Ad Widget .

ಅಕ್ರಮ ಮದ್ಯ ಮಾರಾಟ | ಓರ್ವನ ಬಂಧನ

ಹೆಬ್ರಿ: ಹೆಬ್ರಿಯಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮೇ. 26 ರಂದು ನಡೆದಿದೆ. ಪೊಲೀಸರು ವಶಕ್ಕೆ ಪಡೆದ ಆರೋಪಿ ‌ಉಪೇಂದ್ರ ನಾಯಕ್ (48) ಎಂಬವರು ಎಂದು ತಿಳಿದುಬಂದಿದೆ.

Ad Widget . Ad Widget .

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೆಬ್ರಿ ಠಾಣಾ ಪೊಲೀಸರು ಶಿವಪುರ ಗ್ರಾಮದ ಮುಳ್ಳುಗುಡ್ಡೆ ಕಾಳಾಯಿ ಎಂಬಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು, ಆತನ ಬಳಿ ಇದ್ದ ಸುಮಾರು 1300 ರೂ. ಮೌಲ್ಯದ ಮದ್ಯ ತುಂಬಿರುವ 180 ಎಂಎಲ್ ನ ಒಟ್ಟು 8 ಪ್ಯಾಕೆಟ್, 90 ಎಂ ಎಲ್ ನ 9 ಪ್ಯಾಕೆಟ್, 90 ಎಂಎಲ್ ನ 12 ಪ್ಲಾಸ್ಟಿಕ್ ಬಾಟಲ್ ಹಾಗೂ ಮದ್ಯ ಮಾರಾಟದಿಂದ ಸಂಗ್ರಹವಾದ 250 ರೂ. ನಗದು ಮತ್ತು 1 ಬಣ್ಣದ ಪ್ಲಾಸ್ಟಿಕ್ ಚೀಲವನ್ನು ವಶಪಡಿಸಿಕೊಂಡಿದ್ದಾರೆ.

Ad Widget . Ad Widget .

ಆರೋಪಿಯ ವಿರುದ್ಧ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತದ ಲಾಕ್ ಡೌನ್ ಆದೇಶವನ್ನು ಉಲ್ಲಂಘನೆ ಮಾಡಿ ಮದ್ಯವನ್ನು ಸಂಗ್ರಹ ಮಾಡಿ ಅಕ್ರಮವಾಗಿ ಮಾರಾಟ ಮಾಡಿರುವುದಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *