ಮಧ್ಯರಾತ್ರಿ ಪ್ರಿಯತಮೆಯ ಕಾಣಲು ಆಕೆಯ ಮನೆಗೆ ಹೋದ ಪ್ರೇಮಿ| ಮನೆಯವರಿಂದ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಒದ್ದಾಟ!!
ಸಮಗ್ರ ನ್ಯೂಸ್: ಯುವಕನೊಬ್ಬ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಮಧ್ಯರಾತ್ರಿ ಆಕೆಯ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಉಂಟಾದ ಸದ್ದಿನಿಂದಾಗಿ ಮನೆಯವರು ಎಚ್ಚೆತ್ತಾಗ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಒದ್ದಾಡಿದ್ದಾನೆ. ಇಂತಹ ವಿಚಿತ್ರ ಘಟನೆ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದಿದ್ದು, ಅಲ್ಲಿನ ಗ್ರಾಮವೊಂದರ ಯುವಕ ಅದೇ ಗ್ರಾಮದಲ್ಲಿ ತಾನು ಪ್ರೀತಿಸುತ್ತಿದ್ದ ಯುವತಿ ಮನೆಗೆ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಭೇಟಿ ನೀಡಿದ್ದಾನೆ. ಇವರಿಬ್ಬರೂ ಏಕಾಂತದಲ್ಲಿ ಮಾತನಾಡುತ್ತಿದ್ದ ವೇಳೆ ಆಕೆಯ ಕುಟುಂಬಸ್ಥರಿಗೆ ಎಚ್ಚರವಾಗಿದೆ. ಆಗ ಗಾಬರಿಗೊಂಡ ಆತ ತಪ್ಪಿಸಿಕೊಳ್ಳಲು […]