ರಾಜಕೀಯ

ಮೇಕೆದಾಟು ಪಾದಯಾತ್ರೆ 2.0| ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್

ಸಮಗ್ರ ನ್ಯೂಸ್: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕೊರೊನಾ ಕಾರಣದಿಂದ ಕಳೆದ ಬಾರಿ ಅರ್ಧಕ್ಕೆ ಮೊಟಕುಗೊಂಡ ಮೇಕೆದಾಟು ಪಾದಯಾತ್ರೆಯನ್ನು ಈ ಬಾರಿ ಯಶಸ್ವಿಯಾಗಿ ನಡೆಸಲು ಕಾಂಗ್ರೆಸ್​ ಮುಂದಾಗಿದೆ. ಆದರೆ ರಾಮನಗರ ಜಿಲ್ಲೆಯಲ್ಲಿ ಫೆಬ್ರವರಿ 28ರವರೆಗೆ ಜಿಲ್ಲೆಯಾದ್ಯಂತ ಕೊರೊನಾ ಮಾರ್ಗಸೂಚಿ ಪಾಲನೆಗೆ ಮಾರ್ಗಸೂಚಿ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸಾವಿರಾರು ಜನರನ್ನು ಗುಂಪು ಸೇರಿಸಿ ಪಾದಯಾತ್ರೆ ನಡೆಸುತ್ತಿದೆ. ಎಲ್ಲಾ ಕೊರೊನಾ […]

ಮೇಕೆದಾಟು ಪಾದಯಾತ್ರೆ 2.0| ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ Read More »

ಕೋಮು ಸೌಹಾರ್ಧಕ್ಕೆ ಧಕ್ಕೆ| ಚೈತ್ರಾ ಕುಂದಾಪುರ, ಮುತಾಲಿಕ್ ಗೆ ಕಲಬುರಗಿಗೆ ಪ್ರವೇಶ ನಿಷೇಧ|

ಸಮಗ್ರ ನ್ಯೂಸ್: ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಫೆ.27 ರಿಂದ ಮಾ.3ರ ವರೆಗೆ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್, ಚೈತ್ರಾ ಕುಂದಾಪುರ ಅವರನ್ನು ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ಸಿ.ಆರ್.ಪಿ.ಸಿ ಕಾಯ್ದೆ-1973ರ ಕಲಂ-132, 143, 144 ಹಾಗೂ 144ಎ ರನ್ವಯ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಆದೇಶ ಹೊರಡಿಸಿದ್ದಾರೆ. ಜೇವರ್ಗಿ ತಾಲೂಕಿನ ಆಂದೋಲದ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ಸಹ ಫೆ. 27 ರಿಂದ ಮಾ.3ರ

ಕೋಮು ಸೌಹಾರ್ಧಕ್ಕೆ ಧಕ್ಕೆ| ಚೈತ್ರಾ ಕುಂದಾಪುರ, ಮುತಾಲಿಕ್ ಗೆ ಕಲಬುರಗಿಗೆ ಪ್ರವೇಶ ನಿಷೇಧ| Read More »

ವಿದ್ಯಾರ್ಥಿಗಳ ರಕ್ಷಣೆ ಹೇಗೆ? ಮತ್ತು ಯಾವಾಗ?: ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ರಮ್ಯಾ ಪ್ರಶ್ನೆ

