-ದೇಶ ಕೋಶ

Boycott ಮಾಲ್ಡೀವ್ಸ್… ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿಗೆ ಲೇವಡಿ ಮಾಡಿದ ಮಾಲ್ಡೀವ್ಸ್​ ಸಚಿವ

ಸಮಗ್ರ ನ್ಯೂಸ್: ಇತ್ತೀಚೆಗೆ ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಕೊಟ್ಟಿದ್ದ ಪೋಟೋ ವೈರಲ್ ಆಗಿತ್ತು ಈ ಕುರಿತು ಲೇವಡಿ ಮಾಡಿದ್ದ ಮಾಲ್ಡೀವ್ಸ್​ ಸಚಿವರಿಗೆ ಭಾರತೀಯರು ತಿರುಗೇಟು ನೀಡಿದ್ದಾರೆ. ಪ್ರವಾಸೋದ್ಯಮವನ್ನೇ ನಂಬಿ ಕುಳಿತಿರುವ ಮಾಲ್ಡೀವ್ಸ್​ ಇದರಿಂದ ಸಾಕಷ್ಟು ಪ್ರವಾಸಿಗರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತದಲ್ಲಿ ಮಾಲ್ಡೀವ್ಸ್ ಮತ್ತು ಲಕ್ಷದ್ವೀಪಗಳ ನಡುವಿನ ಹೋಲಿಕೆಗಳು ಪ್ರಾರಂಭವಾದವು. ಮಾಲ್ಡೀವ್ಸ್​ […]

Boycott ಮಾಲ್ಡೀವ್ಸ್… ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿಗೆ ಲೇವಡಿ ಮಾಡಿದ ಮಾಲ್ಡೀವ್ಸ್​ ಸಚಿವ Read More »

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ/ ಒಪ್ಪಿಗೆ ನೀಡಿದ ಥಾಯ್ಲೆಂಡ್ ಸಚಿವ ಸಂಪುಟ

ಜಗತ್ತಿನಾದ್ಯಂತ ಚರ್ಚೆಯಲ್ಲಿರುವ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ವಿಚಾರ ಇದೀಗ ಥಾಯ್ಲೆಂಡ್‍ನಲ್ಲಿ ಮುಂಚೂಣಿಗೆ ಬಂದಿದ್ದು, ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡುವ ಹಿನ್ನಲೆಯಲ್ಲಿ ನಾಗರಿಕ ಸಂಹಿತೆ ಕಾಯ್ದೆಯ ತಿದ್ದುಪಡಿಗೆ ಥಾಯ್ಲೆಂಡ್ ಸರ್ಕಾರ ಒಪ್ಪಿಗೆ ನೀಡಿದೆ. ಇದು ಕಾನೂನಾಗಿ ಪರಿವರ್ತನೆಯಾದಲ್ಲಿ, ನೇಪಾಳ ಮತ್ತು ತೈವಾನ್ ದೇಶಗಳ ನಂತರ ಸಲಿಂಗ ವಿವಾಹಕ್ಕೆ ಅನುಮತಿ ನೀಡಿದ ಮೂರನೇ ದೇಶವಾಗಿ ಥಾಯ್ಲೆಂಡ್ ಗುರುತಿಸಲ್ಪಡಲಿದೆ. ಈ ತಿದ್ದುಪಡಿಯು ಥಾಯ್ಲೆಂಡ್‍ನಲ್ಲಿ ಇನ್ನು ಮುಂದೆ ಸಲಿಂಗ ದಂಪತಿಗಳಿಗೆ ಪತಿ ಮತ್ತು ಪತ್ನಿ ಎಂಬ ಪದಗಳಿಗೆ ಬದಲಾಗಿ ವ್ಯಕ್ತಿಗಳು ಮತ್ತು

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ/ ಒಪ್ಪಿಗೆ ನೀಡಿದ ಥಾಯ್ಲೆಂಡ್ ಸಚಿವ ಸಂಪುಟ Read More »

