Ad Widget .

ಪ್ರವಾಸಿಗರಿಗೆ ಶಾಕ್ ನೀಡಿದ ಗೋವಾ ಸರಕಾರ

ಪಣಜಿ: ಭಾರತದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಗೋವಾ ಬಲು ಫೇಮಸ್. ಭಾರತೀಯರಲ್ಲದೆ ವಿದೇಶಿ ಪ್ರವಾಸಿಗರಿಗೂ ಗೋವಾ ಟ್ರಿಪ್ ಡ್ರೀಮ್ ಟ್ರಿಪ್. ಆಧುನಿಕ ಸಮಾಜದ ಯುವಜನರಿಗಂತು ಗೋವಾ ವೇ ಸ್ವರ್ಗ. ಆದರೆ ಇದೀಗ ಕೋವಿಡ್ ಎರಡನೇ ಅಲೆ ಬಳಿಕ ಗೋವಾ ಬೀಚ್ ರಿಓಪನ್ ಖುಷಿಯಲ್ಲಿದ್ದ ಪ್ರವಾಸಿಗರಿಗೆ ಅಲ್ಲಿನ ರಾಜ್ಯ ಸರ್ಕಾರ ಶಾಕ್ ನೀಡಿದೆ.

Ad Widget . Ad Widget .

ರಾಜ್ಯದಲ್ಲಿ ಕಟ್ಟನಿಟ್ಟಿನ ಮಾರ್ಗಸೂಚಿಯನ್ನು ಜಾರಿಗೆ ತರಲಾಗಿದೆ. ಎಲ್ಲರಿಗೂ ಕೊರೊನಾ ಲಸಿಕೆಯನ್ನು ನೀಡದೇ ಪ್ರವಾಸೋದ್ಯಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

Ad Widget . Ad Widget .

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 30ರೊಳಗೆ ಶೇ.100ರಷ್ಟು ಕೊರೊನಾ ವ್ಯಾಕ್ಸಿನ್ ಮೊದಲ ಡೋಸ್ ನನ್ನು ರಾಜ್ಯವ್ಯಾಪಿ ನೀಡುವ ಗುರಿಯನ್ನು ಗೋವಾ ಸರ್ಕಾರ ಹೊಂದಿದೆ. ಮೊದಲ ಡೋಸ್ ವ್ಯಾಕ್ಸಿನೇಷನ್‌ನನ್ನು ರಾಜ್ಯದಲ್ಲಿ ಪೂರ್ಣಗೊಳಿಸುವವರೆಗೆ ಪ್ರವಾಸೋದ್ಯಮವನ್ನು ಆರಂಭಿಸುವ ಯಾವುದೇ ಯೋಜನೆ ಇಲ್ಲ. ಜುಲೈ 30ರೊಳಗೆ ಅದನ್ನು ಪೂರ್ಣಗೊಳಿಸುವುದು ನಮ್ಮ ಗುರಿ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *