ಮಗುವನ್ನೂ ಚಿವುಟಿ ತೊಟ್ಟಿಲು ತೂಗುತ್ತಿರುವ ರಾಜಕೀಯ ನಾಯಕರು| ವಿಕೋಪಕ್ಕೆ ತಿರುಗಿದ ಮೇಲೆ ಹಿಂದೂ – ಮುಸ್ಲಿಂ ಭಾಯಿಭಾಯಿ ಮಂತ್ರ!
ಸಮಗ್ರ ನ್ಯೂಸ್: ರಾಜ್ಯದಲ್ಲಿ ಸೃಷ್ಟಿಯಾದ ಕೋಮುವೈಷಮ್ಯ ವಿಕೋಪಕ್ಕೆ ತಿರುಗುತ್ತಿದ್ದು, ಇದೀಗ ರಾಜಕೀಯ ನಾಯಕರು ಶಾಂತಿಮಂತ್ರ ಜಪಿಸುತ್ತಿದ್ದಾರೆ. ತಾವೇ ಸೃಷ್ಟಿ ಮಾಡಿದ ಈ ಕೋಮುದ್ವೇಷವನ್ನು ಅತ್ತ ಆರಲೂ ಬಿಡದೆ ಇತ್ತ ಜೋರಾಗಲೂ ಬಿಡದೆ ಮಗುವನ್ನೂ ಚಿವುಟುತ್ತಾ ತೊಟ್ಟಿಲು ತೂಗುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಉಡುಪಿಯ ಸರ್ಕಾರಿ ಕಾಲೇಜೊಂದರಲ್ಲಿ ಹಿಜಾಬ್ ವಿವಾದ ಸೃಷ್ಟಿಯಾದ ಬಳಿಕ ಈ ವಿಚಾರ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೇ ವಿಚಾರ ವಿದ್ಯಾರ್ಥಿಗಳ ಮಧ್ಯೆ, ಧರ್ಮಗಳ ಮಧ್ಯೆ ದ್ವೇಷ ಉಂಟಾಗುವಂತೆ ಮಾಡಿತ್ತು. ಮೇಲ್ನೋಟಕ್ಕೆ ಇದು […]