ಸಮಗ್ರ ನ್ಯೂಸ್ ಡೆಸ್ಕ್ : ಉಕ್ರೇನ್ ಮೇಲೆ ವಿಪರೀತ ದಾಳಿ ನಡೆದಿದ್ದರಿಂದ ಅಲ್ಲಿ ವಾಸವಿರುವ ಕನ್ನಡಿಗರು ಆತಂಕದಿಂದ ದಿನಗಳೆಯುತ್ತಿದ್ದಾರೆ. ಅವರನ್ನು ಕರೆತರಲು ಏನೆಲ್ಲ ಪ್ರಯತ್ನಗಳು ನಡೆದರೂ, ಅವು ವಿಫಲವಾಗುತ್ತಿದೆ. ಹಾಗಾಗಿ ಉಕ್ರೇನ್ ನಲ್ಲಿ ನೆಲೆಸಿರುವ ಕನ್ನಡಿಗರು ವಿಡಿಯೋ ಮತ್ತು ಫೋನ್ ಕರೆಗಳ ಮೂಲಕ ತಮ್ಮನ್ನು ರಕ್ಷಿಸುವಂತೆ ಮೊರೆಯಿಡುತ್ತಿದ್ದಾರೆ. ಈ ಕುರಿತು ನಟಿ, ಮಾಜಿ ಸಂಸದೆ ರಮ್ಯಾ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವಿಟ್ ಮಾಡಿದ್ದಾರೆ. “ಕರ್ನಾಟಕದ ವಿದ್ಯಾರ್ಥಿಗಳ ರಕ್ಷಣೆ ಹೇಗೆ? ಅವರನ್ನು

ವಿದ್ಯಾರ್ಥಿಗಳ ರಕ್ಷಣೆ ಹೇಗೆ? ಮತ್ತು ಯಾವಾಗ?: ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ರಮ್ಯಾ ಪ್ರಶ್ನೆ Read More »

‘ಹರ್ಷ ತಾಯಿಗೆ ಎಂಎಲ್ಎ ಟಿಕೆಟ್ ನೀಡಿ’ – ಪೋಸ್ಟರ್ ಅಭಿಯಾನದಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ

ಸಮಗ್ರ ನ್ಯೂಸ್: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯಾದ ಬೆನ್ನಲ್ಲೇ ‘ದೇಶಭಕ್ತರ ಕುಟುಂಬದ ಸದಸ್ಯರಿಗೆ ಎಂಎಲ್‌ಎ ಟಿಕೆಟ್‌ ನೀಡಬೇಕು’ ಎಂಬ ಹೊಸ ಅಭಿಯಾನವನ್ನು ದೇಶಭಕ್ತ ಹಿಂದೂ ಕಾರ್ಯಕರ್ತರ ಹೆಸರಿನಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದು, ಬಿಜೆಪಿಗೆ ಮುಜುಗರ ತಂದಿದೆ. ‘ಹರ್ಷ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟಿದ್ದಾನೆ. ಅವರ ಕುಟುಂಬದವರಿಗೆ ಸಾಂತ್ವನ, ಭಾಷಣ, ಆರ್ಥಿಕ ನೆರವು ನೀಡಿದರಷ್ಟೇ ಸಾಲದು. ಅವರ ತಾಯಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡಬೇಕು. ದೇಶಭಕ್ತನ ಮನೆಯಿಂದ ಒಬ್ಬರು ಎಂಎಲ್‌ಎ ಹುಟ್ಟಿಬರಲಿ. ಇಂತಹ ಸ್ಥಾನಗಳು ಈಶ್ವರಪ್ಪ, ಯಡಿಯೂರಪ್ಪ

‘ಹರ್ಷ ತಾಯಿಗೆ ಎಂಎಲ್ಎ ಟಿಕೆಟ್ ನೀಡಿ’ – ಪೋಸ್ಟರ್ ಅಭಿಯಾನದಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ Read More »

ಪುಟಿನ್ ಗೆ ಯುದ್ಧ ನಿಲ್ಲಿಸಲು ಮನವಿ ಮಾಡಿದ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ, ಉಕ್ರೇನ್‌ನಲ್ಲಿ ಇಂದು ಬೆಳಿಗ್ಗೆ ಪ್ರಾರಂಭವಾದ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿದರು ಎಂದು ರಾಷ್ಟ್ರೀಯ ಮಾಧ್ಯಮ ಎನ್.ಡಿ ಟಿವಿ ವರದಿ ಮಾಡಿದೆ. ಮಧ್ಯಸ್ಥಿಕೆಗಾಗಿ ಭಾರತಕ್ಕೆ ಉಕ್ರೇನ್ ತುರ್ತು ಮನವಿ ಮಾಡಿದ ಗಂಟೆಗಳ ನಂತರ ಈ ಸಂಭಾಷಣೆ ನಡೆಯಿತು ಎನ್ನಲಾಗಿದೆ. ರಾಜತಾಂತ್ರಿಕ ಮಾತುಕತೆ ಮತ್ತು ಸಂವಾದದ ಹಾದಿಗೆ ಮರಳಲು ಎಲ್ಲಾ ಕಡೆಯಿಂದ ಸಂಘಟಿತ ಪ್ರಯತ್ನಗಳು ನಡೆಸುವ ಕುರಿತು ಪ್ರಧಾನಿ

