May 2021

ಪಂಪ್ವೆಲ್ ಫ್ಲೈಓವರ್ ಮೇಲೆ ಕಾರುಡಿಕ್ಕಿ: ಬೈಕ್ ಸವಾರ ಗಂಭೀರ

ಮಂಗಳೂರು: ಕಾರೊಂದು ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಗರದ ಪಂಪ್ ವೆಲ್ ನಲ್ಲಿ ನಡೆದಿದೆ. 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ನಗರದ ಗೋರಿಗುಡ್ಡ ಕಡೆಯಿಂದ ನಂತೂರು ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಫ್ಲೈಓವರ್ ಮೇಲೆ ಸಂಚರಿಸುತ್ತಿದ್ದ ವೇಳೆ, ವೇಗವಾಗಿ ಬಂದ ಕಾರು ಹಿಂದುಗಡೆಯಿಂದ ಬಂದು ಢಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ರಸ್ತೆಗೆಸೆಯಲ್ಪಟ್ಟ ದ್ವಿಚಕ್ರ ವಾಹನ ಸವಾರ ತೀವ್ರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ […]

ಪಂಪ್ವೆಲ್ ಫ್ಲೈಓವರ್ ಮೇಲೆ ಕಾರುಡಿಕ್ಕಿ: ಬೈಕ್ ಸವಾರ ಗಂಭೀರ Read More »

ಕೊರೋನಾಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 80 ಲಕ್ಷ…..!? | ಸಾವಿನಲ್ಲೂ ತಪ್ಪು ಅಂಕಿ-ಅಂಶ ನೀಡುತ್ತಿವೆ ರಾಷ್ಟ್ರಗಳು : WHO

ಸಾವಿನ ಲೆಕ್ಕಾಚಾರದಲ್ಲೂ ರಾಷ್ಟ್ರಗಳು ತಪ್ಪು ಲೆಕ್ಕಾಚಾರ ಕೊಡುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥ ಶಂಕೆ ವ್ಯಕ್ತಪಡಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಾವಿಗೀಡಾಗಿರುವ ಜನರ ಅಂಕಿ-ಸಂಖ್ಯೆಯ ಕುರಿತು ನೀಡಲಾಗುತ್ತಿರುವ ಅಧಿಕೃತ ಸಾವಿನ ಪ್ರಮಾಣವನ್ನು ವಾಸ್ತವಕ್ಕಿಂತ ಗಮನಾರ್ಹವಾಗಿ ತಗ್ಗಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಅಂದಾಜು 80 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವ ಸಾಧ್ಯತೆ ಇದ್ದು, ನೀಡಲಾದ ಮಾಹಿತಿ ಅದರ ಶೇಖಡಾ 50 ಕ್ಕಿಂತಲೂ ಕಡಿಮೆ ಇದೆ ಎಂದಿದೆ. ಕಳೆದೊಂದು ವರ್ಷದ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್-19

ಕೊರೋನಾಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 80 ಲಕ್ಷ…..!? | ಸಾವಿನಲ್ಲೂ ತಪ್ಪು ಅಂಕಿ-ಅಂಶ ನೀಡುತ್ತಿವೆ ರಾಷ್ಟ್ರಗಳು : WHO Read More »

