Mangalore news

ಪ್ರಧಾನಿ ಭೇಟಿ ನೀಡಿ ಹತ್ತೇದಿನದಲ್ಲಿ ಕಿತ್ತು ಹೋಯ್ತು‌ ಡಾಂಬರು| ಅಬ್ಬಬ್ಬಾ ನಮ್ಮ ಕಾಮಗಾರಿಗಳ ಗುಣಮಟ್ಟವೇ!!

ಸಮಗ್ರ ನ್ಯೂಸ್: ಮಂಗಳೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರು ಸೇತುವೆ ಮೇಲಿನ ಗುಂಡಿಗಳನ್ನು ಮುಚ್ಚುವ ಸಲುವಾಗಿ ಹಾಕಿದ್ದ ಡಾಂಬರು ಮೋದಿ ಭೇಟಿ ನೀಡಿ ಹೋದ ಹತ್ತೇ ದಿನಗಳಲ್ಲಿ ಕಿತ್ತುಹೋಗಿದೆ. ನವಮಂಗಳೂರು ಬಂದರಿನಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಸೆ.2ರಂದು ನಗರಕ್ಕೆ ಭೇಟಿ ನೀಡಿದ್ದರು. ಬಂಗ್ರಕೂಳೂರಿನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲು ಮೋದಿ ಅವರು ನವಮಂಗಳೂರು ಬಂದರಿನಿಂದ ರಸ್ತೆ ಮಾರ್ಗವಾಗಿ ಸಂಚರಿಸಿದ್ದರು. ಅವರು […]

ಪ್ರಧಾನಿ ಭೇಟಿ ನೀಡಿ ಹತ್ತೇದಿನದಲ್ಲಿ ಕಿತ್ತು ಹೋಯ್ತು‌ ಡಾಂಬರು| ಅಬ್ಬಬ್ಬಾ ನಮ್ಮ ಕಾಮಗಾರಿಗಳ ಗುಣಮಟ್ಟವೇ!! Read More »

ಮಂಗಳೂರು: ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾ.ಮಂಡಳಿ ಸದಸ್ಯರಾಗಿ ಪಿ.ಬಿ ಹರೀಶ್ ರೈ

ಸಮಗ್ರ ನ್ಯೂಸ್: ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಆಯ್ಕೆಯಾಗಿದ್ದಾರೆ. ಇವರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಆಡಳಿತ ಮಂಡಳಿ ನಿರ್ದೇಶಕ ಹಾಗೂ ಮಂಗಳೂರು ಪ್ರೆಸ್ ಕ್ಲಬ್‌ನ ಉಪಾಧ್ಯಕ್ಷರಾಗಿದ್ದಾರೆ.

ಮಂಗಳೂರು: ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾ.ಮಂಡಳಿ ಸದಸ್ಯರಾಗಿ ಪಿ.ಬಿ ಹರೀಶ್ ರೈ Read More »

ಮಂಗಳೂರು: ಶತಾಯುಷಿ ಡ್ರೈವರ್ ಮೈಕಲ್ ಡಿಸೋಜ ಇನ್ನಿಲ್ಲ

ಸಮಗ್ರ ನ್ಯೂಸ್: ವಯಸ್ಸು ನೂರಾದರು ಅತ್ಯಂತ ಸಲೀಸಾಗಿ ಚಾಲನೆ ಮಾಡುತ್ತಿದ್ದ, ಮಂಗಳೂರಿನ ನಿವೃತ್ತ ಸೈನಿಕ, ಶತಾಯುಷಿ ಮೈಕಲ್ ಡಿಸೋಜ (108) ನಿಧನರಾಗಿದ್ದಾರೆ. ಮಕ್ಕಳಿಲ್ಲದ ಅವರು ಪರ್ಕಳದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಮದ್ರಾಸ್‌ ಸರ್ಕಾರದಲ್ಲಿ ಮೆಕ್ಯಾನಿಕಲ್ ಕಮ್ ಡ್ರೈವರ್ ಆಗಿ ಸೇನೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸೈನ್ಯದಲ್ಲಿ 10 ವರ್ಷ ಸೇವೆಯ ನಂತರ ಲೋಕೋಪಯೋಗಿ ಇಲಾಖೆಗೆ ಸೇರಿ ಉಡುಪಿ ರಥಬೀದಿಯ ಕಾಂಕ್ರೀಟ್ ರಸ್ತೆ, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಮಂಗಳೂರಿನ ಕೂಳೂರು ಸೇತುವೆ, ಮಲ್ಪೆ ಕಲ್ಮಾಡಿ ಸೇತುವೆ,

