ರಾಜಕೀಯ

ಕಾರ್ಯಕರ್ತರ ಆಕ್ರೋಶಕ್ಕೆ ಬೆದರಿದ ಡಿ.ವಿ ಗೌಡ್ರು| ಇಂದು ಪ್ರವೀಣ್ ಮನೆಗೆ ಭೇಟಿ

ಸಮಗ್ರ ನ್ಯೂಸ್: ಕಾರ್ಯಕರ್ತರ ಆಕ್ರೋಶ ಮತ್ತು ತವರಿನಲ್ಲಿ ಟೀಕೆಗಳು ‌ವ್ಯಕ್ತವಾದ ಬೆನ್ನಲ್ಲೇ‌ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರಾದ ಸದಾನಂದ ಗೌಡ ಅವರು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಮನೆಗೆ (ಜು.೩೦)ರಂದು ದೌಡಾಯಿಸುತ್ತಿದ್ದಾರೆ. ಮಧ್ಯಾಹ್ನ ಪ್ರವೀಣ್ ಮನೆಗೆ ತಲುಪುವ ಕುರಿತಂತೆ ತಮ್ಮ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರವೀಣ್ ಹತ್ಯೆಗೀಡಾಗಿದ್ದ ವಿಷಯ ಗೊತ್ತಾಗಿದ್ದರೂ ಪ್ರವೀಣ್ ಮನೆಗೆ ಭೇಟಿ ಕೊಡದ ಸದಾನಂದ ಗೌಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಕಾರ್ಯಕರ್ತರ ಆಕ್ರೋಶಕ್ಕೆ ಬೆದರಿದ ಡಿ.ವಿ ಗೌಡ್ರು| ಇಂದು ಪ್ರವೀಣ್ ಮನೆಗೆ ಭೇಟಿ Read More »

ಕಷ್ಟಕ್ಕೆ ಮಿಡಿಯುವ ರಾಮ್ ಸೇನಾ

ಸಮಗ್ರ ನ್ಯೂಸ್: ಬಿಜೆಪಿ ಯುವ ಮೋರ್ಚ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರ್ ರವರ ಮನೆಗೆ ಸುರಪುರ ಜಿಲ್ಲೆಯ ರಾಮ್ ಸೇನಾ ಭೇಟಿ ನೀಡಿದೆ. ಈ ವೇಳೆ ಸುರಪುರ ಶಾಸಕರು ಶ್ರೀರಾಮ ಸೇನೆ ಯುವಕರ ಮುಖಾಂತರ 2ಲಕ್ಷ ರೂ. ಯನ್ನು ಕಳುಹಿಸಿ ಕುಟುಂಬ ಸದಸ್ಯರಿಗೆ ದೂರವಾಣಿ ಮೂಲಕ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಮಾತನಾಡಿದ ರಾಜು ಗೌಡರು ಬಿಜೆಪಿ ಸರಕಾರ ಇದ್ದರೂ ಇಂತಹ ಘಟನೆ ನಡೆದದ್ದು ತುಂಬಾ ದುಃಖಕರ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ರಾಮ ಸೇನಾಯಿಂದ ಯಾವುದೇ ಸಹಾಯಕ

ಕಷ್ಟಕ್ಕೆ ಮಿಡಿಯುವ ರಾಮ್ ಸೇನಾ Read More »

ಡಿ.ವಿ ಸದಾನಂದ ಗೌಡರು ಭೂಮಿ ಮೇಲಿದ್ದಾರಾ..? ಅವರ ಫೋನ್ ನಂಬರ್ ಇದ್ರೆ ಕೊಡಿ…!!
ಜಾಲತಾಣಗಳಲ್ಲಿ ಪೋಸ್ಟರ್ ವೈರಲ್

