Ad Widget .

ದ್ವಾದಶ ರಾಶಿಗಳ ವಾರ ಭವಿಷ್ಯ

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

Ad Widget . Ad Widget .

ಭೂಮಿಯ ವ್ಯವಹಾರಗಳಲ್ಲಿ ಮಧ್ಯವರ್ತಿ ಕೆಲಸ ಮಾಡುವವರಿಗೆ ಹೆಚ್ಚಿನ ಆದಾಯ ಬರುತ್ತದೆ. ಸಹೋದರರಿಂದ ಕೆಲಸಗಳಿಗೆ ಸಹಾಯ ದೊರಕುತ್ತದೆ. ವೃತ್ತಿ ಮತ್ತು ಅನುಭವದ ಫಲದಿಂದ ಉದ್ಯೋಗದಲ್ಲಿ ಹೆಚ್ಚಿನ ಮನ್ನಣೆ ದೊರೆಯುತ್ತದೆ. ಮಹಿಳೆಯರಿಗೆ ಸಾಮಾಜಿಕವಾಗಿ ಸ್ಥಾನಮಾನಗಳು ದೊರೆಯುತ್ತವೆ. ಭಾಷಣಕಾರರಿಗೆ ಉತ್ತಮ ಮಾತಿನಿಂದ ಗೌರವ ದೊರೆಯುತ್ತದೆ. ವ್ಯವಹಾರದಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ಉತ್ತಮ. ರಾಜಕೀಯ ವ್ಯಕ್ತಿಗಳಿಗೆ ಬಯಸುತ್ತಿದ್ದ ಸ್ಥಾನಮಾನಗಳು ದೊರೆಯುತ್ತವೆ. ಹಣದ ಹರಿವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ವೃತ್ತಿಯಲ್ಲಿ ಒತ್ತಡಗಳು ಬರಬಹುದು

Ad Widget . Ad Widget .

