ರಾಜಕೀಯ

ಹೊಸ ಪಕ್ಷ ಕಟ್ಟುತ್ತಾರಾ ಪ್ರಶಾಂರ್ ಕಿಶೋರ್? ಚುನಾವಣಾ ಚಾಣಕ್ಯ ನೀಡಿದ್ರು ಹೊಸ ಸುಳಿವು

ಸಮಗ್ರ ನ್ಯೂಸ್: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಇದೀಗ ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಸುಳಿವು ನೀಡಿದ್ದಾರೆ. ಬಿಹಾರದಲ್ಲಿ ಹೊಸ ಪಕ್ಷ ಸ್ಥಾಪಿಸಿ ಇತರೆ ಪಕ್ಷಗಳಿಗೆ ಟಾಂಗ್ ಕೊಡಲು ಮುಂದಾಗಿದ್ದಾರೆ. ಈ ಕುರಿತು ಇಂದು ಬೆಳಗ್ಗೆ ಮಾಡಿರುವ ಟ್ವೀಟ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗುತ್ತಿತ್ತು. ಈ ಸಂಬಂಧ ಸೋನಿಯಾ, ರಾಹುಲ್ ಗಾಂಧಿ ಅವರೊಂದಿಗೆ ಕೂಡ ಮಾತುಕತೆ ನಡೆಸಿದ್ದರು. ‌ಆದರೆ ಪ್ರಶಾಂತ್ ಅವರ ಷರತ್ತಿಗೆ ಕಾಂಗ್ರೆಸ್ ಒಪ್ಪದ ಕಾರಣ ಪಕ್ಷ ಸೇರ್ಪಡೆಯಿಂದ […]

ಹೊಸ ಪಕ್ಷ ಕಟ್ಟುತ್ತಾರಾ ಪ್ರಶಾಂರ್ ಕಿಶೋರ್? ಚುನಾವಣಾ ಚಾಣಕ್ಯ ನೀಡಿದ್ರು ಹೊಸ ಸುಳಿವು Read More »

ಹಾವೇರಿಯಲ್ಲಿ ಕೈಗಾರಿಕಾ ಟೌನ್‌ಶಿಪ್- ಸಿ.ಎಂ ಬೊಮ್ಮಾಯಿ

ಸಮಗ್ರ ನ್ಯೂಸ್: ಹಾವೇರಿ ಜಿಲ್ಲೆಯಲ್ಲಿ ಔದ್ಯೋಗಿಕ ಕ್ರಾಂತಿ ಮಾಡಲಾಗುವುದು. ಜಿಲ್ಲೆಯಲ್ಲಿ ಒಂದು ಸಾವಿರ ಎಕರೆಯ ಕೈಗಾರಿಕಾ ಟೌನ್ ಶಿಪ್‌ನ್ನು ಪ್ರಾರಂಭ ಆಗಲಿದೆ. ಹೆಚ್ಚು ಉದ್ಯೋಗ ನೀಡುವ ಸಿದ್ಧ ಉಡುಪು ತಯಾರಿಕಾ ಘಟಕಗಳನ್ನು ಹೆಚ್ಚೆಚ್ಚು ಜಿಲ್ಲೆಗೆ ತರಲಾಗುವುದು. ಶಿಗ್ಗಾಂವಿ ತಾಲೂಕನ್ನು ಭಾರತ ದೇಶದಲ್ಲೇ ಟೆಕ್ಸಟೈಲ್ಸ್ ಹಬ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿಯಲ್ಲಿ ಮೆಗಾ ಡೈರಿ ಅನುಮೋದನೆ ಕೊಟ್ಟಿದ್ದೇವೆ. ಹಾವೇರಿಯ ಹಾಲು ಒಕ್ಕೂಟದ ಕೆಲಸ ಈಗಾಗಲೆ ಪ್ರಾರಂಭ ಆಗಿದೆ. ಹಾಲು ಒಕ್ಕೂಟಕ್ಕಾಗಿ ನಾನು ಹೋರಾಟ ಮಾಡಿದ್ದೆ.

