ರಾಜಕೀಯ

ಇಂದು ಹೈಕಮಾಂಡ್ ಭೇಟಿ ಮಾಡಲಿರುವ ಸಿಎಂ ಬೊಮ್ಮಾಯಿ; ಖಾಲಿ ಉಳಿದಿರುವ ನಾಲ್ಕು ಸಚಿವ ಸ್ಥಾನ ಭರ್ತಿ ಮಾಡುವ ಯೋಚನೆ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಲಿದ್ದಾರೆ. ಹೀಗಾಗಿ ಇಂದು ಮಧ್ಯಾಹ್ನ 1.20ಕ್ಕೆ ನೀರಾವರಿ ಸಚಿವ ಗೋವಿಂದ ಕಾರಜೋಳ ಜೊತೆ ಸಿಎಂ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಸಿಎಂ ಜೊತೆ ಪ್ರಯಾಣ ಬೆಳೆಸಲಿದ್ದಾರೆ. ದೆಹಲಿಯಲ್ಲಿ ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ರಾಜ್ಯದ […]

ಇಂದು ಹೈಕಮಾಂಡ್ ಭೇಟಿ ಮಾಡಲಿರುವ ಸಿಎಂ ಬೊಮ್ಮಾಯಿ; ಖಾಲಿ ಉಳಿದಿರುವ ನಾಲ್ಕು ಸಚಿವ ಸ್ಥಾನ ಭರ್ತಿ ಮಾಡುವ ಯೋಚನೆ Read More »

ಕೇಂದ್ರ ಸಚಿವ ನಾರಾಯಣ್ ರಾಣೆಯನ್ನು ಬಂಧಿಸಿದ ಮಹಾರಾಷ್ಟ್ರ ‌ಪೊಲೀಸ್

ನಾಸಿಕ್​: ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷವನ್ನೇ ತಪ್ಪಾಗಿ ಹೇಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯ ಕಪಾಳಕ್ಕೆ ಹೊಡೆಯಬೇಕು ಎನ್ನಿಸಿತ್ತು ಎಂದು ಏಕವಚನದಲ್ಲಿ, ಬಹಿರಂಗವಾಗಿ ಬೈದಿದ್ದ ಬಿಜೆಪಿ ನಾಯಕ, ಕೇಂದ್ರ ಸಚಿವ ನಾರಾಯಣ್​ ರಾಣೆ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ರತ್ನಗಿರಿ ಜಿಲ್ಲೆಯ ಚಿಪ್ಲುನ್​ ನಗರದಲ್ಲಿದ್ದ ನಾರಾಯಣ್ ರಾಣೆಯವರನ್ನು ನಾಸಿಕ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಅವರ ವಿರುದ್ಧ ಅದಾಗಲೇ ಪುಣೆ, ನಾಸಿಕ್​​, ಮತ್ತು ರಾಯ್​ಗಡ್​ನ ಮಹಾದ್​​ನಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಮಧ್ಯೆ ಬಂಧನ ಅಥವಾ ಇನ್ಯಾವುದೇ ಬಲವಂತವಾಗಿ

ಕೇಂದ್ರ ಸಚಿವ ನಾರಾಯಣ್ ರಾಣೆಯನ್ನು ಬಂಧಿಸಿದ ಮಹಾರಾಷ್ಟ್ರ ‌ಪೊಲೀಸ್ Read More »

ರೈತರಿಗೆ ಗುಡ್ ನ್ಯೂಸ್ ನೀಡಿದ ಸಚಿವ ಸೋಮಶೇಖರ್| ಮತ್ತೊಮ್ಮೆ ಅವಳು ರೈತರ ಬಾಗಿಲಿಗೆ ಬರಲುದ್ದಾಳೆ…!

ಚಾಮರಾಜನಗರ : ರಾಜ್ಯದ ಜನತೆಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಯಶಸ್ವಿನಿ ವಿಮಾ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, ಯಶಸ್ವಿನಿ ಯೋಜನೆಯನ್ನು ಆಯುಷ್ಮಾನ್ ಯೋಜನೆ ಜೊತೆ ವಿಲೀನಗೊಳಿಸಲಾಗಿದೆ. ಈಗ ಅದನ್ನು ಪ್ರತ್ಯೇಕಿಸಲು 300 ಕೋಟಿ ರೂ ಬೇಕಾಗಿರುವುದರಿಂದ ಇಲಾಖೆಯವರು ಒಪ್ಪಿರಲಿಲ್ಲ, ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಎರಡು ಬಾರಿ ಬಜೆಟ್ ನಲ್ಲಿ ಸೇರಿಸಲು ಪ್ರಯತ್ನಿಸಿದ್ದೆ, ಕಾರಣಾಂತರಗಳಿಂದ ಆಗಿರಲಿಲ್ಲ ಈಗ