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಸಾಂಸಾರಿಕ ಬದುಕಿನಲ್ಲಿ ಸಂತೋಷವಿರುತ್ತದೆ. ಆಕಸ್ಮಿಕ ಧನಲಾಭ ಕಂಡುಬರುತ್ತಿದೆ, ಜೊತೆಗೆ ಸಮಾಧಾನಕರವಾದಷ್ಟು ಹಣದ ಒಳಹರಿವು ಇದ್ದೇ ಇರುತ್ತದೆ. ಆತ್ಮೀಯರಿಂದ ಸಹಕಾರ ದೊರೆತು ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತವೆ. ವೃತ್ತಿಯಲ್ಲಿನ ನಿಮ್ಮ ಸಮಸ್ಯೆಗಳನ್ನು ತಾಳ್ಮೆ ಮತ್ತು ಸಮಾಧಾನವಾಗಿ ಆಲೋಚಿಸಿದಲ್ಲಿ ಪರಿಹಾರ ದೊರೆಯುತ್ತದೆ. ಸರ್ಕಾರದ ಕಡೆಯಿಂದ ನಿಂತಿದ್ದ ಕೆಲಸಗಳು ಪುನಃ ಆರಂಭವಾಗುತ್ತದೆ. ಸಾಮಾಜಿಕ ಕಾರ್ಯಗಳನ್ನು ಮಾಡುವವರಿಗೆ ಸಂಘ-ಸಂಸ್ಥೆಗಳಿಂದ ಸಹಾಯ ದೊರೆಯುತ್ತದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಅತ್ಯಂತ ಧೈರ್ಯ ಮತ್ತು ಮುನ್ನುಗ್ಗುವಿಕೆಯಿಂದ ಕೆಲಸ ಕಾರ್ಯಗಳನ್ನು ಮಾಡಲು ಉತ್ಸುಕರಾಗುವಿರಿ. ರೈತರಿಗೆ ಅವರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುವುದು. ಆಸೆಪಟ್ಟ ಜಾಗವನ್ನು ಖರೀದಿಸಲು ಮುಂದಾಗುವಿರಿ. ಹಿರಿಯರ ಆಸ್ತಿಗಳನ್ನು ಮಾತನಾಡಿ ಖರೀದಿಸಬಹುದು. ಉದ್ಯೋಗದಲ್ಲಿ ಪ್ರಗತಿ ಇರುತ್ತದೆ. ಕ್ರೀಡಾಪಟುಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ನ್ಯಾಯಾಲಯದಲ್ಲಿನ ಕೆಲಸ ಕಾರ್ಯಗಳು ನಿಧಾನವಾಗಿ ನಡೆಯುವ ಸಾಧ್ಯತೆಗಳಿವೆ. ಕೆಲವು ಮಹಿಳೆಯರಿಗೆ ರಾಜಕೀಯದಲ್ಲಿ ಯಶಸ್ಸು ದೊರೆತು ಮೇಲ್ದರ್ಜೆಗೆ ಏರುವ ಸಾಧ್ಯತೆಗಳಿವೆ. ಚಿನ್ನಾಭರಣಗಳನ್ನು ಮಾರುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಸರ್ಕಾರಿ ಕೆಲಸಗಳಲ್ಲಿ ಯಶಸ್ಸನ್ನು ಕಾಣಬಹುದು. ಹೊಸದಾಗಿ ಆರಂಭಿಸಿದ ವ್ಯವಹಾರಗಳಲ್ಲಿ ನಿಧಾನವಾಗಿ ಏರಿಕೆಯನ್ನು ಕಾಣಬಹುದು. ಸೌಂದರ್ಯವರ್ಧಕಗಳನ್ನು ತಯಾರಿಸುವವರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಸುವಾಸನೆಯ ತೈಲಗಳನ್ನು ಮಾರುವವರ ವ್ಯಾಪಾರ ಹೆಚ್ಚಾಗಿ ಲಾಭ ಹೆಚ್ಚುತ್ತದೆ. ಆಸ್ತಿಯನ್ನು ಕೊಳ್ಳಲು ಈಗ ಸಕಾಲವಲ್ಲ. ವೃತ್ತಿಯಲ್ಲಿ ಅಧಿಕಾರಿಗಳಿಂದ ಕಾರ್ಯದೊತ್ತಡ ಜಾಸ್ತಿಯಾಗಬಹುದು. ಸಣ್ಣ ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿನ್ನಡೆಯನ್ನು ಕಾಣಬಹುದು. ಕಲಾವಿದರಿಗೆ ಸಮಾಧಾನಕರ ಜೀವನವಿರುತ್ತದೆ. ಕೆಲಸದ ಒತ್ತಡದ ನಡುವೆಯೂ ಸಮಾಧಾನಕರವಾದ ಬೆಳವಣಿಗೆ ಇರುತ್ತದೆ. ವಿದೇಶಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಹೊಸ ರೀತಿಯ ವ್ಯವಹಾರ ವಿಸ್ತರಿಸುತ್ತದೆ.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಯಂತ್ರಾಗಾರಗಳ ವಿನ್ಯಾಸಕಾರರಿಗೆ ಬೇಡಿಕೆ ಹೆಚ್ಚಾಗಿ ಆದಾಯವೂ ಸಹ ವೃದ್ಧಿಸುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಾಸ್ತುತಜ್ಞರು ಮತ್ತು ಒಳಾಂಗಣ ವಿನ್ಯಾಸಕಾರರಿಗೆ ಕೈತುಂಬಾ ಕೆಲಸವಿರುತ್ತದೆ. ಮನೆ ಕಟ್ಟುತ್ತಿರುವವರು ತಮ್ಮ ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ವೆಚ್ಚಕ್ಕೆ ಕೈಹಾಕುವ ಆತುರ ತೋರಬೇಡಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಮೂಡುತ್ತದೆ. ಬಂಧುಗಳ ನಡುವೆ ಹಣದ ವಿಚಾರದಲ್ಲಿ ಜಿಜ್ಞಾಸೆ ಮೂಡಬಹುದು. ಪಿತ್ರಾರ್ಜಿತ ಆಸ್ತಿಗಾಗಿ ಕಾಯುತ್ತಿರುವವರಿಗೆ ಆಸ್ತಿ ಒದಗಬಹುದು. ನಿಂತಿದ್ದ ವಿದ್ಯೆಗಳನ್ನು ಈಗ ಮುಂದುವರೆಸಬಹುದು. ಸ್ತ್ರೀಯರ ಕೇಶಾಲಂಕಾರ ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಮನಸ್ಸಿನಲ್ಲಿ ಗೊಂದಲದ ವಾತಾವರಣವಿರಲಿದ್ದು ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂಜರಿಕೆ ಇರುತ್ತದೆ. ಭೂಮಿಯ ವ್ಯವಹಾರಗಳಲ್ಲಿ ತಕ್ಕಮಟ್ಟಿನ ಯಶಸ್ಸು ಇರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಸೌಕರ್ಯಗಳು ಒದಗಿಬರುತ್ತದೆ. ದೈನಂದಿನ ಕೆಲಸಗಳಲ್ಲಿ ನಿಮಗೆ ಉತ್ಸಾಹ ಹೆಚ್ಚಾಗುತ್ತದೆ. ವ್ಯಾಪಾರ ಕ್ಷೇತ್ರಗಳಲ್ಲಿ ಸಾಮಾನ್ಯ ಪ್ರಗತಿ ಇರುತ್ತದೆ. ವಿದೇಶಾಂಗ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರ ಸ್ಥಾನಮಾನಗಳು ಹೆಚ್ಚಾಗುತ್ತದೆ. ಜಂಜಾಟದ ಪರಿಸ್ಥಿತಿ ನಿವಾರಣೆಯಾಗಿ ಹೊಸ ಚುರುಕುತನ ವಾರಾಂತ್ಯಕ್ಕೆ ಮೈಗೂಡುತ್ತದೆ. ಹೈನುಗಾರಿಕೆಯನ್ನು ಮಾಡುವವರ ಆದಾಯದಲ್ಲಿ ಏರಿಕೆ ಕಾಣಬಹುದು. ಮಕ್ಕಳ ದುಂದುವೆಚ್ಚಕ್ಕಾಗಿ ಹಣ ಹೊಂದಿಸಬೇಕಾದ ಅನಿವಾರ್ಯತೆ ಇರುತ್ತದೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಕೃಷಿ ಭೂಮಿಯ ತಗಾದೆಗಳು ಮಾತುಕತೆಯ ಮೂಲಕ ಬಗೆಹರಿಯುತ್ತವೆ. ದಾಂಪತ್ಯ ಜೀವನದಲ್ಲಿ ನಿಷ್ಟೂರಗಳು ಬರಬಹುದು. ನಿಮ್ಮ ಆಪ್ತಸ್ನೇಹಿತರಲ್ಲಿ ಹೊಸ ಹಿತಶತ್ರುಗಳು ಹುಟ್ಟಿಕೊಳ್ಳಬಹುದು. ಹೆಚ್ಚಿನ ಯಶಸ್ಸಿಗಾಗಿ ವಿದ್ಯಾರ್ಥಿಗಳು ಶ್ರಮ ಪಡಲೇಬೇಕು. ಒಂದೆಡೆ ಸಾಲ ಪಡೆದು ಉಳಿಕೆ ಸಾಲಗಳನ್ನು ತೀರಿಸಿಕೊಳ್ಳಬಹುದು. ಮಕ್ಕಳಿಂದ ನಿಮಗೆ ಯೋಗ್ಯ ಗೌರವ ದೊರೆಯುತ್ತದೆ. ಬಾಲ್ಯಸ್ನೇಹಿತರು ಅನಿರೀಕ್ಷಿತವಾಗಿ ದೊರೆತು ನಿಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಿರಿ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಹಿನ್ನಡೆಯನ್ನು ಕಾಣಬಹುದು. ಅಗತ್ಯಕ್ಕೆ ತಕ್ಕಷ್ಟು ಹಣದ ಹರಿವಿರುತ್ತದೆ. ಕೃಷಿ ಸಂಬಂಧಿ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯಾಪಾರ ಹೆಚ್ಚುತ್ತದೆ. ಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ಇರಲಿ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ಹಮ್ಮಿಕೊಂಡ ಕೆಲಸಗಳಲ್ಲಿ ಹಲವು ಸಾಧನೆಗಳಾಗುತ್ತವೆ. ಕಾರ್ಖಾನೆಯ ಕೆಲಸಗಾರರಿಗೆ ಸಿಗಬೇಕಾದ ಸವಲತ್ತುಗಳು ಸಿಗುತ್ತವೆ. ಕಬ್ಬಿಣದ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರ ಇರಲಿ. ಸರ್ಕಾರಿ ಸಂಸ್ಥೆಗಳಿಗೆ ಜೊತೆ ವ್ಯಾಪಾರ ಮಾಡುವವರ ಲಾಭ ಹೆಚ್ಚುತ್ತದೆ. ಸಾಮರಸ್ಯದಿಂದ ಉದ್ಯೋಗಿಗಳೊಡನೆ ಸಂಬಂಧ ಹೆಚ್ಚಿಸಿಕೊಳ್ಳುವುದು ಉತ್ತಮ. ನಿಂತಿದ್ದ ಯಂತ್ರೋಪಕರಣಗಳನ್ನು ಈಗ ದುರಸ್ತಿ ಮಾಡಿಸಿ ಆದಾಯಗಳಿಸಬಹುದು. ನಿಮ್ಮ ವೈಯಕ್ತಿಕ ಕೆಲಸಗಳು ಸಮರ್ಪಕವಾಗಿ ನಡೆಯುತ್ತವೆ. ಆದರೆ ಯಾವುದೇ ವಿಚಾರದಲ್ಲಿ ಹಗಲು ಕನಸು ಕಾಣುವುದು ಬೇಡ. ವೈರಿಗಳನ್ನು ಮಟ್ಟಹಾಕಲು ನೀವು ಅನುಸರಿಸುವ ತಂತ್ರಗಳು ಫಲ ಕೊಡುತ್ತದೆ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1)

