Ad Widget .

ಕೊಡಗಿನ ಕಾಡಿನಲ್ಲಿ ನೆಲೆಯೂರಲು ಸಿದ್ಧತೆ ನಡೆಸಿದ್ದ ಐಸಿಸ್ | ರಾಜ್ಯದ ಹಿಂದೂ ಮುಖಂಡರ ಹತ್ಯೆಗೆ ಸಂಚು……!? | ಐಎನ್ಎ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

Ad Widget . Ad Widget .

Ad Widget . Ad Widget .

ಬೆಂಗಳೂರು: ರಾಜ್ಯದ ಹಿಂದೂ ಸಂಘಟನೆಗಳ ಮುಖಂಡರುಗಳ ಹತ್ಯೆಗೆ ಸಂಚು ರೂಪಿಸಿ ಕೊಡಗು ಸಹಿತ ರಾಜ್ಯದ ಕೆಲವು ದಟ್ಟ ಅರಣ್ಯ ಪ್ರದೇಶದಲ್ಲಿ ನೆಲೆಯೂರಲು ಉಗ್ರ ಸಂಘಟನೆಗಳು ಸಿದ್ಧತೆ ನಡೆಸಿದ್ದವು ಎಂಬ ಸ್ಪೋಟಕ ಮಾಹಿತಿ ಬಹಿರಂಗ ಗೊಂಡಿದೆ.

ದಕ್ಷಿಣ ಭಾರತದ ಅರಣ್ಯ ಪ್ರದೇಶಗಳಲ್ಲಿ ಐಸಿಸ್ ಪ್ರೇರಿತ ಅಲ್-ಹಿಂದ್ ಉಗ್ರ ಸಂಘಟನೆಯ ಪ್ರಾಂತ್ಯ ಸ್ಥಾಪಿಸಿ, ಪ್ರತಿ ಪ್ರಾಂತ್ಯದಲ್ಲಿ 50-100 ಉಗ್ರರನ್ನು ಬಿಟ್ಟು ರಾಜ್ಯದಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸುವ ಯೋಜನೆಯಿತ್ತು ಎಂದು ಕೇಂದ್ರ ತನಿಖಾ ದಳ ಐಎನ್ಎ ತಿಳಿಸಿದೆ.

ದಿಲ್ಲಿಯಲ್ಲಿ ಸೆರೆಯಾದ ಉಗ್ರ ಖಾಜಾ ಮೋಹಿದ್ದೀನ್ ಮತ್ತು ಅಲ್-ಹಿಂದ್ ಮುಖ್ಯಸ್ಥ ಮೆಹಬೂಬ್ ಪಾಷ ಅವರನ್ನು ಎನ್ಐಎ ತೀವ್ರ ತನಿಖೆ ನಡೆಸಿದ ಸಂದರ್ಭ, ಕರ್ನಾಟಕದ ಶಿವನಸಮುದ್ರ ಮತ್ತು ಕೊಡಗಿನ ಅರಣ್ಯ ಪ್ರದೇಶಗಳಲ್ಲಿ ಪ್ರಾಂತ್ಯ ಸ್ಥಾಪಿಸಲು ಸ್ಥಳ ನಿಗದಿ ಮಾಡಿದ್ದರು ಎಂಬ ಸ್ಪೋಟಕ ಮಾಹಿತಿ ಬಹಿರಂಗ ಗೊಂಡಿದೆ. ಬಂಧಿತ ಮತ್ತು ಉಗ್ರ ಸಂಘಟನೆಯ ಪ್ರಮುಖರು ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ದಟ್ಟ ಕಾಡುಗಳಿಗೆ ಭೇಟಿ ನೀಡಿ ಸ್ಥಳ ನಿಗಧಿ ಮಾಡಿದ್ದರು. ಬಳಿಕ ಎಲ್ಲಾ ವಿವರಗಳನ್ನು ಐಸಿಸ್ ಮುಖ್ಯಸ್ಥನಿಗೆ ರವಾನೆ ಮಾಡಿದ್ದರು .

ಇನ್ನು ಚೆನ್ನೈಯ ಎನ್‌ಐಎ ಕೋರ್ಟ್‌ಗೆ ರಾಷ್ಟ್ರೀಯ ತನಿಖಾ ದಳ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ತಮಿಳುನಾಡಿನ ಸೈಯದ್‌ ಅಲಿ ಹೆಸರನ್ನು ಉಲ್ಲೇಖೀಸಲಾಗಿದೆ. ಈತ ಐಇಡಿ ತಯಾರಿಕೆ, ಪರೀಕ್ಷೆ ನಡೆಸುತ್ತಿದ್ದ. ಜೊತೆಗೆ ಸಂಘಟನೆಯ ಜತೆ ಡಾರ್ಕ್‌ ವೆಬ್‌ ಮೂಲಕ ಸಂವಹನಕ್ಕೆ ಖಾಜಾ ಮೊಯಿದ್ದೀನ್‌ಗೆ ಸಹಾಯ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ.

ಇದುವರೆಗೆ ಈ ಆರೋಪದ ಮೇಲೆ ಇಪ್ಪತಕ್ಕೂ ಹೆಚ್ಚು ಶಂಕಿತರನ್ನು ಬಂಡಿಸಲಾಗಿದ್ದು, ಅವರು ಗ್ರಾಮೀಣ ಭಾಗದ ಪರಿಚಿತರ ಬಳಿ ದಾಖಲೆ ಸಂಗ್ರಹಿಸಿ ಅಕ್ರಮವಾಗಿ ಸಿಮ್‌ ಕಾರ್ಡ್‌ ಖರೀದಿಸಿದ್ದರು. ಅವುಗಳ ಮೂಲಕ ಕರ್ನಾಟಕ, ತ. ನಾಡು, ಕೇರಳ, ಆಂಧ್ರದಲ್ಲಿ ಸಂಘಟನೆಗೆ ಸದಸ್ಯರ ನೇಮಕಾತಿ, ಸಭೆ ನಡೆಸುತ್ತಿದ್ದರು.

ಕಾಡಿನಲ್ಲಿ ಪ್ರಾಂತ್ಯ ಸ್ಥಾಪನೆಗೆ ಬೇಕಾದ ಶಸ್ತ್ರಾಸ್ತ್ರಗಳು, ಹಣವನ್ನು ಇದೇ ಸಿಮ್‌ಕಾರ್ಡ್‌ಗಳ ಮೂಲಕ ಕೆಲವರನ್ನು ಸಂಪರ್ಕಿಸಿ ಸಂಗ್ರಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಪ್ರಾಂತ್ಯ ಸ್ಥಾಪಿಸಲು ಬೇಕಾಗುವ ಟೆಂಟ್‌ ಟಾರ್ಪಲ್‌, ಶೂಗಳು, ಮದ್ದು ಗುಂಡುಗಳು, ಹೊದಿಕೆಗಳು, ಹಗ್ಗ, ಏಣಿ ಮತ್ತು ಐಇಡಿ ತಯಾರಿಸಲು ಭಾರೀ ಪ್ರಮಾಣದಲ್ಲಿ ಪಟಾಕಿ ಸಂಗ್ರಹಿಸಿದ್ದರು. ತರಬೇತಿಯ ನೀಲನಕ್ಷೆಯನ್ನು ಕೂಡ ಸಿದ್ಧ ಪಡಿಸಲಾಗಿತ್ತು ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *