“ಹರೀಶ್ ಪೂಂಜಾ ಗೋಣಿಯಲ್ಲಿ ದುಡ್ಡು ತುಂಬಿ ಹಂಚುತ್ತಾರೆ!” | ಕಾರ್ಯಕರ್ತನ ಹೊಗಳಿಕೆ ಬೆಳ್ತಂಗಡಿ ಶಾಸಕರಿಗೆ ಮುಳುವಾಗುತ್ತಾ?
ಸಮಗ್ರ ನ್ಯೂಸ್: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಕಾರ್ಯಕರ್ತರೊಬ್ಬರು ಹೊಗಳುವ ಭರದಲ್ಲಿ ಆಡಿದ ಮಾತು ಈಗ ಶಾಸಕರಿಗೆ ಮುಳುವಾಗುವ ಲಕ್ಷಣಗಳು ಕಂಡುಬರುತ್ತಿದೆ. ಬೆಳ್ತಂಗಡಿಯ ಬಳಂಜದಲ್ಲಿ ನಡೆದ ಭಜನೋತ್ಸವ ಕಾರ್ಯಕ್ರಮದ ಸಮಾರೋಪದಲ್ಲಿ ಶಾಸಕ ಹರೀಶ್ ಪೂಂಜಾ ಭಾಗವಹಿಸಿದ್ದರು. ಈ ವೇಳೆ ಅಲ್ಲಿನ ಬಿಜೆಪಿ ಕಾರ್ಯಕರ್ತ ಹರೀಶ್ ವೈ ಚಂದ್ರಮ ಎಂಬವರು ಶಾಸಕರನ್ನು ಹೊಗಳಿದ್ದಾರೆ. ಅವರು ಭಾಷಣ ಮಾಡುವ ಸಂದರ್ಭದಲ್ಲಿ ”ಹರೀಶ್ ಪೂಂಜಾರವರು ಶಾಸಕರ ಮನೆಗೆ ಹೋದವರನ್ನು ಅವರು ಯಾವತ್ತೂ ಬರಿಗೈಲಿ ಕಳಿಸಿಲ್ಲ. ಐದು, ಹತ್ತು ಸಾವಿರದಂತೆ ಕಷ್ಟದಲ್ಲಿರುವವರಿಗೆ ನೀಡುತ್ತಾರೆ. […]