June 2021

ಮಂಗಳೂರು: 10 ರೂ. ಕೊಟ್ಟು ಹಂತ ಹಂತವಾಗಿ ಲಕ್ಷ ರೂ. ಕಳೆದುಕೊಂಡ ವ್ಯಕ್ತಿ…! | ನೀವು ಈ ರೀತಿ ಮೋಸ ಹೋಗದಿರಿ

ಮಂಗಳೂರು: 10 ರೂ. ಪಾವತಿಸಲು ಹೋಗಿ ವ್ಯಕ್ತಿಯೊಬ್ಬರು ವಂಚನೆಗೊಳಗಾಗಿ ಲಕ್ಷ ರೂ. ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ನಿವಾಸಿಯೊಬ್ಬರಿಗೆ ಕೊರಿಯರ್ ಸಂಸ್ಥೆಯ ಪ್ರತಿನಿಧಿ ಎಂದು ಹೇಳಿ ಕರೆ ಮಾಡಿದ್ದ. ಆತ ತಾನು ಡಿಟಿಡಿಸಿ ಕೊರಿಯರ್ ಸಂಸ್ಥೆ ಪ್ರತಿನಿಧಿ ಎಂದು ಪರಿಚಯಿಸಿಗೊಂಡಿದ್ದ. 9339431456 ದೂರವಾಣಿ ಸಂಖ್ಯೆಯಿoದ ಕರೆ ಮಾಡಿ ತಮ್ಮ ಹೆಸರಿಗೊಂದು ಕೊರಿಯರ್ ಬಂದಿದ್ದು ಅದರಲ್ಲಿ ನಿಮ್ಮ ವಿಳಾಸದ ಪಿನ್ ತಪ್ಪಾಗಿ ನಮೂದಿಸಲಾಗಿದ್ದು ಪಾರ್ಸೆಲ್ ಡೆಲಿವರಿ ಮಾಡಬೇಕಿದ್ದಲ್ಲಿ 10 ರೂ. ಪಾವತಿಸುವಂತೆ ತಿಳಿಸಿದ್ದಾನೆ. ಇದರೊಂದಿಗೆ ಹಣ ಪಾವತಿಸಲು […]

ಮಂಗಳೂರು: 10 ರೂ. ಕೊಟ್ಟು ಹಂತ ಹಂತವಾಗಿ ಲಕ್ಷ ರೂ. ಕಳೆದುಕೊಂಡ ವ್ಯಕ್ತಿ…! | ನೀವು ಈ ರೀತಿ ಮೋಸ ಹೋಗದಿರಿ Read More »

ಮೀನುಗಾರರ ಬಲೆಗೆ ಬಿತ್ತು ಸಮುದ್ರವಾಸಿ ವಿಷಕಾರಿ ಹಾವು

ಕಾರವಾರ: ಮೀನುಗಾರಿಕೆ ವೇಳೆ ಸಮುದ್ರದಲ್ಲಿ ವಾಸಿಸುವ ವಿಷಕಾರಿ ಹಾವೊಂದು ಮೀನುಗರರ ಬಲೆಗೆ ಬಿದ್ದಿದೆ. ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಹಾವನ್ನು ರಕ್ಷಿಸಲಾಗಿದೆ. ಇದನ್ನು ‘ಹೈಡ್ರೋಫಿಸ್ ಸ್ಕಿಸ್ಟೋಸಸ್’ ಎಂದು ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಕಪ್ಪು ಮತ್ತು ಬಿಳಿ ಬಣ್ಣದ ಪಟ್ಟಿ ಹೊಂದಿರುವ ಹಾವು ನೋಡಲು ವಿಶೇಷವಾಗಿದೆ.‌ ಅಪರೂಪವಾಗಿ ಕಾಣಸಿಗುವ ಈ ಹಾವನ್ನು ನೋಡಿ ಮೀನುಗರಾರು ಮತ್ತು ಸ್ಥಳೀಯರು ಖುಷಿಪಟ್ಟಿದ್ದಾರೆ. ಇದು ಸಮುದ್ರದಲ್ಲಿ ಕ್ಯಾಟ್ ಫಿಶ್‌ಗಳ ಮರಿಗಳನ್ನು ತಿಂದು ಜೀವಿಸುತ್ತದೆ. ಬಹಳ ಶಾಂತ ಸ್ವಭಾವದ ಈ ಹಾವುಗಳು ಕೆಲವೊಮ್ಮೆ ಆಕಸ್ಮಿಕವಾಗಿ ಮೀನುಗಾರರ

