Ad Widget .

ಮಂಗಳೂರು: ರಾತ್ರೋರಾತ್ರಿ ಮಹಿಳೆಯರ ಸಾಗಾಟ ಪ್ರಕರಣಕ್ಕೆ ತಿರುವು ; ಮೆಡಿಕಲ್ ಕಾಲೇಜ್‌ಗಳ ಕಳ್ಳಾಟದ ಸತ್ಯ ಬಯಲು ; ಇಲ್ಲಿರೋದು ನಕಲಿ ವೈದ್ಯರಲ್ಲ, ನಕಲಿ ರೋಗಿಗಳು..!

Ad Widget . Ad Widget .

Ad Widget . Ad Widget .

ಮಂಗಳೂರು: ಕೊರೊನಾ ಲಸಿಕೆ ಕೊಡಿಸುವುದಾಗಿ ಹೇಳಿ ರಾತ್ರೋರಾತ್ರಿ ಮಹಿಳೆಯರನ್ನು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಖಾಲಿ ಇರುವ ಬೆಡ್‌ಗಳ ಭರ್ತಿಗಾಗಿ ನಕಲಿ ರೋಗಿಗಳನ್ನು ಕರೆತರುವ ಮೆಡಿಕಲ್ ಕಾಲೇಜ್‌ಗಳ ಕಳ್ಳಾಟದ ಸತ್ಯ ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಇನ್ನೂ ಈ ಘಟನೆ ಮೂಡಬಿದ್ರೆ ತಾಲೂಕಿನ ಕುರ್ನಾಡು ಗ್ರಾಮದಲ್ಲಿ ನಡೆದಿದ್ದು, ಮಂಗಳೂರು ಹೊರವಲಯದ ಕಣಚೂರು ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಕೊಡಿಸುವುದಾಗಿ ಹೇಳಿ ಸುಮಾರು 85 ಮಹಿಳೆಯರನ್ನು ತಡರಾತ್ರಿ ಕಾಲೇಜು ಬಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಪೊಲೀಸರ ತನಿಖೆ ವೇಳೆ ಇದರ ಹಿಂದಿನ ಅಸಲಿ ಕಾರಣ ತಿಳಿದುಬಂದಿದ್ದು, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯ ಮ್ಯಾನೇಜರ್ ನವಾಜ್ ಇದರಲ್ಲಿ ಭಾಗಿಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಕಾಲೇಜಿನ ಬಸ್‌ನಲ್ಲಿ ಎಲ್ಲಾ ಮಹಿಳೆಯರನ್ನು ತಮ್ಮ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ಅನುಮಾನಗೊಂಡು ಪ್ರಶ್ನೆ ಮಾಡಿದಾಗ ತಬ್ಬಿಬ್ಬಾದ ಮ್ಯಾನೇಜರ್ ನವಾಜ್ ಉತ್ತರ ಕೊಡಲು ತಡಬಡಾಯಿಸಿದ್ದಾರೆ. ಅಲ್ಲದೆ ಕೊರೊನಾ ಲಸಿಕೆ ಕೊಡಿಸಲು ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ಇದರಿಂದಾಗಿ ಊರಿನವರಿಗೆ ಮತ್ತಷ್ಟು ಅನುಮಾನ ಮೂಡಿದ್ದು, ತಡರಾತ್ರಿ ಯಾವ ಕೊರೊನಾ ಲಸಿಕೆ ಕೊಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಊರಿನವರ ಪ್ರಶ್ನೆಗಳಿಂದ ಬಸ್ ಚಾಲಕ ಪ್ರವೀಣ್ ಹಾಗೂ ಆಸ್ಪತ್ರೆ ಮ್ಯಾನೇಜರ್ ನವಾಜ್ ಸಂಪೂರ್ಣ ಕಂಗಾಲಾಗಿದ್ದಾರೆ. ನಂತರ ಎಚ್ಚೆತ್ತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಚಾಲಕ ಪ್ರವೀಣ್ ಮತ್ತು ಆಸ್ಪತ್ರೆ ಮ್ಯಾನೇಜರ್ ನವಾಜ್ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಪೊಲೀಸರ ವಿಚಾರಣೆ ವೇಳೆ ಮಹಿಳೆಯರ ಸಾಗಾಟದ ಹಿಂದಿನ ಅಸಲಿಯತ್ತು ಬಯಲಾಗಿದ್ದು, ಎನ್‌ಎಮ್‌ಸಿ (ನ್ಯಾಶನಲ್ ಮೆಡಿಕಲ್ ಕಮಿಷನ್) ವತಿಯಿಂದ ಮೇಲ್ವಿಚಾರಣೆ ಇದ್ದಾಗ ಮೆಡಿಕಲ್ ಕಾಲೇಜುಗಳು ಈ ತೆರನಾದ ಕಳ್ಳಾಟದ ಮೊರೆ ಹೋಗುವುದು ತಿಳಿದುಬಂದಿದೆ. ರೋಗಿಗಳಂತೆ ನಟಿಸಲು ಹೇಳಿ ಮಹಿಳೆಯರ ಸಾಗಾಟ ಮಾಡಲಾಗುತ್ತಿದ್ದು, ಫ್ರೀ ಬೆಡ್‌ಗಳಿಗೆ ಹಣ ಕೊಟ್ಟು ನಕಲಿ ರೋಗಿಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ತನಿಖೆಯ ವೇಳೆ ಸತ್ಯ ಹೊರಬಿದ್ದಿದೆ.

ಪೊಲೀಸರ ತನಿಖೆಯಲ್ಲಿ ಮಾಹಿತಿ ನೀಡುತ್ತಿರುವ ಆಸ್ಪತ್ರೆ ಮ್ಯಾನೇಜರ್ 85 ಮಹಿಳೆಯರ ಸಾಗಾಟಕ್ಕೆ ಕಾರಣವೇನು ಎನ್ನುವುದನ್ನು ತಿಳಿಸುತ್ತಿದ್ದು, ಅವರಿಗೆಲ್ಲಾ ಒಬ್ಬೊಬ್ಬರಿಗೆ ಇಂತಿಷ್ಟು ಎಂದು ಹಣ ಕೊಟ್ಟು ರೋಗಿಗಳಂತೆ ಮಲಗಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಿಸ್ತೃತ ತನಿಖೆಯಾದಲ್ಲಿ ಇನ್ನೂ ಹಲವು ಮೆಡಿಕಲ್ ಕಾಲೇಜುಗಳ ಅಕ್ರಮ ಬಯಲಾಗುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *