Ad Widget .

ಆದಾಯ ತೆರಿಗೆ ಪಾವತಿದಾರರೇ ಇಲ್ಲಿ ಕೇಳಿ | ನಿಮಗೆ ಗೊತ್ತಿರಲಿ ಈ ೬ ವೈಶಿಷ್ಟ್ಯಗಳು

ನವದೆಹಲಿ: ಆದಾಯ ತೆರಿಗೆ ಇಲಾಖೆಯಿಂದ ಹೊಸ ಇ- ಫೈಲಿಂಗ್ ವೆಬ್ಸೈಟ್ incometax.gov.in – ಇಂದಿನಿOದ (ಜೂನ್ ೭, ೨೦೨೧) ಆರಂಭವಾಗಲಿದೆ. ಎಲ್ಲ ಬಗೆಯಲ್ಲೂ ಹೊಸದಾದ ಮೊಬೈಲ್ ಆ್ಯಪ್, ಪ್ರೀ ಫಿಲ್ಡ್ (ಅದಾಗಲೇ ಭರ್ತಿ ಮಾಡಿದ) ಆದಾಯ ತೆರಿಗೆ ಮಾಹಿತಿ, ಐಟಿಆರ್ ಫಾರ್ಮ್ ಮತ್ತು ಸರಳ ಆದಾಯ ತೆರಿಗೆ ವ್ಯವಸ್ಥೆ ಇವೆಲ್ಲವೂ ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿದೆ. ಇ- ಫೈಲಿಂಗ್ ಪೋರ್ಟಲ್ ೨.೦ ಮೂಲಕ ತೆರಿಗೆ ಪಾವತಿದಾರರಿಗೆ ಆಧುನಿಕವಾದ, ಅಡೆತಡೆ ಇಲ್ಲದಂಥ ಅನುಭವವನ್ನು ದೊರಕಿಸುತ್ತದೆ. ಹಲವು ಬಗೆಯಲ್ಲಿ ತಾಂತ್ರಿಕ ವೈಶಿಷ್ಟ್ಯಗಳನ್ನು ಸಹ ಈ ಪೋರ್ಟಲ್ ಹೊಂದಿದೆ. ಆದಾಯ ತೆರಿಗೆ ಇಲಾಖೆಯು ಈ ವೆಬ್‌ಸೈಟ್ ಅನ್ನು ಐಟಿಆರ್ ಫೈಲಿಂಗ್‌ಗೆ ಮತ್ತು ಆದಾಯ ತೆರಿಗೆ ಪಾವತಿದಾರರ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ, ಅಸೆಸ್‌ಮೆಂಟ್‌ಗಳಿಗೆ, ಮನವಿಗೆ, ದಂಡದಿOದ ವಿನಾಯಿತಿ ಮನವಿ ಸಲ್ಲಿಸುವುದಕ್ಕೆ ಅಂತ ಬಳಸುತ್ತದೆ. ಇಷ್ಟು ಮಾತ್ರವಲ್ಲದೆ, ಹೊಸ ಇ- ಫೈಲಿಂಗ್ ಪೋರ್ಟಲ್‌ನಿಂದ ಈ ೬ ಫೀಚರ್‌ಗಳು ದೊರೆಯಲಿವೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಶೀಘ್ರ ರೀಫಂಡ್:
ಆದಾಯ ತೆಇಗೆದಾರರಿಗೆ ತಕ್ಷಣ ರೀಫಂಡ್ ಪ್ರೊಸೆಸ್ ಆಗುವಂತೆ ಇನ್ ಕಮ್ ಟ್ಯಾಕ್ಸ್ ರಿಟರ್ನ್ಸ್ (ಐಟಿಆರ್) ಜತೆಗೆ ಹೊಸ ಇ- ಫೈಲಿಂಗ್ ಪೋರ್ಟಲ್ ಅನ್ನು ಇಂಟಿಗ್ರೇಟ್ ಮಾಡಲಾಗಿದೆ. ಇದರಿಂದಾಗಿ ತೆರಿಗೆ ಪಾವತಿದಾರರಿಗೆ ಶೀಘ್ರವಾಗಿ ರೀಫಂಡ್ ದೊರೆಯುತ್ತದೆ.

Ad Widget . Ad Widget . Ad Widget .

ಮೊಬೈಲ್ ಅಪ್ಲಿಕೇಷನ್:
ಇ- ಪೋರ್ಟಲ್ ಆರಂಭವಾದ ಮೇಲೆ ಮೊಬೈಲ್ ಅಪ್ಲಿಕೇಷನ್ ಶುರುವಾಗಲಿದೆ. ಈ ಮೂಲಕ ಪೋರ್ಟಲ್‌ನಲ್ಲಿ ಸಿಗುವಂಥ ಎಲ್ಲ ಕಾರ್ಯ ನಿರ್ವಹಣೆಯು ಮೊಬೈಲ್ ಆ್ಯಪ್‌ನಲ್ಲೂ ದೊರೆಯುತ್ತದೆ.

ಹೊಸ ಡ್ಯಾಶ್ ಬೋರ್ಡ್:
ಹೊಸ ಇ- ಪೋರ್ಟಲ್ ಒಂದು ಹೊಸ ಸಿಂಗಲ್ ಡ್ಯಾಶ್‌ಬೋರ್ಡ್ ಒದಗಿಸುತ್ತದೆ. ಎಲ್ಲ ಇಂಟರಾಕ್ಷನ್‌ಗಳು, ಅಪ್‌ಲೋಡ್‌ಗಳು ಅಥವಾ ಬಾಕಿ ಕಾರ್ಯಗಳನ್ನು ತೆರಿಗೆ ಪಾವತಿದಾರರಿಗೆ ಅದು ತೋರಿಸುತ್ತದೆ. ಆ ಮೂಲಕ ಯಾವ ಕೆಲಸ ಬಾಕಿ ಇದೆ, ಫಾಲೋ ಆ್ಯಪ್ ಅಗತ್ಯ ಇದೆ ಎಂದು ತಿಳಿಯಲು ಅನುಕೂಲ ಆಗುತ್ತದೆ.