ಸುಳ್ಯ : ಮಾವಿನಕಾಯಿಯಿಂದ ಶುರುವಾದ ಅತ್ತೆ-ಸೊಸೆ ಜಗಳ ಮೆಣಸಿನ ಹುಡಿ ಯಲ್ಲಿ ಅಂತ್ಯ

ಸುಳ್ಯ: ಅತ್ತೆ ಮತ್ತು ಸೊಸೆಯ ಜಗಳ ಮಾವಿನ ಹಣ್ಣಿನಿಂದ ಶುರುವಾಗಿ ಕೊನೆಗೆ ಸೊಸೆ ಅತ್ತೆಯ ಮುಖಕ್ಕೆ ಮೆಣಸಿನ ಹುಡಿ ನೀರಿನಲ್ಲಿ ಬೆರೆಸಿ ಮುಖಕ್ಕೆ ಎರಚಿದ ಘಟನೆ ಸುಳ್ಯ, ಪೈಚಾರಿನಲ್ಲಿ ನಡೆದಿದೆ.ಪೈಚಾರ್ ನಿವಾಸಿ ಇಸ್ಮಾಯಿಲ್ ಎಂಬವರ ಪತ್ನಿ ಮೈಮೂನ ಕೃತ್ಯ ಎಸಗಿದ ಆರೋಪಿ. ಇವರು ಇಸ್ಮಾಯಿಲ್ ರವರ ತಾಯಿ ಮೇಲೆ ಬಿಸಿನೀರಿಗೆ ಮೆಣಸಿನ ಹುಡಿ ಬೆರೆಸಿ ಎರಚಿದ್ದಾರೆ. ಇಸ್ಮಾಯಿಲ್ ಮತ್ತು ಅಬ್ದುಲ್ ರವರು ಸಹೋದರರಾಗಿದ್ದು ಪೈಚಾರಿನಲ್ಲಿ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದಾರೆ ಇವರ ತಾಯಿ ಅಬ್ದುಲ್ ರವರ ಮನೆಯಲ್ಲಿ ವಾಸಿಸುತ್ತಿದ್ದರು.ಈ ಸಹೋದರರ

ಸುಳ್ಯ : ಮಾವಿನಕಾಯಿಯಿಂದ ಶುರುವಾದ ಅತ್ತೆ-ಸೊಸೆ ಜಗಳ ಮೆಣಸಿನ ಹುಡಿ ಯಲ್ಲಿ ಅಂತ್ಯ Read More »

ಉಡುಪಿ : ಬೆಳ್ತಿಗೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ, ಸೂಕ್ತ ತನಿಖೆಗೆ ಒತ್ತಾಯ

ಉಡುಪಿ : ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ಪಂಚಾಯತ್  ವ್ಯಾಪ್ತಿಯ ಗ್ರಾಮಸ್ಥರಿಗೆ ನೀಡಲಾಗಿರುವ ಬೆಳ್ತಿಗೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಸರ್ಕಾರದ ಆಹಾರ ಇಲಾಖೆ ಮೂಲಕ ವಿತರಣೆಯಾಗುವ ಅಕ್ಕಿ ಬಹಳಷ್ಟು ಸಲ ಕಲಬೆರಕೆಯಿಂದ ಕೂಡಿರುವುದು ರಾಜ್ಯದ ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ. ಅದೇ ರೀತಿ ಬೆಳ್ಮಣ್ ಪಂಚಾಯತ್  ವ್ಯಾಪ್ತಿಯ ಗ್ರಾಮಸ್ಥರಿಗೆ ನೀಡಲಾಗಿರುವ ಬೆಳ್ತಿಗೆ ಅಕ್ಕಿಯಲ್ಲಿ ಹೊಳೆಯುವ ಹರಳಿನ ರೂಪದ ವಸ್ತುಗಳು ಸಿಕ್ಕಿದೆ. ಅನ್ನ ಮಾಡಲು ಅಕ್ಕಿ ಶುಚಿಗೊಳಿಸುವಾಗ ಈ ಅಕ್ರಮ ಬೆಳಕಿಗೆ ಬಂದಿದ್ದು, ಎರಡು ಗೋಣಿಗಳಲ್ಲಿ ಬಂದ ಅಕ್ಕಿಯಲ್ಲಿ

ಉಡುಪಿ : ಬೆಳ್ತಿಗೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ, ಸೂಕ್ತ ತನಿಖೆಗೆ ಒತ್ತಾಯ Read More »

