Ad Widget .

ಹೊಸ ಸ್ಮಾರ್ಟ್ಫೋನ್ ರಿಲಯನ್ಸ್, ಗೂಗಲ್‌ನ ಸಹಭಾಗಿತ್ವದಿಂದ ಮಾರುಕಟ್ಟೆಗೆ ಬರಲಿದೆ | ಈ ಬಗ್ಗೆ ತಿಳಿದುಕೊಳ್ಳಿ

ದೆಹಲಿ: ರಿಲಯನ್ಸ್ ಜಿಯೋ ಗೂಗಲ್ ಜೊತೆಗೂಡಿ ಜಿಯೋಫೋನ್ ಒಂದನ್ನು ಮಾರುಕಟ್ಟೆಗೆ ತರಲು ಯೋಜನೆ ಹಾಕಿಕೊಂಡಿದೆ. 4ಜಿ ಸಾಮರ್ಥ್ಯದ ಆ್ಯಡ್ರಾಂಯ್ಡ್ ಫೋನ್‌ನ್ನು ಕೈಗೆಟುಕುವ ದರದಲ್ಲಿ ನೀಡಲು ಯೋಜಿಸಿಕೊಂಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಜಿಯೋಫೋನ್ ನೆಕ್ಸ್ಟ್ ಎಂಬ ಮಾದರಿಯ ಈ ಮೊಬೈಲ್ ಫೋನ್‌ನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ೪೪ನೇ ವಾರ್ಷಿಕ ಜನರಲ್ ಮೀಟಿಂಗ್‌ನಲ್ಲಿ ಗುರುವಾರ ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ಈ ಹೊಸ ಸ್ಮಾರ್ಟ್ಫೋನ್ ರಿಲಯನ್ಸ್ ಜಿಯೋ ಹಾಗೂ ಗೂಗಲ್‌ನ ಸಹಭಾಗಿತ್ವದಿಂದ ಮಾರುಕಟ್ಟೆಗೆ ಬರಲಿದ್ದು ಕಳೆದ ವರ್ಷವೇ ಮುಕೇಶ್ ಅಂಬಾನಿ ಮತ್ತು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಮಾಹಿತಿ ನೀಡಿದ್ದರು.

Ad Widget . Ad Widget . Ad Widget .

ಈ ಸ್ಮಾರ್ಟ್ಫೋನ್ ಹೇಗೆ ಪಡೆಯಬಹುದು? ಬೆಲೆ ಎಷ್ಟು? ಜಿಯೋಫೋನ್ ನೆಕ್ಸ್ಟ್ ಇದರ ಮೊತ್ತ ಭಾರತದಲ್ಲಿ ಎಷ್ಟು ಎಂದು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಸಪ್ಟೆಂಬರ್ ೧೦ರಿಂದ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಲಭ್ಯವಿರುತ್ತದೆ ಹಾಗೂ ಕೈಗೆಟಕುವ ದರದಲ್ಲೇ ಫೋನ್ ಇರಲಿದೆ ಎಂದು ಹೇಳಲಾಗುತ್ತಿದೆ. ರಿಲಯನ್ಸ್ ಜಿಯೋಫೋನ್ ನೆಕ್ಸ್ಟ್ ಆಂಡ್ರಾಯ್ಡ್ ನ ಲೈಟ್ ವರ್ಷನ್‌ನೊಂದಿಗೆ ಬರಲಿದೆ. ಗೂಗಲ್ ಹಾಗೂ ಟಿoಣ not KaiOS ನೊಂದಿಗೆ ಸಿಗಲಿದೆ.

ಈ ಫೋನ್‌ಗಾಗಿ ನಮ್ಮ ತಂಡ ವಿಶೇಷ ಆಂಡ್ರಾಯ್ಡ್ ವರ್ಷನ್ ಒಂದನ್ನು ಸಿದ್ದಪಡಿಸಿದೆ ಎಂದು ಗೂಗಲ್ ಹಾಗೂ ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ಇದು ರಿಲಯನ್ಸ್ ಜಿಯೋನ ಮೊದಲ ಆಂಡ್ರಾಯ್ಡ್ ಫೋನ್ ಆಗಿರಲಿದೆ. ಹಳೆಯ ಜಿಯೋ ಫೋನ್‌ಗಳು KaiOS ಮಾದರಿಯವು ಆಗಿದ್ದವು. ಹಾರ್ಡ್ವೇರ್ ಸೌಲಭ್ಯಗಳು ಏನೇನು? ಜಿಯೋಫೋನ್ ನೆಕ್ಸ್ಟ್ ಎಂಬುದು ಬೇಸಿಕ್ ಹಾರ್ಡ್ವೇರ್ ಸೌಕರ್ಯಗಳೊಂದಿಗೆ ಲಭ್ಯವಾಗಲಿದೆ. ಹಾಗೂ ಈಗಿನ ಆಧುನಿಕ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಸಪೋರ್ಟ್ ಆಗುವುದು ಅನುಮಾನವಾಗಿದೆ.