ಇಂಟರಾಕ್ಟಿವ್ ಐಟಿಆರ್ ಸಿದ್ಧತೆ ಸಾಫ್ಟ್ವೇರ್:
ಐಟಿಆರ್ ಸಿದ್ಧತೆ ಸಾಫ್ಟ್ವೇರ್ ಅನ್ನು ಆಫ್‌ಲೈನ್ ಹಾಗೂ ಆನ್‌ಲೈನ್ ಎರಡಕ್ಕೂ ಉಚಿತವಾಗಿ ತೆರಿಗೆದಾರರಿಗೆ ಒದಗಿಸಲಾಗುತ್ತದೆ. ತೆರಿಗೆದಾರ ಸ್ನೇಹಿ ಸಾಫ್ಟ್ವೇರ್ ಆದ ಇದರಲ್ಲಿ ಇಂಟರ್ ಆಕ್ಟಿವ್ ಪ್ರಶ್ನೆಗಳಿದ್ದು, ಇದರಿಂದ ಅನುಕೂಲ ಆಗಲಿದೆ. ತೆರಿಗೆ ಬಗ್ಗೆ ಯಾವುದೇ ಜ್ಞಾನ ಇಲ್ಲದಿದ್ದರೂ ಈ ಪೋರ್ಟಲ್ ಅನ್ನು ರಿಟರ್ನ್ಸ್ ಪ್ರೀ-ಫಿಲ್ಲಿಂಗ್‌ಗೆ ಬಳಸಬಹುದು. ಆ ಮೂಲಕ ಐಟಿಆರ್‌ನಲ್ಲಿ ಹೆಚ್ಚು ಭರ್ತಿ ಮಾಡಬೇಕು ಅಂತೇನೂ ಇರಲ್ಲ.

ತೆರಿಗೆದಾರರ ಕೊರತೆಗಳಿಗೆ ಉತ್ತರಿಸುವುದು ಸಲೀಸು:
ಟ್ಯುಟೋರಿಯರಲ್‌ಗಳು, ವಿಡಿಯೋಗಳು, ಕಾಲ್‌ಸೆಂಟರ್, ಚಾಟ್‌ಬಾಟ್ ಅಥವಾ ಲೈವ್ ಏಜೆಂಟ್‌ಗಳು ಈ ಸೈಟ್‌ನಲ್ಲಿ ಇದ್ದು, ತೆರಿಗೆ ಪಾವತಿದಾರರ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ. ಹೊಸ ಕಾಲ್‌ಸೆಂಟರ್ ಫ್ರೀಕ್ವೆಂಟ್ಲಿ ಆಸ್ಕಡ್ ಕ್ವೆಶ್ಚನ್ಸ್ ಮೂಲಕ ತೆರಿಗೆದಾರರಿಗೆ ನೆರವಾಗುತ್ತದೆ.

ಹೊಸ ಆನ್‌ಲೈನ್ ತೆರಿಗೆ ಪಾವತಿ ಪದ್ಧತಿ:
ಬಹಳ ಸುಲಭವಾಗಿ ಪಾವತಿಯನ್ನು ಖಾತರಿ ಮಾಡಬೇಕು ಅನ್ನೋ ಕಾರಣಕ್ಕೆ ಹೊಸ ಐಟಿಆರ್ ವೆಬ್ ಸೈಟ್ ತೆರಿಗೆ ಸಂದಾಯ ಮಾಡಲು ಆನ್‌ಲೈನ್ ಪಾವತಿ ವ್ಯವಸ್ಥೆಯನ್ನು ಸಹ ಹೊಂದಿದೆ. ನೆಟ್ ಬ್ಯಾಂಕಿoಗ್, ಯುಪಿಐ, ಕ್ರೆಡಿಟ್ ಕಾರ್ಡ್, ಆರ್‌ಟಿಜಿಎಸ್ ಅಥವಾ ಎನ್‌ಇಎಫ್‌ಟಿ ಹೀಗೆ ತೆರಿಗೆದಾರರ ಯಾವುದೇ ಖಾತೆಯಿಂದ ಮತ್ತು ಯಾವುದೇ ಬ್ಯಾಂಕ್‌ನಿoದ ತೆರಿಗೆ ಪಾವತಿಸಬಹುದು. ಈಗಿನ ವ್ಯವಸ್ಥೆಯಲ್ಲಿ ಯುಪಿಐ, ಕ್ರೆಡಿಟ್ ಕಾರ್ಡ್ ಮಾತ್ರ ಇತ್ತು.

ಆದಾಯ ತೆರಿಗೆ ಪಾವತಿದಾರರಿಗೆ ಯಾವುದೇ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ತೆರಿಗೆ ಪಾವತಿ ವ್ಯವಸ್ಥೆಯನ್ನು ಜೂನ್ ೧೮, ೨೦೨೧ಕ್ಕೆ ಶುರು ಮಾಡಲಾಗುತ್ತದೆ. ಅದು ಕೂಡ ಮುಂಗಡ ತೆರಿಗೆ ಕಂತಿನ ದಿನಾಂಕದ ನಂತರ. ಇದರಿಂದ ತೆರಿಗೆ ಪಾವತಿದಾರರಿಗೆ ಸಹಾಯ ಆಗಲಿದೆ ಎನ್ನಲಾಗಿದೆ.

Leave a Comment

Your email address will not be published. Required fields are marked *