May 2021

ನಮಗಿಲ್ಲದ ಲಸಿಕೆಯನ್ನು ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಪೂರೈಸಿದ್ದ್ಯಾಕೆ…?ಇದು ಪ್ರಜಾಪ್ರಭುತ್ವವೋ ನಿರಂಕುಶಪ್ರಭುತ್ವವೋ…..?: ಯು ಟಿ ಖಾದರ್

ಮಂಗಳೂರು: ಇಂದು ನಮ್ಮ ದೇಶದ ಜನತೆಗೆ ವಿತರಿಸಲು ಕೋವಿಡ್ ವ್ಯಾಕ್ಸಿನ್ ಕೊರತೆ ಉಂಟಾಗಿದ್ದು, ದೇಶದ ಪ್ರಜೆಗಳಿಗೆ ಸಾಕಾಗುವಷ್ಟು ಲಸಿಕೆ ಇಟ್ಟುಕೊಳ್ಳದೆ ಹೊರ ರಾಷ್ಟ್ರಗಳಿಗೆ ಲಸಿಕೆ ಪೂರೈಸಿದ್ದು ಯಾಕೆ, ಎಂದು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಯು ಟಿ ಖಾದರ್ ಪ್ರಶ್ನಿಸಿದ್ದಾರೆ. ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದಾಗಿಯೂ,  ಸುಮಾರು 20ಕ್ಕೂ  ಹೆಚ್ಚು ವಿದೇಶಿ ಲಸಿಕೆ ಕಂಪೆನಿಗಳು ಭಾರತಕ್ಕೆ ಲಸಿಕೆ ನೀಡಲು […]

ನಮಗಿಲ್ಲದ ಲಸಿಕೆಯನ್ನು ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಪೂರೈಸಿದ್ದ್ಯಾಕೆ…?ಇದು ಪ್ರಜಾಪ್ರಭುತ್ವವೋ ನಿರಂಕುಶಪ್ರಭುತ್ವವೋ…..?: ಯು ಟಿ ಖಾದರ್ Read More »

ದ.ಕ : 7 ಗಂಟೆಯಿಂದ ಪಡಿತರ ವಿತರಣೆ, ತಂಬ್ ಗೆ ಒತ್ತಾಯಿಸುವಂತಿಲ್ಲ-ಜಿಲ್ಲಾಧಿಕಾರಿ

ಮಂಗಳೂರು, ಮೇ 21: ನ್ಯಾಯಬೆಲೆ ಅಂಗಡಿದಾರರು ಬೆಳಗ್ಗೆ ಏಳು ಗಂಟೆಗೆಯಿಂದ  ಕಡ್ಡಾಯವಾಗಿ  ಪಡಿತರ ವಿತರಣೆ ಪಾರಂಭಿಸಬೇಕು,  ಅಲ್ಲದೆ 10 ಗಂಟೆ ನಂತರ ಕ್ಯೂ ನಲ್ಲಿ ಉಳಿದವರಿಗೂ ಪಡಿತರ ವಿತರಿಸಬೇಕು ಹಾಗೆ, ಕೋವಿಡ್  ಮಾರ್ಗಸೂಚಿಯನ್ನು ಪಾಲನೆ ಮಾಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದ್ದಾರೆ. ನ್ಯಾಯಬೆಲೆ ಅಂಗಡಿದಾರರು ಬೆಳಗ್ಗೆ 7 ಗಂಟೆಯ ಮೊದಲೇ ಬಂದು ಅಂಗಡಿ ಬಾಗಿಲು  ತೆರೆಯಬೇಕು, ಹಾಗೇ 7 ಗಂಟೆಯಿಂದ  ಕಡ್ಡಾಯವಾಗಿ ಪಡಿತರ ವಿತರಣೆ ಪ್ರಾರಂಭಿಸಬೇಕು. ಪಡಿತರ ಚೀಟಿದಾರರು ದಟ್ಟಣೆಯಾದಲ್ಲಿ ಆದ್ಯತೆ ಮೇರೆಗೆ ಸಾಲಿನಲ್ಲಿ ನಿಲ್ಲಲು

ದ.ಕ : 7 ಗಂಟೆಯಿಂದ ಪಡಿತರ ವಿತರಣೆ, ತಂಬ್ ಗೆ ಒತ್ತಾಯಿಸುವಂತಿಲ್ಲ-ಜಿಲ್ಲಾಧಿಕಾರಿ Read More »

