May 2021

ಯಡಿಯೂರಪ್ಪನವರು ಪಕ್ಷಾಂತರ ಮಾಡಿ ಮುಖ್ಯಮಂತ್ರಿಯಾಗಿಲ್ಲ| ಸಿದ್ದರಾಮಯ್ಯಗೆ ನಳಿನ್ ತಿರುಗೇಟು

ಮಂಗಳೂರು: ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಬಳಿಕ ಸಮರ್ಥ ನಾಯಕನಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, “ಯಡಿಯೂರಪ್ಪ ಸರ್ವ ಸಮ್ಮತಿಯ ನಾಯಕ, ಪಕ್ಷಾಂತರ ಮಾಡಿ ಮುಖ್ಯಮಂತ್ರಿಯಾಗಿಲ್ಲ” ಎಂದು ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಮುಂದೆ ಎಲ್ಲಿದ್ರು…?, ಯಾರು ಅವರ ಗುರು ಆಗಿದ್ರು….?, ಕಾಂಗ್ರೆಸ್ ಗೆ ಬೈದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡು ಮುಖ್ಯಮಂತ್ರಿ ಆಗಿದ್ದನ್ನು ಜಗತ್ತು ನೋಡಿದೆ. ಬಿಜೆಪಿಯಲ್ಲಲ್ಲ ಕಾಂಗ್ರೆಸ್ ನಲ್ಲಿ ನಿಜವಾಗಿ ನಾಯಕತ್ವದ ಕೊರತೆ ಇದೆ. ಅವತ್ತು ಸಮ್ಮಿಶ್ರ […]

ಯಡಿಯೂರಪ್ಪನವರು ಪಕ್ಷಾಂತರ ಮಾಡಿ ಮುಖ್ಯಮಂತ್ರಿಯಾಗಿಲ್ಲ| ಸಿದ್ದರಾಮಯ್ಯಗೆ ನಳಿನ್ ತಿರುಗೇಟು Read More »

ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ ಬಾಲಕ

ಬೆಂಗಳೂರು : ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರೋ ಹಿನ್ನೆಲೆಯಲ್ಲಿ ಕೋವಿಡ್ ಪರಿಹಾರ ನಿಧಿಗೆ ಹಲವರು ಸಹಾಯ ಹಸ್ತ ಚಾಚುತ್ತಿದ್ದಾರೆ. ಈ ನಡುವೆ ಪುಟ್ಟ ಬಾಲಕನೊರ್ವ ತಾನು ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಸಿಎಂ ಕೋವಿಡ್ ಪರಿಹಾರ ನಿಧಿಗೆ ನೀಡಿದ್ದಾನೆ.ಬೆಂಗಳೂರಿನ ಅಭಿನಂದನ್ ಹಾಗೂ ಸ್ವಪ್ನರವರ ಸುಪುತ್ರ ಮಾಯಾಂಕ್ ಜೈನ್ (೧೨) ನೆರವು ನೀಡಿದ ಬಾಲಕ. ಈತ ವರ್ಷಗಳಿಂದ ಹುಂಡಿಯಲ್ಲಿ ೪,೧೯೦ ರೂ. ಹಣವನ್ನು ಕೂಡಿಟ್ಟಿದ್ದ. ಶನಿವಾರ ಬೆಂಗಳೂರು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ಗೆ ಉಳಿತಾಯ ಮಾಡಿದ ಹಣವನ್ನು ಹಸ್ತಾಂತರಿಸಿದ್ದಾನೆ. ಕೊರೊನಾದಿಂದಾದ ಸಾವು-ನೋವುಗಳನ್ನು ಮನಗಂಡು

ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ ಬಾಲಕ Read More »