ಮಂಗಳೂರು: ಶತಾಯುಷಿ ಡ್ರೈವರ್ ಮೈಕಲ್ ಡಿಸೋಜ ಇನ್ನಿಲ್ಲ Read More »

ಮಂಗಳೂರು: ಹೋಂ ಸ್ಟೇ, ಮನೆಗಳಿಂದ ನಗ ನಗದು ದೋಚಿದ್ದ ಕಳ್ಳನ ಬಂಧನ

ಸಮಗ್ರ ನ್ಯೂಸ್: ಸೋಮೇಶ್ವರ ಬೀಚ್ ಬಳಿಯ ಹೋಂ ಸ್ಟೇ ಒಂದಕ್ಕೆ ಬುಧವಾರ‌ ಸಂಜೆ ಕನ್ನ ಹಾಕಿದ್ದ ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಉಳ್ಳಾಲ ಠಾಣೆ ವ್ಯಾಪ್ತಿಯ ಎರಡು ಮನೆಗಳಿಂದ ನಗ, ನಗದು ದೋಚಿದ್ದ ಕಳ್ಳನನ್ನ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊವಾಝ್ (35) ಬಂಧಿತ . ಆರೋಪಿ ಮೊವಾಝ್ ಕೇರಳದ ಕಣ್ಣೂರಿನ ಪತ್ನಿ ಮನೆಯಲ್ಲೇ ನೆಲೆಸಿದ್ದು ಆಗಾಗ್ಗೆ ಮಂಗಳೂರಿಗೆ ಬಂದು ಕಳ್ಳತನ ನಡೆಸುತ್ತಿದ್ದ ಎನ್ನಲಾಗಿದೆ. ಸೋಮೇಶ್ವರ ಬಸ್ಸು ತಂಗುದಾಣದ ಬಳಿಯ

ಮಂಗಳೂರು: ಹೋಂ ಸ್ಟೇ, ಮನೆಗಳಿಂದ ನಗ ನಗದು ದೋಚಿದ್ದ ಕಳ್ಳನ ಬಂಧನ Read More »

ಮಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪ| ನಿವೃತ್ತ ಅಧಿಕಾರಿಗೆ ಬಿತ್ತು 1.30 ಕೋಟಿ ದಂಡ

ಸಮಗ್ರ ನ್ಯೂಸ್: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನುಗಾರಿಕೆ ನಿರ್ದೇಶನಾಲಯದ ನಿವೃತ್ತ ಜಂಟಿ ನಿರ್ದೇಶಕ ಗಂಗಾಧರ ವಿ. ಮಡ್ಡಿಕೇರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು 5 ವರ್ಷಗಳ ಕಾಲ ಸಾದಾ ಸಜೆ ಮತ್ತು 1.30 ಕೋ.ರೂ.ದಂಡ ವಿಧಿಸಿ ಶಿಕ್ಷೆ ವಿಧಿಸಿದೆ. ಗಂಗಾಧರ ವಿ. ಮಡ್ಡಿಕೇರಿ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರ ವಿರುದ್ಧ ಮಂಗಳೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ 2013ರ ಆ. 5ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಯನ್ನು ನಡೆಸಿದ

ಮಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪ| ನಿವೃತ್ತ ಅಧಿಕಾರಿಗೆ ಬಿತ್ತು 1.30 ಕೋಟಿ ದಂಡ Read More »