ಹರಕಲು ಜೋಪಡಿಯಲ್ಲಿ ವಾಸಿಸುತ್ತಿದ್ದವರಿಗೆ ಮನೆ ನಿರ್ಮಿಸಿಕೊಟ್ಟ ಮುಸ್ಲಿಂ ಐಕ್ಯ ವೇದಿಕೆ

ವಿಟ್ಲ: ವಾಸಿಸಲು ಸರಿಯಾದ ಮನೆ ಇರದೆ ಹರಕಲು ಜೋಪಡಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೋರ್ವರಿಗೆ ಮುಸ್ಲಿಂ ಐಕ್ಯ ವೇದಿಕೆ ಪೆರುವಾಯಿ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಇಲ್ಲಿನ ಮುಚ್ಚಿರಪದವು ಎಂಬಲ್ಲಿ  ವಾಸಿಸುತ್ತಿದ್ದ ಸಂಜೀವ ಮೊಗೇರ ಎಂಬವರ ಹಳೆಯ ಮನೆ ಈ ಬಾರಿಯ ಮಳೆಗಾಲ ಆರಂಭದಲ್ಲಿ ಹಾನಿಯಾಗಿ ಶೋಚನೀಯ ಸ್ಥಿತಿ ತಲುಪಿತ್ತು. ಅವರು ಹೊಸಮನೆ ನಿರ್ಮಿಸಿಕೊಳ್ಳುವಲ್ಲಿ ಅಶಕ್ತರಾಗಿದ್ದ ಕಾರಣ ಪರಿಸ್ಥಿತಿ ಮನಗಂಡು ಪೆರುವಾಯಿ ಮುಸ್ಲಿಂ ಐಕ್ಯ ವೇದಿಕೆಯವರು ಸುಮಾರು ಒಂದು ಲಕ್ಷ ರೂಪಾಯಿ ಸ್ವಂತ ಖರ್ಚಿನಲ್ಲಿ ಹೊಸದೊಂದು ಸಣ್ಣ ಸುಸಜ್ಜಿತ ಮನೆ

ಹರಕಲು ಜೋಪಡಿಯಲ್ಲಿ ವಾಸಿಸುತ್ತಿದ್ದವರಿಗೆ ಮನೆ ನಿರ್ಮಿಸಿಕೊಟ್ಟ ಮುಸ್ಲಿಂ ಐಕ್ಯ ವೇದಿಕೆ Read More »

ಮರೆಯಲಾಗದ ಮಹಾಪತನ : ಮಂಗಳೂರು ‌ವಿಮಾನ ದುರಂತದ ಕಹಿನೆನಪು

ಬೆಳಿಗ್ಗೆ 5.30 ರ ಸಮಯ ಇರಬಹುದು. ವಿಮಾನದ ಪೈಲಟ್‌ ಇನ್ನು ಅರ್ಧ ಗಂಟೆಯಲ್ಲಿ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ ಎಂದು ಘೋಷಣೆ ಮಾಡಿದರು. ಇನ್ನೇನು ತವರು ನೆಲ ಬಂದೇ ಬಿಟ್ಟಿತು ಎನ್ನುವ ಸಂತಸದಲ್ಲಿದ್ದ ವಿಮಾನ ಪ್ರಯಾಣಿಕರ ಜೀವನದಲ್ಲಿ ಬಹುದೊಡ್ಡ ದುರಂತ ನಡೆದೇ ಹೋಯಿತು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ಮಹಾ ದುರಂತಕ್ಕೆ ಮೇ 22 (ಇಂದು)ರಂದು 11 ವರ್ಷ ಪೂರ್ಣವಾಗುತ್ತಿದೆ. ದೇಶದ ನಾಗರಿಕ ವಿಮಾನಯಾನದ ಇತಿಹಾಸದಲ್ಲಿ ಇದು ಎಂದೆಂದೂ

ಮರೆಯಲಾಗದ ಮಹಾಪತನ : ಮಂಗಳೂರು ‌ವಿಮಾನ ದುರಂತದ ಕಹಿನೆನಪು Read More »

ವಯಸ್ಸಾದಂತೆ ಇಲ್ಲಿ ಅವಳು ಅವನಾಗುತ್ತಾನೆ: ಲಾ ಸಲಿನಾಸ್ ಎಂಬ ವಿಚಿತ್ರ ಗ್ರಾಮ

ವಯಸ್ಸಾದಂತೆ ಜನರ ಲಿಂಗ ಬದಲಾಗುವ ಸ್ಥಳದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ! ಡೊಮಿನಿಕನ್ ರಿಪಬ್ಲಿಕ್ನಲ್ಲಿ ಹುಡುಗಿಯರು ಹುಡುಗರಾಗಿ ಬೆಳೆಯುವ ಗ್ರಾಮವೊಂದಿದೆ. ಲಾ ಸಲಿನಾಸ್ ಹೆಸರಿನ ಈ ಗ್ರಾಮವನ್ನು ಜನರು ಶಾಪಗ್ರಸ್ತ ಗ್ರಾಮವೆಂದು ಪರಿಗಣಿಸುತ್ತಾರೆ. ಲಾ ಸೆಲಿನಾಸ್ (La Salinas) ಹೆಸರಿನ ಈ ಗ್ರಾಮದ ಹುಡುಗಿಯರು ತನ್ನ ವಯಸ್ಸಿನ 12 ವರ್ಷಕ್ಕೆ ತಿರುಗುತ್ತಿದ್ದಂತೆ ಯುವಕರಾಗಿ ಪರಿವರ್ತನೆಯಾಗುತ್ತಾರಂತೆ. (Girls to turn into Boys). ಈ ಗ್ರಾಮದ ಜನಸಂಖ್ಯೆ ಕೇವಲ 6 ಸಾವಿರ ಮಾತ್ರ. ಆದರೂ ಕೂಡ ಈ ಚಿಕ್ಕ

