ಶ್ವಾನವೊಂದಕ್ಕೆ ಶ್ವಾನವೇ ರಕ್ತದಾನ

ಧಾರವಾಡ: ಕೃಷಿ ಮೇಳದಲ್ಲಿ ಶ್ವಾನವೊಂದಕ್ಕೆ ಶ್ವಾನವೇ ರಕ್ತದಾನ ಮಾಡಿರುವುದು ಧಾರವಾಡ ಜಿಲ್ಲೆಯಿಂದ ಸುದ್ದಿಯಾಗಿದೆ. ಧಾರವಾಡ ಕೃಷಿ ಮೇಳಕ್ಕೆ ಆಗಮಿಸಿರುವ ಡಾಗ್ ಸ್ಕ್ವಾಡ್ ʼಮಾಯಾʼಗೆ ಅನಾರೋಗ್ಯ ಹಿನ್ನೆಲೆಯಲ್ಲಿ ರಕ್ತದ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ರೆಸ್ಕ್ಯೂ ಟೀಂ ಸದಸ್ಯರಾಗಿರುವ ಸೋಮು ಅವರ ಜರ್ಮನ್ ಶೆಫರ್ಡ್ ʼಚಾರ್ಲಿʼ ರಕ್ತ ನೀಡಿದೆ. ಕೃಷಿ ವಿಶ್ವವಿದ್ಯಾಲಯ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿ ರಕ್ತದಾನ ಮಾಡಿಸಿದ್ದಾರೆ. ಎರಡನೇ ಬಾರಿ ರಕ್ತದಾನ ಮಾಡುವ ಮೂಲಕ ಚಾರ್ಲಿ ಗಮನ ಸೆಳೆದಿದೆ.

ಶ್ವಾನವೊಂದಕ್ಕೆ ಶ್ವಾನವೇ ರಕ್ತದಾನ Read More »