ಪುಟಿನ್ ಗೆ ಯುದ್ಧ ನಿಲ್ಲಿಸಲು ಮನವಿ ಮಾಡಿದ ಪ್ರಧಾನಿ ಮೋದಿ Read More »

ಮಾ.4ರಂದು ರಾಜ್ಯ ಬಜೆಟ್ ಮಂಡನೆ- ಸಿಎಂ ಬೊಮ್ಮಾಯಿ

ಸಮಗ್ರ ನ್ಯೂಸ್: ರಾಜ್ಯ ಬಜೆಟ್ ಮಂಡನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು,ಸಿಎಂ ಬಸವರಾಜ ಬೊಮ್ಮಾಯಿ ಮಾರ್ಚ್ 4ಕ್ಕೆ ರಾಜ್ಯ ಬಜೆಟ್ ಮಂಡನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾರ್ಚ್.4ರಂದು ರಾಜ್ಯ ಬಜೆಟ್ ಮಂಡಿಸೋದಾಗಿ ಸ್ಪೀಕರ್ ಅನುಮತಿಯನ್ನು ಕೋರಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ, ಕಾಂಗ್ರೆಸ್ ಸದಸ್ಯರ ಗದ್ದಲ-ಕೋಲಾಹಲದಿಂದಾಗಿ ವಿಧಾನಸಭೆಯನ್ನು ಮಾರ್ಚ್ 4ರವರೆಗೆ ಮುಂದೂಡಿಕೆ ಮಾಡಿದರು.

ಮಾ.4ರಂದು ರಾಜ್ಯ ಬಜೆಟ್ ಮಂಡನೆ- ಸಿಎಂ ಬೊಮ್ಮಾಯಿ Read More »

ನಮ್ಮ ರಕ್ಷಣೆ ನೀವು ಮಾಡುತ್ತೀರಾ ಇಲ್ಲ ನಾವೇ ಮಾಡಿಕೊಳ್ಳಬೇಕಾ – ಚಕ್ರವರ್ತಿ ಸೂಲಿಬೆಲೆ ಸರ್ಕಾರಕ್ಕೆ ಪ್ರಶ್ನೆ – ಭಾರತದಲ್ಲಿ ವಾಹಬಿಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ

ಶಿವಮೊಗ್ಗ: ನಮ್ಮ ರಕ್ಷಣೆ ನೀವು ಮಾಡುತ್ತೀರಾ ಇಲ್ಲ ನಾವೇ ಮಾಡಿಕೊಳ್ಳಬೇಕಾ ಎಂದು ಚಕ್ರವರ್ತಿ ಸೂಲಿಬೆಲೆ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಇಂದು ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಬ್ ವಿರುದ್ಧ ಹರ್ಷ ಗಲಾಟೆ ಮಾಡುತ್ತಿದ್ದರಿಂದ ಕೊಂದಿರುವುದಾಗಿ ಹೇಳಲಾಗುತ್ತಿದೆ. ಆದರೆ ಇದರ ಹಿಂದಿನ ಸತ್ಯವನ್ನು ಬಯಲಿಗೆ ಎಳಬೇಕು. ಆರೋಪಿಗಳಿಗೆ ಸರಿಯಾದ ಶಿಕ್ಷೆ ನೀಡಲಿಲ್ಲ ಎಂದರೆ ಮುಂದೆ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತದೆ. ಇಂತಹ ಘಟನೆಗಳನ್ನು ತಡೆಯಬೇಕು ಎಂಬುವುದು ಸರ್ಕಾರಕ್ಕೆ ಅರಿವಾಗಬೇಕು. ಹಿಂದೂಗಳ ಸಮಾಧಿ ಮೇಲೆ ಸರ್ಕಾರ ಕಟ್ಟಿಕೊಂಡವರು ಇನ್ನೂ ಹಿಂದೂಗಳ