ಕರಾವಳಿ: ಸೋಂಕಿತರ ಸಂಖ್ಯೆ ಇಳಿಮುಖ, ಸಾವಿನ ಸಂಖ್ಯೆ ಏರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೇ.೨೬ ರಂದು ಒಂದೇ ದಿನ ಹನ್ನೊಂದು ಮಂದಿ ಬಲಿಯಾಗಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ. ಸಾವಿನ ಸಂಖ್ಯೆಯಲ್ಲಿ ಒಂದೇ ಬಾರಿಗೆ ಏರಿಕೆಯಾಗಿದ್ದು ಆತಂಕ ಮೂಡಿಸಿದೆ.ಕಳೆದ ೨೪ ಗಂಟೆಗಳಲ್ಲಿ ಕೊರೊನಾ ಸೋಂಕಿಗೆ ೧೧ ಮಂದಿ ಸಾವನ್ನಪಿದ್ದು, ಜಿಲ್ಲೆಯಲ್ಲಿ ಈವರೆಗೆ ಬಲಿಯಾದವರ ಸಂಖ್ಯೆ ೮೮೪ ಕ್ಕೆ ಏರಿಕೆಯಾಗಿದೆ.ಇನ್ನು ಜಿಲ್ಲೆಯಲ್ಲಿ ಇದೇ ವೇಳೆ ೭೨೯ ಮಂದಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ೭೫೬ ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ೧೦,೦೯೯ ಮಂದಿ ಒಟ್ಟು

ಕರಾವಳಿ: ಸೋಂಕಿತರ ಸಂಖ್ಯೆ ಇಳಿಮುಖ, ಸಾವಿನ ಸಂಖ್ಯೆ ಏರಿಕೆ Read More »

ಸಚಿವರಿಗೆ ಪಿಡಿಒ ಕಾನೂನು ಪಾಠ: ಬುದ್ದಿಮಾತು ಹೇಳಿ ಓದಾರ್ಯ ಮೆರೆದ ಕೋಟ ವೈರಲ್ ಆದ ಸಂಭಾಷಣೆಯ ಆಡಿಯೋ ಇಲ್ಲಿದೆ

ಸಚಿವರೆಂದರೆ ಸಾಮಾನ್ಯವಾಗಿ ಅಧಿಕಾರಿ ವರ್ಗದವರು ಮಾತನಾಡಲೂ ಭಯಪಡುತ್ತಾರೆ. ಆದರೆ ಇಲ್ಲೊಬ್ಬ ಪಿಡಿಒ ಉಸ್ತುವಾರಿ ಸಚಿವರನ್ನು ಪ್ರಶ್ನಿಸುವುದಲ್ಲದೆ ಸಚಿವರಿಗೇ ಕಾನೂನು ಪಾಠ ಮಾಡಿದ ಘಟನೆ ‌ನಡೆದಿದೆ. ಪಿಡಿಒ ರಿಂದ‌ ಪಾಠ ಹೇಳಿಸಿಕೊಂಡ ಸಚಿವರು ಬುದ್ದಿಮಾತು ಹೇಳಿ ಕಳಿಸಿದ ಸ್ವಾರಸ್ಯ ಸಂಗತಿಯೊಂದು‌ ಬೆಳಕಿಗೆ ಬಂದಿದೆ.ದ.ಕ ಜಿಲ್ಲೆಯ ಕಂದಾವರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಶವಂತರವರು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಫೋನ್‌ ಮಾಡಿ ಕೋವಿಡ್ ಕಿಟ್ ವಿತರಣೆ ವಿಚಾರದಲ್ಲಿ ಚರ್ಚೆ ಮಾಡಿದ್ದಲ್ಲದೇ, ವಾಗ್ವಾದ ನಡೆಸಿದ ಆಡಿಯೋ ವೈರಲ್ ಆಗಿದೆ.

