June 2021

”ಮದ್ಯದ ಬೆಲೆ ಹೆಚ್ಚಾಗಿದೆ, ಬನ್ನಿ ಕುಳಿತು ಚರ್ಚಿಸೋಣ”

ಕೊಪ್ಪಳ: ಲಾಕ್‌ಡೌನ್ ನೆಪವಾಗಿಟ್ಟುಕೊಂಡು ಅಧಿಕ ದರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಈ ಆರೋಪಕ್ಕೆ ಪುಷ್ಠಿ ಕೊಡುವಂತೆ ಕೊಪ್ಪಳ ಜಿಲ್ಲೆಯ ಹೊಸಹಳ್ಳಿಯಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೇಸತ್ತ ಮದ್ಯಪ್ರೀಯರು ಗ್ರಾಮದಲ್ಲಿರುವ ಎಲ್ಲಾ ಕುಡುಕರು ಒಂದು ಕಡೆ ಚರ್ಚಿಸೋಣ ಬನ್ನಿ ಎಂದು ಡಂಗುರ ಸಾರಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ನಮ್ಮ ಗ್ರಾಮದಲ್ಲಿ ಹಾಗೂ ಗಂಗಾವತಿಯಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಲಾಕ್‌ಡೌನ್ ನೆಪ ಹೇಳಿಕೊಂಡು 50 […]

”ಮದ್ಯದ ಬೆಲೆ ಹೆಚ್ಚಾಗಿದೆ, ಬನ್ನಿ ಕುಳಿತು ಚರ್ಚಿಸೋಣ” Read More »

ಅರಬ್ಬೀ ಸಮುದ್ರದಲ್ಲಿ ಪತ್ತೆಯಾಯ್ತು ನಿಗೂಢ ದ್ವೀಪ

ಕೊಚ್ಚಿನ್: ಕೇರಳ ರಾಜ್ಯದ ಕೊಚ್ಚಿ ಬಳಿ ಅರಬ್ಬೀ ಸಮುದ್ರದಲ್ಲಿ ಗೂಗಲ್ ನಕ್ಷೆಯಲ್ಲಿ ಇತ್ತೀಚೆಗೆ ನಿಗೂಢ ದ್ವೀಪವೊಂದು ಪತ್ತೆಯಾಗಿದೆ. ಹುರುಳಿ ಆಕಾರದ ನೀರೊಳಗಿನ ದ್ವೀಪ ಗೂಗಲ್ ನಕ್ಷೆಯಲ್ಲಿ ಪತ್ತೆಯಾಗಿದ್ದು, ಭಾರೀ ಅಚ್ಚರಿಯನ್ನು ಮೂಡಿಸಿದೆ. ಚೆಲ್ಲಾನಮ್ ಕಾರ್ಶಿಕಾ ಪ್ರವಾಸೋದ್ಯಮ ಅಭಿವೃದ್ಧಿ ಸೊಸೈಟಿ ನಿಗೂಢ ದ್ವೀಪವನ್ನು ತೋರಿಸುವ ಉಪಗ್ರಹ ಚಿತ್ರವನ್ನು ಪತ್ತೆಹಚ್ಚಿದೆ. ಸೊಸೈಟಿ ಅಧ್ಯಕ್ಷ ವಕೀಲ ಕೆಎಕ್ಸ್ ಜುಲಪ್ಪನ್‌ ದ್ವೀಪದಂತಹ ರಚನೆ ಇರುವ ಗೂಗಲ್ ನಕ್ಷೆಗಳ ಸ್ಕ್ರೀನ್‌ಶಾಟ್ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು ಇದು ವ್ಯಾಪಕವಾಗಿ ವೈರಲ್ ಆಗಿದೆ.ನಿಗೂಢ ದ್ವೀಪ ಪತ್ತೆಯಾದ ಬಗ್ಗೆ

ಅರಬ್ಬೀ ಸಮುದ್ರದಲ್ಲಿ ಪತ್ತೆಯಾಯ್ತು ನಿಗೂಢ ದ್ವೀಪ Read More »

