ಉತ್ತರ ಪ್ರದೇಶ ಕಳ್ಳಭಟ್ಟಿ ದುರಂತ | ಏರುತ್ತಲೇ ಇದೆ ಮೃತರ ಸಂಖ್ಯೆ
ಲಖನೌ: ರಾಜ್ಯದ ಅಲಿಗಡದಲ್ಲಿ ಕಳೆದ ವಾರ ವಿಷಕಾರಿ ಮದ್ಯಸೇವಿಸಿ ಆಸ್ಪತ್ರೆ ಸೇರಿದ್ದವರಲ್ಲಿ ನಿನ್ನೆ ಒಂದೇ ದಿನ 11 ಮಂದಿ ಅಸುನೀಗಿದ್ದಾರೆ. ಇದರೊಂದಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 36 ಕ್ಕೆ ಏರಿಕೆಯಾಗಿದೆ. ಘಟನೆ ನಡೆದ ಶುಕ್ರವಾರದಿಂದ ಸೋಮವಾರ ಮುಂಜಾನೆಯವರೆಗೆ ಒಟ್ಟು 71 ಶವಗಳು ಮರಣೋತ್ತರ ಪರೀಕ್ಷೆಗೆ ಬಂದಿವೆ. ಇವುಗಳ ಪೈಕಿ 36 ಜನರ ಸಾವಿಗೆ ವಿಷಕಾರಿ ಮದ್ಯವೇ ಕಾರಣ ಎಂಬುದು ದೃಢಪಟ್ಟಿದೆ. ಉಳಿದ 35 ಶವಗಳ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದ್ದು, ಅವರ ಸಾವಿಗೂ ವಿಷಯುಕ್ತ ಮದ್ಯವೇ ಕಾರಣ ಎಂದು […]
ಉತ್ತರ ಪ್ರದೇಶ ಕಳ್ಳಭಟ್ಟಿ ದುರಂತ | ಏರುತ್ತಲೇ ಇದೆ ಮೃತರ ಸಂಖ್ಯೆ Read More »