ಸುಳ್ಯ: ಹೊಟ್ಟೆ ನೋವೆಂದ ಕಳ್ಳತನದ ಆರೋಪಿ-ಸ್ಕ್ಯಾನಿಂಗ್‌ನಲ್ಲಿ ಚಿನ್ನದ ಗುಟ್ಟು ರಟ್ಟು

ಸುಳ್ಯ: ಹಲವು ಜ್ಯುವೆಲ್ಲರಿ ಅಂಗಡಿಯಿಂದ ಇತ್ತಿಚೆಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂದಿಸಿದ್ದರು. ಅದರಲ್ಲಿ ಓರ್ವ ಕಳ್ಳನಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನ್ ಮಾಡಿದಾಗ ಆತನ ಕರುಳಿನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ತಂಗಚ್ಚನ್ ಮತ್ತು ಶಿಬು ಕಳ್ಳತನದ ಆರೋಪಿಗಳು. ಆರೋಪಿ ತಂಗಚ್ಚನ್ ಅನ್ನು ಶನಿವಾರ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಇನ್ನೊಬ್ಬ ಆರೋಪಿ ಶಿಬು ಎಂಬಾತನ ಮೆಡಿಕಲ್ ಟೆಸ್ಟ್ ಮಾಡಿಸಲು ಬಾಕಿ ಇದ್ದುದರಿಂದ ಭಾನುವಾರ ಕೋರ್ಟ್ ಗೆ ಹಾಜರುಪಡಿಸಲು ನಿರ್ಧರಿಸಲಾಗಿತ್ತು. ಆರೋಪಿ ಶಿಬುಗೆ ಶನಿವಾರ

ಸುಳ್ಯ: ಹೊಟ್ಟೆ ನೋವೆಂದ ಕಳ್ಳತನದ ಆರೋಪಿ-ಸ್ಕ್ಯಾನಿಂಗ್‌ನಲ್ಲಿ ಚಿನ್ನದ ಗುಟ್ಟು ರಟ್ಟು Read More »

ಬೆಳ್ತಂಗಡಿ:ವಿದ್ಯುತ್ ಶಾಕ್ ಗೆ ತಾಯಿ ಮಗು ಬಲಿ

ಬೆಳ್ತಂಗಡಿ: ಪಂಪ್ ಸ್ವಿಚ್ ಆನ್ ಮಾಡಲು ತೆರಳಿದ ತಾಯಿ-ಮಗು ಇಬ್ಬರು ವಿದ್ಯುತ್ ಶಾಕ್ ಗೆ ಒಳಗಾಗಿ ಮೃತಪಟ್ಟ ಘಟನೆ ಇಂದು ತಾಲೂಕಿನ ಪಟ್ರಮೆ ಯಿಂದ ವರದಿಯಾಗಿದೆ. ಪಟ್ರಮೆ ಗ್ರಾಮದ ಕೋಡಂದೂರು ನಿವಾಸಿ ಹರೀಶ್ ಗೌಡ ಎಂಬವರ ಪತ್ನಿ 30 ವರ್ಷದ ಗೀತಾ ಮತ್ತು 4.5 ವರ್ಷದ ಮಗು ಭವಿಷ್ ಮೃತಪಟ್ಟ ದುರ್ದೈವಿಗಳು. ತಾಯಿ ಗೀತಾ ಮಗುವನ್ನು ಎತ್ತಿಕೊಂಡು, ಹೊಸದಾಗಿ ಕರಿಸಿ ಖರೀದಿಸಿದ ಜಾಗದಲ್ಲಿ ಬೋರ್ವೆಲ್ ಗೆ ಅಳವಡಿಸಿದ ಪಂಪ್ ಸ್ವಿಚ್ ಆನ್ ಮಾಡುವಾಗ ದುರ್ಘಟನೆ ಸಂಭವಿಸಿದೆ.

ಬೆಳ್ತಂಗಡಿ:ವಿದ್ಯುತ್ ಶಾಕ್ ಗೆ ತಾಯಿ ಮಗು ಬಲಿ Read More »

ವಾಹನ ಮಾಲಕರಿಗೆ ಗುಡ್ ನ್ಯೂಸ್ |ಈ ತಿಂಗಳ ತೆರಿಗೆ ಕಟ್ಟಬೇಕಾಗಿಲ್ಲ

ಬೆಂಗಳೂರು : ಲಾಕ್​ಡೌನ್​ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಈ ತಿಂಗಳ ವಾಹನ ತೆರಿಗೆ ಕಟ್ಟಬೇಕಾಗಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯದಲ್ಲಿ ನೋಂದಾಯಿತವಾಗಿರುವ ಎಲ್ಲಾ ಪ್ರಯಾಣಿಕ ವಾಹನಗಳಿಗೆ ಅನ್ವಯವಾಗುವಂತೆ 2021ರ ಮೇ ತಿಂಗಳ ಅವಧಿಗೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದಾದ್ಯಂತ ವಾಹನ ಸಂಚಾರಕ್ಕೆ ನಿಷೇಧವನ್ನು ಹೇರಲಾಗಿದ್ದು ತುರ್ತು ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಜೊತೆಗೆ ಜನರು ಸಂಪಾದನೆ ಇಲ್ಲದೆ ಮನೆಯಲ್ಲೇ ಕೂರುವಂತಾಗಿದೆ ಇದನ್ನು ಗಮನದಲ್ಲಿಟ್ಟು