ಪ್ರಪಾತಕ್ಕೆ ಬಿದ್ದ ಹಸುಗಳನ್ನು ರಕ್ಷಿಸಿದ ಮುಸ್ಲಿಂ ಯುವಕರು

ಕೊಪ್ಪಳ: ಗುಡ್ಡದ ಪ್ರಪಾತಕ್ಕಿಳಿದಿದ್ದ ನಾಲ್ಕು ಗೋವುಗಳು ನಾಲ್ಕು ಐದು ದಿನಗಳಿಂದ ಮೇಲಕ್ಕೆ ಬರಲು ಆಗದೆ ಪರದಾಡುತ್ತಿದ್ದವು. ಈ ಸಂದರ್ಭದಲ್ಲಿ ಮುಸ್ಲಿಂ ಯುವಕರ ತಂಡ ಶತಪ್ರಯತ್ನ ಮಾಡಿ ಎರಡು ಹಸುಗಳನ್ನು ರಕ್ಷಿಸಿದ್ದು ಎರಡು ಹಸುಗಳು ಹಸಿವಿನಿಂದ ನಿತ್ರಾಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕೊಪ್ಪಳ ನಗರದ ಹುಲಿಕೆರೆಯ ಬಳಿಯ ವಳಕಲ್ಲು ಗುಡ್ಡದ ಬಳಿ ಮೇಯಲು ಹೋಗಿದ್ದ ನಾಲ್ಕು ಹಸುಗಳು ಸುಮಾರು 300 ಆಳದ ಪ್ರಪಾತಕ್ಕೆ ಇಳಿದಿದ್ದವು. ನಗರದ ಗೋವು ಶಾಲೆಯಲ್ಲಿ ಗೋವುಗಳು ಐದು ದಿನಗಳ ಹಿಂದೆ ಗುಡ್ಡ ಪ್ರದೇಶದಲ್ಲಿ ಮೇಯಲು ಹೋಗಿದ್ದವು.

ಪ್ರಪಾತಕ್ಕೆ ಬಿದ್ದ ಹಸುಗಳನ್ನು ರಕ್ಷಿಸಿದ ಮುಸ್ಲಿಂ ಯುವಕರು Read More »

ಕನ್ನಡಿಗ ಬಾಲಕನಿಗೆ ಪ್ರಧಾನಿಯಿಂದ ಪ್ರಶಂಸಾ ಪತ್ರ

ಧಾರವಾಡ: ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಅದ್ಭುತವಾಗಿ ಬಿಡಿಸಿ ಅವರಿಗೆ ಟ್ವೀಟ್ ಮಾಡಿದ್ದ ಧಾರವಾಡ ಮೂಲದ ಬಾಲಕನಿಗೆ ಪ್ರಧಾನಿ ಪ್ರಶಂಸಾ ಪತ್ರ ಕಳುಹಿಸಿದ್ದಾರೆ. ಜಿಲ್ಲೆಯ ಮಾಡರಗಿ ಗ್ರಾಮದ ವಿದ್ಯಾರ್ಥಿ 16 ವರ್ಷದ ಸಚಿನ್ ಮೋದಿಯವರಿಂದ ಮೆಚ್ಚುಗೆ ಪಡೆದ ಬಾಲಕ. ಈತ ಇದುವರೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ, ಮಹಾತ್ಮಾ ಗಾಂಧೀಜಿ, ಸ್ವಾಮಿ ವಿವೇಕಾನಂದ ಸೇರಿದಂತೆ ಹಲವಾರು ಮಹನೀಯರ ಪೆನ್ಸಿಲ್ ಸ್ಕೆಚ್ ಚಿತ್ರ ಬಿಡಿಸಿದ್ದಾನೆ. ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ ಮನಸ್ಸು ಮಾಡಿದ್ದ ಸಚಿನ, ಬಾಲ್ಯದಲ್ಲಿ ಗೋಡೆಗಳಲ್ಲಿ ಗೀಚುತ್ತಿದ್ದನು. ಶಾಲೆಯಲ್ಲಿ ಚಿತ್ರಕಲೆ ತರಗತಿಯಲ್ಲೂ

ಕನ್ನಡಿಗ ಬಾಲಕನಿಗೆ ಪ್ರಧಾನಿಯಿಂದ ಪ್ರಶಂಸಾ ಪತ್ರ Read More »

ಲೂಟಿ ಹಣದ ಪಾಲು ಪಡೆಯಲು ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದಾರೆ: ಎಚ್ ಡಿ ಕೆ