ಸಮಗ್ರ ನ್ಯೂಸ್: ಕೆಲದಿನಗಳ ಹಿಂದೆಯಷ್ಟೇ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿದ್ದು ಎಲ್ಲಾ ನಾಯಕರು ಅವರ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅದರೆ ಸುಳ್ಯದವರೇ ಆದ ಮಾಜಿ ಮುಖ್ಯಮಂತ್ರಿ, ಡಿ.ವಿ ಸದಾನಂದ ಗೌಡರು ಬಾರದೇ ಇರುವುದು ಕಾರ್ಯಕರ್ತರ‌ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಜಾಲತಾಣಗಳಲ್ಲಿ ಅಸಮಾದಾನ ವ್ಯಕ್ತಪಡಿಸಿರುವ ಪೋಸ್ಟರ್ ವೈರಲ್ ಆಗಿದೆ. ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಅವರ ಮನೆಗೆ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಸಚಿವರು, ಶಾಸಕರು ಹಾಗೂ ಕೆಲ ಸಂಘಟನೆಯ ಮುಖ್ಯಸ್ಥರು, ಕಾರ್ಯಕರ್ತರು ಬೇಟಿ

ಡಿ.ವಿ ಸದಾನಂದ ಗೌಡರು ಭೂಮಿ ಮೇಲಿದ್ದಾರಾ..? ಅವರ ಫೋನ್ ನಂಬರ್ ಇದ್ರೆ ಕೊಡಿ…!!
ಜಾಲತಾಣಗಳಲ್ಲಿ ಪೋಸ್ಟರ್ ವೈರಲ್
Read More »

ಪ್ರವೀಣ್ ಮನೆಗೆ ಸಂಸದ ತೇಜಸ್ವಿ ಸೂರ್ಯ ಭೇಟಿ; ಯುವ ಮೋರ್ಚಾದಿಂದ 15ಲಕ್ಷ ಚೆಕ್ ವಿತರಣೆ

ಸಮಗ್ರ ನ್ಯೂಸ್: ದುಷ್ಕರ್ಮಿಗಳಿಂದ ಸಾವಿಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಸಂಸದ ತೇಜಸ್ವಿ‌ ಸೂರ್ಯ ಭೇಟಿ‌ ನೀಡಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸುವ ಭರವಸೆ ನೀಡಿದ ಅವರು ಬಿಜೆಪಿ ರಾಜ್ಯ ಯುವ ಮೋರ್ಚಾದಿಂದ 15 ಲಕ್ಷ ಚೆಕ್ ವಿತರಿಸಿದರು.

ಪ್ರವೀಣ್ ಮನೆಗೆ ಸಂಸದ ತೇಜಸ್ವಿ ಸೂರ್ಯ ಭೇಟಿ; ಯುವ ಮೋರ್ಚಾದಿಂದ 15ಲಕ್ಷ ಚೆಕ್ ವಿತರಣೆ Read More »

ಪುತ್ತೂರು:‌ ಪಂಚಾಯತ್ ಸದಸ್ಯರಿಂದ ಸಾಮೂಹಿಕ ರಾಜಿನಾಮೆಗೆ ಚಿಂತನೆ!?

ಸಮಗ್ರ ನ್ಯೂಸ್: ಪುತ್ತೂರು‌ ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರಿಂದ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆಗೆ ಚಿಂತನೆ ನಡೆಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ನಡೆದ ಬೆಳವಣಿಗೆಗಳನ್ನು ಗಮನಿಸಿದಾಗ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಸದಸ್ಯರು ರಾಜೀನಾಮೆ ಚಿಂತನೆ ನಡೆಸಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ.ನಿನ್ನೆ ನಡೆದ ಸಾಮಾನ್ಯ ಸಭೆಗೆ ಕೂಡ ಬಹಿಷ್ಕಾರ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇದೀಗ ಎಲ್ಲಾ ಸದಸ್ಯರು ರಾಜೀನಾಮೆ ಕೊಡುವ ಚಿಂತನೆಯಲ್ಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ.

