Ad Widget .

ನೀವು ಜಿಬಿ ವಾಟ್ಸಪ್ ಬಳಸುತ್ತಿದ್ದೀರಾ? | ಇದು ನಿಮ್ಮ ಅಗತ್ಯ ಮಾಹಿತಿಯನ್ನು ಕದಿಯಬಹುದು ಎಚ್ಚರಿಕೆ

ತಂತ್ರಜ್ಞಾನ ನ್ಯೂಸ್ : ವಾಟ್ಸಾಪ್ ಎಂಬುದು ಜನಸಾಮಾನ್ಯರ ಅತಿ ಅವಶ್ಯಕ ಅಪ್ಲಿಕೇಷನ್ ಆಗಿದೆ. ಸ್ಮಾರ್ಟ್​ಫೋನ್ ಬಳಕೆ ಮಾಡುವ ಪ್ರತಿಯೊಬ್ಬನು ವಾಟ್ಸಪ್ ನ್ನು ಬಳಕೆ ಮಾಡುತ್ತಾನೆ. ಡಿಜಿಟಲ್, ತಂತ್ರಜ್ಞಾನ ಯುಗದ ಅವಿಭಾಜ್ಯ ಅಂಗದಂತೆ ವಾಟ್ಸಾಪ್ ಕಾಣುತ್ತದೆ. ವಾಟ್ಸಾಪ್​ನ ಸಮಾನ ವರ್ಷನ್​ಗಳು ಕೂಡ ಬಿಡುಗಡೆಯಾಗುತ್ತಿರುತ್ತದೆ. ಅದರಲ್ಲಿ ಸದ್ಯ ಸುದ್ದಿಯಲ್ಲಿ ಇರುವುದು ಜಿಬಿ ವಾಟ್ಸಾಪ್ (GB WhatsApp). ಹಲವರು ಇದನ್ನು ವಾಟ್ಸಾಪ್​ನ ಹೊಸ ಅಪ್​ಡೇಟ್ ಎಂದುಕೊಂಡಿದ್ದಾರೆ. ಆದರೆ, ನಿಜವಾಗೂ ಇದು ವಾಟ್ಸಾಪ್​ನ ಅಪ್ಡೇಟ್ ಅಲ್ಲ. ಬದಲಾಗಿ ಸಂಪೂರ್ಣ ಬೇರೆಯದೇ ಅಪ್ಲಿಕೇಷನ್. ಇದನ್ನು ಬಳಕೆ ಮಾಡುವಾಗ ಕೆಲವು ಎಚ್ಚರಿಕೆ ಅನಿವಾರ್ಯ.

Ad Widget . Ad Widget .

ಹಲವು ತಂತ್ರಜ್ಞಾನಗಳನ್ನು ಬಳಕೆ ಮಾಡುವಾಗಲೂ ಇಂತಹ ಎಚ್ಚರಿಕೆ ಅಗತ್ಯವಾಗಿ ಬೇಕಿರುತ್ತದೆ. ಜಿಬಿ ವಾಟ್ಸಾಪ್ ಬಳಕೆಯಲ್ಲಿ ಇರಬೇಕಾದ ಎಚ್ಚರಿಕೆಗಳು ಇಲ್ಲಿ ತಿಳಿದುಕೊಳ್ಳಿ.

Ad Widget . Ad Widget .

ಜಿಬಿ ವಾಟ್ಸಾಪ್ ಬಹುತೇಕ ವಾಟ್ಸಾಪ್ ಅಪ್ಲಿಕೇಷನ್​ನಂತೆಯೇ ಬಳಕೆಯಾಗುತ್ತದೆ. ಇದೊಂದು ಫೋರ್ಕ್ಡ್ ವರ್ಷನ್ ಆಗಿದೆ. ಜಿಬಿ ವಾಟ್ಸಾಪ್ ಕೂಡ ಮೆಸೇಜಿಂಗ್ ಸೌಲಭ್ಯ, ವಿಡಿಯೋ ಕಾಲಿಂಗ್, ಆಡಿಯೋ ಕಾಲಿಂಗ್ ಮಾಡಲು ಅನುವು ಮಾಡಿಕೊಡುತ್ತದೆ. ಆದರೆ, ಇಲ್ಲಿ ವಿಶೇಷ ಎಂದರೆ ಜಿಬಿ ವಾಟ್ಸಾಪ್​ನ್ನು ಬಳಕೆದಾರ ತನ್ನ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು. ರೂಪಿಸಿಕೊಳ್ಳಬಹುದು. ಜೊತೆಗೆ ಮತ್ತೊಂದಿಷ್ಟು ಹೆಚ್ಚುವರಿ ಆಯ್ಕೆಗಳು ಸಿಗಲಿದೆ.