ಮಂಗಳೂರು: ಸಾಕು ನಾಯಿಗೆ ಸೀಮಂತ| ಸೀಮಂತದ ಪೋಟೊ, ವೀಡಿಯೋ ವ್ಯೆರಲ್

ಸಮಗ್ರ ನ್ಯೂಸ್: ಮಹಿಳೆಯರಿಗೆ ಸೀಮಂತ ಮಾಡುವುದು ಸಾಮಾನ್ಯ, ಆದರೆ ಇಲ್ಲೊಬ್ಬರು ಸಾಕು ನಾಯಿಗೆ ಸೀಮಂತದ ಮಾಡಿದ್ದು, ಸೀಮಂತದ ಪೋಟೊ, ವೀಡಿಯೋ ವ್ಯೆರಲ್ ಆಗಿವೆ. ಮಂಗಳೂರಿನ ಗುರುಪುರ ಕ್ಯೆಕಂಬದ ಮಂಜುಳ ಹಾಗೂ ಭಾಸ್ಕರ್ ಎಂಬುವವರ ಪುತ್ರಿ ಸುಶ್ಮಿತಾ ಸಾಲ್ಯಾನ್ ಎಂಬುವವರಿಗೆ ಸಾಕುಪ್ರಾಣಿ ಎಂದರೆ ತುಂಬಾ ಪ್ರೀತಿ, ತಮ್ಮ ಮನೆಯಲ್ಲಿ ಸಾಕಿದ್ದ, ಒಂದುವರೆ ವರುಷದ ಶಾಡೊ ಎಂಬ ಗರ್ಭಿನಿ ನಾಯಿಗೆ ಹಸಿರು ಬಳೆ, ಹಸಿರು ಸೀರೆ, ಕುಂಕುಮ ಅರಸಿನ ಹಚ್ಚಿ, ಆರತಿ ಬೆಳಗಿ ಸೀಮಂತ ಮಾಡಿದ್ದಾರೆ. ಶ್ವಾನಕ್ಕೆ ಅಚ್ಚುಮೆಚ್ಚಿನ ಹಣ್ಣು-ಹಂಪಲು,ಐಸ್

ಮಂಗಳೂರು: ಸಾಕು ನಾಯಿಗೆ ಸೀಮಂತ| ಸೀಮಂತದ ಪೋಟೊ, ವೀಡಿಯೋ ವ್ಯೆರಲ್ Read More »

ಮಂಗಳೂರು: ಪೊಲೀಸ್ ಇಲಾಖೆಯ ಗೀತಾ ಇನ್ನಿಲ್ಲ

ಸಮಗ್ರ ನ್ಯೂಸ್: ಪೊಲೀಸ್ ಇಲಾಖೆಯಲ್ಲಿ ಕಳೆದ 11 ವರ್ಷದಿಂದ ಕರ್ತವ್ಯದಲ್ಲಿದ್ದ ಗೀತಾ ಎಂಬ ಹೆಸರಿನ ಶ್ವಾನ ಶನಿವಾರ ಸಾವಿಗೀಡಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಲ್ಯಾಬ್ರಡಾರ್ ರಿಟ್ರೀವರ್ ಎಂಬ ತಳಿಯ ಈ ಶ್ವಾನವು 2011 ರಲ್ಲಿ ಮೇ 21ರಂದು ಜನಿಸಿದ್ದು, ಅದೇ ವರ್ಷದ ಆಗಸ್ಟ್ 19ರಂದು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿತ್ತು.

ಮಂಗಳೂರು: ಪೊಲೀಸ್ ಇಲಾಖೆಯ ಗೀತಾ ಇನ್ನಿಲ್ಲ Read More »

ಮಂಗಳೂರು: ಹಿಂದೂ ಯುವಸೇನೆ ಕಾರ್ಯಕರ್ತ ಆತ್ಮಹತ್ಯೆ| ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಸಮಗ್ರ ನ್ಯೂಸ್: ಹಿಂದೂ ಯುವಸೇನೆಯಲ್ಲಿ ಸಕ್ರಿಯರಾಗಿದ್ದ ಹಿಂದೂ ಕಾರ್ಯಕರ್ತ ಮಂಗಳೂರಿನ‌ ಜಯಂತ್ ಎಸ್. ಕುಂಪಲ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂಪಲದ ಕೃಷ್ಣನಗರ ಎರಡನೇ ಅಡ್ಡ ರಸ್ತೆಯ ಬಾಡಿಗೆ ನಿವಾಸದಲ್ಲಿ ಯಾರೂ ಇಲ್ಲದ ವೇಳೆ ಜಯಂತ್ (49) ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಯಂತ್ ಆತ್ಮಹತ್ಯೆಗೆ ಶರಣಾಗಿದ್ದು, ಮನೆಯ ಹಾಲ್ ನಲ್ಲಿ ಶಾಲ್ ನಲ್ಲಿ ಕತ್ತಿಗೆ ಬಿಗಿದು ಪ್ರಾಣ ಬಿಟ್ಟಿದ್ದಾರೆ. ಜಯಂತ್ ಅವರು ಸಕ್ರಿಯ ಈ ಹಿಂದೆ ಹಿಂದು ಸಂಘಟನೆ ಕಾರ್ಯಕರ್ತರಾಗಿದ್ದು ಹಣಕಾಸು

ಮಂಗಳೂರು: ಹಿಂದೂ ಯುವಸೇನೆ ಕಾರ್ಯಕರ್ತ ಆತ್ಮಹತ್ಯೆ| ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ Read More »

