ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಸರ್ಕಾರ ಚೀನಾ-ಭಾರತ ಗಡಿಗೆ 50,000 ಸೈನಿಕರನ್ನ ಕಳುಹಿಸಿದೆ. ಅಲ್ಲದೇ ಮೂರು ಫೈಟರ್ ಜೆಟ್ಗಳನ್ನೂ ಸಹ ಮೂರು ಗಡಿ ಪ್ರದೇಶಗಳಿಗೆ ಕಳುಹಿಸಿದೆ ಎನ್ನಲಾಗಿದ್ದು ಸದ್ಯ ಚೀನಾ-ಭಾರತ ಗಡಿಯಲ್ಲಿ ಒಟ್ಟು 2 ಲಕ್ಷ ಟ್ರೂಪ್ಗಳಿವೆ. ಕಳೆದ ವರ್ಷಕ್ಕಿಂತ 40 ಪಟ್ಟು ಹೆಚ್ಚು ಸೈನಿಕರನ್ನ ನಿಯೋಜಿಸಿದಂತಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಹಿಂದೆ ಚೀನಾದಿಂದ ಎದುರಾಗುವ ದಾಳಿಯನ್ನ ತಡೆಯುವಷ್ಟು ಮಾತ್ರವೇ ಸೇನೆಯನ್ನ ನಿಯೋಜಿಸಲಾಗಿತ್ತು. ಇದೀಗ ಚೀನಾದಿಂದ ಎದುರಾಗುವ ಸಂಭಾವ್ಯ ದಾಳಿಯ ವಿರುದ್ಧ ಹೋರಾಡಿ ಅಗತ್ಯ ಬಿದ್ದಲ್ಲಿ ಚೀನಾದೊಳಗಿನ ಪ್ರಾಂತ್ಯವನ್ನೂ ಸೀಜ್ ಮಾಡುವಷ್ಟು ಸೇನೆಯನ್ನ ನಿಯೋಜಿಸಲಾಗಿದೆ ಎಂದು ಸರ್ಕಾರದ ಹಿರಿಯ ನಾಯಕರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಸೈನಿಕರನ್ನಷ್ಟೇ ಅಲ್ಲದೆ ಅತೀ ಎತ್ತರದ ಪ್ರದೇಶಗಳಿಗೆ ಸೈನಿಕರನ್ನ ಕೊಂಡೊಯ್ಯಲು M777 howitzer ನಂತ ಹೆಲಿಕಾಪ್ಟರ್ಗಳನ್ನೂ ಸಹ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ಹೇಳಿವೆ. ಇನ್ನು ಚೀನಾ ಜೊತೆಗೆ ಮಾತುಕತೆ ನಡೆದು ಗಡಿಯಲ್ಲಿ ಶಾಂತಿ ಕಾಪಾಡಲು ಒಪ್ಪಿಕೊಂಡ ಬಳಿಕವೂ ಚೀನಾದ ಸೈನಿಕರು ಗಡಿಭಾಗದಲ್ಲಿ ಹಲವು ಚಟುವಟಿಕೆಗಳನ್ನ ನಡೆಸುತ್ತಿದ್ದಾರೆ ಎಂದು ಆಗಾಗ್ಗೆ ವರದಿಗಳಾಗುತ್ತಿವೆ. ಈ ಮಧ್ಯೆ ಚೀನಾ ತನ್ನ ಗಡಿಪ್ರದೇಶದಲ್ಲಿ ಎಷ್ಟು ಸೈನಿಕರ ನಿಯೋಜನೆ ಮಾಡಿದೆ ಎಂಬುದು ರಹಸ್ಯವಾಗಿ ಉಳಿದಿದ್ದು ಪೀಪಲ್ಸ್ ಲಿಬರೇಷನ್ ಆರ್ಮಿ ಇತ್ತೀಚೆಗೆ ಟಿಬೆಟ್ನಿಂದ ಕ್ಸಿಂಜಿಯಾಂಗ್ ಮಿಲಿಟರಿ ಕಮಾಂಡ್ಗೆ ಹೆಚ್ಚುವರಿ ಸೇನೆ ನಿಯೋಜನೆ ಮಾಡಿದೆ ಎನ್ನಲಾಗಿದೆ.
ಈ ಮಧ್ಯೆ ಚೀನಾ ತನ್ನ ಗಡಿಪ್ರದೇಶದಲ್ಲಿ ಎಷ್ಟು ಸೈನಿಕರ ನಿಯೋಜನೆ ಮಾಡಿದೆ ಎಂಬುದು ರಹಸ್ಯವಾಗಿ ಉಳಿದಿದ್ದು ಪೀಪಲ್ಸ್ ಲಿಬರೇಷನ್ ಆರ್ಮಿ ಇತ್ತೀಚೆಗೆ ಟಿಬೆಟ್ನಿಂದ ಕ್ಸಿಂಜಿಯಾಂಗ್ ಮಿಲಿಟರಿ ಕಮಾಂಡ್ಗೆ ಹೆಚ್ಚುವರಿ ಸೇನೆ ನಿಯೋಜನೆ ಮಾಡಿದೆ ಎನ್ನಲಾಗಿದೆ.