ರೈತರಿಗೆ ಗುಡ್ ನ್ಯೂಸ್ ನೀಡಿದ ಸಚಿವ ಸೋಮಶೇಖರ್| ಮತ್ತೊಮ್ಮೆ ಅವಳು ರೈತರ ಬಾಗಿಲಿಗೆ ಬರಲುದ್ದಾಳೆ…! Read More »

ಮುಸ್ಲಿಂ ಮಹಿಳೆಯರ ‘ಹೃದಯ’ ಕದ್ದ ಸಚಿವೆ ಜೊಲ್ಲೆ| ಆರೋಗ್ಯಕ್ಕಾಗಿ ವಿಶೇಷ ಸಹಾಯಧನ|

ಬೆಂಗಳೂರು : ರಾಜ್ಯ ಸರ್ಕಾರವು ಮುಸ್ಲಿಂ ಮಹಿಳೆಯರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಮುಸ್ಲಿಂ ಮಹಿಳೆಯರಿಗೆ ಹೃದಯ ಹಾಗೂ ಕ್ಯಾನ್ಸರ್ ರೋಗ ಚಿಕಿತ್ಸೆಗೆ 1 ಲಕ್ಷ ರೂ. ಸಹಾಯಧನ ನೀಡಲಾಗುವುದು ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಗುರುವಾರ ವಿಕಾಸಸೌಧದಲ್ಲಿ ವಕ್ಫ್ ಮತ್ತು ಹಜ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವರು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಕಮಿಟಿಯಲ್ಲಿ 105 ಕೋಟಿ ಅನುದಾನ ಇದೆ. ಬಡ ಮುಸ್ಲೀಂ ಸಮುದಾಯದವರಿಗೆ ಶೇ 5 %

ಮುಸ್ಲಿಂ ಮಹಿಳೆಯರ ‘ಹೃದಯ’ ಕದ್ದ ಸಚಿವೆ ಜೊಲ್ಲೆ| ಆರೋಗ್ಯಕ್ಕಾಗಿ ವಿಶೇಷ ಸಹಾಯಧನ| Read More »

ಸೆ.13 ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ

ಬೆಂಗಳೂರು : ಕೋವಿಡ್ ಕಾರಣದಿಂದಾಗಿ ವಿಳಂಬವಾಗಿದ್ದಂತ ರಾಜ್ಯ ವಿಧಾನಮಂಡಲದ ಅಧಿವೇಶನಕ್ಕೆ, ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟೆಂಬರ್ 13 ರಿಂದ 10 ದಿನಗಳ ಕಾಲ ವಿಧಾನ ಮಂಡಲದ ಅಧಿವೇಶನ ನಡೆಸೋದಕ್ಕೆ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದಂತ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದಂತ ಸಚಿವ ಸಂಪುಟದಲ್ಲಿ ಸೆಪ್ಟೆಂಬರ್ 13 ರಿಂದ ಹತ್ತು ದಿನಗಳ ಕಾಲ, ರಾಜ್ಯ ವಿಧಾನ ಮಂಡಲ ಅಧಿವೇಶನವನ್ನು ನಡೆಸೋದಕ್ಕೆ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಮೂಲಕ

ಸೆ.13 ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ Read More »

ಮತ್ತೆ ಎಡವಟ್ಟು ಮಾಡಿಕೊಂಡ ಡಿಕೆಶಿ – ಪೇಸ್ ಬುಕ್‌ನಲ್ಲಿ‌ ತಪ್ಪಾಗಿ ಗೀಚಿದ ‘ಬಂಡೆ’

ಬೆಂಗಳೂರು: ಸ್ವಾತಂತ್ರ್ಯದ ಮಹತ್ವದ ಬಗ್ಗೆ ಹೇಳಲು ಹೋಗಿ ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಎಡವಟ್ಟು ಮಾಡಿಕೊಂಡಿದ್ದಾರೆ. ಫೇಸ್​ಬುಕ್​ ಪೇಜ್​ನಲ್ಲಿ ಪೋಸ್ಟ್​ ಹಾಕುವಾಗ ಎಡವಟ್ಟು ಮಾಡಿಕೊಂಡಿದ್ದಾರೆ. 1866 ರಲ್ಲಿ ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ರು ಎಂದು ಬರೆದುಕೊಂಡಿದ್ದಾರೆ. 1915, 1920, 1927, 1934, 1936 ರಲ್ಲಿ ಗಾಂಧೀಜಿ ಬೆಂಗಳೂರಿಗೆ ಭೇಟಿ ನೀಡಿದ್ದರು ಎಂದು ತಪ್ಪು ಮಾಹಿತಿ ಕೊಡಲಾಗಿದೆ. ಗಾಂಧೀಜಿಯವರು ಹುಟ್ಟಿದ್ದೇ 1869ರ ಅಕ್ಟೋಬರ್​ 2ರಂದು. ಹೀಗಿರುವಾಗ, 1866 ರ ಹೋರಾಟದಲ್ಲಿ ಗಾಂಧಿ ಪಾಲ್ಗೊಳ್ಳಲು ಹೇಗೆ

