ರಸ್ತೆ ಅಪಘಾತ, ನಟ ಸಂಚಾರಿ ವಿಜಯ್ ಗಂಭೀರ

ಬೆಂಗಳೂರು: ರಸ್ತೆ ಅಪಘಾತದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಗಂಭೀರವಾಗಿ ಗಾಯಗೊಂಡಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಟ ವಿಜಯ್‌ ನಿನ್ನೆ ರಾತ್ರಿ ತನ್ನ ಸ್ನೇಹಿತನೊಂದಿಗೆ ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ವಿಜಯ್ ಅವ್ರ ಮೆದುಳಿನ ಬಲಭಾಗದಲ್ಲಿ ಹಾಗೂ ತೊಡೆಗೆ ತೀವ್ರ ಗಾಯವಾಗಿದೆ. ಹಾಗಾಗಿ ರಾತ್ರಿಯೇ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎನ್ನಲಾಗ್ತಿದೆ.
ಚಿಕಿತ್ಸೆ ನೀಡಿದ ವೈದ್ಯರಾದ ನ್ಯೂರೋ ಸರ್ಜನ್ ಡಾ.ಅನಿಲ್​ ಕುಮಾರ್ ಅವ್ರು ಹೇಳುವಂತೆ, ‘ಅಪಘಾತವಾದ ಕೂಡಲೇ ಅಪೋಲೊ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ, ಆಸ್ಪತ್ರೆಗೆ ತಂದಾಗಲೇ ಅವರ ಸ್ಥಿತಿ ಗಂಭೀರವಾಗಿದ್ದು, ಸ್ಕ್ಯಾನ್​ ಮಾಡಿದಾಗ ಮೆದುಳಿನ ಬಲಭಾಗದಲ್ಲಿ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ, ಅವರಿಗೆ ಮೆದುಳಿನ ಆಪರೇಷನ್ ನೆರವೇರಿಸಲಾಗಿದೆ. ಇನ್ನು ತೊಡೆ ಮೂಳೆಯ ಶಸ್ತ್ರ ಚಿಕಿತ್ಸೆ ಕೂಡ ನಡೆಸಬೇಕಿದೆ. ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಮುಂದಿನ 48 ಗಂಟೆಗಳು ಅತ್ಯಂತ ಮುಖ್ಯವಾಗಿದೆ’ ಎಂದಿದ್ದಾರೆ.

Ad Widget ... ..

Leave a Comment

Your email address will not be published. Required fields are marked *