ಗೂಗಲ್ ಪ್ರತ್ಯೇಕ ಆಂಡ್ರಾಯ್ಡ್ ವರ್ಷನ್ ಮಾಡಿದ್ದು, ಸೀಮಿತ ಹಾರ್ಡ್ವೇರ್ ಸೌಕರ್ಯಗಳಿಗೆ ಅನುಗುಣವಾಗಿ ತಯಾರಿಸಲಾಗಿದೆ. ಜಿಯೋಫೋನ್ ನೆಕ್ಸ್ಟ್ ಟಚ್ ಸ್ಕ್ರೀನ್ ಡಿಸ್‌ಪ್ಲೇ ಸೌಲಭ್ಯದೊಂದಿಗೆ ಬರಲಿದೆ. 5 ಇಂಚುಗಳ ಡಿಸ್‌ಪ್ಲೇ ಇರಲಿದ್ದು, ಆಂಡ್ರಾಯ್ಡ್ ಸ್ಮಾರ್ಟ್ಫೋನ್‌ಗಳ ಸಾಮಾನ್ಯ ಡಿಸೈನ್ ಇರಲಿದೆ. ಬಹುಶಃ ಫೋನ್‌ನಲ್ಲಿ ಒಂದು ಹಿಂಬದಿ ಕ್ಯಾಮರಾ ಇರಲಿದೆ. ಎಲ್‌ಇಡಿ ಫ್ಲಾಶ್ ಲೈಟ್‌ನೊಂದಿಗೆ ಒಂದು ರೇರ್ ಕ್ಯಾಮರಾ ಇರಲಿದೆ. ಜೊತೆಗೆ, ಒಂದು ಸೆಲ್ಫೀ ಕ್ಯಾಮರಾ ಕೂಡ ಇರಲಿದೆ. ಉಳಿದಂತೆ, ವೈಫೈ, ಬ್ಲೂಟೂಥ್‌ನಂತ ವ್ಯವಸ್ಥೆ ಇರಲಿದೆ. ಗೂಗಲ್, ಜಿಯೋ ಸೇವೆಗಳು ಇಷ್ಟೇ ಅಲ್ಲದೆ, ಜಿಯೋಫೋನ್ ನೆಕ್ಸ್ಟ್ಗೆ ಹೊಸ ಆಂಡ್ರಾಯ್ಡ್ ರಿಲೀಸ್‌ಗಳನ್ನು, ಸುರಕ್ಷತಾ ಮಾಹಿತಿಗಳನ್ನು ನೀಡುವುದಾಗಿ ಗೂಗಲ್ ಭರವಸೆ ನೀಡಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಗೂಗಲ್ ಪ್ಲೇ ಪ್ರೊಟೆಕ್ಟ್ ಆಪ್ ಫೋನ್‌ನಲ್ಲಿ ಮೊದಲೇ ಡೌನ್‌ಲೋಡ್ ಆಗಿರಲಿದೆ. ಅಪ್ಲಿಕೇಷನ್ ಕಾರ್ಯನಿರ್ವಹಿಸಲು ಬಳಕೆದಾರರು, ಗೂಗಲ್ ಅಸಿಸ್ಟಂಟ್‌ನ್ನು ಬಳಸಬಹುದಾಗಿದೆ. ಜಿಯೋ ಆ್ಯಪ್ ಕೂಡ ಬಳಸಬಹುದಾಗಿದ್ದು ಹವಾಮಾನ ವರದಿ, ಕ್ರಿಕೆಟ್ ಸ್ಕೋರ್ ಇತ್ಯಾದಿ ಮಾಹಿತಿ ಪಡೆಯಬಹುದಾಗಿದೆ. ಗೂಗಲ್ ಅಸಿಸ್ಟಂಟ್ ಬಳಸಿಕೊಂಡು ಜಿಯೋಸಾವ್ನ್ನಲ್ಲಿ ಹಾಡು ಕೇಳಬಹುದು. ಮೈ ಜಿಯೋ ಮೂಲಕ ಮೊಬೈಲ್ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದಾಗಿದೆ.

Leave a Comment

Your email address will not be published. Required fields are marked *