ವಯಸ್ಸಾದಂತೆ ಇಲ್ಲಿ ಅವಳು ಅವನಾಗುತ್ತಾನೆ: ಲಾ ಸಲಿನಾಸ್ ಎಂಬ ವಿಚಿತ್ರ ಗ್ರಾಮ Read More »

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ ಆರೋಪಿ ಸೆರೆ

ಮಂಗಳೂರು, ಮೇ ೨೧: ಯುವತಿವೋರ್ವಳಿಗೆ ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ಕೊನೆಗೆ ವಂಚಿಸಿದ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿದಿಸಿದೆ.ಆರೋಪಿಯನ್ನು ಅರುಣ್ ರಾಜ್ ಕಾಪಿಕಾಡ್ (39) ಎಂದು ಗುರುತಿಸಲಾಗಿದ್ದು, ಈತನನ್ನು ಪಾಂಡೇಶ್ವರದ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತ ಯುವತಿಯನ್ನು ಕಳೆದ ಡಿಸೆಂಬರ್‌ನಲ್ಲಿ ನಗರದ ಹೊಟೇಲ್‌ಗೆ ಕರೆತಂದು ಜ್ಯೂಸ್ ನೀಡಿ ಪ್ರಜ್ಞೆ ತಪ್ಪಿಸಿ ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಅಲ್ಲದೆ ಬೆದರಿಸಿದ್ದಾನೆ ಎಂದು ದೂರು ದಾಖಲಾಗಿದೆ.ಆ ಬಳಿಕ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಮತ್ತೊಮ್ಮೆ ತನ್ನ ಅಪಾರ್ಟ್ಮೆಟ್‌ನಲ್ಲೂ

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ ಆರೋಪಿ ಸೆರೆ Read More »

ಬ್ಲ್ಯಾಕ್ ಫಂಗಸ್ ಸೋಂಕಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ: ಸಿಎಂ

ಬೆಂಗಳೂರು: ಬ್ಲ್ಯಾಕ್ ಫಂಗಸ್ ಸೋಂಕಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡವರಿಗೆ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಇದಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲು ತೀರ್ಮಾನಿಸಿದ್ದೇವೆ. ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಲಭ್ಯವಾಗುತ್ತಿದ್ದು ಸರ್ಕಾರ ಚಿಕಿತ್ಸಾ ವೆಚ್ಚ ಭರಿಸಲಿದೆ ಎಂದು ಅವರು ಹೇಳಿದ್ದಾರೆ. ‘ಸಾರ್ವಜನಿಕರು ಕೋವಿಡ್ ಹರಡುವಿಕೆ ತಡೆಯಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ

ಬ್ಲ್ಯಾಕ್ ಫಂಗಸ್ ಸೋಂಕಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ: ಸಿಎಂ Read More »

ಮತ್ತೆ 15 ದಿನ ರಾಜ್ಯ ಲಾಕ್: ಏನೇನಿರುತ್ತೆ? ಏನಿರಲ್ಲ?ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು.ಮೇ21: ರಾಜ್ಯದಲ್ಲಿ ಮೇ.24ರಿಂದ ಜೂನ್ 7ರವರೆಗೆ ವಿಸ್ತರಣೆಗೊಂಡಿರುವಂತ ಸಂಪೂರ್ಣ ಲಾಕ್ ಡೌನ್ ಸಂದರ್ಭದಲ್ಲಿ ಯಾವುದಕ್ಕೆ ಅನುಮತಿ.? ಯಾವುದಕ್ಕೆ ಇಲ್ಲ.? ಇಲ್ಲಿದೆ ಸಂಪೂರ್ಣ ಮಾಹಿತಿ. ಯಾವುದಕ್ಕೆ ಅನುಮತಿ: ಕೋವಿಡ್ ಸುರಕ್ಷಾ ನಿಯಮಗಳೊಂದಿಗೆ ಎಲ್ಲಾ ಬಗೆಯ ನಿರ್ಮಾಣ, ದುರಸ್ತಿ ಚಟುವಟಿಕೆಗಳಿಗೆ ಅನುಮತಿ.ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳಿಗೂ ಯಾವುದೇ ನಿರ್ಬಂಧವಿಲ್ಲ.ಎಲ್ಲಾ ಬಗೆಯ ಕೈಗಾರಿಕೆಗಳು, ಸಂಸ್ಥೆಗಳು, ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸಬಹುದು.ಸಿಬ್ಬಂದಿ ಓಡಾಟಕ್ಕೆ ಸಂಸ್ಥೆಗಳಿಂದ ಪಡೆದುಕೊಂಡ ಐಡಿ ಕಾರ್ಡ್ ತೋರಿಸುವುದು ಕಡ್ಡಾಯ.ಪಡಿತರ ಅಂಗಡಿ ಹಾಗೂ ದಿನಸಿ, ಹಣ್ಣು ತರಕಾರಿ, ಹಾಲಿನ ಬೂತ್, ಮೀನು-ಮಾಂಸ, ಪಶು

