ಮರದ ಕಾಲುಸಂಕ ಮುಕ್ತ ದಕ್ಷಿಣ ಕನ್ನಡ ಜಿಲ್ಲೆ ಅಭಿಯಾನ – ಯುವ ತೇಜಸ್ಸು ಬಳಗದಿಂದ ನಿಸ್ವಾರ್ಥ ಪ್ರಯತ್ನ, ನಿಮ್ಮ ಬೆಂಬಲವೂ ಬೇಕಿದೆ…
ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂಬುದು ನಾಣ್ಣುಡಿ. ಸಮಾಜದಲ್ಲಿನ ಸತ್ತುಹೋದ ಕೆಲ ಮನಸ್ಸುಗಳ ನಡುವೆ ಜೀವಂತ ಶವಗಳಾಗುವ ಬದಲು ನಮ್ಮಿಂದ ಸಮಾಜಕ್ಕೇನಾದರೂ ಸಹಾಯ ಮಾಡಬಹುದು ಎಂಬ ಸಮಾನ ಮನಸ್ಕರ ಗುಂಪೊಂದು ಯೋಚಿಸಿದ ಫಲವಾಗಿ ಹುಟ್ಟಿಕೊಂಡ ಸಂಸ್ಥೆಯೇ ಯುವ ತೇಜಸ್ಸು ಟ್ರಸ್ಟ್. ಸಾಮಾಜಿಕ ಜಾಲತಾಣದ ಬಳಕೆಯಿಂದ ಯುವ ಸಮೂಹ ಕೆಡುಕಿನತ್ತ ಸಾಗುತ್ತಿದೆ ಎಂಬ ಕಾಲಘಟ್ಟದಲ್ಲಿ ಸಮಾಜದಲ್ಲಿನ ಅಶಕ್ತರ ಪಾಲಿಗೆ ಕಿಂಚಿತ್ತಾದರೂ ಸಹಾಯ ಮಾಡುವ ಆಶಯದೊಂದಿಗೆ ಆರಂಭವಾದ ಯುವ ತೇಜಸ್ಸು ಸಂಸ್ಥೆ ಬಳಿಕ ಹೆಮ್ಮರವಾಗಿ ಬೆಳೆದಿದ್ದು ಈಗ ಇತಿಹಾಸ. ಯುವ ಜನಾಂಗವನ್ನೇ […]