ವಾಹನ ಮಾಲಕರಿಗೆ ಗುಡ್ ನ್ಯೂಸ್ |ಈ ತಿಂಗಳ ತೆರಿಗೆ ಕಟ್ಟಬೇಕಾಗಿಲ್ಲ Read More »

ರಾಜ್ಯಾದ್ಯಂತ ವ್ಯಾಪಕ ಮಳೆ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡು ಭಾಗದಲ್ಲಿ ಗುಡುಗು-ಸಿಡಿಲು ಸಹಿತ ಇಂದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಪೂರ್ವ ಮುಂಗಾರು ಶುರುವಾಗಿದೆ. ನೈಋತ್ಯ ಮುಂಗಾರು ಮಾರುತಗಳು ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಪ್ರವೇಶಿಸಲಿವೆ. ಈ ಕಾರಣದಿಂದ ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಭಾನುವಾರ ಉತ್ತರ ಒಳನಾಡಿನ ಬೆಳಗಾವಿ, ಗದಗ, ಧಾರವಾಡ ಮತ್ತು ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರೀ

ರಾಜ್ಯಾದ್ಯಂತ ವ್ಯಾಪಕ ಮಳೆ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ Read More »

ಮಂಗಳೂರು : ರಾತ್ರೋ ರಾತ್ರಿ ಮುಸ್ಲಿಂ ಯುವತಿ ನಾಪತ್ತೆ

ಮಂಗಳೂರು: ಬಜ್ಪೆ ಸಮೀಪದ ಕೆಂಜಾರಿನಲ್ಲಿ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆ ನಡೆದಿದೆ. ಹುಸೈನ್ ಶರೀಫ್ ಎಂಬವರ ಪುತ್ರಿ ಫಾತಿಮಾ ಸಾಹಿರಾ (21) ನಾಪತ್ತೆಯಾದ ಯುವತಿ. ಇವರು ಮೇ 26ರಂದು ತಡರಾತ್ರಿ ನಾಪತ್ತೆಯಾಗಿದ್ದಾರೆ. ಹುಸೈನ್ ಶರೀಫ್ ಪತ್ನಿ ಹಾಗೂ ಇಬ್ಬರು ಪುತ್ರಿಯರು ಫಾತಿಮಾ ಸಾಹಿರಾ ಮತ್ತು ಮಿಶ್ರಿಯಾ ಎಂಬವರು ಮೇ. 26ರಂದು ಎಂದಿನಂತೆ ಊಟ ಮಾಡಿ ಮಲಗಿದ್ದರು. ಆದರೆ ಸಾಹಿರಾ ರಾತ್ರೋ ರಾತ್ರಿ ಮನೆಯಲ್ಲಿದ್ದವರು ಮಲಗಿದ್ದಾಗ ನಾಪತ್ತೆಯಾಗಿದ್ದಾರೆ. ಈ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪುತ್ರಿಯನ್ನು ಪತ್ತೆ ಹಚ್ಚಿಕೊಡಬೇಕೆಂದು ಹುಸೈನ್

ಮಂಗಳೂರು : ರಾತ್ರೋ ರಾತ್ರಿ ಮುಸ್ಲಿಂ ಯುವತಿ ನಾಪತ್ತೆ Read More »