ಪುತ್ತೂರು:‌ ಪಂಚಾಯತ್ ಸದಸ್ಯರಿಂದ ಸಾಮೂಹಿಕ ರಾಜಿನಾಮೆಗೆ ಚಿಂತನೆ!? Read More »

ಕರ್ನಾಟಕವನ್ನು ತರಾಟೆಗೆ ತೆಗೆದುಕೊಂಡ ‌ರಾಜಾಸ್ಥಾನ| 48 ಗಂಟೆ ಕಳೆದರೂ‌ ಪ್ರವೀಣ್ ಕೊಲೆಗಡುಕರ ಬಂಧಿಸದ್ದಕ್ಕೆ ಪ್ರಶ್ನೆ|

ಸಮಗ್ರ‌ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರೋ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್​ ನೆಟ್ಟಾರು ಹತ್ಯೆಯನ್ನು ನಾನು ಖಂಡಿಸುತ್ತೇನೆ ಎಂದು ರಾಜಸ್ಥಾನ ಸಿಎಂ ಅಶೋಕ್​​ ಗೆಹ್ಲೋಟ್​ ಟ್ವೀಟ್​ ಮಾಡಿದ್ದಾರೆ. “ಇತ್ತೀಚೆಗೆ ಉದಯಪುರದಲ್ಲಿ ಕನ್ಹಯ್ಯ ಲಾಲ್​ ಹತ್ಯೆ ಆದಾಗ ಕೇವಲ 4 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದೆವು. ಈಗ ಕರ್ನಾಟಕದಲ್ಲಿ ಪ್ರವೀಣ್​ ಹತ್ಯೆಯಾಗಿ 48 ಗಂಟೆ ಆದ್ರೂ ಆರೋಪಿ ಬಂಧನವಾಗಿಲ್ಲ” ಎಂದು ಗೆಹ್ಲೋಟ್​ ಪ್ರಶ್ನಿಸಿದ್ದಾರೆ. ಇನ್ನು, ಕನ್ಹಯ್ಯ ಲಾಲ್​​ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ. ಕನ್ಹಯ್ಯ

ಕರ್ನಾಟಕವನ್ನು ತರಾಟೆಗೆ ತೆಗೆದುಕೊಂಡ ‌ರಾಜಾಸ್ಥಾನ| 48 ಗಂಟೆ ಕಳೆದರೂ‌ ಪ್ರವೀಣ್ ಕೊಲೆಗಡುಕರ ಬಂಧಿಸದ್ದಕ್ಕೆ ಪ್ರಶ್ನೆ| Read More »

ಕಾಂಗ್ರೆಸ್ ಸರ್ಕಾರವಿದ್ದರೆ ಕಲ್ಲು ಹೊಡೆಯಬಹುದಿತ್ತು – ಸಂಸದ ತೇಜಸ್ವಿ ಸೂರ್ಯ ಆಡಿಯೋ ವೈರಲ್

ಸಮಗ್ರ ನ್ಯೂಸ್: ಸಂಸದ ತೇಜಸ್ವಿ ಸೂರ್ಯ ಹಾಗೂ ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಅರವಿನಂಗಡಿ ನಡುವೆ ನಡೆದ ಮೊಬೈಲ್ ಸಂಭಾಷಣೆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿದ್ದು, ಕಾಂಗ್ರೆಸ್ ಸರ್ಕಾರವಿದ್ದಿದ್ದರೇ ಬೀದಿಯಲ್ಲಿ ಕಲ್ಲು ಹೊಡೆಯಬಹುದಿತ್ತು ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಮೊಬೈಲ್ ಸಂಭಾಷಣೆ ಭಾರೀ ವೈರಲ್ ಆಗಿದೆ.