ಮತ್ತೆ 15 ದಿನ ರಾಜ್ಯ ಲಾಕ್: ಏನೇನಿರುತ್ತೆ? ಏನಿರಲ್ಲ?ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಕೇರಳದಲ್ಲಿ ಮತ್ತೆ ಲಾಕ್ ಡೌನ್: ಮೇ.30ರ ವರೆಗೂ‌ ವಿಸ್ತರಣೆ

ತಿರುವನಂತಪುರ:  ರಾಜ್ಯದಲ್ಲಿ ಕೋವಿಡ್ -19 ಲಾಕ್‌ಡೌನ್ ಅನ್ನು ಮೇ 30ರವರೆಗೆ ವಿಸ್ತರಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಪ್ರಕಟಿಸಿದ್ದಾರೆ.ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಕಾರಣ ರಾಜ್ಯದ ಮಲಪ್ಪುರಂನಲ್ಲಿ ಟ್ರಿಪಲ್ ಲಾಕ್ ಡೌನ್ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.ಇನ್ನೂ ಕೋವಿಡ್ -19 ಟೆಸ್ಟ್ ಪಾಸಿಟಿವಿಟಿ ದರ ಹಾಗೂ ಸಕ್ರಿಯ ಪ್ರಕರಣಗಳು ಕಡಿಮೆಯಾಗಿರುವ ಕಾರಣ ತಿರುವನಂತಪುರ, ಎರ್ನಾಕುಲಂ ಹಾಗೂ  ತ್ರಿಶೂರ್ ಜಿಲ್ಲೆಗಳಲ್ಲಿ ವಿಧಿಸಲಾದ ಟ್ರಿಪಲ್ ಲಾಕ್‌ಡೌನ್‌ನ್ನು ನಾಳೆಯಿಂದ ಹಿಂಪಡೆಯಲಾಗುವುದು ಎಂದು ಅವರು ಹೇಳಿದರು.Attachments area

ಕೇರಳದಲ್ಲಿ ಮತ್ತೆ ಲಾಕ್ ಡೌನ್: ಮೇ.30ರ ವರೆಗೂ‌ ವಿಸ್ತರಣೆ Read More »

ಬ್ರೇಕಿಂಗ್ ಸಮಾಚಾರ: ರಾಜ್ಯದಲ್ಲಿ ಜೂ.7ರ ವರೆಗೆ ಮತ್ತೆ ಲಾಕ್ ಡೌನ್ ವಿಸ್ತರಣೆ

ಬೆಂಗಳೂರು: ಮೇ.21: ರಾಜ್ಯದಲ್ಲಿ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್​ಡೌನ್​​ನ ವಿಸ್ತರಿಸಿದೆ. ಮೇ 24ರವರೆಗೆ ಲಾಕ್​ಡೌನ್​ ಘೋಷಿಸಿದ್ದ ಸಿಎಂ ಬಿ.ಎಸ್​. ಯಡಿಯೂರಪ್ಪ ಈಗ ಲಾಕ್​​ಡೌನ್​​ನ ಜೂ.7ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಸಚಿವರ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಎದುರು ಮತ್ತೆ 14 ದಿನಗಳ ಕಾಲ ರಾಜ್ಯಾದ್ಯಂತ ಟಫ್​ ಲಾಕ್​ಡೌನ್​ ಮುಂದುವರೆಯಲಿದೆ ಎಂದು ಘೋಷಿಸಿದರು. ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಲಾಕ್‌ಡೌನ್ ವಿಚಾರದಲ್ಲಿ ಕೆಲ ನಿರ್ಧಾರ

ಬ್ರೇಕಿಂಗ್ ಸಮಾಚಾರ: ರಾಜ್ಯದಲ್ಲಿ ಜೂ.7ರ ವರೆಗೆ ಮತ್ತೆ ಲಾಕ್ ಡೌನ್ ವಿಸ್ತರಣೆ Read More »