ತೈಲ ವ್ಯಾಪಾರಿಗಳಿಗೆ ಆದಾಯ ಹೆಚ್ಚುತ್ತದೆ ಮತ್ತು ಹೊಸ ಶಾಖೆಗಳನ್ನು ತೆರೆಯುವ ಯೋಗವಿದೆ. ಸರ್ಕಾರಿ ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಸಕಾಲಿಕ ನೆರವಿನಿಂದ ಉದ್ಯೋಗದಲ್ಲಿ ಅಭಿವೃದ್ಧಿ ಇರುತ್ತದೆ. ಹಣದ ಒಳಹರಿವು ಸ್ವಲ್ಪ ಕಡಿಮೆ ಇರುತ್ತದೆ. ಆದ್ದರಿಂದ ಖರ್ಚಿಗೆ ಕಡಿವಾಣ ಹಾಕಿರಿ. ಬಹಳ ಕಾಲದಿಂದ ಆಶಿಸುತ್ತಿದ್ದ ಒಂದು ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ. ಹಿರಿಯರಿಗೆ ಆರೋಗ್ಯದ ವಿಚಾರದಲ್ಲಿ ಸುಧಾರಣೆ ಇರುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಈಗ ವ್ಯಾಪಾರ ವೃದ್ಧಿಸುತ್ತದೆ. ಅದಿರು ವ್ಯಾಪಾರ ಮಾಡುವ ಕಂಪನಿಗಳ ವ್ಯವಹಾರಗಳು ವಿಸ್ತರಣೆಯಾಗುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ರಾಜಕಾರಣಿಗಳಿಗೆ ಸ್ವಲ್ಪ ಒತ್ತಡದ ಸಂದರ್ಭವಿದೆ. ಉನ್ನತ ಸ್ಥಾನಕ್ಕಾಗಿ ಒಳಗೊಳಗೆ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ. ನಿಮ್ಮ ಅಪೇಕ್ಷೆಗೆ ತಕ್ಕಂತೆ ಹಣದ ಒಳಹರಿವು ಇರುತ್ತದೆ. ವೃತ್ತಿಯಲ್ಲಿ ನಿಮ್ಮ ಶತ್ರುಗಳ ಹಿನ್ನಡೆಯನ್ನು ಕಂಡು ಸಂತೋಷಪಡುವಿರಿ. ಮಕ್ಕಳ ಪ್ರಗತಿಯಿಂದಾಗಿ ಮನೆಯಲ್ಲಿ ಸಂತಸ ಕಂಡುಬರುತ್ತದೆ. ದೂರ ಪ್ರಯಾಣದಿಂದ ಸ್ತ್ರೀಯರಿಗೆ ಸ್ವಲ್ಪ ಮಟ್ಟಿಗೆ ಆರೋಗ್ಯ ಕೆಡಬಹುದು. ಎಂತಹುದೇ ಕಷ್ಟಗಳು ಬಂದರೂ ಅದನ್ನು ಜಾಣ್ಮೆಯಿಂದ ಎದುರಿಸುವ ಚಾಲಾಕಿ ತನ ನಿಮ್ಮದಾಗಿರುತ್ತದೆ. ರಾಸಾಯನಿಕ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರ ಹೆಚ್ಚಾಗುತ್ತದೆ. ಹೊಸ ವ್ಯವಹಾರಗಳಲ್ಲಿ ಆಸಕ್ತಿ ಮೂಡಿ ಅದರಲ್ಲಿ ಪಾಲ್ಗೊಳ್ಳುವಿರಿ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ವೈದ್ಯರಿಗೆ ಬಿಡುವಿಲ್ಲದ ಕೆಲಸವಿರುತ್ತದೆ ಹಾಗೆಯೇ ಸಂಪಾದನೆಯೂ ಹೆಚ್ಚುತ್ತದೆ. ಔಷಧಿ ತಯಾರಿಕಾ ಕಂಪನಿಗಳಿಗೆ ಉತ್ಪಾದನೆ ಹೆಚ್ಚಾಗಿ ಲಾಭಾಂಶವು ಹೆಚ್ಚುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಸೂಕ್ತ ಸೌಲಭ್ಯಗಳು ಹಾಗೂ ವಿದ್ಯಾರ್ಥಿವೇತನಗಳು ದೊರಕುತ್ತವೆ. ಮಹಿಳೆಯರಿಗೆ ಸಾಮಾಜಿಕ ಗೌರವಗಳು ದೊರೆಯುತ್ತವೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು. ಯುವಕರಿಗೆ ಉದ್ಯೋಗದಲ್ಲಿ ವೇತನ ಕಡಿಮೆಯಾಗಬಹುದು. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರವಿರಲಿ. ಸಂಗಾತಿಗೆ ಹಿರಿಯರ ಕಡೆಯಿಂದ ಉಡುಗೊರೆಗಳು ಬರಬಹುದು.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಮಹಿಳೆಯರ ಆಕಾಂಕ್ಷೆಗಳಿಗೆ ಮನೆಯಿಂದ ಪ್ರೋತ್ಸಾಹ ದೊರೆಯುತ್ತದೆ. ನೈಪುಣ್ಯತೆಯಿಂದ ಕಾರ್ಯವನ್ನು ಸಾಧಿಸಿ ಜನರಿಂದ ಮೆಚ್ಚುಗೆ ಪಡೆಯುವಿರಿ. ವೃತ್ತಿಯಲ್ಲಿ ಸ್ನೇಹಿತರ ಸಕಾಲಿಕ ಸಲಹೆಯಿಂದಾಗಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳುವಿರಿ. ವ್ಯವಹಾರದಲ್ಲಿ ತಿರುಗಾಟದಿಂದ ಒತ್ತಡಗಳು ಜಾಸ್ತಿಯಾದರೂ ನಿಭಾಯಿಸಿ ವ್ಯವಹಾರದಲ್ಲಿ ಲಾಭ ಕಾಣುವಿರಿ. ರಾಜಕೀಯ ಪ್ರವೇಶ ಮಾಡಬೇಕೆಂದು ಯೋಚಿಸುತ್ತಿರುವವರಿಗೂ ಸ್ವಲ್ಪ ಯಶಸ್ಸು ಇರುತ್ತದೆ. ಇವರಿಗೆ ಹಿರಿಯ ರಾಜಕಾರಣಿಗಳು ಸಹಾಯ ಮಾಡುವವರು. ಹಣದ ಒಳಹರಿವು ಸಮಾಧಾನಕರವಾಗಿರುತ್ತದೆ. ಆಸ್ತಿ ಕೊಳ್ಳಬೇಕೆಂಬ ನಿಮ್ಮ ಆಸೆಯೂ ಈಡೇರುವ ಕಾಲ. ರಕ್ತ ಸಂಬಂಧಿ ಕಾಯಿಲೆಗಳು ಇರುವವರು ಎಚ್ಚರ ವಹಿಸಿರಿ.

Leave a Comment

Your email address will not be published. Required fields are marked *