ಮೀನುಗಾರರ ಬಲೆಗೆ ಬಿತ್ತು ಸಮುದ್ರವಾಸಿ ವಿಷಕಾರಿ ಹಾವು Read More »

ಬಂಟ್ವಾಳ: ಲಾರಿ ಅಪಘಾತ | ಚಾಲಕ, ಕ್ಲೀನರ್ ಗೆ ಗಾಯ

ಬಂಟ್ವಾಳ: ಲಾರಿಯೊಂದು ಧರೆಗೆ ಡಿಕ್ಕಿ ಹೊಡೆದ ಪರಿಣಾಮಚಾಲಕ ಹಾಗೂ ನಿರ್ವಾಹಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮುಂಜಾನೆ ಬಂಟ್ವಾಳದಲ್ಲಿ ನಡೆದಿದೆ. ಲಾರಿ ಶಿವಮೊಗ್ಗದಿಂದ ಪುತ್ತೂರಿಗೆ ಅಕ್ಕಿ ಹೇರಿಕೊಂಡು ಕೊಂಡು ಬರುತ್ತಿತ್ತು. ಬಂಟ್ವಾಳದ ಎಸ್ ವಿ‌ಎಸ್ ಶಾಲೆ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಲಾರಿ ರಸ್ತೆ ಬದಿಗೆ ಚಲಿಸಿ ಧರೆಗೆ ಡಿಕ್ಕಿ ಹೊಡೆದಿದೆ. ಲಾರಿ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ ಚಾಲಕ ಹಾಗೂ ನಿರ್ವಾಹಕನಿಗೆ ಗಾಯಗಳಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು

ಬಂಟ್ವಾಳ: ಲಾರಿ ಅಪಘಾತ | ಚಾಲಕ, ಕ್ಲೀನರ್ ಗೆ ಗಾಯ Read More »

ಪಂಪ್ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಶಾಕ್ | ಯುವಕರಿಬ್ಬರ ಸಾವು

ಶಿವಮೊಗ್ಗ: ಪಂಪ್ ಸೆಟ್ ಸರಿಪಡಿಸುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಯುವಕರಿಬ್ಬರು ಸಾವಿಗೀಡಾಗಿದ್ದಾರೆ. ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಹಾರೋಗೊಪ್ಪ ಬಿ ಕ್ಯಾಂಪ್ ನಿವಾಸಿಗಳಾದ ಶಶಿಕುಮಾರ್ ನಾಯ್ಕ (32) ಮತ್ತು ಶೇಖರ ನಾಯ್ಕ (36) ಮೃತ ದುರ್ದೈವಿಗಳು. ಇವರಿಬ್ಬರು ಜಮೀನಿನಲ್ಲಿ ಬೋರ್ವೇಲ್ ಗೆ ಅಳವಡಿಸದ್ದ ಪಂಪ್ ಸೆಟ್ ದುರಸ್ಥಿ ಪಡಿಸುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ದುರ್ಘಟನೆ ಸಂಭವಿಸಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಂಪ್ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಶಾಕ್ | ಯುವಕರಿಬ್ಬರ ಸಾವು Read More »

ಗನ್ ತೋರಿಸಿ ಗ್ರಾ.ಪಂ. ಸದಸ್ಯನಿಂದಲೇ ರೇಪ್ | ಈತನ ಮೇಲಿದೆ 10 ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ

ಆನೇಕಲ್: ಮಾಡೆಲಿಂಗ್ ಕೆಲಸದ ಆಮಿಷವೊಡ್ಡಿ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡ ಗ್ರಾಮ ಪಂಚಾಯತ್ ಸದಸ್ಯನೊಬ್ಬ ಆಕೆಗೆ ಗನ್ ತೋರಿಸಿ ಅತ್ಯಾಚಾರವೆಸಗಿದ್ದಾನೆ.ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ಲವಾರದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಹಮದ್ ಪಾಷಾ ಅತ್ಯಾಚಾರ ಆರೋಪಿ. ಈತನಿಗೆ ಫೇಸ್‌ಬುಕ್ ನಲ್ಲಿ ಬೆಂಗಳೂರಿನ ಹೆಬ್ಬಾಳ ಮೂಲದ ಯವತಿಯೊಬ್ಬಳ ಪರಿಚಯವಾಗಿತ್ತು.ಆಕೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಕೂಡಿಸುವುದಾಗಿ ನಂಬಿಸಿ ಮೊಬೈಲ್ ನಂಬರ್ ಪಡೆದಿದ್ದ. ಅಲ್ಲದೆ ತಾನು ಬನ್ನೇರುಘಟ್ಟ ಕಾರ್ಪೋರೇಟರ್ ಎಂದೂ ಹೇಳಿಕೊಂಡಿದ್ದ. ಲಾಕ್‌ಡೌನ್ ಹಿನ್ನೆಲೆ ಬಡವರಿಗೆ ಆಹಾರ್ ಕಿಟ್ ವಿತರಣೆ ಮಾಡುತ್ತಿರುವ

ಗನ್ ತೋರಿಸಿ ಗ್ರಾ.ಪಂ. ಸದಸ್ಯನಿಂದಲೇ ರೇಪ್ | ಈತನ ಮೇಲಿದೆ 10 ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ Read More »

ಜು. 31ಕ್ಕೆ ದ್ವಿತೀಯ ಪಿಯುಸಿ ಸಿಬಿಎಸ್ಸಿ ಫಲಿತಾಂಶ

ನವದೆಹಲಿ: ಪ್ರಸಕ್ತ ವರ್ಷದ ಸಿಬಿಎಸ್ಸಿ ದ್ವಿತೀಯ ಪಿಯುಸಿ ಫಲಿತಾಂಶ ಜುಲೈ ತಿಂಗಳ ಮೂವತ್ತೊಂದಕ್ಕೆ ಪ್ರಕಟವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. 12ನೇ ತರಗತಿ ಫಲಿತಾಂಶ ಘೋಷಿಸಲು, ಪ್ರತಿ ವಿದ್ಯಾರ್ಥಿಯ ಹತ್ತನೇ ತರಗತಿಯ ಅಂಕವನ್ನು 30% ಕ್ಕೆ, 11ನೇ ತರಗತಿಯ ಅಂಕವನ್ನು 30% ಕ್ಕೆ ಮತ್ತು 12ನೇ ತರಗತಿಯ ಆಂತರಿಕ ಮೌಲ್ಯಮಾಪನ ಮತ್ತು ಘಟಕ ಅವಧಿ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನು ಅಂಕಗಳನ್ನು ಒಟ್ಟುಗೂಡಿಸಿ ಅದನ್ನು 40% ಕ್ಕೆ ಪರಿವರ್ತಿಸಿ ಅಂಕಗಳನ್ನು

ಜು. 31ಕ್ಕೆ ದ್ವಿತೀಯ ಪಿಯುಸಿ ಸಿಬಿಎಸ್ಸಿ ಫಲಿತಾಂಶ Read More »