ಸಚಿವರಿಗೆ ಪಿಡಿಒ ಕಾನೂನು ಪಾಠ: ಬುದ್ದಿಮಾತು ಹೇಳಿ ಓದಾರ್ಯ ಮೆರೆದ ಕೋಟ ವೈರಲ್ ಆದ ಸಂಭಾಷಣೆಯ ಆಡಿಯೋ ಇಲ್ಲಿದೆ Read More »

ಹಸಿಗಾಯವನ್ನು ಮತ್ತೆ ಕೆರೆಯುತ್ತಿರುವ ಕೇಂದ್ರ ಸರ್ಕಾರ | ಪೆಟ್ರೋಲಿಯಂ ಉತ್ಪನ್ನಗಳ ಜೊತೆಗೆ ಅಡುಗೆ ಎಣ್ಣೆಯೂ ದುಬಾರಿ

ನವದೆಹಲಿ: ದೇಶದ ಅನೇಕ ರಾಜ್ಯಗಳಲ್ಲಿ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದ್ದು, ಅಡುಗೆ ಎಣ್ಣೆ ದರ 200 ರೂ. ಸನಿಹಕ್ಕೆ ತಲುಪಿದೆ. ಈ ಮೂಲಕ ಮತ್ತೆ ಮತ್ತೆ ಜನಸಾಮಾನ್ಯರ ಜೀವನದಲ್ಲಿ ಗಾಯದ ಮೇಲೆ ಬರೆ ಎಳೆಯುತ್ತಿದೆ. ಕಳೆದ ವರ್ಷದಿಂದಲೇ ಏರುಗತಿಯಲ್ಲಿ ಸಾಗುತ್ತಿರುವ ಅಡುಗೆ ಎಣ್ಣೆ ದರ 180 ರೂಪಾಯಿ ದಾಟಿ 200 ರೂ. ಸನಿಹಕ್ಕೆ ಬಂದಿದೆ. ಇದರಿಂದಾಗಿ ಬಡವರು, ಮಧ್ಯಮವರ್ಗದವರು ತೊಂದರೆ ಅನುಭವಿಸುವಂತಾಗಿದೆ. ಕೊರೋನಾ ಕಾರಣದಿಂದ ಲಾಕ್ಡೌನ್, ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದ್ದು, ಮೊದಲೇ ಸಂಕಷ್ಟದಲ್ಲಿರುವ ಜನರಿಗೆ

ಹಸಿಗಾಯವನ್ನು ಮತ್ತೆ ಕೆರೆಯುತ್ತಿರುವ ಕೇಂದ್ರ ಸರ್ಕಾರ | ಪೆಟ್ರೋಲಿಯಂ ಉತ್ಪನ್ನಗಳ ಜೊತೆಗೆ ಅಡುಗೆ ಎಣ್ಣೆಯೂ ದುಬಾರಿ Read More »

ರಾಜಕೀಯ ಸಮಾಚಾರ : ರಾಜ್ಯ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕೂಗು| ಯಡಿಯೂರಪ್ಪ ಪದಚ್ಯುತಿಗೆ ತೀವ್ರಗೊಂಡ ಪ್ರಯತ್ನ..!

ಬೆಂಗಳೂರು. ಮೇ.26: ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆಯ ಕೂಗು ಜೋರಾಗಿದ್ದು, ಸಿಎಂ ಬದಲಾವಣೆಗೆ ಕೆಲವು ನಾಯಕರು ಟೊಂಕಕಟ್ಟಿ‌ ನಿಂತಿದ್ದಾರೆ. ದೆಹಲಿ ಮಟ್ಟದಲ್ಲೂ ಚಿತಾವಣೆ ನಡೆಸಿದ್ದು, ಹೈಕಮಾಂಡ್ ಈ ಬಾರಿ ನಾಯಕತ್ವ ಬದಲಾವಣೆ ಮಾಡುತ್ತಾ? ರಾಜ್ಯ ನಾಯಕರ ಒತ್ತಡಕ್ಕೆ ಮಣಿಯುತ್ತಾ? ಈ ಕುರಿತು ಮುಂದೆ ಓದಿ… ಕಳೆದ ಆರೇಳು ತಿಂಗಳಿಂದಲೂ ಯಡಿಯೂರಪ್ಪನವರನ್ನ ಕೆಳಗಿಳಿಸೋ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಲೇ ಇವೆ.ಆದ್ರೆ ಕೋವಿಡ್ ನ ಕಾರಣದಿಂದ ಯಾವ ಪ್ರಯತ್ನಗಳೂ ಕೈಗೂಡುತ್ತಿಲ್ಲ. ಈ ಹಿಂದೆ ರಾಷ್ಟ್ರೀಯ ನಾಯಕರು ಸಿಎಂ ಬದಲಾವಣೆಗೆ ಮನಸ್ಸು