‘ಮೀನುಗಾರರಿಗೆ ಶಕ್ತಿ ತುಂಬಲು ವಿವಿಧ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದ್ದೇನೆ’ – ಪ್ರಧಾನಿ ಮೋದಿ ಮಂಗಳೂರಿನಲ್ಲಿ ಅಭಿಮತ

ಸಮಗ್ರ ನ್ಯೂಸ್: ಭಾರತದ ಸಮುದ್ರ ಶಕ್ತಿಗೆ ಇಂದು ಬಹಳ ದೊಡ್ಡ ದಿನ. ಕರಾವಳಿ ಹಾಗೂ ಕರ್ನಾಟಕ ಅಭಿವೃದ್ಧಿಗೆ ಇಂದು ಲೋಕಾರ್ಪಣೆಗೊಳಿಸಿದ ಯೋಜನೆಗಳಿಂದ ಅತ್ಯಂತ ದೊಡ್ಡ ಶಕ್ತಿ ತುಂಬಿದ್ದು, ಭಾರತದ ಬಂದರುಗಳ ಸಾಮರ್ಥ್ಯವು ಈಗ ದ್ವಿಗುಣಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ಬಂದರು, ಒಳನಾಡು ಜಲಸಾರಿಗೆಗೆ ಸಂಬಂಧಿಸಿದ 3,800 ಕೋಟಿ ರೂ.ಗಳ ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪ್ರಧಾನ ಮಂತ್ರಿ, “ಮೀನುಗಾರರಿಗೆ ಶಕ್ತಿ

‘ಮೀನುಗಾರರಿಗೆ ಶಕ್ತಿ ತುಂಬಲು ವಿವಿಧ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದ್ದೇನೆ’ – ಪ್ರಧಾನಿ ಮೋದಿ ಮಂಗಳೂರಿನಲ್ಲಿ ಅಭಿಮತ Read More »

ಮಂಗಳೂರು: ಮೋದಿ ಕಾರ್ಯಕ್ರಮದತ್ತ ಸರ್ಕಾರಿ ‌ಬಸ್ ಗಳು| ರಸ್ತೆಯಲ್ಲೇ ಬಾಕಿಯಾದ ವಿದ್ಯಾರ್ಥಿಗಳು, ನಿತ್ಯ ಪ್ರಯಾಣಿಕರು

ಸಮಗ್ರ ನ್ಯೂಸ್: ಮಂಗಳೂರಿಗೆ ಪ್ರಧಾನಿ ಮೋದಿ‌ ಆಗಮಿಸಲಿರುವ ಕಾರಣ ಸರ್ಕಾರಿ ಬಸ್ ಗಳನ್ನು ಮಂಗಳೂರಿನತ್ತ ಬುಕ್ಕಿಂಗ್ ಮಾಡಲಾಗಿದ್ದು, ನಿತ್ಯ ಪ್ರಯಾಣಿಸುವ ಪ್ರಯಾಣಿಕರು, ಸಾರ್ವಜನಿಕರು,ಶಾಲಾ ಮಕ್ಕಳು ಬಸ್ಸಿಲ್ಲದೆ ಪರದಾಡಿದರು. ಗ್ರಾಮಾಂತರ ಪ್ರದೇಶಗಳಿಂದ ಮಕ್ಕಳು ಶಾಲೆಗೆ ಹೋಗಬೇಕಾದರೆ ಸರಕಾರಿ ಬಸ್ ಗಳು ಅವಶ್ಯಕವಾಗಿದ್ದು, ಇಂದು ದ.ಕ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಪರದಾಟ ನಡೆಸಿದರು. ಶಾಲಾ ಮಕ್ಕಳು ಬಸ್ ಪಾಸ್ ಮಾಡಿಸಿದ್ದು ದಿನಾ ಬಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದರು. ಆದರೆ ಇಂದು ಬಸ್ ಗಳಿಲ್ಲದ ಕಾರಣ ಅತ್ತ

ಮಂಗಳೂರು: ಮೋದಿ ಕಾರ್ಯಕ್ರಮದತ್ತ ಸರ್ಕಾರಿ ‌ಬಸ್ ಗಳು| ರಸ್ತೆಯಲ್ಲೇ ಬಾಕಿಯಾದ ವಿದ್ಯಾರ್ಥಿಗಳು, ನಿತ್ಯ ಪ್ರಯಾಣಿಕರು Read More »