ಲಂಚ ನೀಡಿ ಬಿಜೆಪಿಗೆ ಸೇರಿಸಿಕೊಂಡ ಆರೋಪ | ಸುರೇಂದ್ರನ್ ಮೇಲೆ ಪ್ರಕರಣ ದಾಖಲಿಸಲು ಕೋರ್ಟ್ ಸೂಚನೆ

ವಯನಾಡ್: ಸ್ವ ಪಕ್ಷಕ್ಕೆ ಸೇರಿಸಿಕೊಳ್ಳಲು ಬೇರೊಂದು ಪಕ್ಷದ ನಾಯಕಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಕೇರಳ ಬಿಜೆಪಿ ರಾಜ್ಯಧ್ಯಕ್ಷ ಸುರೇಂದ್ರನ್ ಮೇಲೆ ಪ್ರಕರಣ ದಾಖಲಿಸಲು ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ. ಕಳೆದ ಕೇರಳ ವಿಧಾನಸಭಾ ಚುನಾವಣೆಯಿಂದ ಮೊದಲು ಜೆ ಆರ್ ಎಸ್ ಪಕ್ಷದ ನಾಯಕಿ ಸಿಕೆ ಜಾನು ಎಂಬವರಿಗೆ ಸುರೇಂದ್ರನ್ 10 ಲಕ್ಷ ರೂ ಲಂಚ ನೀಡಿದ್ದರು ಎನ್ನಲಾಗಿದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನ ವಿದ್ಯಾರ್ಥಿ ವಿಭಾಗವಾದ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್‌ನ ರಾಜ್ಯ ಅಧ್ಯಕ್ಷ

ಲಂಚ ನೀಡಿ ಬಿಜೆಪಿಗೆ ಸೇರಿಸಿಕೊಂಡ ಆರೋಪ | ಸುರೇಂದ್ರನ್ ಮೇಲೆ ಪ್ರಕರಣ ದಾಖಲಿಸಲು ಕೋರ್ಟ್ ಸೂಚನೆ Read More »

ಮೈಕ್ರೋಸಾಫ್ಟ್ ನೂತನ ಅಧ್ಯಕ್ಷರಾಗಿ ಸತ್ಯಾ ನಡೆಲ್ಲಾ

ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್ ನ ನೂತನ ಅಧ್ಯಕ್ಷರಾಗಿ ಸತ್ಯ ನಾಡೆಲ್ಲಾ ಅವರನ್ನು ನೇಮಿಸಲಾಗಿದೆ. ಅದೇ ಕಂಪನಿಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಹೊಸ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇದುವರೆಗೆ ಕಾರ್ಪ್ ಜಾನ್ ಥಾಮ್ಸನ್ ಮೈಕ್ರೋಸಾಫ್ಟ್ ನ ಅಧ್ಯಕ್ಷರಾಗಿದ್ದರು. 2014 ರಲ್ಲಿ ಸ್ಟೀವ್ ಬಾಲ್ಮರ್ ಅವರಿಂದ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಾಡೆಲ್ಲಾ ಲಿಂಕ್ಡ್ ಇನ್, ನುವಾನ್ಸ್ ಕಮ್ಯುನಿಕೇಷನ್ಸ್ ಮತ್ತು ಜೆನಿಮ್ಯಾಕ್ಸ್ ನಂತಹ ಶತಕೋಟಿ ಡಾಲರ್ ಕಂಪನಿಗಳ ಸ್ವಾಧೀನ ಒಳಗೊಂಡಂತೆ ಮೈಕ್ರೋಸಾಫ್ಟ್ ವ್ಯವಹಾರ ಹೆಚ್ಚಿಸುವಲ್ಲಿ

ಮೈಕ್ರೋಸಾಫ್ಟ್ ನೂತನ ಅಧ್ಯಕ್ಷರಾಗಿ ಸತ್ಯಾ ನಡೆಲ್ಲಾ Read More »