ರಾಜಕೀಯ ಸಮಾಚಾರ : ರಾಜ್ಯ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕೂಗು| ಯಡಿಯೂರಪ್ಪ ಪದಚ್ಯುತಿಗೆ ತೀವ್ರಗೊಂಡ ಪ್ರಯತ್ನ..! Read More »

ಅಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಸಹಾಯಧನ: ಮೇ.27ರಿಂದ ಅರ್ಜಿ ಸ್ವೀಕಾರ

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಹೇರಿರುವ ಲಾಕ್‍ಡೌನ್‍ನಿಂದ ದುಡಿಮೆಯಿಲ್ಲದೆ ಸಂಕಷ್ಟಕ್ಕೆ ಒಳಗಾಗಿರುವ ಆಟೋರಿಕ್ಷಾ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರಿಗೆ ತಲಾ 3 ಸಾವಿರ ರೂ. ಸಹಾಯಧನ ಘೋಷಣೆ ಮಾಡಲಾಗಿದ್ದು, ನಾಳೆ ಮೇ 27ರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಇಂದು ಈ ಸಂಬಂಧ ಮಾತನಾಡಿರುವ ಅವರುಅರ್ಹ ಅಭ್ಯರ್ಥಿಗಳು `ಸೇವಾ ಸಿಂಧು’ ವೆಬ್ ಪೋರ್ಟಲ್ ಮೂಲಕ ಸೂಕ್ತ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ

ಅಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಸಹಾಯಧನ: ಮೇ.27ರಿಂದ ಅರ್ಜಿ ಸ್ವೀಕಾರ Read More »

ಕಾಸರಗೋಡು: ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಚಿವ ಅಹಮ್ಮದ್ ದೇವರ್ ನೇಮಕ

ಕಾಸರಗೋಡು: ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದರು ಸಚಿವ ಅಹಮ್ಮದ್ ದೇವರ್ ಕೋವಿಳ್‌ರವರು  ನೇಮಕರಾಗಿದ್ದಾರೆ. ಈ ಬಾರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರಕಾರದಲ್ಲಿ ಕಾಸರಗೋಡಿಗೆ ಸಚಿವ ಸ್ಥಾನ ಲಭಿಸಿಲ್ಲ. ಈ ಹಿನ್ನೆಲೆ ಅಹಮ್ಮದ್ ದೇವರ್ ಅವರಿಗೆ ಕಾಸರಗೋಡು ಜಿಲ್ಲಾ ಉಸ್ತುವಾರಿ ಸ್ಥಾನ ಲಭಿಸಿದೆ. ಜಿಲ್ಲೆಯ ಸಚಿವರ ಕೊರತೆ ನೀಗಿಸುವ ನಿಟ್ಟಿನಲ್ಲಿ ಅಹಮ್ಮದ್ ದೇವರ್ ಕೋವಿಳ್ ರವರನ್ನು ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಕೋಜಿಕ್ಕೋಡ್ ಸೌತ್ ಕ್ಷೇತ್ರದಿಂದ ಆಯ್ಕೆಯಾದ ಎಲ್‌ಡಿಎಫ್ ಘಟಕ ಪಕ್ಷವಾದ ಇಂಡಿಯನ್ ನ್ಯಾಷನಲ್ ಲೀಗ್(ಐ.ಎನ್.ಎಲ್)ನ ಶಾಸಕರಾಗಿದ್ದು,

ಕಾಸರಗೋಡು: ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಚಿವ ಅಹಮ್ಮದ್ ದೇವರ್ ನೇಮಕ Read More »