Chikkamagaluru news

ಚಿಕ್ಕಮಂಗಳೂರು: ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ/ಕಿಡಿಗೇಡಿಗಳನ್ನು ತಕ್ಷಣ ಬಂಧಿಸದಿದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ: ಪಿ.ಸುಂದರ ಪಾಟಾಜೆ,

ಸಮಗ್ರ ನ್ಯೂಸ್: ಚಿಕ್ಕಮಂಗಳೂರು ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು ತಪ್ಪಿದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ. ಚಿಕ್ಕಮಂಗಳೂರು ನಗರದ ಹನುಮಂತ ವೃತ್ತದಲ್ಲಿ ಹಾಕಿರುವಂತ ಪ್ಲೆಕ್ಸ್ ನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಆಗಿರುವುದನ್ನು ಅಂಬೇಡ್ಕರ್ ರಕ್ಷಣಾ ವೇದಿಕೆ ಖಂಡಿಸುತ್ತದೆ. ಆದ್ದರಿಂದ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದಂತ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು, ಇಲ್ಲದಿದ್ದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಉಗ್ರ ಪ್ರತಿಭಟನೆ ಮಾಡುವುದಾಗಿ ಮಾಧ್ಯಮ ಮೂಲಕ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷರು […]

ಚಿಕ್ಕಮಂಗಳೂರು: ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ/ಕಿಡಿಗೇಡಿಗಳನ್ನು ತಕ್ಷಣ ಬಂಧಿಸದಿದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ: ಪಿ.ಸುಂದರ ಪಾಟಾಜೆ, Read More »

ಚಿಕ್ಕಮಗಳೂರು: ಬಸ್ಸಿನಿಂದ ಬಿದ್ದು ನಿಷ್ಕ್ರಿಯಗೊಂಡ ಯುವತಿಯ ಮೆದುಳು| ನೋವಿನ ನಡುವೆಯೂ ಅಂಗಾಂಗ‌ ದಾನಕ್ಕೆ ನಿರ್ಧರಿಸಿದ‌ ಕುಟುಂಬಸ್ಥರು|

ಸಮಗ್ರ ನ್ಯೂಸ್: ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಯುವತಿಯೋರ್ವಳು ಬಸ್ಸಿನಿಂದ ಬಿದ್ದು ಮೆದುಳು ನಿಷ್ಕ್ರಿಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ. ಅಪಘಾತದಲ್ಲಿ ಯುವತಿ ಗಂಭೀರ ಗಾಯಗೊಂಡಿದ್ದು, ಮೆದುಳು ನಿಷ್ಕ್ರಿಯಗೊಂಡ ಕಾರಣ ಯುವತಿಯ ಮನೆಯವರು ನೋವಿನ ನಡುವೆಯೂ ಮಾನವೀಯತೆ ಮೆರೆದಿದ್ದು, ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ. ಈ ಸಂಬಂಧ ಯುವತಿಯ ಹೃದಯವನ್ನು ಕಸಿ ಮಾಡಲು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಜೀವಂತ ಹೃದಯವನ್ನು ವಿಶೇಷ ಹೆಲಿಕಾಪ್ಟರ್ ಮೂಲಕ ರವಾನಿಸಲಾಗಿದೆ. ಒಟ್ಟು 9 ಅಂಗಾಂಗಗಳನ್ನು ದಾನ ಮಾಡಲಾಗುತ್ತಿದ್ದು, ಯುವತಿಯ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ.

ಚಿಕ್ಕಮಗಳೂರು: ಬಸ್ಸಿನಿಂದ ಬಿದ್ದು ನಿಷ್ಕ್ರಿಯಗೊಂಡ ಯುವತಿಯ ಮೆದುಳು| ನೋವಿನ ನಡುವೆಯೂ ಅಂಗಾಂಗ‌ ದಾನಕ್ಕೆ ನಿರ್ಧರಿಸಿದ‌ ಕುಟುಂಬಸ್ಥರು| Read More »

ಚಿಕ್ಕಮಗಳೂರು: ಅನ್ಯಾಯ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರು ಪೊಲೀಸರ ವಶಕ್ಕೆ

ಸಮಗ್ರ ನ್ಯೂಸ್: ಅನ್ಯಾಯ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರು ಪೊಲೀಸರ ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರ ಜಿಲ್ಲೆಯ ಕಡೂರು ತಾಲೂಕಿನ ತಿಮ್ಮಲಾಪುರದಲ್ಲಿ ನಡೆದಿದೆ. ORB NRG ಎಂಬ ಕಂಪನಿ ರೈತರ ಜಮೀನಿನ ಮೇಲೆ ಸೋಲಾರ್ ವಿದ್ಯುತ್ ತಂತಿಯನ್ನು ಅಳವಡಿಕೆಗೆ ಪ್ಲಾನ್ ಮಾಡಲಾಗಿತ್ತು. ಇದರಿಂದ ರೈತರಿಗೆ ತೊಂದರೆ ಉಂಟಾಗಿದ್ದು, ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಇದರಿಂದ ನಮಗೆ ನಯಾ ಪೈಸೆ ಪರಿಹಾರ ನೀಡಲಿಲ್ಲ, ನಾವು ಮನೆ ಕಟ್ಟಬೇಕು, ನೀವು ತಂತಿ ಹೇಗೆ ಎಳೆದ್ರಿ? ನಮಗೆ ಪರಿಹಾರವನ್ನು ನೀಡದೇ ಯಾಕೆ

ಚಿಕ್ಕಮಗಳೂರು: ಅನ್ಯಾಯ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರು ಪೊಲೀಸರ ವಶಕ್ಕೆ Read More »

ಚಿಕ್ಕಮಗಳೂರು: ಮೆಟ್ಟಿಲು ಹತ್ತಲಾರದೇ ವಿಶೇಷಚೇತನ ಯುವಕ ಪರದಾಟ| ಸಬ್ ರಿಜಿಸ್ಟರ್ ಕಚೇರಿ ಸ್ಥಳಾಂತರಿಸಲು ಸ್ಥಳೀಯರ ಆಗ್ರಹ

ಸಮಗ್ರ ನ್ಯೂಸ್: ಸಬ್ ರಿಜಿಸ್ಟರ್ ಕಚೇರಿ ಮೆಟ್ಟಿಲು ಹತ್ತಲಾರದೇ ವಿಶೇಷ ಚೇತನ ಯುವಕ ಪರದಾಟ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ನಗರದ ರತ್ನಗಿರಿ ರಸ್ತೆಯಲ್ಲಿರುವ ಸಬ್ ರಿಜಿಸ್ಟರ್ ಕಚೇರಿ ಬಳಿ ಘಟನೆ ನಡೆದಿದ್ದು ಇದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಕೆಂಪನಹಳ್ಳಿ ನಿವಾಸಿ ಸಚಿನ್ ಪರದಾಡಿದ ಯುವಕ. ಈತ ತನ್ನ ಕಾರ್ಯದ ನಿಮಿತ್ತ ಸಬ್ ರಿಜಿಸ್ಟರ್ ಕಚೇರಿಗೆ ಬಂದಿದ್ದಾನೆ. ಅದರೆ ಕಚೇರಿ ಮೊದಲ ಮಹಡಿಯಲ್ಲಿ ಇರುವುದರಿಂದ ಮೆಟ್ಟಿಲು ಹತ್ತುವ ಅನಿವಾರ್ಯವಿತ್ತು. ಆದರೂ ಯುವಕ ಪರದಾಡಿಕೊಂಡು ಕಚೇರಿಯನ್ನು ತಲುಪಿದ್ದಾನೆ.

ಚಿಕ್ಕಮಗಳೂರು: ಮೆಟ್ಟಿಲು ಹತ್ತಲಾರದೇ ವಿಶೇಷಚೇತನ ಯುವಕ ಪರದಾಟ| ಸಬ್ ರಿಜಿಸ್ಟರ್ ಕಚೇರಿ ಸ್ಥಳಾಂತರಿಸಲು ಸ್ಥಳೀಯರ ಆಗ್ರಹ Read More »

ಚಿಕ್ಕಮಗಳೂರು: ಚಿಕಿತ್ಸೆಗಾಗಿ ವೃದ್ಧೆಯನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಸಂಬಂಧಿಕರು| ರಸ್ತೆ ಮನವಿಗೆ ಸ್ಪಂದಿಸದ ಸಚಿವರು, ಜಿಲ್ಲಾಧಿಕಾರಿ

ಸಮಗ್ರ ನ್ಯೂಸ್: ರಸ್ತೆ ಇಲ್ಲದೆ ವೃದ್ಧೆಯನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಂಬಂಧಿಕರು ಜೋಳಿಗೆಯಲ್ಲಿ ಹೊತ್ತೊಯ್ದ ಘಟನೆ ಜಿಲ್ಲೆಯ ಕಳಸ ತಾಲೂಕಿನ ಗಂಟೆಮಕ್ಕಿ ಗ್ರಾಮದಲ್ಲಿ ನಡೆದಿದೆ. ವೃದ್ಧೆ ವೆಂಕಮ್ಮ(85) ಇವರು ಅನಾರೋಗ್ಯಕ್ಕೆ ಒಳಗಾದವರು. ಇವರು ಮನೆ ರಸ್ತೆ ಇಲ್ಲದೆ ತಮ್ಮ ಕೆಲಸ ಕಾರ್ಯಗಳಿಗೆ ಕಾಲು ದಾರಿಯಲ್ಲಿ ಓಡಾಡುತ್ತಿದ್ದ ಆದಿವಾಸಿ ಕುಟುಂಬವಾಗಿದೆ. ಇದೀಗ ಇವರಿಗೆ ಅನಾರೋಗ್ಯ ಉಂಟಾಗಿದ್ದು ಆಸ್ಪತ್ರೆಗೆ ಸಾಗಿಸಲು ವಾಹನ ಬಾರದೆ ಮನೆಯಿಂದ ಜಮೀನಿನ ಕಾಲು ದಾರಿಯಲ್ಲಿಸಂಬಂಧಿಕರು ಜೋಳಿಗೆಯಲ್ಲಿ ಹೊತ್ತೊಯ್ದಿದ್ದಾರೆ. 2021ರಲ್ಲಿಯೇ ರಸ್ತೆ ಇಲ್ಲ ರಸ್ತೆ ಮಾಡಿಸಿಕೊಡಿ ಎಂದು