ನಮ್ಮ ರಕ್ಷಣೆ ನೀವು ಮಾಡುತ್ತೀರಾ ಇಲ್ಲ ನಾವೇ ಮಾಡಿಕೊಳ್ಳಬೇಕಾ – ಚಕ್ರವರ್ತಿ ಸೂಲಿಬೆಲೆ ಸರ್ಕಾರಕ್ಕೆ ಪ್ರಶ್ನೆ – ಭಾರತದಲ್ಲಿ ವಾಹಬಿಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ Read More »

ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ – ಕಾಂಗ್ರೆಸ್ ನವರಿಗೆ ಕೊಲೆ ಮಾಡೋ ಬಗ್ಗೆ ಮಾಹಿತಿ ಇರಲಿಲ್ವಾ? ಭಾರತಿ ಶೆಟ್ಟಿ ಪ್ರಶ್ನೆ

ಬೆಂಗಳೂರು: ಶಿವಮೊಗ್ಗದಲ್ಲಿ ಕೊಲೆಯಾಗಿರುವ ಹಿಂದೂ ಕಾರ್ಯಕರ್ತ ಹರ್ಷನ ಮೇಲೆ ಕೊತ್ತಂಬರಿ ಸೊಪ್ಪು ತರಲು ಅಥವಾ ಹುಡುಗಿ ಜೊತೆ ಹೋದ ಕೇಸ್ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯಾರ ಹತ್ಯೆ ಆದ್ರೂ ಕೂಡ ಎಲ್ಲಾ ಪಕ್ಷ ಹೇಳೋದು ಒಂದೇ ಮಾತು ಕಠಿಣ ಶಿಕ್ಷೆ ಆಗಬೇಕು ಅಂತ. ಹರ್ಷನ ಜೀವನ ನಾನು ಹತ್ತಿರದಿಂದ ನೋಡಿದ್ದೇನೆ. ಅವರ ಮೇಲೆ ಅನೇಕ ಕೇಸ್ ಇತ್ತು. ಹರ್ಷ ಮೇಲೆ ವೈಯಕ್ತಿಕ ಕೇಸ್ ಇಲ್ಲ.

ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ – ಕಾಂಗ್ರೆಸ್ ನವರಿಗೆ ಕೊಲೆ ಮಾಡೋ ಬಗ್ಗೆ ಮಾಹಿತಿ ಇರಲಿಲ್ವಾ? ಭಾರತಿ ಶೆಟ್ಟಿ ಪ್ರಶ್ನೆ Read More »

ಬಿಜೆಪಿ ಸರ್ಕಾರದಲ್ಲೂ ಬಲಿಬೀಳುತ್ತಿರುವ ಹಿಂದೂ ಕಾರ್ಯಕರ್ತರು| ಎಸ್ಡಿಪಿಐ, ಪಿಎಫ್ಐ ನಿಷೇಧಿಸಲು ಇನ್ನೆಷ್ಟು ಹೆಣ ಬೀಳಬೇಕು| ಸರ್ಕಾರದ ನಡೆಗೆ ಸಂಸದ ಪ್ರತಾಪ ಸಿಂಹ ಹತಾಷೆ|