ಮರುಕಳಿಸಿತಾ ಮಹಾಭಾರತ….? | ಗಂಗೆಯಲ್ಲಿ ತೇಲಿಬಂದ ಪುಟ್ಟ ಕಂದ

ಉತ್ತರ ಪ್ರದೇಶದ: ಇಲ್ಲಿನ ಘಾಜಿಯಾಬಾದ್ ಜಿಲ್ಲೆಯ ದಾದ್ರಿ ಘಾಟ್ ಪ್ರದೇಶದಲ್ಲಿ 21 ದಿನದ ಹೆಣ್ಣು ಮಗು ಒಂದು ಪತ್ತೆಯಾಗಿದೆ. ಮರದ ಬಾಕ್ಸ್ ಒಂದರಲ್ಲಿ ಹೆಣ್ಣು ಮಗುವನ್ನು ಇರಿಸಿ ನದಿಯಲ್ಲಿ ತೇಲಿ ಬಿಡಲಾಗಿದೆ. ಆ ಮಗುವಿನ ಜನ್ಮಕುಂಡಲಿಯನ್ನೂ ಜೊತೆಯಲ್ಲಿ ಇಟ್ಟಿದ್ದು ಮಗುವಿನ ಹೆಸರು ಗಂಗಾ ಎಂದು ಬರೆಯಲಾಗಿದೆ. ಜೊತೆಯಲ್ಲಿ ಒಂದು ದೇವರ ಫೋಟೋ ಕೂಡ ಅಂಟಿಸಲಾಗಿದೆ. ಇದೀಗ ಮಗುವನ್ನು ಆಶಾ ಜ್ಯೋತಿ ಅನಾಥಾಲಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.ಮಹಾಭಾರತದಲ್ಲಿ ಕೌಂತಯ ದೇಶದ ರಾಜಕುಮಾರಿ ಕುಂತಿ

ಮರುಕಳಿಸಿತಾ ಮಹಾಭಾರತ….? | ಗಂಗೆಯಲ್ಲಿ ತೇಲಿಬಂದ ಪುಟ್ಟ ಕಂದ Read More »

ಉಪ್ಪಿನಂಗಡಿ: ನೆರೆಭಾದಿತ ಪ್ರದೇಶಗಳಲ್ಲಿ ಎನ್ ಡಿ ಆರ್ ಎಫ್ ಪರಿಶೀಲನೆ

ಉಪ್ಪಿನಂಗಡಿ: ರಾಷ್ಟೀಯ ವಿಪತ್ತು ನಿರ್ವಹಣಾ ಪಡೆ ಉಪ್ಪಿನಂಗಡಿಯ ಹಲವು ನೆರೆ ಹಾವಳಿಗೆ ಒಳಗಾಗುವ ಸಂಭವ ಇರುವ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿತು. ಉಪ್ಪಿನಂಗಡಿ ಪ್ರದೇಶವು ಕುಮಾರಧಾರ ಮತ್ತು ನೇತ್ರಾವತಿ ನದಿಗಳ ಸಂಗಮ ಸ್ಥಳವಾಗಿದೆ. ಇಲ್ಲಿ ಪ್ರತಿ ವರ್ಷ ಪಶ್ಚಿಮ ಘಟ್ಟ ಪ್ರದೇಶ ಗಳಲ್ಲಿ ಮಳೆ ಹೆಚ್ಚಾದಾಗ ನೆರೆ ಹಾವಳಿ ಎದುರಾಗುತ್ತದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್ ವಿಜಯವಾಡ ಇನ್‌ಸ್ಪೆಕ್ಟರ್ ಆರ್.ಪಿ. ಚೌಧರಿ ನೇತೃತ್ವದ ಐದು ಮಂದಿಯ ತಂಡ ಪರಿಶೀಲನೆ ನಡೆಸಿದೆ. ಸಹಸ್ರಲಿಂಗೇಶ್ವರ ದೇವಸ್ಥಾನದ

ಉಪ್ಪಿನಂಗಡಿ: ನೆರೆಭಾದಿತ ಪ್ರದೇಶಗಳಲ್ಲಿ ಎನ್ ಡಿ ಆರ್ ಎಫ್ ಪರಿಶೀಲನೆ Read More »