ಮಂಡ್ಯ: ರಾಜ್ಯ ಸರ್ಕಾರ ಕೊರೋನಾ ಹೆಸರಿನಲ್ಲಿ ಮಾಡಿದ ಲೂಟಿ ಹಣದಲ್ಲಿ ಪಾಲು ಕೊಂಡೊಯ್ಯಲು ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಜಿಲ್ಲೆಯ ಮದ್ದೂರಿನಲ್ಲಿ ನಡೆದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮವೊಂದನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಕಳೆದೊಂದು ವರ್ಷಗಳಿಂದ ರಾಜ್ಯ ಸರ್ಕಾರ ಕೊರೋನದಿಂದ ಸಂಕಷ್ಟಕ್ಕೊಳಗಾಗಿರುವ ಜನರ ಹೆಸರಲ್ಲಿ ರಾಜ್ಯದ ಬೊಕ್ಕಸವನ್ನು ನಿರಂತರವಾಗಿ ದೋಚುತ್ತಿದೆ. ಅದರಲ್ಲಿ ಕೇಂದ್ರಕ್ಕೆ ಪಾಲು ಕೊಡಲಾಗುತ್ತದೆ. ಆ ಪಾಲನ್ನು ದೆಹಲಿ ಕೊಂಡೊಯ್ಯಲು ಬಿಜೆಪಿ ರಾಜ್ಯ ಉಸ್ತುವಾರಿ

ಲೂಟಿ ಹಣದ ಪಾಲು ಪಡೆಯಲು ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದಾರೆ: ಎಚ್ ಡಿ ಕೆ Read More »

19 ಜಿಲ್ಲೆಗಳಲ್ಲಿ ‌ಇಂದಿನಿಂದ ವೀಕೆಂಡ್ ‌ಕರ್ಪ್ಯೂ ಜಾರಿ. ಏನಿರುತ್ತೆ? ಏನಿರಲ್ಲ?

ಬೆಂಗಳೂರು : ಕೊರೊನಾ ವೈರಸ್ ನಿಯಂತ್ರಣಕ್ಕೆ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಇಂದು ರಾತ್ರಿ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಪ್ಯೂ ಜಾರಿ ಇರಲಿದೆ.ಅಗತ್ಯ ವಸ್ತುಗಳ ಪೂರೈಕೆ ಹಾಗೂ ವೈದ್ಯಕೀಯ ಸೇವಾ ವಲಯ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಮಧ್ಯಾಹ್ನ 2 ಗಂಟೆಯವರೆಗೆ ಹಾಲು, ಹಣ್ಣು, ತರಕಾರಿ, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳ ಉತ್ಪಾದನೆಯ ಎಲ್ಲಾ ಕೈಗಾರಿಕೆಗಳು, ಸಂಸ್ಥೆಗಳಿಗೆ

19 ಜಿಲ್ಲೆಗಳಲ್ಲಿ ‌ಇಂದಿನಿಂದ ವೀಕೆಂಡ್ ‌ಕರ್ಪ್ಯೂ ಜಾರಿ. ಏನಿರುತ್ತೆ? ಏನಿರಲ್ಲ? Read More »

ತಬ್ಲೀಘಿ ಜಮಾತ್ ಗುರಿಯಾಗಿರಿಸಿ ಕಾರ್ಯಕ್ರಮ ಆರೋಪ | ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಕನ್ನಡ ಮೇಲೆ ದಂಡ | ಕ್ಷಮೆಯಾಚಿಸಲು ಆದೇಶ

ಬೆಂಗಳೂರು: ತಬ್ಲಿಘಿ ಜಮಾತ್ ಗುರಿಯಾಗಿರಿಸಿ ಅಸಂಬದ್ಧವಾಗಿ ಕಾರ್ಯಕ್ರಮ ಬಿತ್ತರಿಸಿದ ಕನ್ನಡದ ನ್ಯೂಸ್ ಚಾನೆಲ್ ಗಳಾದ ಸುವರ್ಣನ್ಯೂಸ್ ಮತ್ತು ನ್ಯೂಸ್ 18 ಕನ್ನಡಕ್ಕೆ 1.5 ಲಕ್ಷ ದಂಡ ವಿಧಿಸಿ ಕ್ಷಮೆಯಾಚಿಸಲು ಆದೇಶಿಸಲಾಗಿದೆ. ಕೊರೋನಾ ಆಕ್ರಮಣ ಆರಂಭದ ದಿನಗಳಲ್ಲಿ ಸರ್ಕಾರದ ಅನುಮತಿ ಮೇರೆಗೆ ತಬ್ಲೀಘಿ ಜಮಾತ್ ಕಾರ್ಯಕ್ರಮ ನಡೆದಿತ್ತು. ಇನ್ನು ಆ ಸಮಯದಲ್ಲಿ ಕೋವಿಡ್ ವೈರಸ್ ವ್ಯಾಪಕವಾಗಿ ಹರಡಲು ಆರಂಭಿಸಿದ್ದರಿಂದ ನ್ಯೂಸ್ ಚಾನೆಲ್ ಗಳು ತಮ್ಮ ಚಾನೆಲ್ ನಲ್ಲಿ ತಬ್ಲಿಘಿ ಜಮಾತ್ ನ್ನು ಕೊರೋನ ಹರಡಿಸಲು ಏರ್ಪಡಿಸಲಾಗಿದೆ ಎಂದು ಬಿಂಬಿಸಿದ್ದವು.