ಜಿಬಿ ವಾಟ್ಸಾಪ್​ನ ಹೆಚ್ಚುವರಿ ಸೌಲಭ್ಯಗಳಿಂದ ಬಳಕೆದಾರರಿಗೆ ಅನುಕೂಲವಾಗಲಿದೆ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ, ಇದರಿಂದ ತೊಂದರೆಯೂ ಬಹಳಷ್ಟಿದೆ. ಬಳಕೆದಾರ ಜಾಗ್ರತೆಯಿಂದ ಇಲ್ಲವಾದಲ್ಲಿ ಕೆಲವು ಸಮಸ್ಯೆಯೂ ಇಲ್ಲಿ ಎದುರಾಗಬಹುದು. ಜಿಬಿ ವಾಟ್ಸಾಪ್ ಸ್ಮಾರ್ಟ್​ಫೋನ್​ನಲ್ಲಿ ಇರುವ ಬಳಕೆದಾರರ ಅಗತ್ಯ ಮಾಹಿತಿಗಳನ್ನು ಕದಿಯಬಹುದು. ಒರಿಜಿನಲ್ ವಾಟ್ಸಾಪ್ ಅಕೌಂಟ್​ನಿಂದ ಬ್ಲಾಕ್ ಕೂಡ ಆಗಬಹುದು.

ಜಿಬಿ ವಾಟ್ಸಾಪ್ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿಲ್ಲ. ಇದನ್ನು ಅಧಿಕೃತ ವೆಬ್​ಸೈಟ್ ಮೂಲಕ ಎಪಿಕೆ ಫೈಲ್​ನಲ್ಲಿ ಡೌನ್​ಲೋಡ್ ಮಾಡಿಕೊಳ್ಳಬಹುದು. ಈ ಅಪ್ಲಿಕೇಷನ್ ಆಂಡ್ರಾಯ್ಡ್ ಹಾಗೂ ಆಪಲ್ ಬಳಕೆದಾರರಿಗೆ ಕೂಡ ಲಭ್ಯವಿದೆ. ಒರಿಜಿನಲ್ ವಾಟ್ಸಾಪ್ ನೀಡದ ಕೆಲವು ಆಯ್ಕೆಗಳನ್ನು ಈ ಅಪ್ಲಿಕೇಷನ್ ನೀಡಿದೆ ಎಂಬ ಒಂದೇ ಕಾರಣಕ್ಕೆ ಇದನ್ನು ಬಳಸಿಕೊಳ್ಳಬಹುದಷ್ಟೆ.

ಅಷ್ಟಾಗಿಯೂ ಇಂತಹ ಬಳಕೆಯಾಗಿ ಸಮಸ್ಯೆ ತಂದೊಡ್ಡಬಹುದು. ವೈರಸ್, ಮಾಲ್ವೇರ್ ಅಟ್ಯಾಕ್ ಕೂಡ ಆಗಬಹುದು.

1 thought on “ನೀವು ಜಿಬಿ ವಾಟ್ಸಪ್ ಬಳಸುತ್ತಿದ್ದೀರಾ? | ಇದು ನಿಮ್ಮ ಅಗತ್ಯ ಮಾಹಿತಿಯನ್ನು ಕದಿಯಬಹುದು ಎಚ್ಚರಿಕೆ”

  1. Pingback: ಹೊಸ ಫೀಚರ್ ಪರಿಚಯಿಸಿದ ವಾಟ್ಸ್’ಆಪ್ | ಮಾಹಿತಿ ತಿಳಿದು ಇಂದೇ ಅಪ್‌ಡೇಟ್ ಮಾಡಿಕೊಳ್ಳಿ – Samagra Samachara

Leave a Comment

Your email address will not be published. Required fields are marked *