ಮೂರು ವರ್ಷದಿಂದ ಒಂದೇ ಪ್ರಾಮಿಸ್| ಸಂಖ್ಯೆಯನ್ನಾದರೂ ಬದಲಿಸಿ ಪ್ರಧಾನಿಗಳೇ… ಮೋದಿ ಭಾಷಣಕ್ಕೆ ಕಾಂಗ್ರೆಸ್ ವ್ಯಂಗ್ಯ
ನವದೆಹಲಿ: 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಪ್ರಧಾನಿಯವರ ಭಾಷಣ ಈಗ ಟ್ರೋಲ್ಗೆ ಒಳಗಾಗಿದ್ದು, ಮೂರು ವರ್ಷವೂ ಒಂದೇ ಪ್ರಾಮಿಸ್ ಮಾಡಿದ್ದಾರೆ ಎಂದು ನೆಟ್ಟಿಗರು ಮೋದಿಯವರ ಕಾಲೆಳೆಯುತ್ತಿದ್ದಾರೆ. ಆಗಸ್ಟ್ 15, 2019, 2020, 2021 ಈ ಮೂರು ವರ್ಷವೂ 100 ಲಕ್ಷ ಕೋಟಿ ರೂಪಾಯಿಗಳನ್ನು ಆಧುನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ವಿನಿಯೋಗಿಸಲಾಗುತ್ತದೆ ಎಂದು ಹೇಳಿದ್ದಾರೆ ಎಂಬ ಮೀಮ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಷ್ಟ್ರದ ಜನರನ್ನು ಒಂದೇ ಭರವಸೆ, ಯೋಜನೆಯ […]