Ad Widget .

ಡಿಸಿ ಸಿಂಧೂರಿ – ಎಂಪಿ ಸಿಂಹ ನಡುವೆ ಮೈಸೂರು ಮಹಾಯುದ್ಧ

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಸಂಸದ ಪ್ರತಾಪ್ ಸಿಂಹ ನಡುವೆ ದಿನನಿತ್ಯ ವಾಕ್ಸಮರ ನಡೆಯುತ್ತಿದ್ದು, ಮೈಸೂರಿನಲ್ಲಿ ಮಹಾಯುದ್ಧ ಪ್ರಾರಂಭವಾದಂತಿದೆ. ಒಂದೆಡೆ ಮೈಸೂರಿಗೆ ಬಂದಾಗಿನಿಂದಲೂ ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರೋಹಿಣಿ ಸಿಂಧೂರಿ ಆರೋಪಿಸಿದರೇ, ಜಿಲ್ಲಾಧಿಕಾರಿ ದಿನೇದಿನೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆಂದು ಸಂಸದ ಪ್ರತಾಪ್ ಸಿಂಹ ಹರಿಹಾಯುತ್ತಿದ್ದಾರೆ.

Ad Widget . Ad Widget .

ಕೊರೋನಾ ಸಾಂಕ್ರಾಮಿಕ ಪಿಡುಗು ನಮ್ಮನ್ನು ದಿನೇದಿನೇ ಬಾಧಿಸುತ್ತಿದೆ ಆದರೂ ಜಿಲ್ಲಾಡಳಿತದೊಂದಿಗೆ ಒಗ್ಗೂಡಿಕೊಂಡು, ಜಿಲ್ಲೆಯ ಜನರ ಹಿತ ಕಾಯ್ದುಕೊಳ್ಳಬೇಕಾದ ಸಂಸದರು ವಿನಾಕಾರಣ ಏನೇನೋ ಹೇಳಿಕೆ ನೀಡಿದರೆ ಹೇಗಾಗಬಹುದು. ಜಿಲ್ಲಾಡಳಿತ ಹಗಲಿರುಳು ದುಡಿದು ಮೈಸೂರಿನ ಜನತೆಗೆ ಭರವಸೆ ನೀಡುತ್ತಿದ್ದರೆ, ಸಂಸದರು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿ, ಆತ್ಮವಿಶ್ವಾಸ ಕುಂದಿಸುವ ಕೆಲಸ ಮಾಡುತ್ತಿದ್ದಾರೆ, ಇನ್ನು ನನ್ನ ಮೇಲೆ ಆರೋಪಿಸುತ್ತಿರುವುದು ಇಂದು ನಿನ್ನೆಯ ಕಥೆಯಲ್ಲ. ಮೈಸೂರಿಗೆ ಬಂದಾಗಿನಿಂದಲೂ ನನ್ನನ್ನು ಕೇಂದ್ರವಾಗಿರಿಸಿಕೊಂಡು ಸಂಸದರು ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಆಕ್ರೋಶಿತರಾಗಿದ್ದಾರೆ.

Ad Widget . Ad Widget .

ರಾಜ್ಯದಲ್ಲಿ ಅತಿ ಹೆಚ್ಚು ಲಸಿಕೆ ಹಾಕಿದ ಜಿಲ್ಲೆ ಮೈಸೂರು. ಇತರ ಜಿಲ್ಲೆಗೆ ಹೋಲಿಸಿದರೆ ಕೋವಿಡ್ ಸೋಂಕಿತರ ಮರಣ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆ ಇದೆ. ಟೆಸ್ಟಿಂಗ್ ನಲ್ಲಿ ರಾಜ್ಯ ಸರ್ಕಾರದ ಗುರಿಯನ್ನು ಶೇಕಡ 150ರಷ್ಟು ಸಾಧಿಸಲಾಗಿದೆ. 2020ರಲ್ಲಿ ಗಣಕೀಕೃತ ಬೆಡ್ ವ್ಯವಸ್ಥೆ ಮಾಡಿದ ಜಿಲ್ಲೆ ಮೈಸೂರು. ಅದರ ಸಹಾಯದಿಂದ ಕೊರೋನಾ ಎರಡನೆಯ ಅಲೆ ಎದುರಿಸಲು ಜಿಲ್ಲೆಗೆ ಸುಲಭವಾಗುತ್ತಿದೆ. ರಾಜ್ಯಕ್ಕೆ ಮಾದರಿಯಾಗುವಂತೆ ಜಿಲ್ಲೆಯಲ್ಲಿ ‘ಕೋವಿಡ್ ಮಿತ್ರ’ ತೆರೆಯುವ ಮೂಲಕ ಸುಮಾರು ಮೂವತ್ತು ಸಾವಿರ ಸೋಂಕಿತರಿಗೆ ಕನ್ಸಲ್ಟೆನ್ಸಿ ನೀಡಲಾಗಿದೆ. ಇದರ ಹೊರತಾಗಿಯೂ ಸಂಸದರು ಜಿಲ್ಲಾಡಳಿತಕ್ಕೆ ಅಸಹಕಾರ ತೋರುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.