ಮಾಲ್ಡೀವ್ಸ್ ನಿಂದ ಸೇನೆ ಹಿಂತೆಗೆದುಕೊಳ್ಳಲು ಭಾರತಕ್ಕೆ ಸೂಚನೆ

ಸಮಗ್ರ ನ್ಯೂಸ್: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ, ದೇಶದಿಂದ ಭಾರತೀಯ ಸೇನೆ ಹಿಂದೆಗೆದುಕೊಳ್ಳುವಂತೆ, ಅಲ್ಲಿನ ಸರ್ಕಾರವು ಅಧಿಕೃತವಾಗಿ ಭಾರತಕ್ಕೆ ಸೂಚಿಸಿದೆ. ಹೊಸದಾಗಿ ಆಯ್ಕೆಯಾದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಕಚೇರಿಯಿಂದ ಶನಿವಾರ ಈ ಘೋಷಣೆ ಮಾಡಲಾಗಿದೆ. ರಾಷ್ಟ್ರಪತಿಗಳ ಕಚೇರಿಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾದಾಗ ಅಧ್ಯಕ್ಷ ಮುಯಿಝು ಅವರು ಔಪಚಾರಿಕವಾಗಿ ಈ ಬಗ್ಗೆ ವಿನಂತಿಸಿದರು ಎಂದು ಪ್ರಕಟಣೆ ತಿಳಿಸಿದೆ. ಭೂ ವಿಜ್ಞಾನ ಸಚಿವರಾಗಿರುವ

ಮಾಲ್ಡೀವ್ಸ್ ನಿಂದ ಸೇನೆ ಹಿಂತೆಗೆದುಕೊಳ್ಳಲು ಭಾರತಕ್ಕೆ ಸೂಚನೆ Read More »

ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಗೆ ಉಚಿತ ಪ್ರವಾಸ..! ಅಮಿತ್ ಶಾ ಭರವಸೆ

ಸಮಗ್ರ ಸಮಾಚಾರ: ಮಧ್ಯಪ್ರದೇಶ ಚುನಾವಣೆಗೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಜನತೆಗೆ ಗುಡ್​ ನ್ಯೂಸ್ ನೀಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ಶ್ರೀರಾಮನ ಉಚಿತ ದರ್ಶನ ವ್ಯವಸ್ಥೆಯ ಭರವಸೆ ನೀಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರಕ್ಕೆ ಹಂತ ಹಂತವಾಗಿ ಮಧ್ಯಪ್ರದೇಶದ ಜನರನ್ನು ಕರೆದುಕೊಂಡು ಹೋಗಲಾಗುವುದು ಎಂದು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಪ್ರಚಾರ ಕಾರ್ಯ ಚುರುಕುಗೊಳಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಗೆ ಉಚಿತ ಪ್ರವಾಸ..! ಅಮಿತ್ ಶಾ ಭರವಸೆ Read More »

ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

ಸಮಗ್ರ ನ್ಯೂಸ್: ಜಾಗತಿಕ ಮಾರುಕಟ್ಟೆಗಳಲ್ಲಿನ ಅಪಾಯದ ನಿರಾಸಕ್ತಿ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳಿಂದಾಗಿ ರೂಪಾಯಿ ಮೌಲ್ಯವು ಸತತ ನಾಲ್ಕನೇ ದಿನವೂ ಯುಎಸ್ ಡಾಲರ್ ವಿರುದ್ಧ 13 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ಮಟ್ಟ ₹ 83.29 ಕ್ಕೆ (ತಾತ್ಕಾಲಿಕ) ತಲುಪಿದೆ. ಇಂಟರ್ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ದೇಶೀಯ ಘಟಕವು ಡಾಲರ್ ವಿರುದ್ಧ 83.09 ಕ್ಕೆ ಪ್ರಾರಂಭವಾಯಿತು ಮತ್ತು ಗ್ರೀನ್ಬ್ಯಾಕ್ ವಿರುದ್ಧ 83.09 ರಿಂದ 83.30 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ಅಂತಿಮವಾಗಿ ಡಾಲರ್ ಎದುರು ರೂಪಾಯಿ ದಾಖಲೆಯ

ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ Read More »

ಏರ್ ರೈಫಲ್‌ನಲ್ಲಿ ಚಿನ್ನ ಗೆದ್ದ ಭಾರತದ ಇಳವೆನ್ನಿಲಾ ವಾಳರಿವನ್‌

ಸಮಗ್ರ ನ್ಯೂಸ್: ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ 2023 ರಲ್ಲಿ ಭಾರತದ ಶೂಟರ್ ಇಳವೆನ್ನಿಲಾ ವಾಳರಿವನ್, ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಒಲಿಂಪಿಯನ್ ಇಳವೆನ್ನಿಲಾ ವಾಳರಿವನ್ (Elavenil Valarivan) ಫೈನಲ್‌ ಸುತ್ತಿನಲ್ಲಿ 24 ಪ್ರಯತ್ನಗಳಲ್ಲಿ 252.2 ಪಾಯಿಂಟ್ಸ್‌ಗಳೊಂದಿಗೆ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಫ್ರಾನ್ಸ್‌ನ ಓಸಿಯಾನ್ ಮುಲ್ಲರ್, 251.9 ಪಾಯಿಂಟ್ಸ್‌ಗಳೊಂದಿಗೆ ಬೆಳ್ಳಿ ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಜಿಯಾಲೆ ಜಾಂಗ್, 229.0 ಪಾಯಿಂಟ್ಸ್‌ನೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ.

