Ad Widget .

ಈ ತೆಲುಗು ಸಿನಿಮಾಗಾಗಿ ವಿಜಯ್ ದಳಪತಿ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ?

ವಿಜಯ್ ದಳಪತಿ, ತಮಿಳು ಚಿತ್ರರಂಗದ ಸಾಮ್ರಾಟ. ಇವರಿಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ತಮಿಳು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸ್ಟಾರ್​ ಆಗಿ ಮೆರೆಯುತ್ತಿರುವ ಅವರು ಗಮನಾರ್ಹ ಸಿನಿಮಾಗಳನ್ನು ನೀಡುತ್ತ ಬಂದಿದ್ದಾರೆ. ತಮಿಳುನಾಡು ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲೂ ವಿಜಯ್​ ಸಿನಿಮಾಗಳು ಭರ್ಜರಿ ಪ್ರದರ್ಶನ ಕಾಣುತ್ತವೆ. ಸ್ಟಾರ್​ ನಿರ್ದೇಶಕ, ನಿರ್ಮಾಪಕರೆಲ್ಲ ವಿಜಯ್​ ಕಾಲ್​ಶೀಟ್​ಗಾಗಿ ಕಾದು ಕುಳಿತಿರುತ್ತಾರೆ. ಇಷ್ಟು ದಿನ ತಮಿಳುನಲ್ಲಿ ಬ್ಯುಸಿ ಆಗಿದ್ದ ವಿಜಯ್​ ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಆ ಸಿನಿಮಾದಲ್ಲಿ ಅವರು ಪಡೆಯಲಿರುವ ಸಂಭಾವನೆ ಬಗ್ಗೆ ಗುಸುಗುಸು ಕೇಳಿಬರುತ್ತಿದೆ.

Ad Widget . Ad Widget .

2021ರ ಜನವರಿಯಲ್ಲಿ ತೆರೆಕಂಡ ‘ಮಾಸ್ಟರ್’​ ಸಿನಿಮಾದಿಂದ ವಿಜಯ್​ಗೆ ದೊಡ್ಡ ಗೆಲುವು ಸಿಕ್ಕಿತು. ಸದ್ಯ ಅವರು ತಮ್ಮ 65ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಆ ಚಿತ್ರದ ಕೆಲಸಗಳು ಪ್ರಗತಿಯಲ್ಲಿ ಇರುವಾಗಲೇ 66ನೇ ಸಿನಿಮಾ ಬಗ್ಗೆ ಒಂದಕ್ಕಿಂತ ಒಂದು ಅಚ್ಚರಿಯ ಸುದ್ದಿ ಕೇಳಿಬರುತ್ತಿದೆ. ಅವರ 66ನೇ ಚಿತ್ರಕ್ಕೆ ಟಾಲಿವುಡ್​ನ ಖ್ಯಾತ ನಿರ್ಮಾಪಕ ದಿಲ್​ ರಾಜು ಬಂಡವಾಳ ಹೂಡಲಿದ್ದಾರೆ. ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ವಿಜಯ್​ಗೆ ಅವರು ಬರೋಬ್ಬರಿ 100 ಕೋಟಿ ರೂ. ಸಂಭಾವನೆ ಕೊಡಲು ಸಿದ್ಧರಿದ್ದಾರಂತೆ!

Ad Widget . Ad Widget .

ಇದೇ ಮೊದಲ ಬಾರಿಗೆ ಟಾಲಿವುಡ್​ಗೆ ವಿಜಯ್​ ಕಾಲಿಡುತ್ತಿರುವುದರಿಂದ ಸಹಜವಾಗಿಯೇ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ತೆಲುಗಿನ ಜೊತೆ ತಮಿಳಿನಲ್ಲಿಯೂ ಈ ಚಿತ್ರ ಸಿದ್ಧವಾಗಲಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಡಬ್​ ಮಾಡಿ ಬಿಡುಗಡೆ ಮಾಡುವ ಆಲೋಚನೆ ಕೂಡ ನಿರ್ಮಾಪಕರಿಗೆ ಇದೆ. ತೆಲುಗಿನ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿಲಿದ್ದಾರೆ. 100 ಕೋಟಿ ರೂ. ಸಂಭಾವನೆಯಲ್ಲಿ ಈಗಾಗಲೇ ಮುಂಗಡವಾಗಿ 10 ಕೋಟಿ ರೂ.ಗಳನ್ನು ವಿಜಯ್​ಗೆ ನೀಡಲಾಗಿದೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಸಿನಿಮಾ ಸೆಟ್ಟೇರಿದ ಬಳಿಕ ಇನ್ನುಳಿದ ಮೊತ್ತವನ್ನು ನೀಡಲಾಗುವುದು ಎಂಬ ಸುದ್ದಿ ಟಾಲಿವುಡ್​ ಅಂಗಳಲ್ಲಿ ಹರಿದಾಡುತ್ತಿದೆ.

Leave a Comment

Your email address will not be published. Required fields are marked *