ತಬ್ಲೀಘಿ ಜಮಾತ್ ಗುರಿಯಾಗಿರಿಸಿ ಕಾರ್ಯಕ್ರಮ ಆರೋಪ | ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಕನ್ನಡ ಮೇಲೆ ದಂಡ | ಕ್ಷಮೆಯಾಚಿಸಲು ಆದೇಶ Read More »

ವಿಟ್ಲ: ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ

ಬಂಟ್ವಾಳ: ಗ್ರಾಮ ಪಂಚಾಯತ್ ಅಧ್ಯಕ್ಷ ಗ್ರಾಮದ ಮಹಿಳೆಯೊಬ್ಬರ ಮನೆಗೆ ನುಗ್ಗಿ ಆಕೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಕನ್ಯಾನದಿಂದ ವರದಿಯಾಗಿದೆ. ಈ ಸಂಬಂಧ ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷ ರಹಿಮಾನ್ ಎಂಬವನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದ ಪಿಲಿಚಂಡಿ ಗುಡ್ಡೆ ಎಂಬಲ್ಲಿನ ಒಂದು ಮನೆಯವರು ನೀರಿನ ಬಿಲ್ ಪಾವತಿಸದ ಕಾರಣ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಸಿಬ್ಬಂದಿ ಬಂದಿದ್ದರು. ಬಿಲ್ ಪಾವತಿಸುವ ಭರವಸೆ ನೀಡಿದ ನಂತರ ಅವರು ತೆರಳಿದ್ದರು. ಇನ್ನು ಸಂಜೆ ವೇಳೆ ಗ್ರಾಮ

ವಿಟ್ಲ: ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ Read More »

ದ.ಕ:ಸಾವಿರ ಗಡಿ ದಾಟಿದ ಕೊರೊನಾ ಸಾವಿನ ಸಂಖ್ಯೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಸಾವಿರದ ಗಡಿ ದಾಟಿದೆ. ಜಿಲ್ಲೆಯಲ್ಲಿ ಗುರುವಾರ 11 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 1009ಕ್ಕೆ ತಲುಪಿದೆ. ಜಿಲ್ಲೆಯ ಪಾಸಿಟಿವಿಟಿ ದರ ಶೇ 7.17ಕ್ಕೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಗುರುವಾರ 679 ಮಂದಿಗೆ ಕೋವಿಡ್‌ ಪಾಸಿಟಿವ್ ಕಾಣಿಸಿಕೊಂಡಿದ್ದು, 657 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,605 ಸಕ್ರಿಯ ಪ್ರಕರಣಗಳಿವೆ. ದ.ಕ.ಜಿಲ್ಲೆಯಲ್ಲಿ ಈವರೆಗೆ ಒಟ್ಟು 86,344 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮತ್ತೆ 3

ದ.ಕ:ಸಾವಿರ ಗಡಿ ದಾಟಿದ ಕೊರೊನಾ ಸಾವಿನ ಸಂಖ್ಯೆ Read More »

ಪದವಿಯಲ್ಲಿ ಕನ್ನಡ ಕಲಿಕೆ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ: ಡಿಸಿಎಂ ಡಾ. ಅಶ್ವಥ್ ನಾರಾಯಣ್

ಬೆಂಗಳೂರು: ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಮೊಟಕುಗೊಳಿಸುವ ಯಾವುದೇ ಚಿಂತನೆ ಅಥವಾ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ. ಗುರುವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸ್ಥಳೀಯ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಮನ್ನಣೆ ನೀಡಿ ಆ ಭಾಷೆಗಳಲ್ಲೇ ವೃತ್ತಿಪರ ಶಿಕ್ಷಣ ಸೇರಿ ಎಲ್ಲ ವಿಭಾಗದ ಉನ್ನತ ಶಿಕ್ಷಣವನ್ನು ಬೋಧಿಸಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ. ಈ ಅಂಶಕ್ಕೆ ಶಿಕ್ಷಣ ನೀತಿಯಲ್ಲಿ

ಪದವಿಯಲ್ಲಿ ಕನ್ನಡ ಕಲಿಕೆ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ: ಡಿಸಿಎಂ ಡಾ. ಅಶ್ವಥ್ ನಾರಾಯಣ್ Read More »