ರಾಜ್ಯ ಸರ್ಕಾರಕ್ಕೆ ಮೇಜರ್ ಸರ್ಜರಿ| ನಿಷ್ಕ್ರಿಯ ಸಚಿವರಿಗೆ ಗೇಟ್ ಪಾಸ್| ಹೊಸ ಟೀಂ ನಲ್ಲಿ ಬಿ.ವೈ ರಾಘವೇಂದ್ರ!?
ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಲ ತಂದಿದೆ. ಇದೇ ವೇಳೆ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸಂಪುಟ ಪುನಾರಚನೆ ಮಾಡಲು ಚಿಂತನೆ ನಡೆದಿದೆ. 2023ರ ಚುನಾವಣೆ ಗೆಲ್ಲುವ ಗುರಿಯೊಂದಿಗೆ ನಿಷ್ಕ್ರಿಯ ಸಚಿವರಿಗೆ ಗೇಟ್ ಪಾಸ್ ನೀಡಿ, ವರ್ಚಸ್ಸು ಹೆಚ್ಚಿಸುವ ಹೊಸ ಟೀಂ ಸೇರ್ಪಡೆ ಮಾಡಿಕೊಳ್ಳಲಾಗುವುದು.ಇದಕ್ಕಾಗಿ ಹೈಕಮಾಂಡ್ ಹಂತದಲ್ಲಿಯೇ ತೀರ್ಮಾನ ಕೈಗೊಂಡು ಸ್ಥಳೀಯರ ಗೊಂದಲಕ್ಕೆ ಕಡಿವಾಣ ಹಾಕಲಾಗುವುದು ಎನ್ನಲಾಗಿದೆ. ಪ್ರಾದೇಶಿಕತೆ, ಜಾತಿವಾರು ಪ್ರಾತಿನಿಧ್ಯ ಪರಿಗಣಿಸಿ ಸಮತೋಲನ ಸಂಪುಟ ರಚನೆ ಮಾಡಲಾಗುತ್ತದೆ. […]