ಚಿಕ್ಕಮಗಳೂರು: ಚಿಕಿತ್ಸೆಗಾಗಿ ವೃದ್ಧೆಯನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಸಂಬಂಧಿಕರು| ರಸ್ತೆ ಮನವಿಗೆ ಸ್ಪಂದಿಸದ ಸಚಿವರು, ಜಿಲ್ಲಾಧಿಕಾರಿ Read More »

ಚಿಕ್ಕಮಗಳೂರು: ಮಾಧ್ಯಮಗಳ ಮುಂದೆ ಬಂದ ಜಾಫರ್- ಚೈತ್ರಾ| ಮುಂದೆನೂ ನಾವು ಚೆನ್ನಾಗಿರ್ತೀವಿ, ದಯವಿಟ್ಟು ಯಾರೂ ಅಡ್ಡಿಮಾಡ್ಬೇಡಿ ಎಂದ ಲವ್ ಬರ್ಡ್ಸ್

ಸಮಗ್ರ ನ್ಯೂಸ್: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸೆ. 14 ರಂದು ಮುಸ್ಲಿಂ ಹುಡುಗ ಜಾಫರ್- ಹಿಂದು ಹುಡುಗಿ ಚೈತ್ರಾ, ಪ್ರೇಮಿಗಳು ಮದುವೆಯಾಗಲು ಮುಂದಾಗಿದ್ದರು. ಈ ವೇಳೆ ಮುಸ್ಲಿಂ ಯುವಕನ ವಿರುದ್ಧ ಲವ್ ಆರೋಪ ಹೊರಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಮದುವೆಗೆ ತಡೆಯೊಡ್ಡಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿಂತೆ ಯುವತಿ ಚೈತ್ರಾ ಮಾಧ್ಯಮಗಳ ಮುಂದೆ ಮಾತನಾಡಿ, ನಾವು ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವೆ. ಇಬ್ಬರು ಇಷ್ಟಪಟ್ಟೆ ಮದುವೆಗೆ ಮುಂದಾಗಿದ್ದೇವೆ. ನಾವು ಮದುವೆಯಾಗುತ್ತೇವೆ, ಚೆನ್ನಾಗಿರ್ತೀವಿ, ಕೇಳೋಕೆ ಅವರ್ಯಾರು.? ಎಂದು ಬಜರಂಗದಳ ಕಾರ್ಯಕರ್ತರ ವಿರುದ್ಧ

ಚಿಕ್ಕಮಗಳೂರು: ಮಾಧ್ಯಮಗಳ ಮುಂದೆ ಬಂದ ಜಾಫರ್- ಚೈತ್ರಾ| ಮುಂದೆನೂ ನಾವು ಚೆನ್ನಾಗಿರ್ತೀವಿ, ದಯವಿಟ್ಟು ಯಾರೂ ಅಡ್ಡಿಮಾಡ್ಬೇಡಿ ಎಂದ ಲವ್ ಬರ್ಡ್ಸ್ Read More »

ಚಿಕ್ಕಮಗಳೂರು: ಹುಲಿ ದಾಳಿಗೆ ಎತ್ತು ಬಲಿ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ದೊಡ್ಡನಂದಿ ಗ್ರಾಮದ ಬೊಮ್ಮನಹಳ್ಳಿ ಎಂಬಲ್ಲಿ ಎತ್ತುವಿನ ಮೇಲೆ ಹುಲಿ ದಾಳಿ ಮಾಡಿರುವ ಘಟನೆ ನಡೆದಿದೆ. ನಾರಾಯಣ ಗೌಡ ಎಂಬುವವರು ಸಾಕಿದ್ದ ಎತ್ತು ಹುಲಿ ದಾಳಿಗೆ ಬಲಿಯಾಗಿದೆ. ಘಟನಾ ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಉಮೇಶ್, ಅರಣ್ಯ ರಕ್ಷಕ ಮೋಹಸೀನ್ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರು: ಹುಲಿ ದಾಳಿಗೆ ಎತ್ತು ಬಲಿ Read More »