Ad Widget .

ಸಂಚಾರ ವಿಜಯ್‌ಗೆ ಅಮೆರಿಕದಲ್ಲಿ ಗೌರವ – ಫ್ರಾಂಕ್ಲಿನ್ ಥಿಯೇಟರ್ ಮುಂದೆ ವಿಜಯ್‌ಯವರನ್ನು ಸ್ಮರಿಸುವ ಬರಹ

ಜೂ.12ರ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ನಟ ಸಂಚಾರಿ ವಿಜಯ್ ಅವರಿಗೆ ಆಕ್ಸಿಡೆಂಟ್ ಆಗಿ ನಿಧನರಾಗಿದ್ದರು.
ಇವರ ನಿಧನದಿಂದ ಬರೀ ಕನ್ನಡ ಚಿತ್ರರಂಗಕ್ಕೆ ಮಾತ್ರ ನಷ್ಟವಾಗಿದ್ದಲ್ಲ. ಇಡೀ ಭಾರತೀಯ ಚಿತ್ರರಂಗವೇ ಒಬ್ಬ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಂತೆ ಆಗಿದೆ. ರಾಷ್ಟ್ರ ಪ್ರಶಸ್ತಿ ಪಡೆದ ಸಂಚಾರಿ ವಿಜಯ್ ಅವರ ಅಗಲಿಕೆಗೆ ಎಲ್ಲರೂ ನಮನ ಸಲ್ಲಿಸಿದ್ದರು. ಈಗ ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್ ಥಿಯೇಟರ್ ಕೂಡ ಅವರಿಗೆ ಗೌರವ ಸೂಚಿಸಿದೆ. ಫ್ರಾಂಕ್ಲಿನ್ ಥಿಯೇಟರ್ ಮುಂದೆ ವಿಜಯ್ ಅವರನ್ನು ಸ್ಮರಿಸುವ ಬರಹವನ್ನು ಬಿತ್ತರಿಸಲಾಗಿದೆ.

Ad Widget . Ad Widget .

ಈ ಸುದ್ದಿಯನ್ನು ‘ನಾನು ಅವನಲ್ಲ ಅವಳು’ ಚಿತ್ರದ ನಿರ್ದೇಶಕ ಬಿ.ಎಸ್. ಲಿಂಗದೇವರು ಅವರು ಹಂಚಿಕೊAಡಿದ್ದಾರೆ.  ‘Always in our Heart, Sanchari Vijay, Gone Yet Not Forgotten’ ಎಂಬ ಸಾಲನ್ನು ಫ್ರಾಂಕ್ಲಿನ್ ಥಿಯೇಟರ್ ಮುಂಭಾಗದಲ್ಲಿ 24 ಗಂಟೆಗಳ ಕಾಲ ಬಿತ್ತರಿಸಲಾಯಿತು. ಇದು ಇಡೀ ಕನ್ನಡಿಗರಿಗೆ ಹೆಮ್ಮೆ ತರುವಂತಹ ವಿಚಾರ. ಆದರೆ ಇಂದು ಸಂಚಾರಿ ವಿಜಯ್ ಅವರು ನಮ್ಮ ಜೊತೆ ಇಲ್ಲ ಎಂಬುದು ನೋವಿನ ಸಂಗತಿ.

Ad Widget . Ad Widget .

‘ಈ ಮೆಸೇಜ್ ಪ್ರದರ್ಶನ ಮಾಡುವ ಮೂಲಕ ಸಂಚಾರಿ ವಿಜಯ್ ಅವರಿಗೆ ಅಮೆರಿಕದ ಫ್ರಾಂಕ್ಲಿನ್ ಥಿಯೇಟರ್‌ನವರು ಗೌರವ ಸೂಚಿಸಿದ್ದಾರೆ. ಅಗಲಿದ ಕನ್ನಡದ ಕಲಾವಿದನನ್ನು ಗುರುತಿಸಿದ ಫ್ರಾಂಕ್ಲಿನ್ ಥಿಯೇಟರ್ ಮತ್ತು ಅದಕ್ಕೆ ಕಾರಣಕರ್ತರಾದ ರವಿ ಕಶ್ಯಪ್ ಅವರಿಗೆ ವಂದನೆಗಳು’ ಎಂದು ಲಿಂಗದೇವರು ಹೇಳಿದ್ದಾರೆ.

Leave a Comment

Your email address will not be published. Required fields are marked *