ಏರ್ ರೈಫಲ್‌ನಲ್ಲಿ ಚಿನ್ನ ಗೆದ್ದ ಭಾರತದ ಇಳವೆನ್ನಿಲಾ ವಾಳರಿವನ್‌ Read More »

ಓಡಿ ಓಡಿ ಉಮ್ಲಿಂಗ್ಲಾ ತಲುಪಿದ ಸಬಿತಾ| 19 ದಿನಗಳಲ್ಲಿ ಹೊಸತೊಂದು ದಾಖಲೆ ಬರೆದ ಮಹಿಳೆ

ಸಮಗ್ರ ನ್ಯೂಸ್: ವಾಹನ ಚಲಿಸ ಬಲ್ಲ ಹಾಗೂ ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ರಸ್ತೆ ಎಂದರೆ ಅದು ಉಮ್ಲಿಂಗ್ ಲಾ. 19 ದಿನಗಳ ಕಾಲ ಓಡಿಯೇ ಈ ಸ್ಥಳವನ್ನು ಬಿಹಾರದ ಒಬ್ಬ ಮಹಿಳೆ ತಲುಪಿದ್ದಾರೆ. ಈ ಮೂಲಕ ವಿಶ್ವದ ವಿಶ್ವದ ಅತಿ ಎತ್ತರದ ರಸ್ತೆಯಲ್ಲಿ ಓಡಿದ ವಿಶ್ವದ ಮೊದಲ ಮಹಿಳೆ ಎಂಬ ಖ್ಯಾತಿಗೆ ಸಬಿತಾ ಮಹತೋ ಭಾಜನರಾಗಿದ್ದಾರೆ. ಪರ್ವತಾರೋಹಿ, ಸೈಕ್ಲಿಸ್ಟ್ ಮತ್ತು ಅಲ್ಟ್ರಾ ರನ್ನರ್ ಸಬಿತಾ ಮಹತೋ ಸಪ್ಟೆಂಬರ್​ 5 ರಂದು ಉಮ್ಲಿಂಗ್ ಲಾ ತಲುಪಿ ಈ

ಓಡಿ ಓಡಿ ಉಮ್ಲಿಂಗ್ಲಾ ತಲುಪಿದ ಸಬಿತಾ| 19 ದಿನಗಳಲ್ಲಿ ಹೊಸತೊಂದು ದಾಖಲೆ ಬರೆದ ಮಹಿಳೆ Read More »

ಎರಡು ಸಾವಿರ ತಲುಪಿದ ಸಾವಿನ ಸಂಖ್ಯೆ| ಕಂಡು ಕೇಳರಿಯದ ಭೂಕಂಪಕ್ಕೆ ಸಾಕ್ಷಿಯಾದ ಮೊರಾಕೋ

ಸಮಗ್ರ ನ್ಯೂಸ್: ಮೊರಾಕೊದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ 2,000 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 11:11 ಗಂಟೆಗೆ (2211 GMT) ಪ್ರವಾಸಿ ಹಾಟ್‌ಸ್ಪಾಟ್‌ನ ನೈರುತ್ಯಕ್ಕೆ 72 ಕಿ.ಮೀ (45 ಮೈಲಿ) ಪರ್ವತ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್‌ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ. ಪ್ರಬಲ ಭೂಕಂಪಕ್ಕೆ 2,012 ಜನರು ಸಾವನ್ನಪ್ಪಿದ್ದು, 2,059 ಮಂದಿ ಗಾಯಗೊಂಡಿದ್ದಾರೆ, ಇದರಲ್ಲಿ 1,404 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಸಚಿವಾಲಯದ

ಎರಡು ಸಾವಿರ ತಲುಪಿದ ಸಾವಿನ ಸಂಖ್ಯೆ| ಕಂಡು ಕೇಳರಿಯದ ಭೂಕಂಪಕ್ಕೆ ಸಾಕ್ಷಿಯಾದ ಮೊರಾಕೋ Read More »

ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನಪ್ರಸಾದ ಬಡಿಸಿದ ಮುಸ್ಲಿಂ ಯುವಕರು| ಧರ್ಮದಂಗಲ್ ನಡುವೆ ಸಾಮರಸ್ಯದ ಸುದ್ದಿ

ಸಮಗ್ರ ನ್ಯೂಸ್: ಜಾತಿ, ಧರ್ಮದ ಬೇಧವಿಲ್ಲದೆ, ತಿನ್ನುವ ಅನ್ನ, ಕುಡಿಯುವ ನೀರು ಒಂದೇ ಎಂಬ ಭಾವನೆಯಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮುಸ್ಲಿಂ ಯುವಕರು, ಅಯ್ಯಪ್ಪ ಮಾಲಾಧಾರಿಗಳಿಗೆ ಊಟ ಬಡಿಸಿ, ಕೋಮು ಸೌಹಾರ್ದತೆ ಮೆರೆದರು. ತಮಿಳುನಾಡಿನ ಕೃಷ್ಣಗಿರಿ ಪಜಯಪಟ್ಟೈ ಮಿಲಾಡುನಾಬಿ ಇಸ್ಲಾಮಿಕ್ ಯುವಕರ ತಂಡ, ಪ್ರತಿವರ್ಷ ಗಣೇಶ ಚತುರ್ಥಿ ಸಮಯದಲ್ಲಿ ಭಕ್ತರಿಗೆ ಅನ್ನ ಪ್ರಸಾದ ಹಂಚುವುದು ಹಾಗೂ ಅಯ್ಯಪ್ಪ ಮಾಲಾಧಾರಿಗಳಿಗೆ ಪೂಜಾ ಸಾಮಗ್ರಿ ಮತ್ತು ಆಹಾರವನ್ನು ಒದಗಿಸುವ ಮೂಲಕ ಎರಡು ಧರ್ಮಗಳ ನಡುವಿನ ಸಾಮರಸ್ಯ ಮತ್ತು ಒಗ್ಗಟ್ಟನ್ನ ಪ್ರದರ್ಶಿಸುತ್ತದೆ.

ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನಪ್ರಸಾದ ಬಡಿಸಿದ ಮುಸ್ಲಿಂ ಯುವಕರು| ಧರ್ಮದಂಗಲ್ ನಡುವೆ ಸಾಮರಸ್ಯದ ಸುದ್ದಿ Read More »

ಅಪರಿಚಿತ ಸಂಖ್ಯೆಯಿಂದ ಕರೆಯೇ? ಇನ್ನಿಲ್ಲ ಗೊಂದಲ

ಸಮಗ್ರ ನ್ಯೂಸ್: ಅಪರಿಚಿತ (unknown) ನಂಬರ್, ಸ್ಪ್ಯಾಮ್ ಅಥವಾ ಅನಪೇಕ್ಷಿತ ಕರೆಗಳ ಸಮಸ್ಯೆಯನ್ನು ನಿವಾರಿಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ಮಾರ್ಗ ಕಂಡು ಹಿಡಿದಿದೆ. ಫೋನ್‌ನಲ್ಲಿ ಸೇವ್ ಆಗಿರದ ನಂಬರ್‌ಗಳಿಂದ ಯಾರಾದರೂ ಕರೆ ಮಾಡಿದರೆ ಕರೆ ಮಾಡಿದ ವ್ಯಕ್ತಿಯ ಹೆಸರು ನಿಮ್ಮ ಮೊಬೈಲ್‌ನಲ್ಲಿ ಕಂಡುಬರುವಂತೆ ಮಾಡುವ ಹೊಸ ಉಪಕ್ರಮವನ್ನು ಟ್ರಾಯ್ ಶೀಘ್ರವೇ ಜಾರಿಗೆ ತರಲು ಸಜ್ಜಾಗಿದೆ. ಟೆಲಿಕಾಂ ಆಪರೇಟರ್‌ಗಳ ಬಳಿ ಲಭ್ಯವಿರುವ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ದಾಖಲೆಯನ್ನು ಆಧರಿಸಿ ಕರೆ ಮಾಡಿದವರ ಹೆಸರನ್ನು ತಿಳಿಯುವಂತೆ

ಅಪರಿಚಿತ ಸಂಖ್ಯೆಯಿಂದ ಕರೆಯೇ? ಇನ್ನಿಲ್ಲ ಗೊಂದಲ Read More »