ಕೊರೋನಾದಿಂದ ರಕ್ಷಿಸಿಕೊಳ್ಳಲು ಬೈಕಿಗೆ ಬಬಲ್ | ಇಲ್ಲಿದೆ ವೈರಲ್ ವೀಡಿಯೋ

ನವದೆಹಲಿ: ಕರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಅನೇಕ ರೀತಿಯ ಪ್ಲ್ಯಾನ್‌ ಮಾಡುವಲ್ಲಿ ಕೆಲವರು ನಿರತರಾಗಿದ್ದಾರೆ. ಅಂಥದ್ದೇ ಒಂದು ಕುತೂಹಲ ಎನ್ನುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲರ ಮನಸ್ಸನ್ನು ಗೆದ್ದಿದೆ. ವೈರಸ್‌ನಿಂದ ರಕ್ಷಿಸಿಕೊಳ್ಳಲು ವ್ಯಕ್ತಿಯೊಬ್ಬ ಬೈಕ್‌ಗೆ ಟಾರ್ಪಲ್ ಮಾದರಿ ವೈಟ್‌ಶೀಟ್‌ ಹಾಕಿದ್ದಾನೆ. ಇಡೀ ಬೈಕ್‌ ಅನ್ನು ಇದರಿಂದ ಮುಚ್ಚಿದ್ದಾನೆ. ವ್ಯಕ್ತಿಯು ಬೈಕ್‍ನಲ್ಲಿ ಕಬ್ಬಿಣದ ರಾಡ್‍ಗಳನ್ನು ಬೈಕ್ ಸುತ್ತಲೂ ಅಳವಡಿಸಿದ್ದು, ಅದಕ್ಕೆ ಬಿಳಿ ಪ್ಲಾಸ್ಟಿಕ್ ಶೀಟ್‍ ಹೊದಿಸಿದ್ದಾನೆ. ಇದನ್ನು ಗುಳ್ಳೆ ಆಕಾರದಲ್ಲಿ ಇರುವ ಕಾರಣ ಬಬಲ್‌ ಮಾದರಿ

ಕೊರೋನಾದಿಂದ ರಕ್ಷಿಸಿಕೊಳ್ಳಲು ಬೈಕಿಗೆ ಬಬಲ್ | ಇಲ್ಲಿದೆ ವೈರಲ್ ವೀಡಿಯೋ Read More »

“ತೇಜಸ್ವಿ ಸೂರ್ಯ ಹಾಗು ಮಾವ ರವಿಸುಬ್ರಹ್ಮಣ್ಯ ಲಸಿಕೆ ಮಾರಾಟಗಾರರು”: ಕಾಂಗ್ರೆಸ್

ಬೆಂಗಳೂರು ಆಡಳಿತ ಪಕ್ಷದ ಶಾಸಕರು ಮತ್ತು ಸಂಸದರುಗಳು ಲಸಿಕೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದಾರೆ. ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳ ಮುಖಾಂತರ ದುಬಾರಿ ಬೆಲೆಗೆ ಮಾರಾಟ ಮಾಡಿಸಿ ಲಾಭ ಪಡೆಯಲಾಗುತ್ತಿದೆ ಇಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಕನಿಷ್ಠ 900 ರಿಂದ 1200 ರೂ. ಹಣ ಪಡೆದು ಲಸಿಕೆಯನ್ನು ಜನಸಾಮಾನ್ಯರಿಗೆ ಮಾರಾಟ ಮಾಡಲಾಗುತ್ತಿದೆ. ತಮ್ಮ ಬಳಿ ಅಷ್ಟು ಹಣವಿಲ್ಲ ಎಂದು

“ತೇಜಸ್ವಿ ಸೂರ್ಯ ಹಾಗು ಮಾವ ರವಿಸುಬ್ರಹ್ಮಣ್ಯ ಲಸಿಕೆ ಮಾರಾಟಗಾರರು”: ಕಾಂಗ್ರೆಸ್ Read More »

ಇನ್ನೆರಡು ದಿನಗಳಲ್ಲಿ ಮತ್ತೊಂದು ಪ್ಯಾಕೇಜ್ ಘೋಷಣೆ: ಸಿಎಂ

ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಸಿಎಂ ಬಿಎಸ್‌ವೈ, ಎರಡನೇ ಹಂತದ ಕೋವಿಡ್ ಪ್ಯಾಕೇಜ್ ರೆಡಿ ಆಗುತ್ತಿದೆ. ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.ರಾಜ್ಯ ಸರ್ಕಾರ ಕೋವಿಡ್ ಎರಡನೇ ಹಂತದ ಲಾಕ್‌ಡೌನ್ ಹಿನ್ನೆಲೆಯಲ್ಲಿ ೧೨೫೦ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಈ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಇದೀಗ ರಾಜ್ಯ ಸರ್ಕಾರ ಎರಡನೇ ಹಂತದ ಪ್ಯಾಕೇಜ್ ಘೋಷಣೆ ಮಾಡಲು ನಿರ್ಧರಿಸಿದೆ ಎಂದಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಲಾಕ್ಡೌನ್ ವಿಸ್ತರಣೆ: ಇನ್ನು ಲಾಕ್‌ಡೌನ್

ಇನ್ನೆರಡು ದಿನಗಳಲ್ಲಿ ಮತ್ತೊಂದು ಪ್ಯಾಕೇಜ್ ಘೋಷಣೆ: ಸಿಎಂ Read More »