ಮತ್ತೆ ಎಡವಟ್ಟು ಮಾಡಿಕೊಂಡ ಡಿಕೆಶಿ – ಪೇಸ್ ಬುಕ್‌ನಲ್ಲಿ‌ ತಪ್ಪಾಗಿ ಗೀಚಿದ ‘ಬಂಡೆ’ Read More »

ಕೇಂದ್ರ ಸಚಿವರ ಸ್ವಾಗತಕ್ಕಾಗಿ ಬಂದೂಕಿನ ಮೊರೆತ – ಯಾದಗಿರಿಯಲ್ಲೊಂದು‌ ವಿಲಕ್ಷಣ ಬೆಳವಣಿಗೆ

ಯಾದಗಿರಿ: ಜನಾಶೀರ್ವಾದ ಕಾರ್ಯಕ್ರಮದ ಹಿನ್ನೆಲೆ ಯರಗೋಳ ಗ್ರಾಮಕ್ಕೆ ಕೇಂದ್ರ ಸಚಿವ ಖೂಬಾ ಆಗಮಿಸಿದ್ದಾರೆ. ಈ ವೇಳೆ, ನಾಡಬಂದೂಕು ಸಿಡಿಸಿ ಕೇಂದ್ರ ಸಚಿವರಿಗೆ ಭರ್ಜರಿ ಸ್ವಾಗತವನ್ನು ಕೋರಲಾಗಿದೆ. ಜಿಲ್ಲೆಯ ಯರಗೋಳ ಗ್ರಾಮದಲ್ಲಿ ನಾಡಬಂದೂಕು ಕೈಯಲ್ಲಿ ಹಿಡಿದುಕೊಂಡು ಜನ ಸ್ವಾಗತಿಸಿದ್ದಾರೆ. ಅಲ್ಲದೇ ಕೋವಿಡ್ ನಿಯಮವನ್ನೂ ಉಲ್ಲಂಘಿಸಿ ಜನ ಜಾತ್ರೆ ಸೇರಿದ್ದರು. ಕೇಂದ್ರ ಸಚಿವರು ಬಂದಾಗ, ಅಲ್ಲಿದ್ದ ಜನ ಹೂಗಳನ್ನ ಅರ್ಪಿಸಿ ಭರ್ಜರಿ ಸ್ವಾಗತ ಕೋರಿದರು. ಈ ವೇಳೆ ಸಚಿವರೊಂದಿಗೆ ಕೇಂದ್ರ ಸಚಿವ ಭಗವಂತ ಖೂಬಾ ಸ್ವಾಗತ ಮಾಡಿಕೊಂಡ ಮಾಜಿ ಸಚಿವ

ಕೇಂದ್ರ ಸಚಿವರ ಸ್ವಾಗತಕ್ಕಾಗಿ ಬಂದೂಕಿನ ಮೊರೆತ – ಯಾದಗಿರಿಯಲ್ಲೊಂದು‌ ವಿಲಕ್ಷಣ ಬೆಳವಣಿಗೆ Read More »

ಭಾರೀ ಕುಸಿತ ಕಂಡ ಮೋದಿ ಜನಪ್ರಿಯತೆ – ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಬಹಿರಂಗ

ನವದೆಹಲಿ: ಆಗಸ್ಟ್ 16 ಬಿಡುಗಡೆಯಾದ ಇಂಡಿಯಾ ಟುಡೇ “ಮೂಡ್ ಆಫ್ ದಿ ನೇಷನ್” ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ರೇಟಿಂಗ್ ಒಂದು ವರ್ಷದಲ್ಲಿ 66% ರಿಂದ 24% ಕ್ಕೆ ಇಳಿದಿದೆ. ದೇಶದಲ್ಲಿ ಕೋವಿಡ್ ಬಿಕ್ಕಟ್ಟನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೇ ಇರುವುದು ಪ್ರಧಾನಿ ಮೋದಿಯವರ ಜನಪ್ರಿಯತೆ ಕುಸಿತಕ್ಕೆ ಪ್ರಾಥಮಿಕ ಕಾರಣ ಎಂದು ಹೇಳಲಾಗಿದೆ. “ಕೊರೊನಾ ಮೊದಲ ಅಲೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕಾಗಿ ಮೋದಿಯವರನ್ನು ಜನವರಿ 2021 ರಲ್ಲಿ ಪ್ರಶಂಸಿಸಲಾಗಿತ್ತು. ಇದಕ್ಕಾಗಿ ಶೇಕಡಾ 73% ರಷ್ಟು ಜನಪ್ರಿಯತೆ ಗಳಿಸಿದ್ದರು.