ಹಾವೇರಿಯಲ್ಲಿ ಕೈಗಾರಿಕಾ ಟೌನ್‌ಶಿಪ್- ಸಿ.ಎಂ ಬೊಮ್ಮಾಯಿ Read More »

ಹೊಸ ಇಲೆಕ್ಟಿಕ್ ಬೈಕ್ ಬಿಡುಗಡೆ ಮಾಡಬೇಡಿ| ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸೂಚನೆ|

ಸಮಗ್ರ ನ್ಯೂಸ್: ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಬೇಡಿ ಎಂದು ಸರ್ಕಾರ ಬೈಕ್ ತಯಾರಿಕಾ ಕಂಪನಿಗಳಿಗೆ ಸೂಚಿಸಿದೆ. ಬೈಕ್‌ಗಳಿಗೆ ಬೆಂಕಿ ತಗುಲುತ್ತಿರುವ, ಕೆಲವರು ಸಾವನ್ನಪ್ಪಿರುವ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೆಂಕಿ ತಗುಲಿದ ಪ್ರಕರಣಗಳ ಬಗ್ಗೆ ಪ್ರತ್ಯೇಕ ತನಿಖೆಯಾಗಬೇಕು. ಈ ತನಿಖೆ ಪೂರ್ಣಗೊಳ್ಳುವ ತನಕ ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲೆಕ್ಟ್ರಿಕ್ ಬೈಕ್ ತಯಾರಿಕಾ ಕಂಪನಿಗಳ ಜೊತೆ ಸಭೆ ನಡೆಸಿದೆ. ಈ

ಹೊಸ ಇಲೆಕ್ಟಿಕ್ ಬೈಕ್ ಬಿಡುಗಡೆ ಮಾಡಬೇಡಿ| ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸೂಚನೆ| Read More »

ಕರ್ನಾಟಕದಲ್ಲಿ 40% ಹೋಗಲಿ, 0%ಗಾಗಿ ಎಎಪಿ ಬರಲಿ – ಕೇಜ್ರಿವಾಲ್

ಸಮಗ್ರ ನ್ಯೂಸ್: ದೆಹಲಿ, ಪಂಜಾಬ್ ನಲ್ಲಿ ನಮ್ಮ ಸರ್ಕಾರ ಇದೆ. ಈಗ ಕರ್ನಾಟಕದಲ್ಲಿ ನಮ್ಮ ಸರ್ಕಾರ ಬರಬೇಕು. ಇಲ್ಲಿ 40% ಸರ್ಕಾರ ಇದೆ. ದೆಹಲಿಯಲ್ಲಿ ೦% ಸರ್ಕಾರ ಇದೆ. ಈ ಸರ್ಕಾರ ಹೋಗಿ, ನಮ್ಮ ಎಎಪಿ ಸರ್ಕಾರ ಬರಬೇಕು ಎಂಬುದಾಗಿ ಎಎಪಿ ಅಧ್ಯಕ್ಷ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕರೆ ನೀಡಿದ್ದಾರೆ. ಇಂದು ರೈತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೂರು‌ ಕೃಷಿ ಕಾಯ್ದೆ ತಂದಿತ್ತು. ಅಹಂಕಾರದಿಂದ ಕಾಯ್ದೆ ಜಾರಿ‌ ಮಾಡಿತ್ತು. ಲಂಕಾಧಿಪತಿ ಅಹಂಕಾರ

ಕರ್ನಾಟಕದಲ್ಲಿ 40% ಹೋಗಲಿ, 0%ಗಾಗಿ ಎಎಪಿ ಬರಲಿ – ಕೇಜ್ರಿವಾಲ್ Read More »

ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಹೆಸರು – ಸಿಎಂ ಬೊಮ್ಮಾಯಿ

ಸಮಗ್ರ ನ್ಯೂಸ್: ಶಿವಮೊಗ್ಗದಲ್ಲಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಇಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿಎಂ ಬೊಮ್ಮಾಯಿ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿ ಮಾದ್ಯಮದವರೊಂದಿಗೆ ಮಾತನಾಡಿದರು. ಡಿಸೆಂಬರ್ ತಿಂಗಳಲ್ಲಿ ಈ ವಿಮಾನ ನಿಲ್ದಾಣ ಲೋಕಾರ್ಪಣೆಗೊಳ್ಳಲಿದೆ, ಇದಕ್ಕಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೆವೆ. ಕೇಂದ್ರ ವಿಮಾನಯಾನ ಸಚಿವರಿಗೆ ಈ ಕುರಿತು ಪ್ರಸ್ತಾವನೆ ಕಳುಹಿಸಿ ಅಲ್ಲಿಂದ ಅನುಮೋದನೆ

ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಹೆಸರು – ಸಿಎಂ ಬೊಮ್ಮಾಯಿ Read More »

ಕಾಂಗ್ರೆಸ್ ನಾಲಾಯಕ್ ಪಕ್ಷ, ರಾಹುಲ್ ಗಾಂಧಿ ಇಮ್ಮೆಚ್ಯೂರ್ಡ್ ಪರ್ಸನ್| ಡಿಕೆ, ಸಿದ್ದುನಿಂದ ರಾಜ್ಯ ಕಾಂಗ್ರೆಸ್ ಮುಕ್ತ | ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ಮೇಲೆ ಮುಗಿಬಿದ್ದ ರಾಜ್ಯ ನಾಯಕರು

ಸಮಗ್ರ ನ್ಯೂಸ್: ವಿಜಯನಗರದಲ್ಲಿ ಮೊನ್ನೆಯಷ್ಟೇ ರಾಜ್ಯ ಕಾರ್ಯಕಾರಿಣಿ ಕಂಡಿದ್ದ ಬಿಜೆಪಿ ಎ.19ರಂದು ಗಡಿ ಜಿಲ್ಲೆ ಬಳ್ಳಾರಿಯಲ್ಲಿ ಸಮಾವೇಶ ಹಮ್ಮಿಕೊಂಡಿತ್ತು. ಸಮಾವೇಶದಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ತೆಗಳಿ, ಪ್ರಧಾನಿ ಮೋದಿಯನ್ನ ಕೊಂಡಾಡಿದರು. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ನಿಂದ ಲೈಟ್ ಕಂಬ ನಿಲ್ಲಿಸಿದ್ರೂ ಗೆಲ್ಲುತ್ತೆ ಎನ್ನಲಾಗುತಿತ್ತು. ಇವತ್ತು ಕಾಂಗ್ರೆಸ್ ನಿಂದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನಿಂತರೂ ಸೋಲುತ್ತಾರೆ! ದೇಶಾದ್ಯಂತ ಪರಿವರ್ತನೆಯಾಗಿದ್ದು, ಕಾಂಗ್ರೆಸ್ ಮುಕ್ತವಾಗ್ತಿದೆ‌ ಎಂದು ಹೇಳಿದರು. ಹಿಂದೆ

ಕಾಂಗ್ರೆಸ್ ನಾಲಾಯಕ್ ಪಕ್ಷ, ರಾಹುಲ್ ಗಾಂಧಿ ಇಮ್ಮೆಚ್ಯೂರ್ಡ್ ಪರ್ಸನ್| ಡಿಕೆ, ಸಿದ್ದುನಿಂದ ರಾಜ್ಯ ಕಾಂಗ್ರೆಸ್ ಮುಕ್ತ | ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ಮೇಲೆ ಮುಗಿಬಿದ್ದ ರಾಜ್ಯ ನಾಯಕರು Read More »

ದ್ವಿ. ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್| ಕೆಎಸ್ಆರ್ ಟಿಸಿಯಿಂದ ಉಚಿತ ಬಸ್ ಸೌಲಭ್ಯ

ಸಮಗ್ರ ನ್ಯೂಸ್: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೋರಿಕೆ ಮೇರೆಗೆ, ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ, ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು, ಮನೆಗೆ ಹಿಂದಿರುಗಲು ಉಚಿತ ಬಸ್‌ ಸೌಲಭ್ಯವನ್ನು ಕೆಎಸ್‌ಆರ್‌ಟಿಸಿ ಕಲ್ಪಿಸಿದೆ. ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರ ತಲುಪಿಸುವ ಕೆಲಸ ಕೆಎಸ್ಆರ್ ಟಿಸಿ ಮಾಡಿದೆ. ಏಪ್ರಿಲ್ 22 ರಿಂದ ಮೇ 18 ರವರೆಗೆ ಪರೀಕ್ಷೆ ನಡೆಯಲಿದ್ದು . ವಿದ್ಯಾರ್ಥಿಗಳು ಪರೀಕ್ಷೆ ದಿನಗಳಲ್ಲಿ ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಪ್ರಯಾಣಿಸಲು KSRTC ಉಚಿತ ಅವಕಾಶ ಕಲ್ಪಿಸಿದೆ.

ದ್ವಿ. ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್| ಕೆಎಸ್ಆರ್ ಟಿಸಿಯಿಂದ ಉಚಿತ ಬಸ್ ಸೌಲಭ್ಯ Read More »

ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್ ಗೃಹ ಸಚಿವರು ಬೇಕಾಗಿದ್ದಾರೆ ಎಂದು ಜಾಹಿರಾತು ನೀಡ್ಬೇಕು| ಸ್ವಪಕ್ಷೀಯ ಸಚಿವರ ವಿರುದ್ಧವೇ ಯತ್ನಾಳ್ ವ್ಯಂಗ್ಯ

ವಿಜಯಪುರ : ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಿನ್ನೆಲೆ ಗೃಹ ಸಚಿವರು ತೋರುತ್ತಿರುವ ಸಾಫ್ಟ್​ ಕಾರ್ನರ್ ನೋಡಿದರೆ ರಾಜ್ಯಕ್ಕೆ ಗೃಹಸಚಿವರು ಬೇಕಾಗಿದ್ದಾರೆ ಎಂದು ಜಾಹಿರಾತು ಹೊರಡಿಸುವುದು ಉತ್ತಮ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದು,​ ಸ್ವಪಕ್ಷಿಯ ಸಚಿವರ ಮೇಲೆಯೇ ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಒಂದಲ್ಲ ಒಂದು ಗಲಭೆಗಳು ನಡೆಯುತ್ತಲೇ ಇದೆ. ಎಲ್ಲೂ ಗಲಾಟೆ ಆಗ್ತಿಲ್ಲ ರಾಜ್ಯದಲ್ಲಿ ಮಾತ್ರ ಗಲಾಟೆ ಆಗ್ತಿದೆ. ಗೃಹ ಇಲಾಖೆ ಎಲ್ಲೆಲ್ಲಿ ವೀಕ್ ಇದೆಯೋ ಅಲ್ಲಲ್ಲಿ ಗಲಾಟೆಗಳು ನಡೆಯುತ್ತೆ. ನಿನ್ನೆ ಹೊಸಪೇಟೆಯಲ್ಲಿ ನಡೆದ ಬಿಜೆಪಿ

ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್ ಗೃಹ ಸಚಿವರು ಬೇಕಾಗಿದ್ದಾರೆ ಎಂದು ಜಾಹಿರಾತು ನೀಡ್ಬೇಕು| ಸ್ವಪಕ್ಷೀಯ ಸಚಿವರ ವಿರುದ್ಧವೇ ಯತ್ನಾಳ್ ವ್ಯಂಗ್ಯ Read More »

ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಗಳು ಹುಟ್ಟಾಕ್ತಾರೆ: ಸಿಎಂ ಇಬ್ರಾಹಿಂ ಕಿಡಿ

ಬೆಂಗಳೂರು : ಹುಬ್ಬಳ್ಳಿ ಗಲಭೆ ಹಿನ್ನೆಲೆ ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ಕೂಡ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಸಿಎಂ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿದ ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಗಳು ಹುಟ್ಟಾಕ್ತಾರೆ. ಗಲಭೆಗೆ ಕಾರಣಕರ್ತರನ್ನು ಬಂಧಿಸಿ ನಿರಪರಾಧಿಗಳಿಗೆ ವಿಚಾರಣೆ ಮಾಡಿ ಬಿಡಬೇಕು ಎಂದು ಸಿ.ಎಂ ಇಬ್ರಾಹಿಂ ಹೇಳಿದ್ದಾರೆ. ಅಧಿಕಾರ ಶಾಶ್ವತ ಅಲ್ಲ ,ನಿಮ್ಮ ತಂದೆ ಒಳ್ಳೆ ಹೆಸರು ಪಡೆದು ಹೋಗಿದ್ದಾರೆ .ಮನುಷ್ಯ ಹೋದ ಮೇಲೂ ಜನ ಅವರನ್ನು ಹೊಗಳಬೇಕು. ರೌಡಿಗಳು ಸತ್ತರೆ

ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಗಳು ಹುಟ್ಟಾಕ್ತಾರೆ: ಸಿಎಂ ಇಬ್ರಾಹಿಂ ಕಿಡಿ Read More »

ಡಿ ಕೆ ಶಿವಕುಮಾರ್ ಗೆ ನಿಂದಿಸಿದ ಸಾಯಿಗಿರಿಧರ್ ಗೆ ಜೈಲುಶಿಕ್ಷೆ ವಿಧಿಸಿದ ಸುಳ್ಯ ಕೋರ್ಟ್

ಸಮಗ್ರ ನ್ಯೂಸ್: ಕರ್ನಾಟಕ ಸರ್ಕಾರದ ಇಂಧನ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್ ಅವರಿಗೆ ಫೋನ್ ನಲ್ಲಿ ಬೈದು ನಿಂದಿಸಿದ್ದಾರೆಂಬ ಕಾರಣಕ್ಕಾಗಿ ಕೇಸಿಗೊಳಗಾಗಿದ್ದ ಬೆಳ್ಳಾರೆಯ ಸಾಯಿ ಗಿರಿಧರ್ ರೈಯವರಿಗೆ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ. ಸುಳ್ಯದ ಅನಿಯಮಿತ ವಿದ್ಯುತ್ ಕಡಿತದ ಪರಿಸ್ಥಿತಿಯಿಂದ ರೋಷಗೊಂಡಿದ್ದ ಬೆಳ್ಳಾರೆಯ ವಿದ್ಯುತ್ ಬಳಕೆದಾರ ಸಾಯಿ ಗಿರಿಧರ ರೈಯವರು 2016 ಫೆಬ್ರವರಿ 28 ರಂದು ಆಗಿನ ವಿದ್ಯುತ್ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ತರಾಟೆಗೆತ್ತಿಕೊಂಡಿದ್ದರು. ಈ ವೇಳೆ ಸುಳ್ಯದ ವಿದ್ಯುತ್ ಸಮಸ್ಯೆ

ಡಿ ಕೆ ಶಿವಕುಮಾರ್ ಗೆ ನಿಂದಿಸಿದ ಸಾಯಿಗಿರಿಧರ್ ಗೆ ಜೈಲುಶಿಕ್ಷೆ ವಿಧಿಸಿದ ಸುಳ್ಯ ಕೋರ್ಟ್ Read More »