Ad Widget .

ಗ್ರೂಪ್ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ |ಬಳಕೆದಾರರೇ ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಿ

ಜನಪ್ರಿಯ ಟೆಲಿಗ್ರಾಂ ಅಂತಿಮವಾಗಿ ಗ್ರೂಪ್ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದೀಗ ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಮತ್ತು ಡೆಸ್ಕ್ಟಾಪ್ ಬಳಕೆದಾರರು ಗ್ರೂಪ್ ವಿಡಿಯೋ ಕರೆಯನ್ನು ಮಾಡಬಹುದಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಟೆಲಿಗ್ರಾಂ ಒಂದು ವರ್ಷಗಳ ಹಿಂದೆಯೇ ವಿಡಿಯೋ ಕರೆಯ ಬಗ್ಗೆ ಹೇಳಿಕೊಂಡಿತ್ತು. ಆದರೀಗ ವೈಶಿಷ್ಟ್ಯಯವನ್ನು ಪರಿಚಯಿಸಿದೆ. ಟೆಲಿಗ್ರಾಂ ಬಳಕೆದಾರರು ಆ್ಯಪ್ ಅಪ್‌ಡೇಟ್ ಮಾಡುವ ಮೂಲಕ ನೂತನ ಫೀಚರ್ ಬಳಕೆಗೆ ಸಿಗಲಿದೆ. ಲಂಡನ್ ಮೂಲದ ಟೆಲಿಗ್ರಾಂ ಆ್ಯಪ್‌ನ ಹೊಸ ಕ್ರಮವು ಫೇಸ್‌ಬುಕ್, ವಾಟ್ಸ್ಪ್ ಮತ್ತು ಆ್ಯಪಲ್‌ನ ಫೇಸ್‌ಟೈಂ ಅನ್ನು ತೆಗೆದುಕೊಳ್ಳುತ್ತದೆ.

Ad Widget . Ad Widget . Ad Widget .

ಟೆಲಿಗ್ರಾಂ ಗ್ರೂಪ್ ಕರೆ ಮಾತ್ರವಲ್ಲದೆ, ಇತ್ತೀಚಿನ ಕೆಲವು ಬದಲಾವಣೆಯನ್ನು ತಂದಿದೆ. ಅನಿಮೇಟೆಡ್ ಬ್ಯಾಗ್‌ರೌಂಡ್, ಎಮೋಜಿಗಳನ್ನು ಪರಿಚಯಿಸಿದೆ. ಟೆಲಿಗ್ರಾಂ ಗ್ರೂಪ್ ಆಡಿಯೋ ಸಂಭಾಷಣೆಯನ್ನು ವಿಡಿಯೋ ಕರೆಯಾಗಿ ಪರಿವರ್ತಿಸಲು ಅನುಮತಿಸಿದೆ.

ಡಿಸ್ಪ್ಲೇಯಲ್ಲಿ ಕಾಣುವ ಕ್ಯಾಮೆರಾ ಐಕಾನ್ ಒತ್ತಿದರೆ ಗ್ರೂಪ್ ಕರೆಯಾಗಿ ಮಾರ್ಪಾಡಾಗುತ್ತದೆ. ಜತೆಗೆ ಗ್ರೂಪ್ ಕರೆಯನ್ನು ಪಿನ್ ಮಾಡಬಹುದಾಗಿದೆ. ಸೈಡ್ ಪ್ಯಾನೆಲ್ ತೆರೆಯಬಹುದಾದ ಆಯ್ಕೆಯನ್ನು ನೀಡಿದೆ. ಹಾಗಾಗಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗಿದೆ ಟೆಲಿಗ್ರಾಂ ಆ್ಯಪ್.

ಜತೆಗೆ ಗ್ರೂಪ್ ಕರೆಯನ್ನು ಪಿನ್ ಮಾಡಬಹುದಾಗಿದೆ. ಟೆಲಿಗ್ರಾಂ ಆ್ಯಪ್ ಮೂಲಕ ವಿಡಿಯೋ ಗ್ರಿಡ್ ಸ್ಪ್ಲಿಟ್ ಸ್ಕ್ರೀನ್ ವೀಕ್ಷಣೆ ಮಾಡಬಹುದಾಗಿದೆ. ಜತೆಗೆ ಯಾರೆಲ್ಲಾ ಗ್ರೂಪ್ ಕರೆಯಲ್ಲಿ ಇದ್ದಾರೆ ಎಂದು ಗಮನಿಸಬಹುದಾಗಿದೆ. ಟೆಲಿಗ್ರಾಂ ಗ್ರೂಪ್ ಕರೆ ಭಾವಚಿತ್ರ ಮತ್ತು ಭೂದೃಶ್ಯ ಎರಡಕ್ಕೂ ಹೊಂದಿಕೊಂಡಿದೆ. ಹಾಗಾಗಿ ವಿಡಿಯೋ ಕರೆ ಮಾಡುವ ವ್ಯಕ್ತಿಯ ಯಾವುದೆ ಅಡೆತಡೆಯಿಲ್ಲದೆ ಕರೆ ಮಾಡಬಹುದಾಗಿದೆ.

30 ಜನರು ಏಕಕಾಲದಲ್ಲಿ ಗ್ರೂಪ್ ವಿಡಿಯೋ ಕರೆಯಲ್ಲಿ ಭಾಗವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯದಲ್ಲೇ ಅದಕ್ಕಿಂತ ಹೆಚ್ಚಿನ ಬಳಕೆದಾರರನ್ನು ಬಳಸುವಂತೆ ವೈಶಿಷ್ಟ್ಯವನ್ನು ವೃದ್ಧಿಸಲಿದೆ.

Leave a Comment

Your email address will not be published. Required fields are marked *