ಇನ್ನೊಂದೆಡೆ ದಿನೇದಿನೇ ಜಿಲ್ಲಾಧಿಕಾರಿ ವಿರುದ್ಧ ಹರಿಹಾಯುತ್ತಿರುವ ಪ್ರತಾಪ್ ಸಿಂಹ, ಸಚಿವ ಎಸ್ ಟಿ ಸೋಮಶೇಖರ್ ಜಿಲ್ಲೆಗೆ 41 ಕೋಟಿ ಕೋಟಿ ಪರಿಹಾರ ನಿಧಿ ತಂದಿದ್ದರು. ಈಗ ಕೇಳಿದರೆ ಜಿಲ್ಲಾಧಿಕಾರಿ 38 ಕೋಟಿ ಖರ್ಚಾಗಿದೆ ಎನ್ನುತ್ತಾರೆ. ಅಷ್ಟು ಹಣ ಖರ್ಚು ಮಾಡಿ ಕೈಗೊಂಡ ಪರಿಹಾರ ಕ್ರಮವಂತೂ ಜಿಲ್ಲೆಯಲ್ಲಿ ಕಣ್ಣಿಗೆ ಕಾಣುತ್ತಿಲ್ಲ. ಜಿಲ್ಲಾಡಳಿತಕ್ಕೆ ಔಷಧಿ ಖರೀದಿಸಲು ಹಣವಿಲ್ಲದಿದ್ದಾಗ ಜಿಲ್ಲಾಧಿಕಾರಿಗೆ ಸ್ವಿಮ್ಮಿಂಗ್ ಫೂಲ್ ಕಟ್ಟಿಸಲು ಹಣ ಎಲ್ಲಿಂದ ಬಂತು ಎಂದು ಕಿಡಿಕಾರಿದ್ದಾರೆ. ಸರಕಾರದ ಬೊಕ್ಕಸ ಖಾಲಿಯಾಗಿರುವ ಅವಧಿಯಲ್ಲಿ ಜಿಲ್ಲಾಧಿಕಾರಿ ಒಬ್ಬರು 28 ಕೋಟಿ ರೂಪಾಯಿ ಗಳ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿದ್ದಾರೆ. ಅಂತಹ ಅಧಿಕಾರಿಗಳಿಂದ ನಮ್ಮಂತಹ ಜನಪ್ರತಿನಿಧಿಗಳು ಪಾಠ ಕಲಿಯಬೇಕಿಲ್ಲ ಎಂದು ಸಿಂಹ ಆಕ್ರೋಶಿತರಾಗಿದ್ದಾರೆ.

ಜಿಲ್ಲೆಗೆ ಬಂದ ವೆಂಟಿಲೇಟರ್ ಗಳನ್ನು ಜಿಲ್ಲಾಧಿಕಾರಿ ಅಳವಡಿಸದೆ ಹಾಗೆ ಇಟ್ಟಿದ್ದಾರೆ. ಕೇಳಿದರೆ ದಿನಕ್ಕೊಂದು ಕಾರಣ ನೀಡುತ್ತಿದ್ದಾರೆ. ಇನ್ನು ಸ್ಟೆಪ್ ಡೌನ್ ಆಸ್ಪತ್ರೆಗಳಿಗೆ ಅನುಮತಿ ನೀಡಬೇಕಾದರೆ ಮೊದಲು ಆಯಾ ಆಸ್ಪತ್ರೆಗಳ ವೈದ್ಯಕೀಯ ಮೂಲಸೌಕರ್ಯಗಳ ಬಗ್ಗೆ ಜಿಲ್ಲಾಧಿಕಾರಿ ಸಮಿತಿ ರಚಿಸಿ ಪರಿಶೀಲನೆ ನಡೆಸಬೇಕು. ಆದರೆ ಇಲ್ಲಿ ಯಾವುದೇ ಸಮಿತಿಯುೂ ಇಲ್ಲ, ಪರಿಶೀಲನೆಯೂ ಇಲ್ಲದೆ ಆಸ್ಪತ್ರೆಗಳಿಗೆ ಅನುಮತಿ ನೀಡಲಾಗಿದೆ. ಜಿಲ್ಲೆಯ ಜನರ ಆರೋಗ್ಯದ ವಿಚಾರದಲ್ಲಿ ಜಿಲ್ಲಾಧಿಕಾರಿಗೆ ಕಿಂಚಿತ್ತು ಜವಾಬ್ದಾರಿ ಇಲ್ಲದಂತಾಗಿದೆ, ಎಲ್ಲ ವಿಚಾರಗಳ ಮೇಲೆ ಜಿಲ್ಲಾಧಿಕಾರಿಗಳ ವಿರುದ್ಧ ತನಿಖೆಯಾಗಲಿ ಎಂದು ಪ್ರತಾಪ್ ಹೇಳಿದ್ದಾರೆ.

Leave a Comment

Your email address will not be published. Required fields are marked *