ಸಮಗ್ರ ನ್ಯೂಸ್ ಡೆಸ್ಕ್: ಶಿವಮೊಗ್ಗದಲ್ಲಿ ನಮ್ಮ ಭಜರಂಗದಳ ಕಾರ್ಯಕರ್ತ ಹರ್ಷ ಬೀದಿಯಲ್ಲಿ ಕಗ್ಗೊಲೆಯಾಗಿ ಬಿದ್ದಿರುವುದನ್ನು ನೋಡಿದಾಗ ನನ್ನ ಮನಸ್ಸಿಗೆ ಅತೀವ ವೇದನೆಯಾಗುತ್ತಿದೆ. ಅದೇ ರೀತಿ ನಮ್ಮ ಸರ್ಕಾರ ಬಂದ ಮೇಲೆಯೂ ಕೂಡ ನಮ್ಮ ಕಾರ್ಯಕರ್ತರ ಪರಿಸ್ಥಿತಿ ಹೀಗಾಗುತ್ತಿದೆಯಲ್ಲ ಎಂದು ನಾಚಿಯಾಗುತ್ತಿದೆ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದ್ದಾರೆ. ಭಜರಂಗದಳ ಕಾರ್ಯಕರ್ತನ ಕೊಲೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಂಟ್ವಾಳದಲ್ಲಿ ಪ್ರಶಾಂತ್​ ಪೂಜಾರಿ ಹತ್ಯೆಯಾಗಿತ್ತು. ಅದಾದ ನಂತರ ಸೂರತ್ಕಲ್​ನಲ್ಲಿ ದೀಪಕ್​ ರಾವ್​ ಕೊಲೆಯಾಯ್ತು. ಬೆಂಗಳೂರಿನಲ್ಲಿ ಸಂತೋಷ್​​

ಬಿಜೆಪಿ ಸರ್ಕಾರದಲ್ಲೂ ಬಲಿಬೀಳುತ್ತಿರುವ ಹಿಂದೂ ಕಾರ್ಯಕರ್ತರು| ಎಸ್ಡಿಪಿಐ, ಪಿಎಫ್ಐ ನಿಷೇಧಿಸಲು ಇನ್ನೆಷ್ಟು ಹೆಣ ಬೀಳಬೇಕು| ಸರ್ಕಾರದ ನಡೆಗೆ ಸಂಸದ ಪ್ರತಾಪ ಸಿಂಹ ಹತಾಷೆ| Read More »

ಮಂಗಳೂರು: ‘ಈಶ್ವರಪ್ಪನನ್ನು ಗಡಿಪಾರು ಮಾಡದಿದ್ರೆ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ’ – ಪಿ.ವಿ ಮೋಹನ್

ಮಂಗಳೂರು: ಶಿವಮೊಗ್ಗ ಬಜರಂಗ ದಳ ಕಾರ್ಯಕರ್ತನ ಕೊಲೆ ಮುಸ್ಲಿಮರು ಮಾಡಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ. ಇದಕ್ಕೆ ಅವರಲ್ಲಿ ಏನು ಸಾಕ್ಷಿಇದೆ. ಅವರು ಕರ್ನಾಟಕ ರಾಜ್ಯಕ್ಕೆ ಒಂದು ಶಾಪ. ಅವರನ್ನು ಗಡಿಪಾರು ಮಾಡಬೇಕು ಇಲ್ಲದಿದ್ದರೆ ಇಡೀ ಕರ್ನಾಟಕಕ್ಕೆ ಬೆಂಕಿ ಹಚ್ಚುತ್ತಾರೆ ಎಂದು ಎಐಸಿಸಿ ಕಾರ್ಯದರ್ಶಿ ಪಿ ವಿ ಮೋಹನ್ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕೊಲೆಗಳು ನಡೆಯುದು ಬೇರೆ ಬೇರೆ ವಯಕ್ತಿಕ ಕಾರಣ ಅಥವಾ ಬೇರೆಬೇರೆ ರಾಜಕೀಯ. ಅದನ್ನು ನೀವು ಒಂದು ಸಮುದಾಯದ ಮೇಲೆ ಹೇಗೆ

ಮಂಗಳೂರು: ‘ಈಶ್ವರಪ್ಪನನ್ನು ಗಡಿಪಾರು ಮಾಡದಿದ್ರೆ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ’ – ಪಿ.ವಿ ಮೋಹನ್ Read More »