ಭಾರೀ ಕುಸಿತ ಕಂಡ ಮೋದಿ ಜನಪ್ರಿಯತೆ – ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಬಹಿರಂಗ Read More »

ಉಪರಾಷ್ಟ್ರಪತಿಗೆ ಪುಸ್ತಕ ನೀಡಿ ಸ್ವಾಗತಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಇಂದು ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪುಸ್ತಕ ನೀಡಿ ಸ್ವಾಗತ ಕೋರಿದ್ದಾರೆ. ಕಾರ್ಯಕ್ರಮ ನಿಮಿತ್ತ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೆಂಕಯ್ಯನಾಯ್ಡು ಅವರನ್ನು ಸಿಎಂ ಸಂಭ್ರಮದಿಂದ ಸ್ವಾಗತಿಸಿದರು. ವಿಮಾನದ ಬಳಿಯೇ ತೆರಳಿದ ಸಿಎಂ ಬೊಮ್ಮಾಯಿವರು ವಿಶೇಷ ಹಾರ, ಶಾಲು ಸೇರಿದಂತೆ ಪುಸ್ತಕ ನೀಡಿ ಅವರನ್ನು ಬರ ಮಾಡಿಕೊಂಡರು. ಇನ್ನೂ ಇದೇ ವೇಳೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸಹ ಉಪರಾಷ್ಟ್ರಪತಿಗಳನ್ನ ಸ್ವಾಗತಿಸಿದರು. ಸಚಿವರಾದ ಅಶ್ವತ್ಥನಾರಾಯಣ್, ಸಂಸದ ಪಿ.ಸಿ.ಮೋಹನ್ ಸಹ

ಉಪರಾಷ್ಟ್ರಪತಿಗೆ ಪುಸ್ತಕ ನೀಡಿ ಸ್ವಾಗತಿಸಿದ ಸಿಎಂ ಬೊಮ್ಮಾಯಿ Read More »

ಸಿಎಂ ಗೆ ಸೆಲ್ಪಿ ಕಿರಿಕ್| ನನ್ನ ಭೇಟಿ ಮಾಡುವವ್ರು ಮೊಬೈಲ್ ತರಬೇಡಿ- ಖಡಕ್ ಆದೇಶ ಹೊರಡಿಸಿದ ಬೊಮ್ಮಾಯಿ

ಬೆಂಗಳೂರು : ಸಿಎಂ ಭೇಟಿಗೆ ಬರುವವರು ಬಂದು, ಸಿಎಂ ಭೇಟಿ ಮಾಡಿ ಮಾತುಕತೆ‌ ನಡೆಸಿ ಹೋಗಬಹುದು.ಆದರೆ ಸಿಎಂ ನಿವಾಸದ ಒಳಭಾಗಕ್ಕೆ ಮೊಬೈಲ್ ಒಯ್ಯುವಂತಿಲ್ಲ. ಖಡಕ್ ಆದೇಶವನ್ನು ಸಿಎಂ ಹೊರಡಿಸಿದ್ದಾರೆ. ಆರ್.ಟಿ.ನಗರದಲ್ಲಿರುವ ಬಸವರಾಜ್ ಬೊಮ್ಮಾಯಿ‌ಖಾಸಗಿ ನಿವಾಸದಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಈ ಬಗ್ಗೆ ನಿವಾಸದ ಹೊರಭಾಗದಲ್ಲಿ ಬೋರ್ಡ್ ಹಾಕಲಾಗಿದೆ. ಸಿಎಂ ಭೇಟಿಗೆ ಬರುವವರು ಬಂದು, ಸಿಎಂ ಭೇಟಿ ಮಾಡಿ ಮಾತುಕತೆ‌ ನಡೆಸಿ ಹೋಗಬಹುದು.ಆದರೆ ಸಿಎಂ ನಿವಾಸದ ಒಳಭಾಗಕ್ಕೆ ಮೊಬೈಲ್ ಒಯ್ಯುವಂತಿಲ್ಲ. ಖಡಕ್ ಆದೇಶದಿಂದ ಕಾರ್ಯಕರ್ತರು ಹಾಗೂ ಸಿಎಂ ಭೇಟಿಗೆ ಬಂದವರು

ಸಿಎಂ ಗೆ ಸೆಲ್ಪಿ ಕಿರಿಕ್| ನನ್ನ ಭೇಟಿ ಮಾಡುವವ್ರು ಮೊಬೈಲ್ ತರಬೇಡಿ- ಖಡಕ್ ಆದೇಶ ಹೊರಡಿಸಿದ ಬೊಮ್ಮಾಯಿ Read More »