇಕು. ಲಾಕ್‌ಡೌನ್

ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿ | ನಾಳೆಯಿಂದಲೇ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭ Read More »

ಬಿಪಿಎಲ್ ಕುಟುಂಬಕ್ಕೆ ಗುಡ್ ನ್ಯೂಸ್: ಕೊರೊನಾದಿಂದ ಮೃತಪಟ್ಟವರಿಗೆ ಲಕ್ಷ ರೂಪಾಯಿ ಪರಿಹಾರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊರೊನಾ ವಿಚಾರವಾಗಿ ಇಂದು ಮಹತ್ವದ ಸುದ್ದಿಗೋಷ್ಠಿ ನಡೆಸಿ ಕೊರೊನಾಗೆ ಬಲಿಯಾದವರ ಕುಟುಂಬಕ್ಕೆ ಒಂದು ಲಕ್ಷ ರೂ ಪರಿಹಾರ ನೀಡಲಾಗುವುದು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗುತ್ತೆ ಎಂದು ಸಿಎಂ ಯಡಿಯೂರಪ್ಪ ಪ್ರಕಟಿಸಿದ್ದಾರೆ.ಕೋವಿಡ್ ಸೊಂಕಿನಿಂದ ದುಡಿಯುವ ವ್ಯಕ್ತಿಗಳು ಮೃತ ಪಟ್ಟು ಅನೇಕ ಕುಟುಂಬಗಳು ಕಷ್ಟಪಡುತ್ತಿದ್ದಾರೆ. ಇದನ್ನು ಮನಗಂಡು ದುಡಿಯುವ ವ್ಯಕ್ತಿ ಮೃತ ಪಟ್ಟರೇ ಒಂದು ಕುಟುಂಬಕ್ಕೆ ಒಬ್ಬರಂತೆ ಒಂದು ಲಕ್ಷ ರೂ ನೀಡಲಾಗುತ್ತದೆ. ಬಿಪಿಎಲ್ ಕುಟುಂಬಗಳ ವಯಸ್ಕರು ಮೃತ ಪಟ್ಟಿದ್ರೆ ಒಂದು

ಬಿಪಿಎಲ್ ಕುಟುಂಬಕ್ಕೆ ಗುಡ್ ನ್ಯೂಸ್: ಕೊರೊನಾದಿಂದ ಮೃತಪಟ್ಟವರಿಗೆ ಲಕ್ಷ ರೂಪಾಯಿ ಪರಿಹಾರ Read More »

ಬಟ್ಟೆ ಇಲ್ಲದೆ ಹ್ಯಾಟ್‌ನಲ್ಲೇ ದೇಹ ಮುಚ್ಚಿಕೊಂಡ ಸನ್ನಿ ಲಿಯೋನ್ : ಫೋಟೋ ಸಖತ್ ವೈರಲ್

ಮುಂಬೈ: ಬಟ್ಟೆ ಇಲ್ಲದೆ ಕೇವಲ ಹ್ಯಾಟ್ ಮೂಲಕ ದೇಹ ಮುಚ್ಚಿಕೊಂಡ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಅವರ ೨೦೨೧ರ ಕ್ಯಾಲೆಂಡರ್ ಶೂಟ್‌ಗೆ ಸನ್ನಿ ಪೋಸ್ ಕೊಟ್ಟಿದ್ದಾರೆ. ಕಾಲಲ್ಲಿ ಹೈ ಹೀಲ್ಸ್, ದೇಹ ಮುಚ್ಚಿಕೊಳ್ಳೋಕೆ ಒಂದು ಹ್ಯಾಟ್ ಬಿಟ್ಟರೆ ಬೇರೇ ಯಾವುದೇ ಉಡುಗೆ ಅವರ ದೇಹದ ಮೇಲಿಲ್ಲ. ಈ ಫೋಟೋವನ್ನು ಸನ್ನಿ ಲಿಯೋನ್ ಇನ್‌ಸ್ಟಾಗ್ರಾಂನಲ್ಲಿ ಸಮ್ಮರ್ ಬಂತು ಎಂದು ಕ್ಯಾಪ್ಶನ್ ಕೊಟ್ಟು ಹಂಚಿಕೊAಡಿದ್ದು, ಸಾಕಷ್ಟು

ಬಟ್ಟೆ ಇಲ್ಲದೆ ಹ್ಯಾಟ್‌ನಲ್ಲೇ ದೇಹ ಮುಚ್ಚಿಕೊಂಡ ಸನ್ನಿ ಲಿಯೋನ್ : ಫೋಟೋ ಸಖತ್ ವೈರಲ್ Read More »