ಕಾಂಗ್ರೆಸ್ ಸರ್ಕಾರವಿದ್ದರೆ ಕಲ್ಲು ಹೊಡೆಯಬಹುದಿತ್ತು – ಸಂಸದ ತೇಜಸ್ವಿ ಸೂರ್ಯ ಆಡಿಯೋ ವೈರಲ್ Read More »

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರ| ಪ್ರಕರಣ ಬೇಧಿಸುವವರೆಗೆ ದಣಿವಿಲ್ಲದೇ ಕ್ರಮ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಲೆ ಪ್ರಕರಣವನ್ನು ಬೇಧಿಸುವವರೆಗೆ ಅಕ್ಷರಶ: ದಣಿವಿಲ್ಲದೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಇಂದು ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ನಿವಾಸಕ್ಕೆ ಭೇಟಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರವೀಣ್ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದು, ಚಿಕ್ಕ ಅಂಗಡಿಯೇ ಆದಾಯದ ಮೂಲವಾಗಿತ್ತು. ಸರ್ಕಾರದ ವತಿಯಿಂದ ಪರಿಹಾರ ನಿಧಿಯಿಂದ 25 ಲಕ್ಷ ಪರಿಹಾರ ಹಾಗೂ ಭಾರತೀಯ

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರ| ಪ್ರಕರಣ ಬೇಧಿಸುವವರೆಗೆ ದಣಿವಿಲ್ಲದೇ ಕ್ರಮ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ* Read More »

ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿದ ಸಿಎಂ| ಕಾರ್ಯಕರ್ತರಿಂದ ನಳಿನ್ ಗೆ ದಿಕ್ಕಾರ

ಸಮಗ್ರ ನ್ಯೂಸ್: ಬಿಜೆಪಿ ಯುವಮೋರ್ಚಾದ ಕಾರ್ಯಕರ್ತ ಹಂತಕರಿಂದ ಹತ್ಯೆಗೈಯಲ್ಪಟ್ಟ ಪ್ರವೀಣ್ ಕುಮಾರ್ ನೆಟ್ಟಾರು ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ‌ ಸಾಂತ್ವನ ಹೇಳಿದರು. ಪ್ರವೀಣ್ ಪತ್ನಿ ನೂತನಾ ಹಾಗೂ ಕುಟುಂಬಸ್ಥರನ್ನು ಸಾಂತ್ವನಗೈದ ಸಿಎಂ ಆದಷ್ಟು ಬೇಗ ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷಿಸುವ ಭರವಸೆ ನೀಡಿದರು. ಇದೇ ವೇಳೆ ಕಾರ್ಯಕರ್ತರನ್ನು ಮಾತನಾಡಿಸಿದ ಸಿಎಂ ನಿನ್ನೆ ನಡೆದ ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿರುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪ್ರವೀಣ್ ಕೊಲೆ‌ ಪ್ರಕರಣವನ್ನು ಎನ್ಐಎ ಗೆ

ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿದ ಸಿಎಂ| ಕಾರ್ಯಕರ್ತರಿಂದ ನಳಿನ್ ಗೆ ದಿಕ್ಕಾರ Read More »

ಪ್ರವೀಣ್ ಹತ್ಯೆಗೆ ಡಿ.ಕೆ ಶಿ ಸಂತಾಪ| ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹ

ಸಮಗ್ರ ನ್ಯೂಸ್: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಡಿಕೆ ಶಿವಕುಮಾರ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಪ್ರವೀಣ್ ನೆಟ್ಟಾರು ಭೀಕರ ಹತ್ಯೆಗೀಡಾಗಿದ್ದು ಬೇಸರದ ಸಂಗತಿ. ಪ್ರವೀಣ್ ನೆಟ್ಟಾರು ಕುಟುಂಬ, ಸ್ನೇಹಿತ ವರ್ಗಕ್ಕೆ ಸಂತಾಪಗಳು. ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಿ ಎಂದು ಟ್ವೀಟ್ ಮಾಡಿದ್ದಾರೆ.

ಪ್ರವೀಣ್ ಹತ್ಯೆಗೆ ಡಿ.ಕೆ ಶಿ ಸಂತಾಪ| ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹ Read More »